Happy Ram Navami Wishes: ಶ್ರೀರಾಮ ನವಮಿ ಇಲ್ಲಿವೆ ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸುವಂತಹ ಶುಭಾಶಯ ಸಂದೇಶಗಳು
ರಾಮ ನವಮಿ ಹಿಂದೂ ಹಬ್ಬವಾಗಿದ್ದು, ಇದು ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವದ ಆಚರಣೆಯಾಗಿದೆ. ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈ ದಿನ ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ನಡುವೆ ಬರುತ್ತದೆ. ಈ ಬಾರಿ ಇದನ್ನು ಏಪ್ರಿಲ್ 17ರಂದು ಆಚರಿಸಲಾಗುತ್ತದೆ. ಅನೇಕ ಹಿಂದೂಗಳು ರಾಮನವಮಿಯ ಸಂದರ್ಭದಲ್ಲಿ ಉಪವಾಸ ಮಾಡುತ್ತಾರೆ. ಇದರಿಂದ ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮನ ಆಶೀರ್ವಾದ ಸಿಗಲಿದೆ ಎನ್ನುವ ನಂಬಿಕೆ ಇದೆ.
{quiz_832}
ಅಂದಹಾಗೆ ಈ ದಿನದ ಉಪವಾಸ ಪ್ರಕ್ರಿಯೆಯು ಬೆಳಗ್ಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಗ್ಗೆ ತನಕ ವಿಸ್ತರಿಸಬಹುದು. ಇದು ವ್ಯಕ್ತಿಯ ಸಾಮರ್ಥ್ಯವನ್ನು ಅವಲಂಬಿಸಿದೆ. ವಿವಿಧ ರೀತಿಯ ಉಪವಾಸವನ್ನು ಶ್ರೀರಾಮನ ಭಕ್ತರು ಅನುಸರಿಸುತ್ತಾರೆ. ಕೆಲ ಭಕ್ತರು ನೀರನ್ನು ತೆಗೆದುಕೊಳ್ಳದೆ ಅಥವಾ ನೀರನ್ನು ಮಾತ್ರ ತೆಗೆದುಕೊಂಡು ಸಂಪೂರ್ಣ ಉಪವಾಸವನ್ನು ಮಾಡುತ್ತಾರೆ. ಇನ್ನೂ ಕೆಲವರು ಅಲ್ಪ ಆಹಾರ ಸೇವನೆ ಮೂಲಕ ಉಪವಾಸವನ್ನು ಮಾಡುವ ಮೂಲಕ ಶ್ರೀರಾಮನ ಆಶೀರ್ವಾದ ಪಡೆಯುತ್ತಾರೆ.
ಶ್ರೀರಾಮ ರಾಮಾಯಣದ ಕಥಾ ನಾಯಕನಾಗಿದ್ದು, ಆದಿಕಾಲದ ಭಾರತದ ಅಯೋಧ್ಯೆಯ ರಾಜನೆಂದು ಕರೆಯಲಾಗುತ್ತದೆ. ದಶರಥ ಮಹಾರಾಜ ಶ್ರೀರಾಮನ ತಂದೆಯಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ರಾಮನವಮಿ ಹಬ್ಬವನ್ನು ಚೈತ್ರ ಮಾಸದ 9ನೇ ದಿನದಂದು ಆಚರಣೆ ಮಾಡಲಾಗುತ್ತದೆ. ಈ ಹಬ್ಬವು ಅಯೋಧ್ಯೆಯಲ್ಲಿ ರಾಜ ದಶರಥ ಮತ್ತು ರಾಣಿ ಕೌಸಲ್ಯೆ ಹುಟ್ಟಿದ ವಿಷ್ಣುವಿನ ಅವತಾರ ಶ್ರೀರಾಮ ಎನ್ನಲಾಗುತ್ತದೆ.

