Happy Ugadi 2023 Wishes: ಇಲ್ಲಿವೆ ಯುಗಾದಿ ಹಬ್ಬದ ಶುಭಾಶಯಗಳು ಮತ್ತು ಸಂದೇಶಗಳು
ಬೇಸಿಗೆ ಕಾಲದಲ್ಲಿ ಬರುವ ಹಬ್ಬ, ಯುಗಾದಿಯನ್ನು ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನವೆಂದೇ ಆಚರಣೆ ಮಾಡಲಾಗುತ್ತದೆ. ಈ ಹೊಸ ವರ್ಷವನ್ನು ತಮಿಳುನಾಡು ಮತ್ತು ಕೇರಳದಲ್ಲಿ ವಿಸು ಹಬ್ಬವೆಂದು ಹಾಗೂ ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಎಂದು ಕರೆಯಲಾಗುತ್ತದೆ. ಯುಗಾದಿ ಎಂದರೆ ಹೊಸ ಯುಗ ಎಂದು ಅರ್ಥವಾಗಿದೆ. (ಸಂಸ್ಕೃತದಲ್ಲಿ ಯುಗ), ಹೊಸ ಪ್ರಾರಂಭ ಎಂದು ಕೂಡಾ ಕರೆಯಲಾಗುತ್ತದೆ.
ಪ್ರಮುಖವಾಗಿ ಈ ಹಬ್ಬವನ್ನು ಭಾರತದ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ಹೊಸ ವರ್ಷದ ಆರಂಭ ಎಂದು ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಈ ಹಬ್ಬವನ್ನು ಯುಗಾದಿ ಅಥವಾ ಉಗಾದಿ ಎಂದು ಕರೆಯಲಾಗುತ್ತದೆ. ದಕ್ಷಿಣ ಕನ್ನಡದ ಕೆಲ ಪ್ರದೇಶಗಳಲ್ಲಿ ಇದನ್ನು ಬಿಸು ಎಂದು ಕೂಡಾ ಕರೆಯಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಯುಗಾದಿ ಹೊಸ ವರ್ಷ. ಈ ವಸಂತ ಹಬ್ಬವನ್ನು ಮಾರ್ಚ್ ಅಥವಾ ಏಪ್ರಿಲ್ ತಿಂಗಳುಗಳಲ್ಲಿ ಆಚರಿಸಲಾಗುತ್ತದೆ.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಸರ್ವೇ-ಸಾಮಾನ್ಯವಾಗಿ ಬೇವು-ಬೆಲ್ಲವಾಗಿದೆ. ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ಈ ಯುಗಾದಿ ದಿನದಂದು ತಿನ್ನಲಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಇನ್ನು ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವನೆ ಮಾಡಲಾಗುತ್ತದೆ. ಈ ದಿನದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು.

ಈ ದಿನದಂದು ಹೋಳಿಗೆ, ಒಬ್ಬಟ್ಟು ವಿಶೇಷ ಆಹಾರವಾಗಿದೆ. ಹಾಗೆಯೇ ಸುಖದ ಸಂಕೇತವಾಗಿ ಬೆಲ್ಲವನ್ನೂ ಹಾಗೂ ಕಷ್ಟ ಸಂಕೇತವಾಗಿ ಬೇವನ್ನೂ ಸಮನಾಗಿ ಸೇವನೆ ಮಾಡಲಾಗುತ್ತದೆ. ಇನ್ನು ಹೊಸದಾಗಿ ಬೆಳೆಯುವ ಮಿಡಿ ಮಾವಿನ ಉಪ್ಪಿನಕಾಯಿಯನ್ನು ಕೂಡಾ ಈ ದಿನದಂದು ಶುಭದ ಸಂಕೇತವಾಗಿ ಮಾಡಲಾಗುತ್ತದೆ.

ಯುಗಾದಿ ಇತಿಹಾಸ
ಇನ್ನು ಮುಂದೆ ನಿನ್ನನ್ನು ಯಾರೂ ಕೂಡಾ ಪೂಜಿಸಬಾರದು ಎಂದು ಶಿವನು ಬ್ರಹ್ಮನಿಗೆ ಶಾಪ ನೀಡುತ್ತಾನೆ. ಆದರೆ ಯುಗಾದಿಯನ್ನು ವಿಶೇಷವಾಗಿ ಬ್ರಹ್ಮನ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಪ್ರಾಚೀನ ಕಥೆಗಳ ಪ್ರಕಾರ, ವಿಷ್ಣುವು ಮತ್ಸ್ಯ ರೂಪವನ್ನು ಪಡೆದಿದ್ದಾನೆ ಎಂದು ನಂಬಲಾಗಿದೆ. ಯುಗಾದಿಯ ದಿನದಂದು ಜನರು ತಮ್ಮ ಮನೆ ಮತ್ತು ಹತ್ತಿರದ ಪ್ರದೇಶವನ್ನು ಸ್ವಚ್ಛಗೊಳಿಸುತ್ತಾರೆ. ತಮ್ಮ ಮನೆಯ ಬಾಗಿಲಿಗೆ ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ. ಹೊಸ ಬಟ್ಟೆಯನ್ನು ಖರೀದಿ ಮಾಡುತ್ತಾರೆ.
ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಶಾಲಿವಾಹನ ರಾಜ ಸಿಂಹಾಸನಾರೂಢನಾದನೆಂದೂ, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗುತ್ತದೆ. ಹಿಂದುಗಳು ಶಾಲಿವಾಹನ ಶಕೆಯ ಸಂವತ್ಸರಗಳನ್ನಾಧರಿಸಿ ಆಯಾ ಸಂವತ್ಸರವನ್ನು ಚೈತ್ರ ಮಾಸದ ಪ್ರತಿಪದೆಯಿಂದ ಆರಂಭಿಸುವರು. ಯುಗಾದಿಯು ಚಂದ್ರಮಾನದ ಸಂವತ್ಸರದ ಆರಂಭದ ದಿನ.
ವರಾಹಮಿಹಿರಾಚಾರ್ಯನು ವರ್ಷಾರಂಭವನ್ನು ಚೈತ್ರ ಮಾಸವೆಂದು ಹೇಳಿರುವನು. ಪಂಚಾಂಗ ಮತ್ತು ಶಾಸ್ತ್ರದ ಪ್ರಕಾರ ಶುಭದಿನ ಹಾಗೂ ಅತ್ಯಂತ ಶುಭ ಮೂಹೂರ್ತದ ಮೂರುವರೆ ದಿನಗಳೆಂದರೆ ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ ಮತ್ತು ಅಕ್ಷಯ ತದಿಗೆ. ಅದರಲ್ಲಿ ಯುಗಾದಿ ಅತೀಶ್ರೇಷ್ಠ ಮುಹೂರ್ತ ಎಂದು ಹಿಂದೂಗಳು ನಂಬುತ್ತಾರೆ. ವರ್ಷದ ಶುಭ ದಿನವಾದ ಯುಗಾದಿ ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ದಿನವೆಂದು ಹೇಳುವರು.
ಈ ಶುಭದಿನದಂದು ನೀವು ನಿಮ್ಮ ಪ್ರೀತಿ ಪಾತ್ರರಿಗೆ ಫೇಸ್‌ಬುಕ್, ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ, ಶುಭಾಶಯವನ್ನು ಹಂಚಿಕೊಳ್ಳಬಹುದು. ಈ ಯುಗಾದಿಯಂದು ನೀವು ನಿಮ್ಮ ಪ್ರೀತಿ ಪಾತ್ರರಿಗೆ ಯಾವೆಲ್ಲಾ ಶುಭಾಶಯಗಳನ್ನು, ಸಂದೇಶಗಳು ಹಂಚಿಕೊಳ್ಳಬಹುದು ಎಂಬುವುದು ಇಲ್ಲಿದೆ ಮುಂದೆ ಓದಿ..

ಯುಗಾದಿ ಶುಭಾಶಯಗಳು ಸಂದೇಶಗಳು
* ಈ ಯುಗಾದಿಯು ನಿಮಗೆ ವರ್ಷವಿಡೀ ಸಂತೋಷ, ಆರೋಗ್ಯ, ಸಂಪತ್ತು ಮತ್ತು ಅದೃಷ್ಟವನ್ನು ತರಲಿ.
* ಈ ಯುಗಾದಿಯು ನಿಮಗೆ ಹೊಸ ಚೈತನ್ಯ, ಹೊಸ ಆರಂಭ ಮತ್ತು ಹೊಸ ಸಮೃದ್ಧಿಯನ್ನು ತರಲಿ. ಯುಗಾದಿಯ ಶುಭಾಶಯಗಳು.
* ಈ ಯುಗಾದಿಯು ನಿಮಗೆ ಉಲ್ಲಾಸವನ್ನು ನೀಡಲಿ. ನಿಮ್ಮ ಹೃದಯವನ್ನು ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಂತೋಷದಿಂದ ಸಮೃದ್ಧಗೊಳಿಸಲಿ.
* ಯುಗಾದಿ ಹೊಸ ವರ್ಷವನ್ನು ಅತ್ಯಂತ ಭರವಸೆ, ಉತ್ಸಾಹ, ಹೊಸ ರೀಕ್ಷೆಯೊಂದಿಗೆ ಸ್ವಾಗತಿಸೋಣ. ಸಂತೋಷ, ತೃಪ್ತಿ, ಶಾಂತಿ ಮತ್ತು ಸಮೃದ್ಧಿ ನಿಮ್ಮದಾಗಲಿ
* ಯುಗಾದಿಯ ದೀಪಗಳು ನಿಮ್ಮ ಜೀವನಕ್ಕೆ ಹೊಳಪು ಮತ್ತು ಬೆಳಕನ್ನು ನೀಡಲಿ ಎಂದು ನಾನು ಭಾವಿಸುತ್ತೇನೆ. ನಿಮಗೆ ಹೊಸ ವರ್ಷದ ಶುಭಾಶಯಗಳು.
* ನಿಮ್ಮ ಶತ್ರುಗಳ ಮೇಲಿನ ದ್ವೇಷವು ದೂರವಾಗಲಿ, ಈ ಯುಗಾದಿಯು ನಿಮಗೆ ಸಂಪೂರ್ಣ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ.
* ಈ ಹೊಸ ವರ್ಷದಲ್ಲಿ ನಿಮಗೆ ಸಂತೋಷ ಮತ್ತು ಸಮೃದ್ಧಿ ತರಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
* ನಿಮಗೆ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರುವಂತಹ ಹೊಸ ವರ್ಷ ಇದಾಗಲಿ. ಯುಗಾದಿ ಹಬ್ಬದ ಶುಭಾಶಯಗಳು.
* ಎಲ್ಲಾ ಮನಸ್ತಾಪ, ಬೇಸರ ಮರೆತು ಸುಂದರವಾದ ಹೊಸ ವರ್ಷವನ್ನು ಎದುರು ನೋಡುವ ಸಮಯ ಇದು. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
* ಈ ಹೊಸ ವರ್ಷ ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ಮತ್ತು ನೀವು ಬಹಳಷ್ಟು ಸಂತೋಷದಿಂದ ಆಶೀರ್ವದಿಸಲಿ.
* ನಾನು ಸಂತೋಷವಾಗಿರಲು ನೀವು ಕಾರಣ ಮತ್ತು ಯುಗಾದಿಯಂದು ನೀವು ಉತ್ತಮ ಯಶಸ್ಸನ್ನು ಹೊಂದಲಿ ಎಂದು ನಾನು ಬಯಸುತ್ತೇನೆ. ನಿಮಗೆ ಉತ್ತಮ ಸಮಯವಾಗಲಿ ಎಂದು ಹಾರೈಸುತ್ತೇನೆ.
* ನಾವು ಈ ಜೀವನವನ್ನು ಆನಂದಿಸೋಣ, ಯುಗಾದಿಯನ್ನು ಸಂತಸದಿಂದ, ನಗು ಮುಖದಿಂದ ಆಚರಣೆ ಮಾಡೋಣ. ಈ ಯುಗಾದಿಯಂದು ನನ್ನ ಗೆಳೆಯ/ಗೆಳತಿಗೆ ಶುಭಾಶಯ
* ಹೊಸ ಭರವಸೆಯೊಂದಿಗೆ ಈ ಯುಗಾದಿಯನ್ನು ನಾವು ಸ್ವಾಗತಿಸೋಣ. ಯುಗಾದಿ ಹಬ್ಬದ ಶುಭಾಶಯಗಳು
* ಈ ಯುಗಾದಿಯಂದು ದೇವರು ನಿಮಗೆ ಉತ್ತಮ ಆರೋಗ್ಯವನ್ನು ಅನುಗ್ರಹಿಸಲಿ, ಹೊಸ ವರ್ಷ ಶುಭಾಶಯಗಳು
* ಈ ಯುಗಾದಿಯಂದು ನಿಮ್ಮ ಶತ್ರುಗಳು ಕೂಡಾ ಮಿತ್ರರಾಗಲಿ. ಹೊಸ ಚೈತನ್ಯ ಜೀವನದಲ್ಲಿ ತುಂಬಲಿ
* ಹೊಸ ವರ್ಷದಲ್ಲಿ ದೇವರು ನಿಮಗೆ ಸಂತೋಷ, ಸಮೃದ್ಧಿ, ಆರೋಗ್ಯ, ಐಶ್ವರ್ಯವನ್ನು ಅನುಗ್ರಹಿಸಲಿ
* ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ. ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ. ಯುಗಾದಿ ಹಬ್ಬದ ಶುಭಾಶಯಗಳು
* ನಿಮಗೂ, ನಿಮ್ಮ ಕುಟುಂಬಕ್ಕೂ ಪ್ಲವ ನಾಮ ಸಂವತ್ಸರದ ಶುಭಾಶಯಗಳು. ಬದುಕಿನಲ್ಲಿ ಬೇವಿನ ಕಹಿ ದೂರವಾಗಲಿ, ಬೆಲ್ಲದ ಸಿಹಿ ಹೆಚ್ಚಲಿ, ಹೊಸ ವರ್ಷ ಹರ್ಷವನ್ನು ತರಲಿ....












Click it and Unblock the Notifications