ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಂಡ ಮನೆಗೆ ದ್ರೋಹ ಮಾಡೋದನ್ನು ಅಮೆರಿಕ ನೋಡಿ ಕಲಿಯಬೇಕು..!

|
Google Oneindia Kannada News

ಜಗತ್ತಿನಾದ್ಯಂತ ಅಘೋಷಿತವಾಗಿ ಒಂದು ನಿಯಮ ಜಾರಿಯಲ್ಲಿದೆ. ಅದೇನೆಂದರೆ ಅಮೆರಿಕ ಸ್ನೇಹ ಊಟಕ್ಕೆ ಉಪ್ಪಿನಕಾಯಿ ಇದ್ದಂತೆ, ಆದ್ರೆ ಅದೇ ಊಟವಾಗಲು ಸಾಧ್ಯವೇ ಇಲ್ಲ. ಯಾಕಂದ್ರೆ ಅಮೆರಿಕ ಯಾವ ಟೈಂಗೆ, ಹೇಗೆ ಕೈಕೊಡುತ್ತೆ ಅಂತಾ ಹೇಳೋಕೆ ಆಗೋದಿಲ್ಲ. ಬೆನ್ನಿಗೆ ಚೂರಿ ಹಾಕೋದು, ಸಮಯ ಬಂದಾಗ ಉಂಡ ಮನೆಗೆ ದ್ರೋಹ ಬಗೆಯೋದು ಅಮೆರಿಕ ನಾಯಕರಿಗೆ ಮಾಮೂಲು. ಈಗಲೂ ಅಷ್ಟೇ ಫ್ರಾನ್ಸ್ ವಿಚಾರದಲ್ಲಿ ಅಮೆರಿಕ ಇದೇ ರೀತಿಯ ವರ್ತನೆ ತೋರಿದೆ. ಉಂಡ ಮನೆಗೆ ದ್ರೋಹ ಬಗೆದಿದೆ.

ಸುಮಾರು 250 ವರ್ಷಗಳ ಹಿಂದೆ ಅಮೆರಿಕನ್ನರಿಗೆ ಸ್ವಾತಂತ್ರ್ಯ ಕೊಡಿಸಲು ಯಾರು ರಕ್ತ ಹರಿಸಿದ್ದರೋ ಅವರ ಬೆನ್ನಿಗೇ ಚೂರಿ ಬಿದ್ದಿದೆ. ಈ ಘಟನೆ ಫ್ರಾನ್ಸ್‌ನ ಬಡಿದೆಬ್ಬಿಸುವ ಜೊತೆ ಜೊತೆಗೆ, ಅಮೆರಿಕದ ಡಬಲ್ ಗೇಮ್‌ಗೆ ಸರಿಯಾಗೇ ರೀಪ್ಲೇ ಸಿಕ್ಕಿದೆ. ಅಂದಹಾಗೆ ನಾವಿಲ್ಲಿ ಹೇಳ್ತಾ ಇರೋದು 'ಆಕಸ್' (Aukus) ಬಗ್ಗೆ.

ಚೀನಾ ವಿರುದ್ಧ ಏಕಾಂಗಿಯಾಗಿ ನಿಲ್ಲೋಕೆ ಸಾಧ್ಯವಾಗದೆ ಅಮೆರಿಕ ಒಂದು ಹೊಸ ಒಕ್ಕೂಟ ರಚಿಸಿದೆ. ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಜೊತೆಗೆ ಅಮೆರಿಕ ಈ ಒಕ್ಕೂಟ ರಚಿಸಿಕೊಂಡಿದ್ದು, ಇದರಿಂದ ಫ್ರಾನ್ಸ್‌ಗೆ ಆರ್ಥಿಕವಾಗಿ ದೊಡ್ಡ ಹೊಡೆತ ಬಿದ್ದಿದೆ. ಅದು ಹೇಗೆ..? ಫ್ರಾನ್ಸ್‌ಗೆ ಈ ಒಕ್ಕೂಟದಿಂದ ಏನು ನಷ್ಟ ಅನ್ನೋದರ ಪಿನ್ ಟು ಪಿನ್ ಡೀಟೇಲ್ಸ್ ಮುಂದೆ ತಿಳಿಯೋಣ.

ಫ್ರಾನ್ಸ್ ಕೋಪಕ್ಕೆ ಕಾರಣವೇನು..?

ಫ್ರಾನ್ಸ್ ಕೋಪಕ್ಕೆ ಕಾರಣವೇನು..?

