Google logo change: ದಶಕದ ಬಳಿಕ ಬಣ್ಣ ಬದಲಿಸಿದ 'ಗೂಗಲ್'
Google New Logo Change: ನೀವು ಯಾವುದೇ ಮಾಹಿತಿ ಬೇಕಾದರೂ ಗೂಗಲ್‌ನಲ್ಲಿ ತಡಕಾಡುತ್ತೀರಿ. ಅಷ್ಟೊಂದು ಮಾಹಿತಿ, ದತ್ತಾಂಶಗಳನ್ನು ಇಟ್ಟುಕೊಂಡಿರುವ ಗೂಗಲ್ ಸರ್ಚ್ ಎಂಜಿನ್ ಅಷ್ಟೇ ಅಲ್ಲ, ದೈತ್ಯ ಐಟಿ ಕಂಪನಿಯು ಹೌದು. ಇದು ಸುಮಾರು 10 ವರ್ಷಗಳ ನಂತರ ಮೊದಲ ಬಾರಿಗೆ ತನ್ನ ಲೋಗೋ 'G' ಬಣ್ಣ ಬದಲಾಯಿಸಿದೆ. ಹೊಸ ಸ್ವರೂಪದೊಂದಿಗೆ ಕಾಣಿಸಿಕೊಂಡಿದೆ.
ಹೌದು, ಗೂಗಲ್ ಕಂಪನಿಯು ಸೆಪ್ಟೆಂಬರ್ 2015 ರಲ್ಲಿ ತನ್ನ ಗೂಗಲ್ ಸಂಕೇತ (ಲೋಗೋ)ದಲ್ಲಿ ಬದಲಾವಣೆ ಮಾಡಿತ್ತು.. ತಂತ್ರಜ್ಞಾನ ದೈತ್ಯ ಕಂಪನಿಯಾಗಿರುವ ಗೂಗಲ್ ತನ್ನ ಆರು ಅಕ್ಷರಗಳ (Google) ಪದಗಳಲ್ಲಿ ಸ್ಯಾನ್ಸ್-ಸೆರಿಫ್ ಟೈಪ್‌ಫೇಸ್ ಮತ್ತು ಹೆಚ್ಚು ಆಧುನಿಕ ಸ್ವರೂಪವನ್ನು ಅಂದು ಪರಿಚಯಿಸಿತ್ತು. ಐಕಾನಿಕ್ 'G' ಐಕಾನಿಕ್ ರೀತಿಯಲ್ಲಿ ಕಾಣಿಸುತ್ತಿತ್ತು. ಇದೀಗ ಆ ಸಂಕೇತದ ಬಣ್ಣ ಬದಲಾಗಿದೆ. ಗ್ರೇಡಿಯಂಟ್ ರೂಪದಲ್ಲಿ ಬಣ್ಣವನ್ನು ಹೊರ ತಂದಿದೆ.

ಈ ಮೊದಲು ಗೂಗಲ್ ಲೋಗೋದಲ್ಲಿ ನೀಲಿ, ಹಳದಿ, ಕೆಂಪು, ಹಸಿರು ಸೇರಿ ನಾಲ್ಕು ಬಣ್ಣಗಳು ಪ್ರತ್ಯೇಕವಾಗಿ ಕಾಣುತ್ತಿದ್ದವು. ಇದೀಗ ಅದೇ ಬಣ್ಣಗಳಲ್ಲಿ ಸಂಕೇತವನ್ನು ಮರು ವಿನ್ಯಾಸಗೊಳಿಸಿದೆ. ಹೊಸ ಆವೃತ್ತಿ ರೂಪದಲ್ಲಿ ಅನಾರವಣಗೊಳಿಸಿದೆ. ಸೂಕ್ಷ್ಮವಾಗಿ ಗಮನಿಸಿದರೆ ಹೊಸ ಗೂಗಲ್ ಲೋಗೋದಲ್ಲಿ ನೀಲಿ, ಕೆಂಪು, ಹಸಿರು, ಹಳದಿ ಬಣ್ಣಗಳು ಸರಾಗವಾಗಿ ಒಂದೇ ಸುಳಿಯಲ್ಲಿ ಸಂಯೋಜಿಸಿದಂತೆ ಕಾಣುತ್ತಿವೆ. ಬಹುವರ್ಣದ ಗ್ರೇಡಿಯಂಟ್ ರೂಪದಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗೂಗಲ್ ಲೋಗೋ ಬದಲಾವಣೆ ಬಗ್ಗೆ ಸಾಕಷ್ಟು ಫೋಟೋಗಳು, ಸುದ್ದಿ ಹರಿದಾಡುತ್ತಿವೆ.