ಈ ದಿನ ದೇಶದ ಹಲವು ರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈಗಿನ ಅಯೋಧ್ಯೆಯಲ್ಲಿ, ತಮಿಳುನಾಡಿನ ರಾಮೇಶ್ವರಂನಲ್ಲಿ ರಾಮನ ಪೂಜೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕರ್ನಾಟಕದಲ್ಲೂ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಕಛೇರಿಗಳನ್ನು ಆಯೋಜಿಸಲಾಗುತ್ತದೆ. ಕಾರ್ಯಕ್ರಮಗಳ್ಲಿ ಕರ್ನಾಟಕ ಹಾಗೂ ಇತರೆ ರಾಜ್ಯಗಳಿಂದ ಸಂಗೀತ ವಿದ್ವಾಂಸರು ಪಾಲ್ಗೊಳ್ಳುತ್ತಾರೆ.
ಹಬ್ಬದ ದಿನದಂದು ಪ್ರತೀಯೊಬ್ಬರೂ ಜಾತಿ, ಧರ್ಮವೆಂಬ ಕಟ್ಟಳೆಗಳನ್ನ ಬದಿಗೊತ್ತಿ ಕೋಸಂಬರಿ, ಮಜ್ಜಿಗೆ ಹಾಗೂ ಪಾನಕ ಗಳನ್ನು ಹಂಚುವ ಮೂಲಕ ಸೌಹಾರ್ದತೆಯನ್ನು ಮೆರೆಯುತ್ತಾರೆ. ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬುದನ್ನು ಜಗತ್ತಿಗೆ ಸಾರಿ ಹೇಳಲು ಇಂತಹ ಹಬ್ಬಗಳು ಮಹತ್ವಪೂರ್ಣವಾಗಿವೆ. ಈ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಶ್ರೀರಾಮ ನವಮಿಯ ಶುಭಾಶಯಗಳು ತಿಳಿಸಿ. ರಾಮ ನವಮಿ ಶುಭಾಶಯಗಳನ್ನು ಓದಿ ಮತ್ತು ಅವುಗಳನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ರಾಮ ನವಮಿಯ ಶುಭಾಶಯಗಳು
*ರಾಮನವಮಿ ಸಮಾನತೆ ಮತ್ತು ಸಾರ್ವತ್ರಿಕ ಸಹೋದರತ್ವವನ್ನು ಪ್ರೋತ್ಸಾಹಿಸುತ್ತದೆ. ರಾಮ ನವಮಿಯ ಶುಭಾಶಯಗಳು.

*ನಾನು ನಿಮಗೆ ಹೃತ್ಪೂರ್ವಕ ಶ್ರೀರಾಮ ನವಮಿಯ ಶುಭಾಶಯಗಳನ್ನು ಕೋರುತ್ತೇನೆ. ಭಗವಾನ್ ರಾಮ ನಾಮವನ್ನು ಜಪಿಸುವುದರ ಮೂಲಕ ನಮ್ಮ ಮುಖವು ಸದಾ ನಗುಮುಖದಿಂದ ಹೊಳೆಯಲಿದೆ.
*ಸಂತೋಷ ಜಗತ್ತನ್ನು ಮುಳುಗಿಸಲಿ ಮತ್ತು ಭಾರತವು ಇಡೀ ಜಗತ್ತಿಗೆ ಮಾದರಿಯಾಗಿ ಹೊರಹೊಮ್ಮಲಿ ಎಂದು ಭಗವಾನ್ ರಾಮನನ್ನು ಪ್ರಾರ್ಥಿಸೋಣ. ರಾಮನವಮಿಯ ಶುಭಾಶಯಗಳು.
*ಈ ರಾಮನವಮಿಯಲ್ಲಿ ನಮ್ಮ ಪ್ರಾಚೀನ ಸಂಪ್ರದಾಯಗಳಾದ ಏಕತೆ, ಸಹೋದರತ್ವ, ಶೌರ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹಿಂಸೆಯನ್ನು ದೂರವಿಡೋಣ.
*ಈ ಶ್ರೀರಾಮನವಮಿಯಲ್ಲಿ ಎಲ್ಲವು ಮಂಗಳಕರವಾದುದನ್ನು ಸಾಧಿಸಲಿ ಎಂದು ರಾಮಲಾಲನನ್ನು ಪ್ರಾರ್ಥಿಸೋಣ. ಜೈ ಶ್ರೀ ರಾಮ್!
