• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವೇಗೌಡರ ಮೇಲಿನ ಗೌರವ ಇನ್ನೂ ಹೆಚ್ಚಾಗಿದೆ: ಕೋಟ ಶ್ರೀನಿವಾಸ ಪೂಜಾರಿ

|

ಯಡಿಯೂರಪ್ಪನವರ ಕ್ಯಾಬಿನೆಟ್ ನಲ್ಲಿ ಅತ್ಯಂತ ಸರಳ ವ್ಯಕ್ತಿತ್ವದ ಸಚಿವರಲ್ಲಿ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಒಬ್ಬರು. ಹೆಚ್ಚಾಗಿ, ಮುಜರಾಯಿ (ಈಗ, ಹಿಂದೂ ಧಾರ್ಮಿಕ ಸಂಸ್ಥೆ, ಧರ್ಮದಾಯ ದತ್ತಿ) ಖಾತೆ ಎಂದರೆ ರಾಜಕಾರಣಿಗಳಿಗೆ ಅಷ್ಟಕಷ್ಟೇ.

   Exclusive Interview with Minister Kota Srinivas Poojari | Fishery | Muzrai | Karnataka

   ಆದರೆ, ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಕೋಟ ಶ್ರೀನಿವಾಸ ಪೂಜಾರಿಯವರು, 'ಸಪ್ತಪದಿ ವಿವಾಹ' ಎನ್ನುವ ಹೊಸ ಕೆಲಸಕ್ಕೆ ಮುಂದಾಗಿದ್ದಾರೆ. 'ಒನ್ ಇಂಡಿಯಾ ಕನ್ನಡದ' ಜೊತೆ, ಸಚಿವರು ಇಲಾಖೆಯ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದಭಾಗ ಇಂತಿದೆ:

   ಸರಳ ಸಪ್ತಪದಿಗೆ ವೀರೇಂದ್ರ ಹೆಗ್ಗಡೆ, ಸುಧಾಮೂರ್ತಿ, ಯಶ್ ರಾಯಭಾರಿ

   ಪ್ರ: ಮಾಧ್ಯಮಗಳನ್ನು ಶಕ್ತಿಕೇಂದ್ರಕ್ಕೆ ನಿರ್ಬಂಧಿಸುವ ಸ್ಪೀಕರ್ ನಿರ್ಧಾರದ ಬಗ್ಗೆ?

   ಸಚಿವರು : ಈ ಹಿಂದೆ ಕೂಡಾ ಲೋಕಸಭೆಯಲ್ಲಿ ನಿರ್ಬಂಧನೆ ಹೇರಲಾಗಿತ್ತು. ಕೆಳಮನೆ ಮತ್ತು ಮೇಲ್ಮನೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಮತ್ತೆ ನಾನು ಸವಿಸ್ತಾರವಾಗಿ ಹೇಳಲು ಬಯಸುವುದಿಲ್ಲ. ಮೇಲ್ಮನೆಯಲ್ಲಿ ಈ ರೀತಿಯ ಪ್ರಸ್ತಾವನೆ ಬಂದಿರಲಿಲ್ಲ.

   ಯಾರಿಗೂ ಬೇಡವಾದ 'ಮುಜರಾಯಿ' ಖಾತೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಕಲರವ

   ಕೆಳಮನೆಯಲ್ಲಿ ನಿಯಮಗಳಿಗೆ ಅನುಸಾರವಾಗಿ ನಿರ್ಬಂಧ ಹೇರಲಾಗಿದೆ ಎನ್ನುವ ಮಾತನ್ನು ಸ್ಪೀಕರ್ ಹೇಳಿದ್ದಾರೆ. ಪತ್ರಿಕಾ ವ್ಯವಸ್ಥೆ ಮತ್ತು ಮಾಧ್ಯಮಗಳ ಪ್ರಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ನಡೆದುಕೊಳ್ಳಲಾಗುವುದು ಎಂದು ಸ್ಪೀಕರ್ ಹೇಳಿದ್ದಾರೆ.

    ಮುಜರಾಯಿ ಖಾತೆ

   ಮುಜರಾಯಿ ಖಾತೆ

   ಪ್ರ: ಮುಜರಾಯಿ ಖಾತೆ ನಿಮಗೆ ಸಿಕ್ಕಾಗ ನಿಮ್ಮ ಅಭಿಪ್ರಾಯ ಏನಿತ್ತು?

   ಸಚಿವರು: ಪ್ರಥಮ ಹಂತದಲ್ಲಿ ಸಂಪುಟ ರಚನೆಯಾದಾಗ, ಸಾಮಾಜಿಕ ನ್ಯಾಯ, ಜಿಲ್ಲಾವಾರು ಪ್ರಾತಿನಿಧ್ಯತೆ, ಇದನ್ನೆಲ್ಲಾ ನೋಡಬೇಕಾಗುತ್ತದೆ. ಯಡಿಯೂರಪ್ಪನವರಂತಹ ಮುತ್ಸದ್ದಿ ಸಿಎಂ ಆದಾಗ, ಇನ್ನೂ ಯೋಜನಾಬದ್ದವಾಗಿ ಕೆಲಸ ಮಾಡುವಂತಹ ಜವಾಬ್ದಾರಿ ಅವರ ಮೇಲಿರುತ್ತದೆ.