Google's logo redesign in a nutshell pic.twitter.com/qYqwjepNVQ
— Anshuman Jain (@AnshumanJainn) May 13, 2025
ಜಾಗತಿಕ ಅನಾವರಣ ಬಾಕಿ ಇದೆ
ಆಂಡ್ರಾಯ್ಡ್‌ನಲ್ಲಿ ಗೂಗಲ್ ಅಪ್ಲಿಕೇಷನ್‌ನಲ್ಲಿ ಹುಡುಕಾಟ ನಡೆಸಿದಾಗ ಐಕಾನಿಕ್ ಲೋಗೋ ಬದಲಾಯಿಸಿರುವುದು ಗೊತ್ತಾಗಿದೆ. ಸದ್ಯ ಗೂಗಲ್ ಹೊಸ 'ಜಿ' ಈಗಾಗಲೇ iOS ಸಾಧನಗಳಿಗಾಗಿ ಗೂಗಲ್ ಅಪ್ಲಿಕೇಶನ್‌ನಲ್ಲಿ ಮತ್ತು ಪಿಕ್ಸೆಲ್ ಫೋನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರ ಹೊರತು ಬೇರೆ ಇತರ ಆಂಡ್ರಾಯ್ಡ್ ಸಾಧನಗಳು ಮತ್ತು ವೆಬ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಳೆಯ ಲೋಗೋದಲ್ಲಿಯೇ ಇದೆ. ಶೀಘ್ರವೇ ಜಾಗತಿಕವಾಗಿ ಹೊಸ ಸ್ವರೂಪದಲ್ಲಿ ಅನಾವರಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಗೂಗಲ್ ಕಂಪನಿ ತನ್ನೆಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಲೋಗೋ ಬದಲಾವಣೆ ಇಲ್ಲವೇ ಜಾಗತಿಕವಾಗಿ ಜಾರಿ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಿಸಬೇಕಿದೆ. ಗೂಗಲ್ ಕ್ರೋಮ್, ನಕ್ಷೆಗಳು ಮತ್ತು ಹೆಚ್ಚುವರಿ ಗೂಗಲ್ ಸೇವೆಗಳಲ್ಲಿ ಹಳೆಯ ಲೋಗೋ ಇದೆ. ಹೊಸ ಆಧುನಿಕ ರೀತಿಯಲ್ಲಿ ಪರಿವರ್ತನೆಗೊಂಡಿದೆ. ತಂತ್ರಜ್ಞಾನ, ಎಐ ಕಾಲದಲ್ಲಿ ಜೆಮಿನಿ ಎಐ, ಕೃತಕ ಬುದ್ಧಿ ಮತ್ತೆ ಬಿಡುಗಡೆ ಸಂದರ್ಭದಲ್ಲಿ ಹೊಸತನಕ್ಕ ಗೂಗಲ್ ಒಗ್ಗಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಹತ್ತು ವರ್ಷಗಳ ಹಿಂದೆ (2015) ಗೂಗಲ್ ತನ್ನ ಲೋಗೋ ಬದಲಾವಣೆ ಮಾಡಿತ್ತು. ಅದಾಗಿ ದಶಕದ ಕಳೆದ ನಂತರ ಮತ್ತೊಮ್ಮೆ ಬದಲಾವಣೆ ಮಾಡಿದೆ. ಹೀಗಾಗಿ ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದೇ ನಾಲ್ಕು ಬಣ್ಣಗಳು ಸಮ್ಮಿಲನಗೊಂಡಂತೆ ಗೂಗಲ್ ಲೋಗೋ G ನಲ್ಲಿ ಕಾಣಿಸುತ್ತಿವೆ. ಇದು ಬಳಕೆದಾರರನ್ನು ಆಕರ್ಷಿಸಿದೆ.












Click it and Unblock the Notifications