ChatGPTಗೆ ನಿಮ್ಮ ಆಧಾರ್, ಪ್ಯಾನ್ ಕಾರ್ಡ್ ಅಪ್‌ಲೋಡ್ ಮಾಡ್ತಿದ್ದೀರಾ?
ಹಲವು ಕೆಲಸಗಳನ್ನು ಸರಳಗೊಳಿಸುತ್ತಿರುವ ಚಾಟ್‌ಜಿಪಿಟಿ (ChatGPT) ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಇಮೇಜ್ ಜನರೇಷನ್ ಫೀಚರ್ ಆಯ್ಕೆಯನ್ನು OpenAI ಕಳೆದ ವಾರ ಅನ್‌ಲಾಕ್ ಮಾಡಿದ್ದು, ಅಂದಿನಿಂದಲೂ ಬಳಕೆದಾರರು 700 ಮಿಲಿಯನ್‌ಗಿಂತಲೂ ಹೆಚ್ಚು ಚಿತ್ರಗಳನ್ನು ರಚಿಸಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಮಾಧ್ಯಮ ಬಳಕೆದಾರರು ಚಾಟ್‌ಜಿಪಿಟಿಯ ಈ ಹೊಸ ಇಮೇಜ್ ಜನರೇಟರ್ ಬಳಸಿ ನಕಲಿ ಆಧಾರ್ ಕಾರ್ಡ್‌ಗಳ ಚಿತ್ರಗಳನ್ನು ತಮ್ಮ ಚಿತ್ರಗಳೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿರುವುದು ಬೆಳಕಿಗೆ ಬಂದಿದೆ.
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಇಂತಹ ಅಪಾಯಕಾರಿ ವೈಶಿಷ್ಟ್ಯಗಳನ್ನು ಪರಿಚಯಿಸುವ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಇದರ ನಡುವೆ ಚಾಟ್‌ಜಿಪಿಟಿಯ ಫೋಟೋ ರಿಯಲಿಸ್ಟಿಕ್ ಚಿತ್ರಗಳನ್ನು ರಚಿಸುವ ಹೊಸ ಫೀಚರ್ ದುರುಪಯೋಗವಾಗುತ್ತಿದೆ ಎಂದು ವರದಿಯಾಗಿದೆ.

ಕಳೆದ ವಾರ ಪ್ರಪಂಚದಾದ್ಯಂತದ ಬಳಕೆದಾರರಿಗಾಗಿ ತೆರೆಯಲಾದ ಈ ಇಮೇಜ್ ಜನರೇಷನ್ ಟೂಲ್- GPT-4o ತಕ್ಷಣವೇ ಹೆಚ್ಚು ಜನಪ್ರಿಯವಾಗಿದೆ. ಲಕ್ಷಾಂತರ ಜನರು ಇದನ್ನು ಬಳಸಿಕೊಂಡು ಸ್ಟುಡಿಯೋ ಘಿಬ್ಲಿ ಶೈಲಿಯ ಭಾವಚಿತ್ರಗಳನ್ನು ರಚಿಸಿದ್ದಾರೆ. ಇದರ ಜೊತೆಗೆ ಸದ್ದಿಲ್ಲದೆ ದುರುಪಯೋಗ ಕೂಡ ಆಗಿದೆ. ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಪ್ಯಾನ್ ಕಾರ್ಡ್‌ಗಳನ್ನು ರಚಿಸಲು ಕೂಡ ChatGPTಯನ್ನು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಜನರು ಚಾಟ್‌ಜಿಪಿಟಿ ಬಳಸಿ ರಚಿಸಲಾದ ಇಂತಹ ನಕಲಿ ಆಧಾರ್ ಕಾರ್ಡ್‌ಗಳು, PAN ಕಾರ್ಡ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಳಕೆದಾರರು ಇದನ್ನು ತಮಾಷೆಗಾಗಿ ಮಾಡುತ್ತಿದ್ದರೂ, ಇಂತಹ ಅಂತಹ ಫೋಟೋರಿಯಲಿಸ್ಟಿಕ್ ಚಿತ್ರಗಳನ್ನು ರಚಿಸಲು AI ಪರಿಕರಗಳ ಬಳಕೆಯು ಆತಂಕ ಮೂಡಿಸಿದೆ. ಇದು ನಿಜವಾದ ಆಧಾರ್ ಕಾರ್ಡ್‌ನಂತೆಯೇ ಚಿತ್ರಗಳನ್ನು ರಚಿಸುತ್ತಿದ್ದು, ಪಠ್ಯ ಮತ್ತು ಸಂಖ್ಯೆಗಳು ಗೊಂದಲದಿಂದ ಕೂಡಿವೆ.

ChatGPTಯಲ್ಲಿ ಆಧಾರ್ ಕಾರ್ಡ್ ದುರುಪಯೋಗದ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಚಾಟ್‌ಜಿಪಿಟಿ ಜೊತೆ ಮೂಲ ದಾಖಲೆಗಳನ್ನು ಹಂಚಿಕೊಳ್ಳುವುದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ. ಜೊತೆಗೆ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೃಷ್ಟಿಸಿ ಏನು ಬೇಕಾದರೂ ಮಾಡುವ ಅವಕಾಶಗಳೂ ಇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಹಲವರು ಈಗಾಗಲೇ ನಾವು ಫೋಟೋ ಅಪ್‌ಲೋಡ್ ಮಾಡಿದ್ದೀವಿ ಎಂದು ತಲೆಕೆಡಿಸಿಕೊಂಡಿದ್ದಾರೆ.
ನಿಜವಾದ ಆಧಾರ್ ಕಾರ್ಡ್ ಅನ್ನು ಹೇಗೆ ಪರಿಶೀಲಿಸುವುದು?
ಸದ್ಯ ಚಾಟ್‌ಜಿಪಿಟಿ ಮೂಲಕ ರಚಿಸಲಾದ ಆಧಾರ್ ಮತ್ತು ಪ್ಯಾನ್ ಸಂಖ್ಯೆಗಳು ಸಂಪೂರ್ಣವಾಗಿ ಯಾವುದೇ ನೈಜ ಸಂಖ್ಯೆಯನ್ನು ಪ್ರತಿನಿಧಿಸದ ಕಾರಣ ಯಾವುದೇ ತೊಂದರೆಯಿಲ್ಲ. ಅಲ್ಲದೆ, PAN ಕಾರ್ಡ್ ಅಥವಾ ಆಧಾರ್ ಕಾರ್ಡ್‌ನಲ್ಲಿ ಯಾವುದೇ ಕ್ಯುಆರ್ ಕೋಡ್ ಸಹ ಇಲ್ಲ. ಆದ್ದರಿಂದ ನೀವು ಸರಳವಾಗಿ ವೆರಿಫೈ ಮಾಡಿದರೆ ನಿಮ್ಮ ನಿಜವಾದ ಮತ್ತು ನಕಲಿ ಆಧಾರ್ ಮತ್ತು ಪ್ಯಾನ್ ನಡುವೆ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಪ್ರತಿ ಆಧಾರ್ ಕಾರ್ಡ್ ಸುರಕ್ಷಿತ ಕ್ಯುಆರ್ ಕೋಡ್ ಹೊಂದಿರುತ್ತದೆ. ಆದರೆ ಈ ನಕಲಿ ಕಾರ್ಡ್‌ಗಳಲ್ಲಿ ಅದು ಬರುವುದಿಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications