ಮಗಳ ದಿನ 2021: ಮಗಳಿಗೆ ಶುಭಕೋರಬಲ್ಲ ಸಂದೇಶಗಳು ಇಲ್ಲಿವೆ

ಬೆಂಗಳೂರು, ಸೆಪ್ಟೆಂಬರ್ 24: ಮಗಳ ದಿನ ಎನ್ನುವುದರಲ್ಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ ಈ ದಿನವನ್ನು ಪುತ್ರಿಗೆ ಮೀಸಲಿಡಲಾಗಿದೆ ಎಂದು.

ಭಾರತದಲ್ಲಿ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರ ಮಗಳ ದಿನ, ಈ ವರ್ಷ ಸೆಪ್ಟೆಂಬರ್ 26ರಂದು ರಾಷ್ಟ್ರೀಯ ಮಗಳ ದಿನವಾಗಿ ದೇಶಾದ್ಯಂತ ಆಚರಿಸಲಾಗುತ್ತದೆ.

ಗಂಡು ವಂಶೋದ್ಧಾರಕ, ಹೆಣ್ಣು ಯಾವತ್ತೂ ಮನೆಯಿಂದ ಆಚೆ ಹೋಗುವವಳು ನಾವ್ಯಾಕೆ ಅವಳ ಮೇಲೆ ಹೆಚ್ಚು ಖರ್ಚು ಮಾಡಬೇಕು, ಏಕೆ ಓದಿಸಬೇಕು ಎನ್ನುವ ಮನಸ್ಥಿತಿ ಇನ್ನೂ ನಮ್ಮ ಸಮಾಜದಲ್ಲಿದೆ.

Happy Daughters Day 2021 Wishes, Messages, Quotes, Images, Facebook & Whatsapp status in Kannada

ಗಂಡು ಮಕ್ಕಳಿದ್ದರೂ ಕೆಲವೊಮ್ಮೆ ಅಪ್ಪ ಅಮ್ಮನಿಂದ ದೂರ ಇರುತ್ತಾರೆ, ತಂದೆ ತಾಯಿಯ ಕೊನೆಗಾಲದಲ್ಲಿ ಅವರನ್ನು ನೋಡಿಕೊಳ್ಳುವುದು ಮಗಳೇ ಆಗಿರುತ್ತಾಳೆ.

ಗಂಡಾಗಲಿ, ಹೆಣ್ಣಾಗಲಿ ಮಕ್ಕಳನ್ನು ದೇವರು ನಮಗೆ ಕೊಟ್ಟ ಅಮೂಲ್ಯ ಉಡುಗೊರೆ ಎಂದು ಪರಿಗಣಿಸಲಾಗುತ್ತದೆ. ಬದುಕಿನ ಅವಿಭಾಜ್ಯ ಅಂಗವಾದ ಪುತ್ರಿಯೊಂದಿಗಿನ ಬಾಂಧವ್ಯ ದಿನ ಪ್ರತಿದಿನವೂ ಪ್ರವರ್ಧಿಸುವಂಥದ್ದು. ಆದರೆ ಅಮ್ಮಂದಿರ ದಿನ, ಅಪ್ಪಂದಿರ ದಿನದಂತೆ ಈ ಸುಂದರ ಸಂಬಂಧದ ಮಹತ್ವ ತಿಳಿಸಲು, ಈ ಸಂಬಂಧವನ್ನು ಗೌರವಿಸಲು ಈ ದಿನದ ಆಚರಣೆ.

ತಮ್ಮ ಬದುಕಿನ , ಸಂತೋಷ ಕನಸಾದ ಪುತ್ರಿಯರ ದಿನವನ್ನು ತಮಗಿಷ್ಟ ಕಂಡಂತೆ ಆಚರಿಸಲಾಗುತ್ತದೆ. ಇದು ಕುಟುಂಬದಿಂದ ಕುಟುಂಬಕ್ಕೆ ಭಿನ್ನವಾಗಿದ್ದು ಪುತ್ರಿ ಮತ್ತು ಪೋಷಕರ ನಡುವೆ ಎಂತಹ ಅನುಬಂಧವಿದೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಕೆಲವರು ಕುಟುಂಬದ ದೊಡ್ಡ ಉತ್ಸವವಾಗಿ ಇದನ್ನು ಆಚರಿಸಬಹುದು.

ದೂರದಲ್ಲಿರುವ ಪುತ್ರಿಯರಿಗೆ ಪ್ರೀತಿಯ ಸಂದೇಶದ ಕಾರ್ಡ್ , ಪತ್ರ , ಅದರ ಜತೆಗೊಂಡು ಉಡುಗೊರೆ ಕಳಿಸಬಹುದು. ಮಗಳಿಗಿಷ್ಟವಾದುದನ್ನು ಕೊಡಿಸಬಹುದು. ಪಿಕ್‌ನಿಕ್‌ಗೆ ಕರೆದೊಯ್ಯಬಹುದು ಅಥವಾ ಮಗಳ ಇಷ್ಟದಂತೆ ಈ ದಿನವನ್ನು ಆಚರಿಸಬಹುದು.

ಮಗಳ ದಿನಾಚರಣೆ ಮಹತ್ವವೇನು?: ಈ ದಿನದ ಆಚರಣೆ ವರ್ಷದಿಂದ ವರ್ಷಕ್ಕೆ ಪರಿಣಾಮಕಾರಿಯಾಗುತ್ತಿದ್ದು, ಮೌಢ್ಯ, ಪೂರ್ವಗ್ರಹಗಳನ್ನು ಬದಿಗೆ ಸರಿಸುತ್ತ ಕಾಲ ಹೇಗೆ ಬದಲಾಗುತ್ತಿದೆ ಎಂಬುದನ್ನು ಈ ಆಚರಣೆಯ ಯಶಸ್ಸು ತೋರಿಸುತ್ತದೆ. ಹೆಣ್ಣುಮಕ್ಕಳಿರುವ ಕುಟುಂಬಗಳು ಈ ದಿನವನ್ನು ಸಂತೋಷದಿಂದ ಆಚರಿಸುತ್ತಾರೆ. ಅದರಲ್ಲೂ ಈ ದಿನ ರಜಾದಿನವಾದ ಭಾನುವಾರವಾಗಿರುವುದರಿಂದ ಪುತ್ರಿಯರು ಮತ್ತು ಪೋಷಕರು ಜತೆಗೂಡಿ ಸಂಭ್ರಮದಿಂದ ಆಚರಿಸುತ್ತಾರೆ.

ಮಗಳ ದಿನಾಚರಣೆ ಇತಿಹಾಸ: ಮಗ, ಮಗಳು ಅಥವಾ ಮಕ್ಕಳಿಗಾಗಿ ಸಡಗರ ಪಡಲು ಇಂಥದ್ದೇ ದಿನ ಬೇಕೆಂದೇನಿಲ್ಲ. ಮನೆಮನಸ್ಸುಗಳಿಗೆ ಸದಾ ಹಬ್ಬವೆನಿಸುವ ಮಕ್ಕಳೆಂದರೆ ಸಾಕು ಅದೇ ಸಂಭ್ರಮ, ಸಡಗರ.

ಆದರೆ ಪಿತೃಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಇಂದು ಕೂಡ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಕೀಳೆಂಬ ದೃಷ್ಟಿಯಲ್ಲಿ ನೋಡುತ್ತಿರುವುದು ಕಂಡುಬರುತ್ತದೆ. ಈ ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆಯನ್ನು ಪ್ರಚುರ ಪಡಿಸುವ ದೃಷ್ಟಿಯಿಂದ ವಿವಿಧ ದೇಶಗಳು ಮಗಳ ದಿನವನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ನಿರ್ಧರಿಸಿವೆ. ಸರಕಾರ ಮತ್ತು ಕಾನೂನಿನ ಮುಂದೆ ಪ್ರತಿ ನಾಗರಿಕ ಸರಿಸಮಾನ ಎಂಬುದನ್ನು ಪ್ರತಿಯೊಬ್ಬರಿಗೆ ಮನವರಿಕೆ ಮಾಡಿಸುವುದು ಇದರ ಉದ್ದೇಶ.

ಸಂದೇಶಗಳು: -ನನ್ನ ಕಣ್ಣಲ್ಲಿ ಸದಾ ನೀ ಪುಟ್ಟ ಮಗುವಾಗಿರಬೇಕು. ನನಗದೇ ಚಂದ. ಮುದ್ದು ಮಗಳೇ ದಯವಿಟ್ಟು ಬೇಗ ದೊಡ್ಡವಳಾಗಬೇಡ. ಹೀಗೆ ಮುದ್ದುಮುದ್ದಾಗಿರು. ಐ ಲವ್ ಯೂ.
-ದಿನಗಳೆದಂತೆ ನನ್ನ ಕಣ್ಣಲ್ಲಿ ನಿನ್ನ ಸೌಂದರ್ಯ ಇಮ್ಮಡಿಯಾಗುತ್ತಲೇ ಹೋಗುತ್ತಿದೆ. ಬಂಗಾರದಂತ ನಿನ್ನ ಹೃದಯ ಸದಾ ಖುಷಿ ಖುಷಿಯಿಂದಿರಲಿ. ಐ ಲವ್ ಯೂ ಲಾಟ್
-ಬದುಕಿನ ಜಂಜಾಟದಲ್ಲಿ ಬಸವಳಿದು ಕುಸಿದು ಕುಳಿತಾಗ, ನೆನಪಾಗೋದು ನೀನು ಮಾತ್ರ. ನಿನ್ನ ನೆನಪು, ನಿನ್ನ ಸನಿಹ, ನಿನ್ನೆಡೆಗೆ ಒಂದು ದೃಷ್ಟಿ ಸಾಕು ನನ್ನೆಲ್ಲ ಬಳಲಿಕೆ, ನೋವು ನೀಗಲು. ನೀನೆಂದರೆ ನನ್ನ ಬದುಕಿನ ಪವಾಡ. ಐ ಲವ್ ಯೂ ನನ್ನ ಮುದ್ದು ಮಗಳೇ
-ನಿನ್ನ ಪುಟ್ಟ ಪಾದಗಳನ್ನು ನನ್ನೆದೆಗೊತ್ತಿಕೊಂಡ ದಿನವೇ ನನ್ನ ಬದುಕಿನ ಸಾರ್ಥಕ ದಿನ ಮಗಳೇ. ನನ್ನ ಕನಸು, ಬದುಕು ಎಲ್ಲವಾಗಿರೋ ನೀ ಸದಾ ನಗುತಿರು
-ದೇವತೆಯಂತಹ ನಿನ್ನನ್ನು ಮಗಳು ದೇವರು ನನಗೆ ನೀಡಿರುವ ಬಹುದೊಡ್ಡ ಉಡುಗೊರೆ. ಸದಾ ಹೀಗೆ ಇರು ನನ್ನೊಲವೆ...
-ನೀ ಎದುರಿಗಿದ್ದರೆ ಸಾಕು, ನನಗದೇ ಹಬ್ಬ. ನನ್ನ ಮುದ್ದು ಕಣ್ಮಣಿ ನಿನ್ನ ಬದುಕೇ ಹಬ್ಬವಾಗಿರಲಿ. ಪುತ್ರಿಯರ ದಿನದ ಶುಭಾಶಯಗಳು ಮಗಳೇ..
-ನನ್ನ ಈ ಹೃದಯ ಸದಾ ನಿನಗೆ ಸೇರಿದ್ದು ಮಗಳೇ. ನೀನೇ ನನ್ನ ಶಾಶ್ವತ ಪ್ರೀತಿ. ಐ ಲವ್ ಯೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+