ಅಮೆರಿಕ, ರಷ್ಯಾ ಹಾಗೂ ಚೀನಾ ರೀತಿಯಲ್ಲೇ ರಕ್ಷಣಾ ವಸ್ತುಗಳನ್ನು ಜಗತ್ತಿಗೆ ಪೂರೈಕೆ ಮಾಡುವಲ್ಲಿ ಫ್ರಾನ್ಸ್‌ ಕೂಡ ಮುಂದಿದೆ. ರಕ್ಷಣಾ ವಸ್ತುಗಳ ಮಾರಾಟದಿಂದ ಫ್ರಾನ್ಸ್ ಅತಿಹೆಚ್ಚು ಆದಾಯ ಗಳಿಸುತ್ತದೆ. 2016ರಲ್ಲಿ ಇದೇ ರೀತಿ ಆಸ್ಟ್ರೇಲಿಯಾ ಜೊತೆಗೆ ಫ್ರಾನ್ಸ್‌ 12 ಡೀಸೆಲ್ ಮತ್ತು ವಿದ್ಯುತ್ ಚಾಲಿತ ಜಲಾಂತರ್ಗಾಮಿಗಳನ್ನ ನಿರ್ಮಿಸಲು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಒಂದೆರಡಲ್ಲ ಬರೋಬ್ಬರಿ 50 ಬಿಲಿಯನ್ ಡಾಲರ್ ಮೊತ್ತದ್ದು. ಅಂದ್ರೆ ಸುಮಾರು 3.5 ಲಕ್ಷ ಕೋಟಿ ರೂಪಾಯಿ ಮೊತ್ತದ್ದು. ಆದ್ರೆ ಯುಎಸ್ ಜೊತೆಗೆ ಆಸಿಸ್ ತ್ರಿಪಕ್ಷೀಯ ಒಕ್ಕೂಟ ರಚನೆ ಮಾಡಿಕೊಳ್ಳುತ್ತಿದ್ದಂತೆ 50 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಹರಿದು ಹಾಕಿದೆ. ಇದೇ ಕಾರಣಕ್ಕೆ ಫ್ರಾನ್ಸ್ ರೊಚ್ಚಿಗೆದ್ದು, ಪ್ರತಿಕಾರಕ್ಕೆ ಸಿದ್ಧವಾಗಿದೆ.

ಹಳೇ ಹೆಂಡ್ತಿ ಉಪವಾಸ..!

ಹಳೇ ಹೆಂಡ್ತಿ ಉಪವಾಸ..!

ಅಂದಹಾಗೆ ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಚೀನಾ ಪ್ರಭಾವ ತಗ್ಗಿಸಲು ಆಸ್ಟ್ರೇಲಿಯಾ, ಬ್ರಿಟನ್‌ನೊಂದಿಗೆ ಅಮೆರಿಕ ಹೊಸ ತ್ರಿಪಕ್ಷೀಯ ಮೈತ್ರಿಕೂಟವನ್ನು ರಚಿಸಿದೆ. ಮೈತ್ರಿ ಒಪ್ಪಂದದ ಹಿನ್ನೆಲೆಯಲ್ಲಿ ಯುಎಸ್ ಹಾಗೂ ಬ್ರಿಟನ್‌ 8 ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಅಥವಾ ಸಬ್‌ಮರೀನ್ ಅಭಿವೃದ್ಧಿಗೆ ಆಸ್ಟ್ರೇಲಿಯಾಗೆ ನೆರವು ನೀಡಲಿವೆ. ಈ ಕಾರಣಕ್ಕೆ ಆಸ್ಟ್ರೇಲಿಯಾ ಫ್ರಾನ್ಸ್ ಜೊತೆ ಮಾಡಿಕೊಂಡ ಒಪ್ಪಂದ ಕೈಬಿಟ್ಟು, ಅಮೆರಿಕದ ಜೊತೆಗೆ ಸ್ನೇಹ ಬೆಸೆಯಲು ಮುಂದಾಗಿದೆ. ಇದು ಹೇಗಾಗಿದೆ ಅಂದ್ರೆ ಹೊಸ ಹುಡುಗಿ ಸಹವಾಸದಿಂದ ಹಳೇ ಹೆಂಡತಿ ಉಪವಾಸ ಬಿದ್ದಂತಾಗಿದೆ. ಫ್ರಾನ್ಸ್ ಹಳೇ ಹೆಂಡತಿಯಂತೆ ಕೆಂಡವಾಗಿದ್ದು ಮೂರೂ ದೇಶಗಳ ವಿರುದ್ಧ ಪ್ರತಿಕಾರಕ್ಕೆ ಕಾದು ಕುಳಿತಿದೆ.

ಅಮೆರಿಕ ಕೈತಪ್ಪುತ್ತಾ ಯುರೋಪ್..?

ಅಮೆರಿಕ ಕೈತಪ್ಪುತ್ತಾ ಯುರೋಪ್..?

ಯಾರನ್ನ ಎಲ್ಲಿ, ಹೇಗೆ, ಯಾವರೀತಿ ಬಳಸಿ ಬಿಸಾಡಬೇಕು ಅನ್ನೋದು ಅಮೆರಿಕ ನಾಯಕರಿಗೆ ಚೆನ್ನಾಗಿ ಗೊತ್ತು ಬಿಡಿ. ಆದರೆ ಇಷ್ಟುದಿನ ಅಮೆರಿಕ ಆಡಿದ್ದೇ ಆಟ ಎನ್ನುವಂತಾಗಿತ್ತು, ಈಗ ಕಾಲ ಬದಲಾಗಿದೆ. ಅಮೆರಿಕ ತಪ್ಪು ಮಾಡಿದರೂ ಒಪ್ಪಿಕೊಂಡು ಕೂರಲು ಜಗತ್ತು ಸಿದ್ಧವಿಲ್ಲ. ಹೀಗಾಗಿಯೇ ಫ್ರಾನ್ಸ್ ಕೆಂಡವಾಗಿದ್ದು, ಆಸ್ಟ್ರೇಲಿಯಾ ಮತ್ತು ಅಮೆರಿಕದಿಂದ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಇದು ಯುರೋಪ್‌ನಲ್ಲಿ ಅಮೆರಿಕ ಹಿಡಿತ ತಪ್ಪುವ ಮುನ್ಸೂಚನೆ ನೀಡುತ್ತಿದೆ. ಏಕೆಂದರೆ ಬ್ರೆಕ್ಸಿಟ್ ಹೆಸರಲ್ಲಿ ಬ್ರಿಟನ್ ಯುರೋಪ್ ಒಕ್ಕೂಟವನ್ನೇ ತೊರೆದು ಹೊರ ಬಂದ ನಂತರ ಸಹಜವಾಗಿ ಬ್ರಿಟನ್ ವಿರುದ್ಧ ಅಸಮಾಧಾನ ಇದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿ ಇರುವಾಗಲೇ ಬ್ರಿಟನ್ ಜೊತೆಗೂಡಿ ಅಮೆರಿಕ ಒಕ್ಕೂಟ ರಚಿಸಿದ್ದು, ಫ್ರಾನ್ಸ್‌ನ ಲಾಭಕ್ಕೂ ಕತ್ತರಿ ಹಾಕಿದೆ. ತನ್ನ ತಟ್ಟೆಗೆ ಕೈಹಾಕಿದ ಅಮೆರಿಕ ವಿರುದ್ಧ ಫ್ರಾನ್ಸ್ ಕೆಂಡವಾಗಿದೆ.

ನ್ಯೂಕ್ಲಿಯರ್ ಆಸೆ ತೂರಿಸಿದ್ರು..!

ನ್ಯೂಕ್ಲಿಯರ್ ಆಸೆ ತೂರಿಸಿದ್ರು..!

