ಮಳೆಗಾಲದಲ್ಲಿ ಶೀತ ಕೆಮ್ಮಿನ ಕಿರಿಕಿರಿಗೆ ಗುಡ್ ಬೈ ಹೇಳಲು ಹೀಗೆ ಮಾಡಿ
ಈಗಂತೂ ಎಲ್ಲೆಡೆ ಮಳೆ ಜೀವವನ್ನು ಹಿಂಡುತ್ತಿದೆ. ಮಳೆ ಆರಂಭವಾದರೆ, ಆ ಋತುಮಾನಕ್ಕೆ ತಕ್ಕಂತೆ ರೋಗಗಳು ಸಹ ಉಲ್ಬಣಿಸುತ್ತವೆ. ಹೀಗಾಗಿ ಋತುಗಳು ಬದಲಾದಂತೆ ಜನರಲ್ಲಿ ಹೆಚ್ಚಿನ ಆತಂಕ ಆರಂಭವಾಗುತ್ತದೆ. ಅಸಲಿಗೆ ಈ ಚಿಂತೆಯನ್ನು ದೂರ ಮಾಡಿ ಮನೆಯಲ್ಲಿನ ಕೆಲವು ಪದಾರ್ಥಗಳನ್ನು ಬಳಸಿ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು.
ಮಳೆಗಾಲದಲ್ಲಿ ಹೊರಗಿನಿಂದ ಮನೆಗೆ ಬರುವಾಗ ಮಳೆಯಲ್ಲಿ ನೆನಿಸಿಕೊಳ್ಳುವುದು ಸಾಮಾನ್ಯ. ಹೀಗೆ ಮಳೆಯಲ್ಲಿ ನೆನಿಸಿಕೊಂಡಲ್ಲಿ ರೋಗಗಳು ಬರುತ್ತವೆ ಎಂಬ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಅಂದಹಾಗೆ ಇದರಿಂದ ಬಚಾವ್ ಆಗಲು ಮನೆಯಲ್ಲಿನ ರೆಮಡಿಸ್ ಬಳಸಿದರೆ ಶೀಘ್ರ ಪರಿಹಾರ ಸಿಗುತ್ತದೆ. ಮಳೆಗಾಲದಲ್ಲಿ ಮನುಷ್ಯನನ್ನು ಹಿಂಡಿ ಹಿಪ್ಪಿಮಾಡುವುದು ಶೀತ ಹಾಗೂ ನೆಗಡಿ.

ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಗಳು ಕಡಿಮೆ ಆಗುತ್ತಿದ್ದಂತೆ ಈ ರೋಗಗಳು ಬರಲು ಅನುವ ಆಗುತ್ತದೆ. ಹೀಗಾಗಿ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಒಂದು ಔಷದವನ್ನು ತಯಾರಿಸಬಹುದಾಗಿದೆ. ಅಡಿಗೆ ಮನೆಯಲ್ಲಿ ಲಭ್ಯ ಇರುವ ಶುಂಠಿ ಹಾಗೂ ಜೇನು ತುಪ್ಪವನ್ನು ಬಳಸಿ, ಈ ಒಂದು ಮನೆ ಮದ್ದನ್ನು ತಯಾರಿಸಬಹುದು. ಹಾಗಿದ್ದರೆ ಅದನ್ನು ತಯಾರಿಸುವುದು ಹೇಗೆ ಇಲ್ಲಿದೆ ವರದಿ.
ತಯಾರಿಸುವುದು ಹೇಗೆ?
ನೀವು ಶುಂಠಿಯನ್ನು ತೆಗೆದುಕೊಂಡು ಗ್ಯಾಸ್ ಮೇಲೆ ಇಟ್ಟು ಸುಡಬೇಕು. ಅಥವಾ ನಿಮ್ಮ ಮನೆಗಳಲ್ಲಿ ಒಲೆ ಇದ್ದರೆ ಅದ್ರಲ್ಲೂ ಸುಡಬಹುದು. ಬದನೆ ಕಾಯಿ ಸುಡುವ ರೀತಿಯಲ್ಲಿ ಶುಂಠಿಯನ್ನು ಸುಟ್ಟು ಅದರ ಮೇಲಿನ ಸಿಪ್ಪೆಯನ್ನು ತೆಗೆಯಬೇಕು. ನಂತರ ಆ ಶುಂಠಿಯನ್ನು ತುರಿದು ಅಥವಾ ರುಬ್ಬುವ ಮೂಲಕ ಅದರ ರಸವನ್ನು ತೆಗೆಯಬೇಕು. ಹೀಗೆ ತೆಗೆದ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಿ. ಹುರಿದ ಶುಂಠಿ ಇನ್ನಷ್ಟು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಇದರಿಂದ ಏನೆಲ್ಲಾ ಲಾಭ?
ಹುರಿದ ಶುಂಠಿ ಮತ್ತು ಜೇನುತುಪ್ಪವು ಮಳೆಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಅನೇಕ ರೋಗಗಳು ಮತ್ತು ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಶುಂಠಿ ಮತ್ತು ಜೇನುತುಪ್ಪವನ್ನು ತಿನ್ನುವುದರಿಂದ ಗಂಟಲು ನೋವು ಮತ್ತು ಕೆಮ್ಮಿನಿಂದ ಮುಕ್ತಿ ಪಡೆಯಬಹುದು. ಇದರಿಂದ ಗಂಟಲಿನ ಊತವೂ ಕಡಿಮೆಯಾಗುತ್ತದೆ. ಗಂಟಲಿನಲ್ಲಿ ಸಂಗ್ರಹವಾದ ಲೋಳೆಯು ತಕ್ಷಣವೇ ಹೊರಬರುತ್ತದೆ. ಇದು ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ.
ಹುರಿದ ಶುಂಠಿ ಕೀಲು ಮತ್ತು ಮೂಳೆ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಹುರಿದ ಶುಂಠಿಯಲ್ಲಿ ಉರಿಯೂತದ ಗುಣಲಕ್ಷಣಗಳು ಕಂಡುಬರುತ್ತವೆ, ಇದು ಊತವನ್ನು ಕಡಿಮೆ ಮಾಡಲು ಸಹಾಯ.
ಹುರಿದ ಶುಂಠಿ ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ.
ಹುರಿದ ಶುಂಠಿಯನ್ನು ತಿನ್ನುವುದು ಮೈಗ್ರೇನ್ ಅಥವಾ ಸಾಮಾನ್ಯ ತಲೆನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದರಿಂದ ನೋವನ್ನು ಕಡಿಮೆ ಮಾಡಬಹುದು. ಇದು ನಿಮಗೆ ಇಷ್ಟ ಆಗದೇ ಇದ್ದಲ್ಲಿ ನೀವು ಹುರಿದ ಶುಂಠಿಯ ಬದಲಿಗೆ ಶುಂಠಿ ನೀರಿಗೆ ಜೇನು ತುಪ್ಪ ಸೇರಿಸಿ ಸಹ ಕುಡಿಯಬಹುದು.












Click it and Unblock the Notifications