Winter Skin Care: ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡುವುದು ಹೇಗೆ?

ಈ ಬಾರಿ ಚಳಿ ತುಸು ಜಾಸ್ತಿಯಿದ್ದು ಬೆಳಿಗ್ಗೆ ಮತ್ತು ರಾತ್ರಿ ಹೊರಗೆ ಬರಲು ಕಷ್ಟವಾಗುತ್ತಿದೆ. ಚಳಿ ಹೆಚ್ಚಾದಂತೆಲ್ಲ ಅದರ ಪರಿಣಾಮ ಚರ್ಮದ ಮೇಲೆ ಬೀರುತ್ತದೆ. ಹಿಮ್ಮಡಿ ಸೇರಿದಂತೆ ಕೈಕಾಲು ಒಡೆಯುವುದು, ಚರ್ಮ ಗಡಸಾಗುವುದು ಹೀಗೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಚಳಿಗಾಲದಲ್ಲಿ ಚರ್ಮದ ಆರೋಗ್ಯದ ಕಡೆಗೂ ಹೆಚ್ಚಿನ ನಿಗಾವಹಿಸುವುದು ಬಹುಮುಖ್ಯವಾಗಿದೆ.

ಹಾಗೆನೋಡಿದರೆ ವಾತಾವರಣ ಬದಲಾದಾಗ ಅದರಲ್ಲೂ ಚಳಿಗಾಲದಲ್ಲಿ ನಮ್ಮ ಶರೀರ ಮತ್ತು ಆರೋಗ್ಯದಲ್ಲಿ ಒಂದಷ್ಟು ಬದಲಾವಣೆಗಳಾಗುತ್ತವೆ. ಅದು ಒಬ್ಬರಿಂದ ಮತ್ತೊಬ್ಬರಿಗೆ ಒಂದೇ ರೀತಿಯಲ್ಲಿ ಕಾಣಿಸಬೇಕೆಂದಿಲ್ಲ. ಕೆಲವರಿಗೆ ಶೀತ, ಕೆಮ್ಮು, ನೆಗಡಿಗಳಾದರೆ, ಇನ್ನು ಕೆಲವರಿಗೆ ಜ್ವರ ಕಾಣಿಸಿಕೊಳ್ಳಬಹುದು. ಇನ್ನು ಕೆಲವರಿಗೆ ಚರ್ಮದ ಮೇಲೆ, ಕೈಕಾಲು ಸೆಳೆತ ಹೀಗೆ ಹಲವು ಸಮಸ್ಯೆಗಳು ಕಂಡು ಬರಬಹುದು. ಬಹಳಷ್ಟು ಸಲ ವಾತಾವರಣದ ಬದಲಾವಣೆ ನೇರವಾಗಿ ನಮ್ಮ ಶರೀರದ ಮೇಲೆಯೇ ಬೀಳುತ್ತಿದ್ದು ಅದರ ಪರಿಣಾಮಗಳನ್ನು ಚರ್ಮವೇ ಎದುರಿಸಬೇಕಾಗುತ್ತದೆ.

Health Tips How To Maintain Skin Health In Winter Season In Karnataka

ಚಳಿಗಾಲದಲ್ಲಿ ನಾವೆಷ್ಟೇ ಶರೀರವನ್ನು ಕಾಪಾಡಿಕೊಂಡರೂ ಕೈಕಾಲುಗಳಲ್ಲಿ ಬಿರುಕು, ಚರ್ಮದಲ್ಲಿ ಒಡಕು ಕಂಡು ಬರುವುದು ಸಾಮಾನ್ಯ. ಇದರಿಂದ ಸಂರಕ್ಷಿಸಿಕೊಳ್ಳುವುದೇ ಒಂದು ಸವಾಲ್. ನಮ್ಮ ಶರೀರ ಅಂದವಾಗಿಯೂ, ರೋಗ ಮುಕ್ತವಾಗಿಯೂ ಇರಬೇಕಾದರೆ ಚರ್ಮದ ಬಗೆಗಿನ ಒಂದಷ್ಟು ಕಾಳಜಿ ವಹಿಸಿಕೊಳ್ಳುವುದು ಬಹುಮುಖ್ಯವಾಗಿದ್ದು ಅದರತ್ತ ಹೆಚ್ಚಿನ ನಿಗಾವಹಿಸಬೇಕಾಗುತ್ತದೆ. ವಾತಾವರಣದಲ್ಲಿ ಏರುಪೇರಾದಾಗ ಹಾಗೂ ಶುಚಿಯಾಗಿರಿಸಿಕೊಳ್ಳದ ಸಂದರ್ಭ ಚರ್ಮದ ಮೇಲೆ ಪರಿಣಾಮ ಬೀರಿ ಹಲವು ಚರ್ಮ ರೋಗಗಳು ಬರುವ ಸಾಧ್ಯತೆ ಇರುತ್ತದೆ.

ಚರ್ಮದ ಆರೋಗ್ಯ ರಕ್ಷಣೆಗೆ ಏನು ಮಾಡಬೇಕು?

ಹಾಗಾದರೆ ಚಳಿಗಾಲದಲ್ಲಿ ಚರ್ಮ ಸುಂದರವಾಗಿಯೂ, ಆರೋಗ್ಯವಾಗಿಯೂ ಇರಬೇಕಾದರೆ ಏನು ಮಾಡಬೇಕು ಎಂಬ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ಉತ್ತರನ್ನು ತಜ್ಞರು ನೀಡಿದ್ದಾರೆ, ಅದಕ್ಕಿಂತ ಮೊದಲು ಆರೋಗ್ಯವಂತ ಚರ್ಮ ನಮ್ಮದಾಗಿದ್ದರೆ ಮಾತ್ರ ಆರೋಗ್ಯವಂತ ಬದುಕು ನಮ್ಮದಾಗಲು ಸಾಧ್ಯವಾಗುತ್ತದೆ. ಹಾಗಾದರೆ ಆರೋಗ್ಯವಂತ ಚರ್ಮ ಯಾವುದಪ್ಪಾ ಎಂಬುದನ್ನು ನೋಡಿದ್ದೇ ಆದರೆ, ಕಾಂತಿಯಿಂದ ಮಿನುಗುವ, ಮೃದುವಾಗಿರುವ ಚರ್ಮವೇ ಆರೋಗ್ಯವಂತ ಚರ್ಮವಾಗಿದ್ದು, ಕೆಲವೊಮ್ಮೆ ವಾತಾವರಣದ ಮಾಲಿನ್ಯ, ಅತಿ ಉಷ್ಣ, ಅತಿ ಚಳಿ, ಪೌಷ್ಠಿಕ ಆಹಾರದ ಕೊರತೆ, ಅನಾರೋಗ್ಯ ಪರಿಸರಗಳಲ್ಲಿ ನೆಲೆಸುವುದರಿಂದ ಚರ್ಮದ ಆರೋಗ್ಯಕ್ಕೆ ಧಕ್ಕೆಯುಂಟಾಗುತ್ತದೆ.

Health Tips How To Maintain Skin Health In Winter Season In Karnataka

ಚರ್ಮವು ಆರೋಗ್ಯವಾಗಿರಲು ಸೂರ್ಯನ ಕಿರಣಗಳ ಅಗತ್ಯವಿದೆಯಾದರೂ, ಕೆಲಮೊಮ್ಮೆ ಅಗತ್ಯಕ್ಕಿಂತ ಹೆಚ್ಚಿನ ಸೂರ್ಯನ ಕಾಂತಿಯಿಂದಲೂ ಚರ್ಮಕ್ಕೆ ಹಾನಿಯಾಗುತ್ತದೆ. ಏಕೆಂದರೆ ಸೂರ್ಯ ಕಿರಣದಲ್ಲಿನ ಅತಿನೇರಳೆ ಬಣ್ಣದ ಕಿರಣಗಳು ಚರ್ಮವನ್ನು ಒಣಗುವಂತೆ ಮಾಡಿ ಮೃದುತ್ವವನ್ನು ನಾಶಮಾಡುತ್ತದೆ. ಸೂರ್ಯ ಕಿರಣಗಳಿಂದಾಗಿ ಉಂಟಾಗುವ ರೆಡಿಯೇಷನ್ನಿಂದಲೂ ಸಹ ಚರ್ಮವು ತನ್ನ ತೇವವನ್ನು ಕಳೆದುಕೊಂಡು ಕಳಾಹೀನವಾಗಿ ಬಿಡುತ್ತದೆ. ಆದುದರಿಂದ ಬೆಳಗಿನ ಎಳೆ ಬಿಸಿಲಿನಲ್ಲಿ ವಾಕಿಂಗ್ ಮಾಡುವುದರಿಂದ ಚರ್ಮ ನುಣುಪಾಗಿರುತ್ತದೆ. ಬಿಸಿಲೇ ತಾಕದಂತೆ ಇದ್ದರೂ ಕೆಲವೊಮ್ಮೆ ಚರ್ಮ ಒಣಗಿ ಸುಕ್ಕು ಕಟ್ಟಿ ಬಿಡುತ್ತದೆ.

ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕು

ನಾವು ವಾಸವಿರುವ ಮನೆಯ ಸುತ್ತಮುತ್ತ ಕಲುಷಿತ ವಾತಾವರಣ ಇದ್ದಾಗಲೂ ಚರ್ಮಕ್ಕೆ ಕೆಲವು ವ್ಯಾಧಿಗಳು ತಗಲುವ ಸಾಧ್ಯತೆಯಿರುತ್ತದೆ. ಗಾಳಿ, ನೀರು, ಧೂಳು, ಹೊಗೆ, ಅಲರ್ಜಿಕಾರಕ ವಸ್ತುಗಳಿಂದಲೂ ಚರ್ಮಕ್ಕೆ ಹಾನಿಯಾಗುತ್ತದೆ. ತೇವವಾಗಿ ತಣ್ಣಗಿರುವ ವಾತಾವರಣ ಚರ್ಮಕ್ಕೆ ತುಂಬಾ ಒಳ್ಳೆಯದು. ಹಾಗೆಂದು ಮಿತಿಮೀರಿದ ಚಳಿಯಲ್ಲಿ ಓಡಾಡುವುದು ಒಳ್ಳೆಯದಲ್ಲ. ಚಳಿಗಾಲದಲ್ಲಿ ಚರ್ಮ ಒಡೆಯುತ್ತದೆ. ವೈದ್ಯರು ಹೇಳುವ ಪ್ರಕಾರ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಪೌಷ್ಟಿಕಾಂಶವುಳ್ಳ ಆಹಾರ, ಕಾಯಿಪಲ್ಯೆ, ತರಕಾರಿಗಳನ್ನು ಆಹಾರವಾಗಿ ಸೇವಿಸಬೇಕು. ಕೇಕ್, ತಂಪು ಪಾನೀಯಗಳು, ಸಿಹಿತಿಂಡಿಗಳು, ಮಸಾಲೆಯ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡಬೇಕು.

Health Tips How To Maintain Skin Health In Winter Season In Karnataka

ಚರ್ಮಕ್ಕೆ ಹೊಂದಿಕೊಳ್ಳುವ ಸಾಬೂನನ್ನು ಅರಿತು ಅದನ್ನೇ ಉಪಯೋಗಿಸಬೇಕು. ಕೃತಕ ಸೌಂದರ್ಯ ವರ್ಧಕಗಳಿಂದ ಆದಷ್ಟು ದೂರವಿರಬೇಕು. ಬಾದಾಮಿ ಎಣ್ಣೆಯಿಂದ ಚರ್ಮವನ್ನು ಮೃದುವಾಗಿ ಮಾಲೀಸ್ ಮಾಡಬೇಕು. ಬಿಗಿಯಾದ ಉಡುಪುಗಳನ್ನು ಧರಿಸಬಾರದು. ಸೌತೆಕಾಯಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ, ಚರ್ಮದ ಮೇಲೆ ಇಟ್ಟುಕೊಂಡರೆ ಜಿಡ್ಡು ದೂರವಾಗುತ್ತದೆ. ಧರಿಸುವ ಉಡುಪು ಶುಭ್ರವಾಗಿರುವಂತೆ ನೋಡಿಕೊಳ್ಳಬೇಕು. ಶರೀರ ಹಾಗೂ ಬಟ್ಟೆ ಸ್ವಚ್ಛವಾಗಿರುವಂತೆ ಪ್ರತಿದಿನವೂ ನೋಡಿಕೊಂಡರೆ ಚರ್ಮವನ್ನು ಇತರೆ ವ್ಯಾಧಿಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+