• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Profile: ಕಾಳಿ ದೇವಿ ಉಪಾಸಕ, ಕಾಂಗ್ರೆಸ್ ಕಟ್ಟಾಳು ಪ್ರಣಬ್ ದಾದಾ

|

ಭಾರತದ 13ನೇ ರಾಷ್ಟ್ರಪತಿಯಾಗಿದ್ದ ಪ್ರಣಬ್ ಕುಮಾರ್ ಮುಖರ್ಜಿ ಅವರು ವೈವಿಧ್ಯಮಯ ರಾಜಕೀಯ ಬದುಕು ಕಂಡವರು. ಕಾಳಿ ದೇವಿ ಉಪಾಸಕರಾಗಿದ್ದ ಅವರು ಕಾಂಗ್ರೆಸ್ ಕಟ್ಟಾಳು ಎನಿಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಮಿರಾತಿ ಬೆಂಗಾಳಿ ಬಾಬು ಭಾರತದ ರಾಜಕೀಯ ಪಂಡಿತರ ಪೈಕಿ ಅಗ್ರಗಣ್ಯರೆನಿಸಿಕೊಂಡವರು. ದೇಶದ ಪ್ರಧಾನಿಯಾಗುವ ಎಲ್ಲಾ ಅರ್ಹತೆ ಇದ್ದರೂ ಅವಕಾಶ ಕೈಗೊಡಲಿಲ್ಲ. ಪ್ರಣಬ್ ದಾ ಜೀವನದ ಸ್ಥೂಲ ಪರಿಚಯ ಇಲ್ಲಿದೆ

   ಕಾಂಗ್ರೆಸ್ ನ ನಿಷ್ಠಾವಂತ ಕಟ್ಟಾಳು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ | Oneindia Kannada

   Breaking News: ಮಾಜಿ ರಾಷ್ಟ್ರಪತಿ, ಪ್ರಣಬ್ ಮುಖರ್ಜಿ ವಿಧಿವಶ

   ಭಾರತ ಕಂಡ ಉತ್ತಮ ರಾಜಕೀಯ ಮುಖಂಡರಲ್ಲಿ ಒಬ್ಬರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದ ಪ್ರಣಬ್ ಮುಖರ್ಜಿ ಅವರು ರಕ್ಷಣ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗು ಉದ್ದಿಮೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

   ಜನನ: ಡಿಸೆಂಬರ್ 11, 1935, ಮಿರಾತಿ, ಪಶ್ಚಿಮ ಬಂಗಾಳ, ಭಾರತ

   ತಂದೆ, ತಾಯಿ: ಕಮದ ಕಿನ್ಕರ್ ಮುಖರ್ಜಿ ಹಾಗೂ ರಾಜಲಕ್ಷ್ಮಿ ಮುಖರ್ಜಿ ಪತ್ನಿ: ಸುವ್ರಾ (ಶುಭ್ರಾ) ಮುಖರ್ಜಿ

   ಧರ್ಮ: ಬೆಂಗಾಳಿ ಬ್ರಾಹ್ಮಣ, ಹಿಂದೂ

   ಕುಟುಂಬ: ಇಬ್ಬರು ಗಂಡು ಮಕ್ಕಳು ಮಗ ಅಭಿಜಿತ್ ಹಾಗೂ ಇಂದ್ರಜಿತ್ ಹಾಗೂ ಓರ್ವ ಪುತ್ರಿ

   * ಪ್ರಣಬ್ ಅವರ ತಂದೆ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು 10 ವರ್ಷಕ್ಕೂ ಅಧಿಕ ಕಾಲ ಜೈಲುವಾಸ ಅನುಭವಿಸಿದ್ದರು. ಕಾಂಗ್ರೆಸ್ ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಕೆ ಮುಖರ್ಜಿ ಕರ್ತವ್ಯ ನಿರ್ವಹಿಸಿದ್ದರು.

   ವಿದ್ಯಾಭ್ಯಾಸ: ಎಂಎ(ಇತಿಹಾಸ), ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಕೋಲ್ಕತ್ತಾ ವಿವಿ.

   * ಅಂತಾರಾಷ್ಟ್ರೀಯ ವ್ಯವಹಾರ ವಿಷಯದ ಮೇಲೆ ಸ್ನಾತಕೋತ್ತರ ಪದವಿ, ಡಿಬ್ರುಗರ್ ವಿವಿ, ಅಸ್ಸಾಂ

   * ಎಲ್ ಎಲ್ ಬಿ

   * University of Wolverhampton ನಿಂದ 2011ರಲ್ಲಿ ಡಿಲಿಟ್ ಪದವಿ

   ವೃತ್ತಿ: ಪತ್ರಕರ್ತ, ರಾಜಕಾರಣಿ

   ಹವ್ಯಾಸ: ತೋಟಗಾರಿಕೆ, ಡೈರಿ ಬರೆಯುವುದು, ಸಂಗೀತ, ಸಾಹಿತ್ಯ

   ಆಹಾರ ಅಭ್ಯಾಸ: ಶಾಖಾಹಾರಿ ಆಹಾರವನ್ನು ಇಷ್ಟಪಡುವ ಪ್ರಣಬ್, ಮಾಂಸಹಾರಿ ಕೂಡಾ ಆಗಿದ್ದರು. ಬೆಂಗಾಳಿ ಶೈಲಿ ಪಾಯಸ ಪತ್ನಿ ಕೈರುಚಿ ಇಷ್ಟಪಡುತ್ತಿದ್ದರು. ಪತಿಗಾಗಿ ಶುಭ್ರಾ ಅವರು ಆಲೂ ಪಾಸ್ತೋ ಹಾಗೂ ಜಿಂಗೆ ಪಾಸ್ತೋ ತಯಾರಿಸುತ್ತಿದ್ದರು.

   ವೃತ್ತಿ ಜೀವನ: ಅಂಚೆ ಮತ್ತು ಟೆಲಿಗ್ರಾಫ್ ಕಚೇರಿಯಲ್ಲಿ ಮೊದಲ ದರ್ಜೆ ಗುಮಾಸ್ತರಾಗಿ ವೃತ್ತಿ ಆರಂಭ. ಕಾಲೇಜು ಅಧ್ಯಾಪಕ ಮತ್ತು Desher Dak ನಲ್ಲಿ ಪತ್ರಕರ್ತರಾಗಿ ಅನುಭವ

   * 1969ರಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಿದರು. ಮಿಡ್ನಾಪುರ್ ನಲ್ಲಿ ಪಕ್ಷೇತರ ಅಭ್ಯರ್ಥಿ ಕೃಷ್ಣ ಮೆನನ್ ಪರ ಪ್ರಣಬ್ ಮುಖರ್ಜಿ ಆವರು ನಡೆಸಿದ ಪ್ರಚಾರ ಕಾರ್ಯ ಗುರುತಿಸಿದ ಅಂದಿನ ಪ್ರಧಾನಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿ ಅವರು ಪ್ರಣಬ್ ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರುವಂತೆ ಮಾಡಿದರು.

   * 1969 ಜುಲೈನಲ್ಲಿ ರಾಜ್ಯಸಭೆಗೆ ಆಯ್ಕೆ. 1975, 1981, 1993 ಮತ್ತು 1999 ರಲ್ಲಿ ಪುನರಾಯ್ಕೆ

   * 1982 ರಿಂದ 1984 ರ ವರೆಗೆ ಆರ್ಥಿಕ ಸಚಿವರಾಗಿದ್ದರು.

   * 1978 ರಲ್ಲಿ ರಾಜ್ಯಸಭೆ ಉಪ ನಾಯಕ, 1980ರಲ್ಲಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ.

   ಹೊಸ ಪಕ್ಷ ಸ್ಥಾಪನೆ:

   * ಇಂದಿರಾ ಗಾಂಧಿ ಹತ್ಯೆ ನಂತರ ಪ್ರಣಬ್ ರಾಜಕೀಯ ಜೀವನ ಮಂಕಾಗಿತ್ತು. ರಾಜೀವ್ ಗಾಂಧಿ ಅಧಿಕಾರ ಅವಧಿಯಲ್ಲಿ ಪ್ರಣಬ್ ಸೇರಿದಂತೆ ಇಂದಿರಾ ಗಾಂಧಿ ನಿಷ್ಠರಿಗೆ ಅಷ್ಟಾಗಿ ಮಾನ್ಯತೆ ಸಿಗಲಿಲ್ಲ. ಈ ಸಂದರ್ಭದಲ್ಲಿ ರಾಷ್ಟೀಯ ಸಮಾಜವಾದಿ ಕಾಂಗ್ರೆಸ್(NSC)ಎಂಬ ಹೊಸ ಪಕ್ಷವನ್ನು ಪ್ರಣಬ್ ಕಟ್ಟಿದ್ದರು. ನಂತರ ಈ ಪಕ್ಷ ಮೂರು ವರ್ಷಗಳ ನಂತರ ಕಾಂಗ್ರೆಸ್ ಜೊತೆ ವೀಲಿನಗೊಂಡಿತು.

   * ರಾಜೀವ್ ಗಾಂಧಿ ಅಕಾಲಿಕ ಸಾವಿನ ನಂತರ ಪ್ರಧಾನಿ ಪಿವಿ ನರಸಿಂಹ ರಾವ್ ಅವರು ಪ್ರಣಬ್ ಮುಖರ್ಜಿ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಿಸಿದರು.

   * 1995-96 ರಲ್ಲಿ ವಿದೇಶಾಂಗ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದರು.

   * ನಂತರ ಸೋನಿಯಾ ಗಾಂಧಿ ಕಾಲದಲ್ಲೂ ಪ್ರಣವ್ ಅವರನ್ನು ಕಾಂಗ್ರೆಸ್ ಪಕ್ಷ ಸಂಕಷ್ಟ ಬಂದಾಗ ಪ್ರಣಬ್ ಇದ್ದರಲ್ಲ ಎಂಬಂತೆ ಕಷ್ಟಕಾಲದಲ್ಲಿ ಪ್ರಣಬ್ ಅವರ ಸಲಹೆ ಪಡೆಯತೊಡಗಿತು.

   * 2004-2012ರ ವರೆಗೂ ಲೋಕಸಭೆಯ ನಾಯಕರಾಗಿ ಮುಂದುವರೆದರು.

   * 2006-2009ರ ವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕರ್ತವ್ಯ ನಿರ್ವಹಿಸಿದರು.

   * ಮನಮೋಹನ್ ಸಿಂಗ್ ನೇತೃತ್ವದ ಯುಪಿಎಯ 2ನೇ ಅವಧಿಯ ಯುಪಿಎ ಸರ್ಕಾರದಲ್ಲೂ ಪ್ರಣವ್ ಹಣಕಾಸು ಸಚಿವರಾಗಿ ಅಧಿಕಾರ ನಿರ್ವಹಿಸಿದ್ದಾರೆ.

   * 2012 ರಲ್ಲಿ 13ನೇ ರಾಷ್ಟ್ರಪತಿ ಚುನಾವಣೆಯಲ್ಲಿ ಪಿಎ ಸಂಗ್ಮಾ ಅವರನ್ನು ಸೋಲಿಸಿ ದೇಶದ ಪ್ರಥಮ ಪ್ರಜೆ ಪಟ್ಟಕ್ಕೇರಿದ್ದಾರೆ.

   ಪ್ರಶಸ್ತಿ, ಮಾನ್ಯತೆ, ಪುರಸ್ಕಾರ:

   * 1984ರಲ್ಲಿ ಯೂರೋನಮಿ ಮ್ಯಾಗಜಿನ್ ಪ್ರಣವ್ ಮುಖರ್ಜಿಯನ್ನು ಜಗತ್ತಿನ ಅತ್ಯುತ್ತಮ ಹಣಕಾಸು ಸಚಿವ

   * 2010ರಲ್ಲಿ ಅವರನ್ನು ವಿಶ್ವಬ್ಯಾಂಕ್ ಮತ್ತು ಐಎಂಎಫ್ ಪರಿಗಣಿಸುವ ಎಮರ್ಜಿಂಗ್ ಮಾರ್ಕೆಟ್ಸ್ ದಿನ ಪತ್ರಿಕೆ ನಡೆಸಿರುವ ಸಮೀಕ್ಷೆಯಲ್ಲಿ ಏಶ್ಯಾದಲ್ಲಿನ ವರ್ಷದ ಹಣಕಾಸು ಸಚಿವ ಪುರಸ್ಕಾರ

   * ಬ್ಯಾಂಕ್ ಗಳು ಕೂಡ ವರ್ಷದ ಹಣಕಾಸು ಸಚಿವ ಪುರಸ್ಕಾರ ನೀಡಿವೆ.

   * ಭಾರತ ಸರಕಾರದಿಂದ ಪದ್ಮ ವಿಭೂಷಣ್ ಪ್ರಶಸ್ತಿ(2008), ಭಾರತರತ್ನ(2019)

   * ಕೋಲ್ಕತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ ಟಿಟ್ಯೂಟ್ ನಲ್ಲಿ ಮುಖರ್ಜಿ ಅಧ್ಯಕ್ಷ

   * ರವೀಂದ್ರ ಭಾರತಿ ವಿಶ್ವ ವಿದ್ಯಾಲಯದ ಮಾಜಿ ಅಧ್ಯಕ್ಷ

   * ನಿಖಿಲ್ ಭಾರತ್ ಬಂಗಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗೌರವ

   * ಬಾಂಗಿಯ ಸಾಹಿತ್ಯ ಪರಿಷತ್, ಬಿಧಾನ್ ಮೆಮೊರಿಯಲ್ ಟ್ರಸ್ಟ್ ನ ಟ್ರಸ್ಟಿ

   * ಏಶಿಯಾಟಿಕ್ ಸೊಸೈಟಿಯ ಯೋಜನಾ ಮಂಡಳಿಯಲ್ಲೂ ಪ್ರಣವ್ ಪಾತ್ರ ನಿರ್ವಹಿಸಿದ್ದಾರೆ.

   * ಬಾಂಗ್ಲಾದೇಶದ ವಿಮೋಚನಾ ಯುದ್ಧ ಗೌರವ, ಐವರಿ ಕೋಸ್ಟ್, ಸೈಪ್ರಸ್ ರಾಷ್ಟ್ರಗಳ ಗೌರವ ಸಂದಿದೆ.

   English summary
   Former President Pranab Kumar Mukherjee was India's 13th President. A senior leader of the Indian National Congress and had held important ministerial portfolios in the government of India during his political career. Biography in Kannada
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X