ಜಗತ್ತಲ್ಲಿ ನ್ಯೂಕ್ಲಿಯರ್ ಸಬ್‌ಮರೀನ್ ಅಥವಾ ಜಲಾಂತರ್ಗಾಮಿ ಇರುವುದು ಕೆಲ ರಾಷ್ಟ್ರಗಳ ಬಳಿ ಮಾತ್ರ. ಅದರಲ್ಲೂ ಅಮೆರಿಕದ ಬಳಿ ಇರುವ ನ್ಯೂಕ್ಲಿಯರ್ ಸಬ್‌ಮರೀನ್ಸ್ ಜಗತ್ತಿನಲ್ಲೇ ಶಕ್ತಿಶಾಲಿ. ಹೀಗಾಗಿ ಇವನ್ನ ಅಮೆರಿಕ ಬೇರೆ ಯಾರಿಗೂ ಸೇಲ್ ಮಾಡಿಲ್ಲ. ಕೇವಲ ಬ್ರಿಟನ್ ಜೊತೆಗೆ ನ್ಯೂಕ್ಲಿಯರ್ ಸಬ್‌ಮರೀನ್‌ಗಳನ್ನ ಹಾಗೂ ಅದರ ತಂತ್ರಜ್ಞಾನ ಹಂಚಿಕೊಂಡಿದೆ. ಈಗ ಇದೇ ನ್ಯೂಕ್ಲಿಯರ್ ಸಬ್‌ಮರೀನ್ ಆಸೆ ತೋರಿಸುತ್ತಾ ಆಸ್ಟ್ರೇಲಿಯಾ ಜೊತೆ ಸ್ನೇಹ ಬೆಸೆದಿದೆ ಅಮೆರಿಕ. ಚೀನಾ ವಿರುದ್ಧ ಹಲ್ಲು ಮಸೆಯಲು ಹೋಗಿ ಫ್ರಾನ್ಸ್ ಸ್ನೇಹ ಕಳೆದುಕೊಳ್ಳುತ್ತಿದ್ದಾನೆ ವಿಶ್ವದ 'ದಡ್ಡಣ್ಣ' ಅಲ್ಲಲ್ಲ 'ದೊಡ್ಡಣ್ಣ'.

ಸ್ವಾತಂತ್ರ್ಯ ಕೊಡಿಸಿದ್ದೇ ಫ್ರಾನ್ಸ್..!

ಸ್ವಾತಂತ್ರ್ಯ ಕೊಡಿಸಿದ್ದೇ ಫ್ರಾನ್ಸ್..!

ಸುಮಾರು ಎರಡೂವರೆ ಶತಮಾನಗಳ ಹಿಂದೆ ಅಮೆರಿಕ ಬ್ರಿಟಿಷ್ ಸಾಮ್ರಾಜ್ಯದ ಅಡಿಯಾಳಾಗಿ ನರಳುತ್ತಿತ್ತು. ಇಂಗ್ಲಿಷ್ ದೊರೆಗಳ ಟಾರ್ಚರ್‌ಗೆ ಅಮೆರಿಕನ್ನರು ನಲುಗಿದ್ದರು. ಆಗಲೇ ಶುರುವಾಗಿದ್ದೇ ನೋಡಿ ಅಮೆರಿಕನ್ನರ ಸ್ವಾತಂತ್ರ್ಯ ಚಳುವಳಿ. ಹೀಗೆ ಅಮೆರಿಕನ್ನರು ಶುರು ಮಾಡಿದ್ದ ಹೋರಾಟಕ್ಕೆ ಬೆಂಬಲ ನೀಡಿದ್ದು ಇದೇ ಫ್ರಾನ್ಸ್. ಪಕ್ಕದ ಕೆನಡಾ ಫ್ರಾನ್ಸ್ ವಶದಲ್ಲಿತ್ತು. ಆಗ ಅಮೆರಿಕದ ಸ್ವಾತಂತ್ರ್ಯ ಚಳವಳಿ ಕೂಡ ನಡೆಯುತ್ತಿತ್ತು. ಸಹಜವಾಗಿ ಬ್ರಿಟಿಷರ ಪರಮ ವೈರಿ ಫ್ರಾನ್ಸ್ ಅಲರ್ಟ್ ಆಗಿತ್ತು. ಅಮೆರಿಕನ್ನರಿಗೆ ಬೆನ್ನಲುಬಾಗಿ ನಿಂತಿತ್ತು. ಕಡೆಗೂ ಬ್ರಿಟಿಷ್ ಸೇನೆಗೆ ಮಣ್ಣುಮುಕ್ಕಿಸಲು ಅಮೆರಿಕನ್ನರಿಗೆ ಇದೇ ಫ್ರಾನ್ಸ್ ನೆರವಾಗಿತ್ತು. ಹೀಗಾಗಿ ಸುಮಾರು 250 ವರ್ಷಗಳ ಹಿಂದೆ ಅಮೆರಿಕ ಸ್ವತಂತ್ರಗೊಂಡಿತ್ತು. ಆದರೆ ತಮಗೆ ಅಂದು ಸಹಾಯ ಮಾಡಿದವರಿಗೇ ಇವತ್ತು ಅಮೆರಿಕದ ನಾಯಕರು ಗುನ್ನಾ ಇಡುತ್ತಿದ್ದಾರೆ. ಇದು ಫ್ರೆಂಚರ ಪಿತ್ತ ನೆತ್ತಿಗೇರುವಂತೆ ಮಾಡಿದೆ.

English summary
France angry over Aukus and sent a anger message to Australia, US, UK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X