ಕೊರೊನಾ ವೈರಸ್ ಲಸಿಕೆಯ ಕರಾಳ ಸತ್ಯ ಬಿಚ್ಚಿಟ್ಟ ತಜ್ಞರು
ಬೆಂಗಳೂರು, ಜನವರಿ 10: ಕೊರೊನಾ ವೈರಸ್ ಎಂಬ ಮಹಾಮಾರಿ ಕಳೆದೊಂದು ವರ್ಷದಿಂದ ಇಡೀ ಜಗತ್ತನ್ನು ಸಂಕಷ್ಟಕ್ಕೆ ತಳ್ಳಿದೆ. ಕೊರೊನಾ ವೈರಸ್ ಜೊತೆಗೆ ಅದನ್ನು ನಿರ್ವಹಣೆ ಮಾಡಿದ ರೀತಿ ಕೂಡ ಸಾಕಷ್ಟು ಜನರು ಜೀವ ಕಳೆದುಕೊಳ್ಳಲು ಕಾರಣವಾಯ್ತು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಇದೀಗ ಮುಂದುವರೆದ ಭಾಗವಾಗಿ ಕೊರೊನಾ ವೈರಸ್‌ಗೆ ಲಸಿಕೆ (ವ್ಯಾಕ್ಸಿನ್) ಬರುತ್ತಿದೆ. ಈ ವ್ಯಾಕ್ಸಿನ್ ಎಂದರೆ ಏನು? ಅದನ್ನು ಹಾಕಿಸಿಕೊಂಡವರೆಲ್ಲರೂ ಕೋವಿಡ್‌ನಿಂದ ಬಚಾವಾಗುತ್ತಾರಾ? ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ಏನೇನು ತೊಂದರೆ ಎದುರಾಗುತ್ತವೆ ಎಂಬುದರ ಕುರಿತು ಸಂಪೂರ್ಣ ಅಧ್ಯಯನ ನಡೆದಿದೆಯಾ?
ಒಂದು ಲಸಿಕೆ ಸುರಕ್ಷಿತವಾಗಿ ತಯಾರಾಗಲು ಕನಿಷ್ಠ ನಾಲ್ಕೈದು ವರ್ಷಗಳು ಬೇಕಾಗುತ್ತವೆ. ಆದರೆ ಕೊರೊನಾ ವೈರಸ್ ಪತ್ತೆಯಾಗಿ ಇನ್ನೂ ಒಂದು ವರ್ಷವಾಗುತ್ತಿದೆ. ಅಷ್ಟರಲ್ಲಾಗಲೇ ಲಸಿಕೆ ಕಂಡು ಹಿಡಿದಿದ್ದೇವೆ ಎಂದು ಕನಿಷ್ಠ ಆರು ಔಷಧ ಕಂಪನಿಗಳು ಹೇಳಿಕೊಳ್ಳುತ್ತಿವೆ. ಅದು ಕೂಡ ಹಲವು ಸಂಶಯಗಳಿಗೆ ಕಾರಣವಾಗಿದೆ. ಮೊದಲ ಹಂತದಲ್ಲಿ ದೇಶದ 30 ಕೋಟಿ ಜನರಿಗೆ ಆಧ್ಯತೆಯಲ್ಲಿ ಇದೇ ಜನವರಿ 13 ರಿಂದ ವ್ಯಾಕ್ಸಿನೇಶನ್ ಆರಂಭವಾಗಲಿದೆ. ಹಾಗಾದರೆ ಈ ಲಸಿಕೆಯನ್ನು ನಾವು ಹಾಕಿಸಿಕೊಳ್ಳಬೇಕಾ? ಹಾಕಿಸಿಕೊಂಡಲ್ಲಿ ಅದೆಷ್ಟು ಸುರಕ್ಷಿತ ಎಂಬುದರ ಕುರಿತು ಕೂಡ ತಜ್ಞರು ಅಭಿಪ್ರಾಯಕೊಟ್ಟಿದ್ದಾರೆ. ಕೊರೊನಾ ವೈರಸ್ ಲಸಿಕೆ ಹಾಕಿಸಿಕೊಳ್ಳುವ ಮೊದಲು ಇದನ್ನೊಮ್ಮೆ ಓದಿ ಬಿಡಿ. ಆಮೇಲೆ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ತೀರ್ಮಾನ ಮಾಡಿ.
ಮಾಡೆರ್ನಾ ಲಸಿಕೆಯು ಎಷ್ಟು ವರ್ಷಗಳ ಕಾಲ ಕೊರೊನಾವೈರಸ್ನಿಂದ ರಕ್ಷಣೆ ನೀಡಬಹುದು?
ಕೊರೊನಾ ವೈರಸ್‌ಗೆ ಲಸಿಕೆ ಹಾಕಲು ದೇಶಾದ್ಯಂತ ಭರ್ಜರಿ ತಯಾರಿ ನಡೆದಿವೆ. 6ಕ್ಕು ಹೆಚ್ಚು ಔಷಧ ಕಂಪನಿಗಳು ತಾವು ಕೊರೊನಾ ವೈರಸ್‌ಗೆ ಲಸಿಕೆ ಕಂಡುಹಿಡಿದಿರುವುದಾಗಿ ಹೇಳುತ್ತಿವೆ. ಕೆಲವೊಂದಿಷ್ಟು ಮೂರನೇ ಹಂತದ ಪರೀಕ್ಷೆಯಲ್ಲಿವೆ ಎನ್ನುತ್ತಿವೆ. ಈ ಮಧ್ಯೆ ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾವು ಕೊರೊನಾ ವೈರಸ್ ವ್ಯಾಕ್ಸಿನೇಶನ್‌ಗೆ ಅನುಮತಿಯನ್ನು ಕೊಟ್ಟಿದೆ. ಹೀಗಾಗಿ ರಾಜ್ಯದಲ್ಲಿಯೂ ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‌ಗೆ ಲಸಿಕೆ ಕೊಡಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ.

ಕೊರೊನಾ ವೈರಸ್ ಲಸಿಕೆ ತಯಾರಾಗಿದ್ದು ಹೇಗೆ?
ರಾಜ್ಯದಲ್ಲಿ ಲಸಿಕೆ ಕೊಡಲು ಕಳೆದೊಂದು ವಾರದಿಂದ ಭರ್ಜರಿ ತಾಲೀಮು ನಡೆಯುತ್ತಿದೆ. ಕೊರೊನಾ ವೈರಸ್‌ಗೆ ವ್ಯಾಕ್ಸಿನ್ ಕಂಡುಹಿಡಿಯಲ್ಪಡುತ್ತಿದ್ದಂತೆ ಕೊರೊನಾ ವೈರಸ್ ತನ್ನ ರೂಪ ಬದಲಿಸಿದೆ. ರೂಪಾಂತರವಾಗುವುದು ವೈರಸ್‌ನ ಸಹಜ. ಇಂಗ್ಲೆಂಡ್‌ನಲ್ಲಿ ಈಗ ಪತ್ತೆಯಾಗಿರುವುದು ಕೋವಿಡ್-19 ರೂಪಾಂತರಿ ವೈರಾಣು. ಅದಕ್ಕೂ ಈಗಾಗಲೇ ಕಂಡುಹಿಡಿದಿರುವ ಲಸಿಕೆ ಹಾಕಬಹುದು ಎಂದು ಔಷಧ ಕಂಪನಿಗಳು ಸಮರ್ಥನೆ ಮಾಡಿಕೊಳ್ಳುತ್ತಿವೆ. ಅದು ಹೇಗೆ ಸಾಧ್ಯ?
ಲಸಿಕೆ ಎಂದರೆ ಏನು? ಅದರಿಂದಾಗುವ ಅಡ್ಡ ಪರಿಣಾಮಗಳೇನು? ತೊಡಕುಗಳೇನು? ಅದನ್ನು ಹೇಗೆ ತಯಾರಿಸಿತ್ತಾರೆ? ಎಂಬ ಮಾಹಿತಿಯನ್ನು ಯಾವುದೇ ಲಸಿಕೆ ತಯಾರಿಕಾ ಸಂಸ್ಥೆ ಅಥವಾ ಸರ್ಕಾರ ಕೊಡುತ್ತಿಲ್ಲ. ವೈರಾಲಜಿ ಪ್ರಯೋಗಾಲಯಗಳು ಜಗತ್ತಿನಾದ್ಯಂತ ಇವೆ. ಚೀನಾದ ವುಹಾನ್‌ನಲ್ಲಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಎಂಬುದಿದೆ. ಈ ವೈರಾಲಜಿ ಲ್ಯಾಬ್‌ಗಳು ಮಾಡುವ ಪ್ರಮುಖ ಕೆಲಸವೆನೇಂದರೆ ಸಂಶೋಧನೆಯ ಹೆಸರಿನಲ್ಲಿ ವೈರಸ್‌ಗಳನ್ನು ಸಾಕುವುದು. ಸಂಶೋಧನೆ ಮಾಡುತ್ತೇವೆ ಎಂದು ಹೇಳಿ ಬ್ಯಾಕ್ಟಿರಿಯಾ ಮತ್ತು ವೈರಸ್‌ಗಳನ್ನು ಸಾಕುತ್ತಾರೆ. ವುಹಾನ್ ಲ್ಯಾಬ್ ಮಾಡಿದ್ದು ಕೂಡ ಅದನ್ನೆ.

ವೈರಸ್ ಅಥವಾ ಜೀವಕಣ ಸೃಷ್ಟಿ ಅಸಾಧ್ಯ ಎನ್ನುತ್ತದೆ ವಿಜ್ಞಾನ
ಕೊರೊನಾ ವೈರಸ್ ಚೀನಾದಿಂಲೇ ಬಂತು ಎಂಬುದು ನೂರಕ್ಕೆ ನೂರು ಎಲ್ಲರಿಗೂ ಗೊತ್ತಿರುವ ಸತ್ಯ. ಚೀನಾ ಈ ವೈರಸ್‌ನ್ನು ಸೃಷ್ಟಿ ಮಾಡಿದೆ. ಇದು ಮನುಷ್ಯನಿಂದ ಸೃಷ್ಟಿಯಾದ ವೈರಸ್ ಎಂದು ಹೇಳುತ್ತಾರೆ. ಆದರೆ ಅದು ಖಂಡಿತಯಾಗಿಯೂ ಸುಳ್ಳು. ನಮ್ಮ ವಿಜ್ಞಾನ ಎಷ್ಟೇ ಮುಂದುವರೆದರೂ, ವಿಜ್ಞಾನಿಗಳಿಂದ ಒಂದೇ ಒಂದು ಸೆಲ್ ಅಥವಾ ಜೀವಕಣವನ್ನು ಸೃಷ್ಟಿ ಮಾಡುವ ಶಕ್ತಿ ಇಲ್ಲ. ಮನುಷ್ಯರು ರೊಬೋಟ್ ಸೃಷ್ಟಿ ಮಾಡಬಹುದು ಅಷ್ಟೇ.
ವೈರಸ್ ವಿರುದ್ಧ ಲಸಿಕೆಗಳು 100% ರಕ್ಷಣೆ ಕೊಡುವುದಿಲ್ಲ; ತಜ್ಞರ ಎಚ್ಚರಿಕೆ
ಒಂದೇ ಒಂದು ಲಿವಿಂಗ್ ಸೆಲ್, ಅಂದರೆ ಜೀವಂತ ಜೀವಕಣವನ್ನು ವಿಜ್ಞಾನದಿಂದ ಸೃಷ್ಟಿ ಮಾಡುವುದು ಆಗುವುದಿಲ್ಲ. ಯಾವುದೇ ವೈರಸ್‌ನ್ನು ಕೂಡ ಸೃಷ್ಟಿ ಮಾಡಲು ಆಗುವುದಿಲ್ಲ. ನಮ್ಮ ದೇಹದಲ್ಲಿ 40 ಲಕ್ಷ ಕೋಟಿ ಜೀವಕಣಗಳಿವೆ. ಆದರೆ ಅವುಗಳಂತಹ ಒಂದೇ ಒಂದು ಜೀವಕಣವನ್ನು ನಮ್ಮ ವಿಜ್ಞಾನದ ಮೂಲಕ ಸೃಷ್ಟಿ ಮಾಡುವುದು ಅಸಾಧ್ಯ.

ಆದರೆ ವೈರಸ್‌ನ್ನು ಬಲಗೊಳಿಸಬಹುದು
ಯಾವುದೇ ವೈರಸ್‌ನ್ನು ಸೃಷ್ಟಿಸಲು ಆಗುವುದಿಲ್ಲ. ಆದರೆ ವೈರಸ್‌ನ್ನು ಬಲಗೊಳಿಸಬಹುದು. ವೈರಸ್ ಪ್ರಕೃತಿಯಿಂದಲೇ ಸೃಷ್ಟಿಯಾಗಿರುತ್ತದೆ. ಪ್ರಕೃತಿಯಿಂದ ಹುಟ್ಟುವ ವೈರಸ್ ಸಾಧಾರಣವಾಗಿ ಸಹಜವಾಗಿರುತ್ತದೆ. ಕೊರೊನಾ ಕೂಡ ಸಾಧಾರಣ ವೈರಸ್. ದೊಡ್ಡ ಪರಿಣಾಮ ಬೀರುವ ವೈರಸ್ ಆಗಿರಲಿಲ್ಲ. ಈ ನಾರ್ಮಲ್ (ಸಾಧಾರಣ) ವೈರಸ್‌ನ್ನು ಅಬ್‌ನಾರ್ಮಲ್ (ಅಸಹಜ) ಮಾಡಿದ್ದು ಚೈನಾ. ಶತಶತಮಾನಗಳಿಂದ ಇರುವ ಕೊರೊನಾ ವೈರಸ್‌ನ್ನು ಚೀನಾದವರು ವುಹಾನ್ ಲ್ಯಾಬ್‌ನಲ್ಲಿ ಸಾಕಿ, ಅದನ್ನು ಬಹಳಷ್ಟು ಬಲಗೊಳಿಸಿ ಅದನ್ನು ಇಡೀ ಪ್ರಪಂಚದಾದ್ಯಂತ ಹರಡಿಸಿದರು.
ಅಂದರೆ ವೈರಸ್‌ನ್ನು ಸಾಕಿ, ಸಾಮಾನ್ಯವಾಗಿದ್ದ ಅದನ್ನು ಬಲಗೊಳಿಸಿ, ಹರಡಿಸಿದರು. ಇದು ಬಯೊವಾರ್‌ನ ಭಾಗವಾ? ಅಥವಾ ಲ್ಯಾಬ್‌ನಿಂದ ಆಕಸ್ಮಿಕವಾಗಿ ಇದು ಹರಡಿದೆಯಾ ಎಂಬುದರ ಕುರಿತು ಮಾತ್ರ ತನಿಖೆ ಆಗಬೇಕು. ವುಹಾನ್‌ನ ಮಾಂಸ ಮಾರುಕಟ್ಟೆಯಿಂದ ಈ ವೈರಸ್ ಬಂತು ಎಂದು ಚೈನಾ ಸುಳ್ಳು ಹೇಳುತ್ತಿದೆ. ಬಾವುಲಿಯಿಂದ ಈ ವೈರಸ್ ಬಂದಿದೆ ಎಂಬುದಂತೂ ಶುದ್ಧ ಸುಳ್ಳು. ಲ್ಯಾಬ್‌ನಲ್ಲಿಯೇ ಈ ವೈರಸ್ ಸೃಷ್ಟಿಯಾಗಿದೆ. ಸಾಮಾನ್ಯವಾಗಿದ್ದ ವೈರಸ್‌ನ್ನು ಬಲಗೊಳಿಸಿ ಬಿಟ್ಟಿದೆ ಎನ್ನುತ್ತಾರೆ ಕೊರೊನಾ ವೈರಸ್ ಬಗ್ಗೆ ಎಲ್ಲ ರೀತಿಯ ಅಧ್ಯಯನ ಮಾಡಿರುವ ಬೆಂಗಳೂರಿನ ರಾಜೂಸ್ ಹೆಲ್ದಿ ಇಂಡಿಯಾ ಸಂಸ್ಥೆಯ ಡಾ. ರಾಜು ಅವರು.

ಯಾವುದೇ ರೋಗಕ್ಕೆ ಲಸಿಕೆ ತಯಾರಿಕೆ ಹೇಗೆ?
ಹೀಗೆ ಸಹಜ ವೈರಸ್‌ನ್ನು ಬಲಗೊಳಿಸಿ ಅದನ್ನು ಬಯೊವಾರ್ ಅಸ್ತ್ರದಂತೆ ಬಳಸಬಹುದು. ಹಾಗೆಯೆ ವೈರಸ್‌ನ್ನು ದುರ್ಬಲಗೊಳಿಸಿ ಅದನ್ನು ಲಸಿಕೆಯಂತೆಯೂ ಬಳಕೆ ಮಾಡಬಹುದು. ಆದರೆ ಅದಕ್ಕೆ ಸಾಕಷ್ಟು ಕಾಲಾವಕಾಶ ಬೇಕು. ಲಸಿಕೆಯನ್ನು ತಯಾರಿಸುವುದು ಹೇಗೆ ಎಂಬುದನ್ನು ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ವೈರಸ್‌ನ್ನು ಲ್ಯಾಬ್‌ನಲ್ಲಿಟ್ಟು ಅದಕ್ಕೆ ಊಟ ಹಾಕದೇನೆ, ಕೆಮಿಕಲ್ ಪ್ರೊಸೆಸಿಂಗ್ ಮಾಡಿ, ಅದನ್ನು ದುರ್ಬಲಗೊಳಿಸುವುದು. ಸಾಮಾನ್ಯ ವೈರಸ್‌ನ್ನು ದುರ್ಬಲ ಗೊಳಿಸಿ ಅದನ್ನು ಆ್ಯಂಟಿಜೆನ್ ರೂಪದಲ್ಲಿ ಮನುಷ್ಯನಿಗೆ ಕೊಟ್ಟು ಅವನಲ್ಲಿ ಆ್ಯಂಟಿಬಾಡಿ ರೂಪುಗೊಳ್ಳುವಂತೆ ಮಾಡುವುದೇ ಲಸಿಕೆ.
ಕೊರೊನಾ ಲಸಿಕೆ ಪಡೆಯಲು ಶೇ.69ರಷ್ಟು ಭಾರತೀಯರು ಹಿಂದೇಟು, ಕಾರಣವೇನು?
ಒಂದೇ ವೈರಸ್‌ನ್ನು ಬಲಿಷ್ಠಗೊಳಿಸಿ ಅದನ್ನು ಜೈವಿಕ ಅಸ್ತ್ರದ ರೀತಿಯಲ್ಲಿ ಉಪಯೋಗಿಸಬಹುದಾರೆ, ವೈರಸ್‌ನ್ನು ದುರ್ಬಲಗೊಳಿಸಿ ಅದನ್ನು ವ್ಯಾಕ್ಸಿನ್‌ನಂತೆ ಉಪಯೋಗಿಸಬಹುದು. ಇಲ್ಲಿ ದುರ್ಬಲಗೊಳಿಸಿದ ಲಸಿಕೆ ರೂಪದ ವೈರಸ್ ಅಥವಾ ಚೀನಾ ಬಿಟ್ಟಿದ್ದ ಅಸಹಜ ವೈರಸ್ ಎರಡೂ ಮನುಷ್ಯನಿಗೆ ಸಂಕಷ್ಟ ತರುತ್ತವೆ.

ಕೊರೊನಾ ವ್ಯಾಕ್ಸಿನ್ ತಯಾರಿಸಿದ್ದು ಹೀಗೆ!
ಇಡೀ ಕೊರೊನಾ ವೈರಸ್ ಅಥವಾ ಅದರ ಯಾವುದಾದರೂ ಒಂದು ಭಾಗಕ್ಕೆ ಒಂದಿಷ್ಟು ರಾಸಾಯನಿಕ ಅಥವಾ ವಿಷಕಾರಿ ರಾಸಾಯನಿಕ ಸೇರಿಸಲಾಗುತ್ತದೆ. ಆ ಮೂಲಕ ಬಲವಾಗಿದ್ದ ವೈರಸ್‌ನ್ನು ದುರ್ಬಗೊಳಿಸಲಾಗುತ್ತದೆ. ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ದುರ್ಬಲಗೊಳಿಸಿರುವ ವೈರಸ್‌ನ್ನು ಮತ್ತೆ ಆರೋಗ್ಯವಂತ ಮನುಷ್ಯನ ದೇಹಕ್ಕೆ ಸೇರಿಸಲಾಗುತ್ತದೆ. ಇದೇ ಲಸಿಕೆ. ಆದರೆ ಅದನ್ನು ಉಪಯೋಗಕ್ಕೆ ತರುವುದು ಅಷ್ಟು ಸುಲಭವಲ್ಲ.
ದುರ್ಬಲ ವೈರಸ್ ನಮ್ಮ ದೇಹ ಸೇರಿದಾಗ ದೇಹದಲ್ಲಿರುವ ಆ್ಯಂಟಿಬಾಡಿಗಳು ಅದರ ಮೇಲೆ ದಾಳಿ ಮಾಡುತ್ತವೆ. ಹೀಗೆ ದಾಳಿ ಮಾಡಿ ಲಸಿಕೆ ರೂಪದಲ್ಲಿ ಕೊಟ್ಟಿದ್ದ ದುರ್ಬಲ ವೈರಸ್‌ನ್ನು ನಾಶ ಮಾಡುತ್ತವೆ. ಇದನ್ನೇ ಔಷದ ಕಂಪನಿಗಳು ಲಸಿಕೆ ಎಂದು ಕರೆಯುವುದು. ಲಸಿಕೆ ಎಂದರೆ ದುರ್ಬಲಗೊಳಿಸಿರುವ ವೈರಸ್. ದುರ್ಬಲ ವೈರಸ್ ಮನುಷ್ಯನ ದೇಹವನ್ನು ಪ್ರವೇಶಿಸಿದಾಗ, ಅಲ್ಲಿ ಉತ್ಪಾದನೆ ಆಗುವ ಆ್ಯಂಟಿಬಾಡಿಗಳು ಬಲವಾಗಿರುತ್ತವೆ. ಹೀಗಾಗಿ ಮುಂದೆ ಭವಿಷ್ಯದಲ್ಲಿ ನಿಜವಾದ ಕೊರೊನಾ ವೈರಸ್ ದೇಹದ ಮೇಲೆ ದಾಳಿ ಮಾಡಿದಾ, ಮೊದಲೇ ದುರ್ಬಲ ಕೊರೊನಾ ವೈರಸ್ ಜೊತೆಗೆ ಹೋರಾಡಿ ಗೆದ್ದಿದ್ದ ಆ್ಯಂಟಿಬಾಡಿಗಳು ನಿಜವಾದ ವೈರಸ್ ಮೇಲೆ ದಾಳಿ ವೈರಸ್‌ನ್ನು ನಾಶ ಮಾಡುತ್ತವೆ. ಆದರೆ ಸಮಸ್ಯೆ ಇರುವುದು ಅಲ್ಲಿಯೇ.

ನೂರಕ್ಕೆ ನೂರು ಖಚಿತತೆ ಕೊಡುತ್ತಿಲ್ಲ
ಈಗಾಗಲೇ ಲಸಿಕೆ ತಯಾರಿಸಿರುವ ಯಾವುದೇ ಔಷಧ ಕಂಪನಿಯೂ ತಾವು ತಯಾರಿಸಿರುವ ಲಸಿಕೆ ನೂರಕ್ಕೆ ನೂರರಷ್ಟು ಪರಿಣಾಮಕಾರಿ ಎಂದು ಹೇಳುತ್ತಿಲ್ಲ. ಬದಲಿಗೆ ಶೇಕಡಾ ಎಪ್ಪತ್ತರಿಂದ ಎಂಭತ್ತರಷ್ಟು ಪರಿಣಾಮಕಾರಿ ಎನ್ನುತ್ತಿವೆ. ಅಂದರೆ ನೂರು ಜನರಿಗೆ ಲಸಿಕೆ ಕೊಟ್ಟರೂ ಅವರಲ್ಲಿ ಇಪ್ಪತ್ತರಿಂದ ಮೂವತ್ತು ಜನರಿಗೆ ಕೊರೊನಾ ವೈರಸ್ ಹಾನಿ ಮಾಡುವ ಸಾಧ್ಯತೆಯಿದೆ. ಸಾಮಾನ್ಯರಿಗೆ ಲಸಿಕೆ ಕೊಟ್ಟಾಗ ಈ ಹಾನಿಯ ಪರಿಣಾಮ ಶೇಕಡಾ 50ರಷ್ಟು ಆಗಬಹುದು ಎನ್ನುತ್ತಾರೆ ರಾಜೂಸ್ ಹೆಲ್ದಿ ಇಂಡಿಯಾದ ಡಾ. ರಾಜು ಅವರು.
ಎಸ್ಎಂಎಸ್, ಆಧಾರ್, ಆಪ್: ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ಹೇಗಿರಲಿದೆ? 10 ಅಂಶಗಳು
ಯಾಕೆಂದರೆ ಕೊರೊನಾ ವೈರಸ್‌ಗೆ ಲಸಿಕೆಯನ್ನು ಕಂಡುಹಿಡಿಯುವಾಗ ಸದೃಢ ವ್ಯಕ್ತಿಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿರುತ್ತದೆ. ಅವರು ನಿಜವಾದ ವೈರಸ್‌ನ್ನು ತಡೆಯುವ ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ. ಆದರೆ ಸಾಮಾನ್ಯ ಜನರಿಗೆ ಲಸಿಕೆ ಕೊಡಲು ಆರಂಭಿಸಿದಾಗ, ಅವರಲ್ಲಿ ಸಕ್ಕರೆ ಖಾಯಿಲೆ, ಹೃದಯದ ರೋಗ, ಹೈಪರ್‌ಟೆನ್ಶನ್ (ಬಿಪಿ), ಕ್ಯಾನ್ಸರ್, ಸೇರಿದಂತೆ ಹಲವು ತೊಂದರೆಗಳಿಂದ ರೋಗನಿರೋಧಕ ಶಕ್ತಿ ಮೊದಲೇ ಕುಂದಿದ ವ್ಯಕ್ತಿಗಳಿರುತ್ತಾರೆ. ಹೀಗಾಗಿ ಲಸಿಕೆ ಕೇವಲ 50ರಷ್ಟು ಜನರಿಗೆ ಮಾತ್ರ ಪರಿಣಾಮಕಾರಿ ಆಗಬಹುದು ಎನ್ನುತ್ತಾರೆ ಈ ಬಗ್ಗೆ ಅಧ್ಯಯನ ನಡೆಸಿರುವ ಡಾ. ರಾಜು ಅವರು.

ಕೊರೊನಾ ವೈರಸ್ ಲಸಿಕೆ ಸಂಜೀವಿನಿ ಅಲ್ಲ!
ಜೊತೆಗೆ ಆ್ಯಂಟಿಜೆನ್ ರೂಪದಲ್ಲಿ ದೇಹಕ್ಕೆ ಚುಚ್ಚಲಾಗುವ ದುರ್ಬಲ ಕೊರೊನಾ ವೈರಸ್ ಜೊತೆಗೆ ವಿಷಕಾರಿ ರಾಸಾಯನಿಕ ನಮ್ಮ ದೇಹ ಸೇರುತ್ತದೆ. ಅದು ಕೂಡ ಅಡ್ಡ ಪರಿಣಾಮ ಬೀರುವುದು ಖಚಿತ. ಜೊತೆಗೆ ಹಲವು ತಜ್ಞರು ನಮ್ಮ ದೇಶದ ಜನರಿಗೆ ಕೊರೊನಾ ವೈರಸ್ ಲಸಿಕೆ ಅನಗತ್ಯ. ಈಗಾಗಲೇ ಎಲ್ಲರ ದೇಹದಲ್ಲಿಯೂ ನೈಸರ್ಗಿಕ ಆ್ಯಂಡಿಬಾಡಿ ಉತ್ಪತ್ತಿ ಆಗಿವೆ ಎನ್ನುತ್ತಾರೆ.
ಹೀಗಾಗಿ ಉಚಿತವಾಗಿ ಸಿಗುತ್ತದೆ, ಅದು ಸಂಜೀವಿನಿ ಎಂಬುದನ್ನು ಮೊದಲು ತಲೆಯಿಂದ ತೆಗೆದುಹಾಕಿ. ಆಮೇಲೆ ನಾವು ಲಸಿಕೆ ಹಾಕಿಸಿಕೊಳ್ಳಬೇಕಾ? ಬೇಡವಾ? ಎಂಬುದನ್ನು ಯೋಚಿಸಬೇಕಿದೆ. ಜೊತೆಗೆ ಸುಮಾರು 40 ವರ್ಷಗಳಿಂದ ಕೋಟ್ಯಂತರ ಜನರನ್ನು ಬಲಿ ಪಡೆಯುತ್ತಿರುವ ಎಚ್‌ಐವಿ ವೈರಸ್‌ಗೆ ಲಸಿಕೆ ಕಂಡುಹಿಡಿಯಲು ಯಾಕೆ ಔಷಧ ಕಂಪನಿಗಳು ಶ್ರಮಿಸುತ್ತಿಲ್ಲ ಎಂಬುದನ್ನು ಒಂದು ಸಾರಿ ಯೋಚಿಸಿದರೆ, ಔಷಧ ಕಂಪನಿಗಳ ಲಾಬಿ ಕುರಿತು ತಿಳಿಯುತ್ತದೆ. ಒಟ್ಟಾರೆ ಒಂದು ವರ್ಷದಲ್ಲಿ ಕಂಡುಹಿಡಿದಿರುವ ಕೊರೊನಾ ವೈರಸ್ ಲಸಿಕೆ ಸಂಜೀವಿನಿ ಅಲ್ಲ ಎಂಬುದನ್ನು ಮಾತ್ರ ಖಚಿತವಾಗಿ ತಜ್ಞರು ಹೇಳುತ್ತಿದ್ದಾರೆ.

ಲಸಿಕೆಯ ಅಡ್ಡ ಪರಿಣಾಮಗಳು
ಸಾಮಾನ್ಯವಾಗಿ ಯಾವುದೇ ವೈರಸ್‌ಗೆ ಪರಿಣಾಮಕಾರಿ ಲಸಿಕೆ ಕಂಡುಹಿಡಿಯಲು ಕನಿಷ್ಠ ನಾಲ್ಕೈದು ವರ್ಷಗಳ ಕಾಲ ಪ್ರಯೋಗ ನಡೆಯಬೇಕು. ಆದರೆ ಕೊರೊನಾ ವೈರಸ್‌ಗೆ ಒಂದು ವರ್ಷದಲ್ಲಿ ಲಸಿಕೆ ಕಂಡುಹಿಡಿಯಲಾಗಿದೆ. ಕಳೆದ ಸುಮಾರು 40 ವರ್ಷಗಳಿಂದ ಇರುವ ಅಪಾಯಕಾರಿ ಎಚ್‌ಐವಿ ವೈರಸ್‌ಗೆ ಈಗಲೂ ಲಸಿಕೆ ಕಂಡುಹಿಡಿಯಲಾಗಿಲ್ಲ. ಆದರೆ ಅದೇ ಕೊರೊನಾ ವೈರಸ್‌ಗೆ ದಿಢೀರ್ ಲಸಿಕೆ ಕಂಡುಹಿಡಿದಿದ್ದು ಹೇಗೆ ಎಂಬ ಪ್ರಶ್ನೆ ಏಳುತ್ತಿದೆ. ಅದಕ್ಕೆ ಉತ್ತರ ಕೊಡುವವರು ಯಾರೂ ಇಲ್ಲ.