*ಶ್ರೀ ರಾಮ ನವಮಿ ದಿನದಂದು ರಾಮನು ನಿಮ್ಮ ಮೇಲೆ ತನ್ನ ಆಶೀರ್ವಾದವನ್ನು ನೀಡಲಿ.
*ರಾಮನನ್ನು ಜಪಿಸೋಣ, ಪವಿತ್ರ ಮಂತ್ರಗಳನ್ನು ಪ್ರಾರ್ಥಿಸೋಣ: "ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್" ರಾಮ ನವಮಿಯ ಆಶೀರ್ವಾದಗಳು.
*ಶ್ರೀರಾಮನ ದಿವ್ಯ ಕೃಪೆ ಸದಾ ನಿಮ್ಮೊಂದಿಗೆ ಇರಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ರಾಮ ನವಮಿಯ ಶುಭಾಶಯಗಳು.

*ಈ ರಾಮ ನವಮಿಯು ನಿಮ್ಮ ದಾರಿಗಳು, ಹೊಸ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಸುಗಮಗೊಳಿಸಲಿ ಮತ್ತು ನಿಮ್ಮ ಜಗತ್ತನ್ನು ಸುಂದರಗೊಳಿಸಲಿ. ರಾಮ ನವಮಿಯ ಶುಭಾಶಯಗಳು.
*ರಾಮ ನವಮಿಯ ಈ ಮಂಗಳಕರ ಸಂದರ್ಭವು ನಿಮ್ಮ ಜೀವನದಲ್ಲಿ ಭರವಸೆ, ಸಕಾರಾತ್ಮಕತೆ ಮತ್ತು ಶಾಂತಿಯ ಕಿರಣವನ್ನು ತರಲಿ. ರಾಮ ನವಮಿಯ ಶುಭಾಶಯಗಳು.
*ರಾಮ ನವಮಿ ನಿಮ್ಮ ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ಪ್ರಾರಂಭಿಸಲಿ. ರಾಮ ನವಮಿಯಂದು ನಾನು ನಿಮಗೆ ಶುಭ ಹಾರೈಸುತ್ತೇನೆ.
*ಈ ರಾಮ ನವಮಿಯ ಆಚರಣೆ ಸ್ಫೂರ್ತಿಯಿಂದ ತುಂಬಿರಲಿ, ನಿಮಗೆ ಅದೃಷ್ಟ ಮತ್ತು ಸಂತೋಷವನ್ನು ರಾಮ ನೀಡಲೆಂದು ಹಾರೈಸುತ್ತೇನೆ.
*ರಾಮ ಹೇಗಿದ್ದ, ಸೀತಾ ಹೇಗಿದ್ದಳು ನಾವೇನೂ ನೋಡಿಲ್ಲ. ಆದರೆ ಅವರಿಗೆಲ್ಲ ಒಂದು ಮನುಷ್ಯ ಆಕಾರ, ವೇಷ ಭೂಷಣ ಕಲ್ಪಿಸಿ ದೇವರು ಎಂದರೆ ಇವರೇ ಎಂದು ತೋರಿಸಿಕೊಟ್ಟವರು ಭಾರತೀಯ ಪಾರಂಪರಿಕ ಚಿತ್ರ ಕಲಾವಿದರು. ಅವರಿಗೆ ರಾಮನವಮಿಯ ಶುಭಾಶಯಗಳು!
*ಭಕ್ತರು ದೇವರನ್ನು ಮನಸಾ ನೆನೆಯುವಾಗ ಈ ಕಲಾವಿದರನ್ನೂ ನೆನೆದರೆ ಚೆನ್ನ. ಎಷ್ಟೋ ವೇಳೆ ಈ ಚಿತ್ರ ಬಿಡಿಸಿದ ಕಲಾವಿದ ಯಾರು ಎಂಬುದೇ ಗೊತ್ತಿರುವುದಿಲ್ಲ. ನಾಮಿಕ, ಅನಾಮಿಕ ಕಲಾವಿದರಿಗೆ ಒಂದು ನಮೋ ಹೇಳೋಣ. ರಾಮನವಮಿಯ ಶುಭಾಶಯಗಳು!
Recommended Video
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications