ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ, ನಾನು ಅಪ್ಪನಾಗುವಾಗ ನಿಮ್ಮ ಪ್ರೀತಿ ಗೊತ್ತಾಗ್ತಾ ಇದೆ...

|
Google Oneindia Kannada News

"ನೋಡಿ, ಇದು ನಿಮ್ಮ ಮಗು. ಅದು ಪಾದ, ಕೈಗಳು ನೋಡಿ" -ಸ್ಕ್ಯಾನಿಂಗ್ ಮಷೀನ್ ನಲ್ಲಿ ಕಾಣುತ್ತಿದ್ದ ಪುಟ್ಟ ಜೀವವೊಂದನ್ನು ತೋರಿಸುತ್ತಾ ಆ ವ್ಯಕ್ತಿ ವಿವರಿಸುತ್ತಿದ್ದರು. ಆ ಕ್ಷಣದ ಭಾವವನ್ನು ಹೇಗೆ ಪದಗಳಲ್ಲಿ ಕಟ್ಟಿಕೊಡುವುದಕ್ಕೆ ಸಾಧ್ಯ? "ನನ್ನ ಮಗ ಹಾಗೆ ಮಾಡ್ತಾನೆ, ನನ್ನ ಮಗಳು ಹೀಗೆ ಪ್ರಶ್ನೆ ಕೇಳ್ತಾಳೆ..." ಅಂತ ನಿಮಿಷಗಟ್ಟಲೆ ಹೇಳಿಕೊಳ್ಳುತ್ತಿದ್ದ ಸ್ನೇಹಿತರು ಕಣ್ಣೆದುರು ಬಂದರು.

"ನನ್ನ ಮಗನಿಗೆ ಛೋಟಾ ಭೀಮ್ ಚಿತ್ರ ಇರುವ ಟೀ ಷರ್ಟ್ ಬೇಕಂತೆ" ಅಂತ ಮಳೆಯನ್ನು ಲೆಕ್ಕಿಸದೆ ಅಂಗಡಿ- ಅಂಗಡಿ ಸುತ್ತಿಸಿದ್ದ ಗೆಳೆಯ ನೆನಪಾದ. ಪೂರ್ಣಚಂದ್ರ ತೇಜಸ್ವಿ ಅವರ ಬಗ್ಗೆ ತಂದೆಯಾಗಿ ಕುವೆಂಪು ಬರೆದಿದ್ದ ಕವನ ನೆನಪಾಯಿತು. ಉಹುಂ, ಅವೆಲ್ಲಕ್ಕೂ ಮುಂಚೆ, ನನಗೆ ಎಲ್ಲ ಅರ್ಥವಾಗುತ್ತೆ. ನೀನು ಸ್ವಲ್ಪ ಸುಮ್ಮನಿರ್ತಿಯಾ ಎಂದು ಅಪ್ಪನಿಗೆ ನಾನು ರೇಗಿದಾಗ ಇಡೀ ದಿನ ಮಾತನಾಡದೆ ಪೆಚ್ಚಾಗಿದ್ದರಲ್ಲಾ ಆ ಘಟನೆ ನೆನಪಾಯಿತು.

'ಅಪ್ಪ' ಎಂಬ ಭದ್ರಭಾವದ ಮಡಿಲಲ್ಲಿ ತಲೆಯಿಟ್ಟು ಮಲಗುವ ತವಕ!'ಅಪ್ಪ' ಎಂಬ ಭದ್ರಭಾವದ ಮಡಿಲಲ್ಲಿ ತಲೆಯಿಟ್ಟು ಮಲಗುವ ತವಕ!

ಒಂದು ಮಗು ಹುಟ್ಟುವುದೆಂದರೆ ಅದರ ಜತೆಗೆ ಒಬ್ಬ ತಂದೆಯೂ ಹುಟ್ಟುತ್ತಾನೆ ಎಂಬ ಮಾತು ಅದೆಷ್ಟು ಸತ್ಯ! ನನ್ನ ಯಜಮಾನಿ ಅಮ್ಮನಾಗುತ್ತಿದ್ದಾಳೆ ಎಂಬ ಸಂಗತಿಯು ಆರಂಭದ ತಿಂಗಳಲ್ಲಿ ಅದೆಷ್ಟು ಆತಂಕಕ್ಕೆ ಕಾರಣವಾಗಿತ್ತು ಗೊತ್ತಾ? ತೀರಾ ಸುಸ್ತು, ಊಟ ಸೇರಲ್ಲ, ಜೋಪಾನವಾಗಿ ಇರಬೇಕಂತೆ, ಭಾರ ಎತ್ತಲೇ ಬಾರದಂತೆ, ಆಯಾಸ ಆಗಲೇ ಬಾರದಂತೆ... ಅಯ್ಯೋ, ಅಮ್ಮ ಅಷ್ಟೊಂದು ಕಷ್ಟ ಪಟ್ಟಿದ್ದಳಾ?

ಅಪ್ಪನಿಗೂ ಹೀಗೇ ಆತಂಕ ಆಗಿತ್ತಾ?

ಅಪ್ಪನಿಗೂ ಹೀಗೇ ಆತಂಕ ಆಗಿತ್ತಾ?

ಆಗ, ಅಪ್ಪನಿಗೆ ನನ್ನ ಹಾಗೆಯೇ ಇಷ್ಟೊಂದು ಆತಂಕ ಆಗಿತ್ತಾ? ಎಲ್ಲಿ ಹೆರಿಗೆ ಆಗಬೇಕು, ಯಾವ ಆಸ್ಪತ್ರೆ, ಏನು ಹೆಸರು, ಎಲ್ಲಿ ನಾಮಕರಣ, ಯಾವ ಶಾಲೆ, ಯಾವ ಕೋರ್ಸ್, ಇದೇ ಮನೆಯಲ್ಲಿ ಇರೋಣವಾ ಅಥವಾ ಬೇರೆ ಕಡೆ ಹೋಗಬೇಕಾಗುತ್ತಾ? ಅಯ್ಯೋ, ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸುವುದು ಅಂದರೆ ಇದೇನಾ?

ಇಷ್ಟುದ್ದ ಪಟ್ಟಿ ಮಾಡಿಕೊಂಡಿದ್ದೀನಿ

ಇಷ್ಟುದ್ದ ಪಟ್ಟಿ ಮಾಡಿಕೊಂಡಿದ್ದೀನಿ

ಈ ಭಾನುವಾರ, ಅಂದರೆ ಜೂನ್ ಹದಿನೇಳಕ್ಕೆ ಅಪ್ಪನಿಗಾಗಿಯೇ ದಿನ ಮೀಸಲು. ಇನ್ನು ಮುಂದೆ ಅವರು ಟೀವಿ ನೋಡುವಾಗ ರಿಮೋಟ್ ಕಿತ್ತುಕೊಳ್ಳಲ್ಲ, ಯಾವ ಕಾರಣಕ್ಕೂ ಅವರನ್ನು ರೇಗಲ್ಲ, ನೀನು ನನಗೆ ಏನು ಮಾಡಿದೆ ಅಂತ ಚುಚ್ಚುವ ರೀತಿ ಕೇಳಲ್ಲ, ನಶ್ಯ ಹಾಕಿದಾಗ ಆಗುವ ಗಲೀಜು ಕಂಡು ಬಯ್ಯುವುದಿಲ್ಲ... ಹೀಗೆ ಇಷ್ಟುದ್ದ ಪಟ್ಟಿ ಮಾಡಿಕೊಂಡಿದ್ದೀನಿ.

ಅಮ್ಮ ತೀರಿಕೊಂಡ ಮೇಲೆ ಅಪ್ಪ ಒಬ್ಬಂಟಿ

ಅಮ್ಮ ತೀರಿಕೊಂಡ ಮೇಲೆ ಅಪ್ಪ ಒಬ್ಬಂಟಿ

ಏಕೆಂದರೆ, ಅಮ್ಮ ತೀರಿಕೊಂಡ ನಂತರ ಒಂಬತ್ತು- ಹತ್ತು ವರ್ಷದಿಂದ ಅಪ್ಪ ಒಂಟಿಯಾಗಿದ್ದಾರೆ. ಯಾವುದೋ ಕೆಲಸ ಮತ್ತೊಂದು ಅಂತ ಅವರ ಹತ್ತಿರ ದಿನಗಟ್ಟಲೆ ನಾನು ಮಾತೇ ಆಡಿರುವುದಿಲ್ಲ. ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿ ಹೊರಟೆ ಎಂದರೆ, ಸಣ್ಣದೊಂದು ನಗೆ ನಕ್ಕು, 'ಜೋಪಾನ ಹೋಗಿ ಬಾ' ಅಂತಾರೆ.

ಎಪ್ಪತ್ತರ ಹತ್ತಿರ ವಯಸ್ಸಾಯಿತು

ಎಪ್ಪತ್ತರ ಹತ್ತಿರ ವಯಸ್ಸಾಯಿತು

ಈಚೆಗೆ ಮರೆವು ಜಾಸ್ತಿ ಆಗಿದೆ ಕಣೋ, ಹೊಸ ಎರಡು ಸಾವಿರ ರುಪಾಯಿ ನೋಟುಗಳನ್ನು ಸಾವಿರ ರುಪಾಯಿ ಅಂದುಕೊಂಡು ಯಾರಿಗೋ ಕೊಟ್ಟುಬಿಟ್ಟೆ ಅಂತ ಒಂದ್ಸಲ ಅಪ್ಪ ಹೇಳಿದಾಗ, ಏನು ಉತ್ತರ ಕೊಡಬೇಕು ಅಂತ ಗೊತ್ತಾಗದೆ ಸುಮ್ಮನಾಗಿದ್ದೆ. ಎಪ್ಪತರ ಹತ್ತಿರ ವಯಸ್ಸಾಯಿತು ಅಪ್ಪನಿಗೆ. ನನಗೂ ಆ ವಯಸ್ಸು ಆದಾಗ ಏನೇನು ಮರೆಯಬಹುದು ಎಂಬ ಚಿಂತೆ- ಭಯ ಶುರುವಾಗಿದೆ.

English summary
Fathers day special: Thanks to dad for all his love and sacrifice. June 17th Father's day. So, on that day here is the special article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X