   ಕಾರವಾರದಿಂದ ಉಳ್ಳಾಲದವರೆಗೆ 320 ಕಿ.ಮೀ ಕರಾವಳಿ ಪ್ರದೇಶವಿದೆ. ಮೀನುಗಾರಿಕೆಗೆ ಹೊಸ ಶಕ್ತಿಯನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ನನಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಬಾರಿ ಅಪಾರ ಪ್ರಮಾಣದಲ್ಲಿ ಮೀನುಗಾರಿಕೆಗೆ ಮುಖ್ಯಮಂತ್ರಿಗಳು ಹಣ ಮೀಸಲಿಟ್ಟಿದ್ದಾರೆ. ಕಳೆದ ಶೆಟ್ಟರ್ ಸರಕಾರದ ಅವಧಿಯಲ್ಲೂ ನಾನು ಇದೇ ಖಾತೆಯನ್ನು ನಿಭಾಯಿಸಿದ್ದೆ. ಕೊಟ್ಟ ಖಾತೆಯನ್ನು ಜವಾಬ್ದಾರಿಯುತವಾಗಿ ಮುನ್ನಡೆಸಬೇಕಾಗಿರುವುದು ನನ್ನ ಕೆಲಸ.

    ಹಿಂದೂ ದೇವಾಲಯದ ಹಣ

   ಹಿಂದೂ ದೇವಾಲಯದ ಹಣ

   ಪ್ರ: ಹಿಂದೂ ದೇವಾಲಯದ ಹಣವನ್ನು ಬೇರೆ ಕೋಮಿನ ಪ್ರಾರ್ಥನಾ ಮಂದಿರಕ್ಕೆ ಬಳಸಲಾಗುತ್ತದೆಯೇ?

   ಸಚಿವರು: ಹಿಂದೂ ದೇವಾಲಯದ ಹಣವನ್ನು, ಬೇರೆ ಕಡೆ ಉಪಯೋಗಿಸಲಾಗುತ್ತಿದೆ ಎನ್ನುವ ಚರ್ಚೆ ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ. ಹಿಂದೆ ಏನು ನಡೆಯಿತು ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ಈಗ, ಆ ರೀತಿ ಆಗದಂತೆ ನೋಡಿಕೊಳ್ಳಲಾಗುವುದು.

   ನಾನು ಒಂದು ಮಾತನ್ನು ಸ್ಪಷ್ಟ ಪಡಿಸುತ್ತೇನೆ. ದೇವಾಲಯಕ್ಕೆ ಬರುವ ಒಂದೊಂದು ಪೈಸಾ ಕೂಡ ಹಿಂದೂ ದೇವಾಲಯಗಳ ಅಭಿವೃದ್ದಿಗೆ ಮೀಸಲಿಡುತ್ತೇವೆ. ಒಂದೊಂದು ಪೈಸಾ ಕೂಡಾ ಆಚೀಚೆ ಆಗುವುದಿಲ್ಲ ಎನ್ನುವ ಭರವಸೆಯನ್ನು ನೀಡುತ್ತೇನೆ.

    ಡ್ರೆಸ್ ಕೋಡ್ ತರುವ ವಿಚಾರ

   ಡ್ರೆಸ್ ಕೋಡ್ ತರುವ ವಿಚಾರ

   ಪ್ರ: ದೇವಾಲಯಗಳಲ್ಲಿ ಡ್ರೆಸ್ ಕೋಡ್ ತರುವ ವಿಚಾರ ಇಲಾಖೆಯ ಮುಂದೆ ಇದೆಯಾ?

   ಸಚಿವರು: ದೇವಸ್ಥಾನ ಎಂದರೆ ಅದು ಭಕ್ತಿಪೂರ್ವಕವಾಗಿ ಪೂಜಿಸುವಂತಹ ಧಾರ್ಮಿಕ ಕೇಂದ್ರ. ಅಲ್ಲಿ ಮನಸೋಇಚ್ಚೆ ಬಟ್ಟೆ ಹಾಕಿಕೊಂಡು ಹೋಗುವುದು ಸರಿಯಲ್ಲ. ದೇವಾಲಯಕ್ಕೆ ಬರುವವರು ಕನಿಷ್ಠ ಇಂತಹ ಬಟ್ಟೆಯನ್ನು ಧರಿಸಬೇಕು ಎನ್ನುವ ನಿಯಮ ಇದ್ದರೆ ಒಳ್ಲೆಯದು ಎನ್ನುವ ಒತ್ತಡವಿದೆ.

