ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟಲ್ ಬಿಹಾರಿ ವಾಜಪೇಯಿ ಅವರ 'ಇಷ್ಟದ' ಸಂಗತಿಗಳು...

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

Recommended Video

Atal Bihari Vajpayee : ಅಟಲ್ ಮೆಚ್ಚಿದ ಸಂಗತಿಗಳು ಇವು..!

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ನಡೆಸಿದ್ದ ಸಂದರ್ಶನದ ಪೈಕಿ ಆಯ್ದ ಅಂಶವನ್ನು ಆರಿಸಿ ಇಲ್ಲಿ ಕೊಡಲಾಗುತ್ತಿದೆ. ಪಕ್ಷಾತೀತವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದ ವಾಜಪೇಯಿ ಅವರ ಬದುಕಿನ ಬಗ್ಗೆ ಆಸಕ್ತಿಕರ ಅನಿಸುವಂಥ ವಿಚಾರಗಳು ಇಲ್ಲಿವೆ. ಆ ಪೈಕಿ ಬಹಳ ಮುಖ್ಯವಾದ ಪ್ರಶ್ನೆ: ಅವರು ಏಕೆ ಮದುವೆ ಆಗಿರಲಿಲ್ಲ ಎಂಬುದು.

ಈ ಪ್ರಶ್ನೆಗೆ ಹಾಸ್ಯದ ಧಾಟಿಯಲ್ಲೇ ಉತ್ತರಿಸುತ್ತಿದ್ದ ವಾಜಪೇಯಿ, ಮದುವೆ ಆಗುವುದಕ್ಕೆ ನನಗೆ ಸಮಯವೇ ಸಿಗಲಿಲ್ಲ ನೋಡಿ ಅಂದುಬಿಡುತ್ತಿದ್ದರು. ಕಾವ್ಯದ ಮೂಲಕವೇ ರಾಜಕಾರಣ ಪ್ರವೇಶ ಮಾಡಿದವರು ವಾಜಪೇಯಿ. ಇದನ್ನೂ ಅವರೇ ಹೇಳಿಕೊಳ್ಳುತ್ತಿದ್ದರು. ಐದನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ಟೀಚರ್ ಹೊಡೆದಿದ್ದರಂತೆ. ಅದು ಬಹಳ ಅವಮಾನ ಆಗಿದ್ದ ಕ್ಷಣ ಎಂದು ನೆನಪಿಸಿಕೊಂಡಿದ್ದರು.

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ

ಅಟಲ್ ಬಿಹಾರಿ ವಾಜಪೇಯಿ ಒಳ್ಳೆ ಬಾಣಸಿಗರು. ಖಿಚಡಿ, ಪೂರಿ-ಕಚೋರಿ, ಪರಾಠ, ಖೀರ್, ಕಚೋರಿ, ಮಂಗೌರಿ, ಮಲ್ಪುವಾ ತುಂಬ ಇಷ್ಟವಾಗುವ ಖಾದ್ಯಗಳಾಗಿದ್ದವು. ತಮ್ಮ ತಂದೆ ಕೃಷ್ಣ ಬಿಹಾರಿ ವಾಜಪೇಯಿ ಅವರ ಜತೆಗೆ ಹಾಸ್ಟೆಲ್ ನಲ್ಲಿ ವಾಸವಿರುವಾಗ ಅಡುಗೆ ಮಾಡಿ ಹಾಕುತ್ತಿದ್ದವರೇ ಅಟಲ್ ಬಿಹಾರಿ ವಾಜಪೇಯಿ. ಏಕೆಂದರೆ, ಅವರಿಗೆ ಹೊರಗಿನ ಆಹಾರ ಇಷ್ಟವಾಗುತ್ತಿರಲಿಲ್ಲ.

ಅಂದಹಾಗೆ, ಅಟಲ್ ಬಿಹಾರಿ ವಾಜಪೇಯಿ ಅವರ ಜೀವನದ ಬಗ್ಗೆ ಕೇಳಿದ್ದ ಪ್ರಶ್ನೆಗಳು ಹಾಗೂ ಅದಕ್ಕೆ ನೀಡಿದ್ದ ಉತ್ತರಗಳು ಇಲ್ಲಿವೆ.

ಪ್ರಶ್ನೆ: ಬಹಳ ಥ್ರಿಲ್ಲಿಂಗ್ ಅನ್ನಿಸುವಂಥ ಕ್ಷಣ ಯಾವುದು?

ಪ್ರಶ್ನೆ: ಬಹಳ ಥ್ರಿಲ್ಲಿಂಗ್ ಅನ್ನಿಸುವಂಥ ಕ್ಷಣ ಯಾವುದು?

ಉತ್ತರ: ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮಾ ಅವರು ಸರಕಾರ ರಚನೆ ಮಾಡುವಂತೆ ವಾಜಪೇಯಿ ಅವರಿಗೆ ಆಹ್ವಾನ ನೀಡಿದ್ದರು. ಅದು ಬಹಳ ಥ್ರಿಲ್ಲಿಂಗ್ ಅನ್ನಿಸಿದ ಕ್ಷಣವಂತೆ. ಆದರೆ ಬಹಳ ನೋವಿನ ಸಂಗತಿ ಏನೆಂದರೆ, ಒಂದು ಮತದ ಅಂತರದಲ್ಲಿ ಸರಕಾರ ಬಹುಮತವನ್ನು ಕಳೆದುಕೊಂಡು ಬಿಟ್ಟಿತು.

ಪ್ರಶ್ನೆ: ವಾಜಪೇಯಿ ಅವರ ಬಹಳ ಆಪ್ತ ಗೆಳೆಯರ ಬಳಗ ಯಾವುದು?

ಪ್ರಶ್ನೆ: ವಾಜಪೇಯಿ ಅವರ ಬಹಳ ಆಪ್ತ ಗೆಳೆಯರ ಬಳಗ ಯಾವುದು?

ಉತ್ತರ: ಎಲ್.ಕೆ.ಅಡ್ವಾಣಿ, ಭೈರೋನ್ ಸಿಂಗ್ ಶೇಖಾವತ್, ಅಪ್ಪಾ ಘಟಟೆ, ಜಸ್ವಂತ್ ಸಿಂಗ್, ಡಾ. ಮುಕುಂದ್ ಮೋದಿ, ಶಿವ್ ಕುಮಾರ್.

ಅತ್ಯಪರೂಪದ ರಾಜಕಾರಣಿ ಅಟಲ್ ಜೀ ಅವರ ಅಪರೂಪದ ಚಿತ್ರಗಳುಅತ್ಯಪರೂಪದ ರಾಜಕಾರಣಿ ಅಟಲ್ ಜೀ ಅವರ ಅಪರೂಪದ ಚಿತ್ರಗಳು

ಪ್ರಶ್ನೆ: ವಾಜಪೇಯಿ ಅವರ ಜೀವನದ ಮರೆಯಲಾಗದ ಕ್ಷಣಗಳು ಯಾವುವು?

ಪ್ರಶ್ನೆ: ವಾಜಪೇಯಿ ಅವರ ಜೀವನದ ಮರೆಯಲಾಗದ ಕ್ಷಣಗಳು ಯಾವುವು?

ಉತ್ತರ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಮೊದಲ ಹಿಂದಿ ಭಾಷಣ.

ಪ್ರಶ್ನೆ: ಬಹಳ ಸಿಟ್ಟು ತರಿಸುವ ವಿಚಾರ ಯಾವುದು?

ಪ್ರಶ್ನೆ: ಬಹಳ ಸಿಟ್ಟು ತರಿಸುವ ವಿಚಾರ ಯಾವುದು?

ಉತ್ತರ: ಯಶಸ್ಸು ಕೈ ತಪ್ಪಿದಾಗ ಸಿಟ್ಟು ಬರುತ್ತದೆ.

ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳುಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು

ಪ್ರಶ್ನೆ: ಯಶಸ್ಸನ್ನು ಯಾರಿಗೆ ಅರ್ಪಣೆ ಮಾಡ್ತೀರಿ, ಜೀವನದ ಸ್ಫೂರ್ತಿ ಯಾರು?

ಪ್ರಶ್ನೆ: ಯಶಸ್ಸನ್ನು ಯಾರಿಗೆ ಅರ್ಪಣೆ ಮಾಡ್ತೀರಿ, ಜೀವನದ ಸ್ಫೂರ್ತಿ ಯಾರು?

ಉತ್ತರ: ತಲುಪಿದ ಗಮ್ಯಕ್ಕೆ ಯಶಸ್ಸಿನ ಅರ್ಪಣೆ. ತಂದೆ ಕೃಷ್ಣ ಬಿಹಾರಿ ವಾಜಪೇಯಿ, ಗುರು ಗೋಲ್ವಾಲ್ಕರ್ ಜೀ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್, ಭಾವು ರಾವ್ ದೇವರಸ್ ಸ್ಫೂರ್ತಿ ಚಿಲುಮೆಗಳು.

ಪ್ರಶ್ನೆ: ಜೀವನದ ಬಹಳ ದುಃಖಕರ ಕ್ಷಣ ಯಾವುದು?

ಪ್ರಶ್ನೆ: ಜೀವನದ ಬಹಳ ದುಃಖಕರ ಕ್ಷಣ ಯಾವುದು?

ಉತ್ತರ: ದೀನ್ ದಯಾಳ್ ಉಪಾಧ್ಯಾಯ್ ಅವರು ತೀರಿಕೊಂಡ ಕ್ಷಣ.

ಪ್ರಶ್ನೆ: ನೆಚ್ಚಿನ ನಾಯಕ ಯಾರು? ಮೆಚ್ಚಿನ ಲೇಖಕರು- ಕವಿಗಳು ಯಾರು?

ಪ್ರಶ್ನೆ: ನೆಚ್ಚಿನ ನಾಯಕ ಯಾರು? ಮೆಚ್ಚಿನ ಲೇಖಕರು- ಕವಿಗಳು ಯಾರು?

ಉತ್ತರ: ನೆಚ್ಚಿನ ನಾಯಕ ಜವಾಹರ್ ಲಾಲ್ ನೆಹರೂ. ಶರತ್ ಚಂದ್ರ, ಪ್ರೇಮ್ ಚಂದ್, ಹರಿವಂಶ್ ರಾಯ್ ಬಚ್ಚನ್, ರಾಮ್ ನಾಥ್ ಅವಸ್ಥಿ, ಡಾ. ಶ್ಸಿವ್ ಮಂಗಲ್ ಸಿಂಗ್ ಸುಮನ್, ಸೂರ್ಯಕಾಂತ್ ತ್ರಿಪಾಠಿ 'ನಿರಾಲ', ಬಾಲ ಕೃಷ್ಣ ಶರ್ಮ ನವೀನ್, ಜಗನ್ನಾಥ್ ಪ್ರಸಾದ್ ಮಿಲಿಂದ್ ಮತ್ತು ಫೈಜ್ ಅಹ್ಮದ್ ಫೈಜ್.

ಪ್ರಶ್ನೆ: ಅಚ್ಚು ಮೆಚ್ಚಿನ ಶಾಸ್ತ್ರೀಯ ಸಂಗೀತಗಾರರು ಯಾರು?

ಪ್ರಶ್ನೆ: ಅಚ್ಚು ಮೆಚ್ಚಿನ ಶಾಸ್ತ್ರೀಯ ಸಂಗೀತಗಾರರು ಯಾರು?

ಉತ್ತರ: ಭೀಮ್ ಸೇನ್ ಜೋಶಿ, ಅಮ್ಜದ್ ಅಲಿ ಖಾನ್, ಹರಿಪ್ರಸಾದ್ ಚೌರಾಸಿಯಾ. ಅದೇ ರೀತಿ ಲತಾ ಮಂಗೇಶ್ಕರ್, ಮುಕೇಶ್, ಎಸ್.ಡಿ.ಬರ್ಮನ್ ಅವರ ಹಾಡುಗಳು ಇಷ್ಟ. ಸಚಿನ್ ದೇವ್ ಬರ್ಮನ್ ನೆಚ್ಚಿನ ಸಂಗಿತಗಾರ.

ಪ್ರಶ್ನೆ: ನೆಚ್ಚಿನ ನಟ-ನಟಿಯರು ಯಾರು?

ಪ್ರಶ್ನೆ: ನೆಚ್ಚಿನ ನಟ-ನಟಿಯರು ಯಾರು?

ಉತ್ತರ: ಸಂಜೀವ್ ಕುಮಾರ್, ದಿಲೀಪ್ ಕುಮಾರ್, ಸುಚಿತ್ರಾ ಸೇನ್, ರಾಖಿ ಮತ್ತು ನೂತನ್.

ಪ್ರಶ್ನೆ: ಇಷ್ಟವಾದ ಹಾಡುಗಳು ಹಾಗೂ ಹಿಂದಿ-ಇಂಗ್ಲಿಷ್ ಸಿನಿಮಾಗಳು ಯಾವುವು?

ಪ್ರಶ್ನೆ: ಇಷ್ಟವಾದ ಹಾಡುಗಳು ಹಾಗೂ ಹಿಂದಿ-ಇಂಗ್ಲಿಷ್ ಸಿನಿಮಾಗಳು ಯಾವುವು?

ಉತ್ತರ: ಎಸ್.ಡಿ. ಬರನ್ ರ 'ಓ ಮೇರೆ ಮಝಿ', 'ಸುನ್ ಮೇರೆ ಬಂಧು ರೇ', ಮುಕೇಶ್ ರ ಕಭಿ ಕಭಿ ಮೇರೆ ದಿಲ್ ಮೇ ಮತ್ತು ಲತಾ ಮಗೇಶ್ಕರ್ ಹಾಡುಗಳು ಇಷ್ಟ. ದೇವದಾಸ್, ಬಂದಿನಿ, ತೀಸ್ರೀ ಕಸಮ್, ಮೌಸಮ್, ಮಮತಾ, ಆಂಧಿ ಇಷ್ಟದ ಹಿಂದಿ ಸಿನಿಮಾಗಳು. ಬ್ರಿಡ್ಜ್ ಓವರ್ ದ ರಿವರ್ ಕ್ವಾಯ್, ಬಾರ್ನ್ ಫ್ರೀ ಹಾಗೂ ಗಾಂಧಿ ಇಷ್ಟದ ಹಿಂದಿಯೇತರ ಸಿನಿಮಾಗಳು.

English summary
Former prime minister, BJP leader Atal Bihari Vajapayee shared his favorites, likes- dislikes while he was PM. Here is the interesting details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X