   ಈ ನಿಯಮ ಜಾರಿಗೆ ತರುವ ಮುನ್ನ ಸವಿಸ್ತಾರವಾಗಿ ಚರ್ಚಿಸಬೇಕಾಗಿದೆ. ವಸ್ತ್ರ ಸಂಹಿತೆ ಎಂದು ಅದು ಕಿರಿಕಿರಿಯೂ ಆಗಬಾರದು. ಸ್ವಯಂಪ್ರೇರಿತವಾಗಿ ವಸ್ತ್ರ ಸಂಹಿತೆಯ ವಿಚಾರ ಎಷ್ಟು ಮುಖ್ಯ ಎನ್ನುವುದನ್ನು ಭಕ್ತರಿಗೆ ತಿಳಿಸಬೇಕಾಗುತ್ತದೆ. ಸಕಾಲದಲ್ಲಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ.

   ದೇವೇಗೌಡ

   ದೇವೇಗೌಡ

   ಪ್ರ: ಹುಬ್ಬಳ್ಳಿಯಲ್ಲಿ ದೇವೇಗೌಡರನ್ನು ಭೇಟಿಯಾದಾಗ, ಬಂದ ಸಲಹೆ ಏನು?

   ಸಚಿವರು : ಸಪ್ತಪದಿ ವಿಚಾರ ಸಂಕಿರಣಕ್ಕೆ ಬೆಳಗಾವಿಗೆ ಹೋಗುತ್ತಿದ್ದೆ. ತಡರಾತ್ರಿ ಆಗಿದ್ದರಿಂದ ಹುಬ್ಬಳ್ಳಿ ಐಬಿಯಲ್ಲಿದ್ದೆ. ಮರುದಿನ ಬೆಳಗ್ಗೆ ಹೊರಟಾಗ ದೇವೇಗೌಡರು ಇದ್ದಾರೆ ಎಂದು ತಿಳಿದುಬಂತು. ಕರ್ನಾಟಕ ಮತ್ತು ದೇಶದ ರಾಜಕಾರಣದಲ್ಲಿ ಗೌಡ್ರು ಹಿರಿಯರು.

   ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಸಹಜ. ನಿಮ್ಮ ಇಲಾಖೆಯ ಕೆಲಸಗಳನ್ನು ನೋಡುತ್ತಿದ್ದೇನೆ. ಚೆನ್ನಾಗಿ ಕೆಲಸ ಮಾಡಿ, ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ. ಅವರ ಮಾತು ನನಗೆ ಇಷ್ಟವಾಗಿದೆ. ಅವರ ಮೇಲಿನ ಗೌರವ ಹೆಚ್ಚಾಗಿದೆ.

   ಸಪ್ತಪದಿ ವಿವಾಹ

   ಸಪ್ತಪದಿ ವಿವಾಹ

   ಪ್ರ: ಸಪ್ತಪದಿ ವಿವಾಹದ ಬಗ್ಗೆ ಸ್ವಲ್ಪ ವಿವರಿಸುತ್ತೀರಾ?

   ಸಚಿವರು: ಜನರ ಮಧ್ಯೆ ಓಡಾಡುತ್ತಿರುವುದರಿಂದ ಈ ಐಡಿಯಾ ತಲೆಗೆ ಹೊಳೆದಿದೆ. ನಮ್ಮಲ್ಲಿ 190ಕ್ಕೂ ಹೆಚ್ಚು ಎ ದರ್ಜೆಯ ದೇವಸ್ಥಾನವಿದೆ. ಕುಕ್ಕೇ, ಮಲೈ ಮಹಾದೇಶ್ವರ, ಕೊಲ್ಲೂರು, ಚಾಮುಂಡೇಶ್ವರಿ ದೇವಾಲಯದಲ್ಲಿ ಒಳ್ಲೆಯ ಆದಾಯವಿದೆ.

   ಈ ಹಣದಲ್ಲಿ ಮೂಲಭೂತ ಸೌಕರ್ಯದ ಕೆಲಸವನ್ನು ಮಾಡುತ್ತಿದ್ದೇವೆ. ಅದರಲ್ಲಿ ಸಪ್ತಪದಿ ವಿವಾಹವೂ ಒಂದು. ದೇವಾಲಯದ ಒಟ್ಟು ಆದಾಯದಲ್ಲಿ ಮೂರು ಪರ್ಸೆಂಟ್ ತೆಗೆದಿಟ್ಟರೂ ಸಪ್ತಪದಿ ಯೋಜನೆಗೆ ಸಾಕಾಗುತ್ತದೆ. ಎಷ್ಟು ಜೋಡಿಗಳು ಈ ಯೋಜನೆಯನ್ನು ಉಪಯೋಗಿಸಿಕೊಳ್ಳುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ. ಇದುವರೆಗೆ, 2,500 ಅರ್ಜಿಯನ್ನು ತೆಗೆದುಕೊಂಡಿದ್ದಾರೆ.

    ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ

   ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ

   ಪ್ರ: ರಾಜಕೀಯ ಹೊರತಾಗಿ ನಿಮ್ಮ ಮನೋರಂಜನೆ ಏನು, ಸಿನಿಮಾ ನೋಡುವ ಅಭ್ಯಾಸವಿದೆಯಾ?

   ಸಚಿವರು: ಸಿನಿಮಾವನ್ನು ಹಿಂದೆ ನೋಡುತ್ತಿದ್ದೆ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ನೋಡಿದ್ದೆ. ಅಂತಹ ಸಿನಿಮಾಗಳು ಈಗ ಎಲ್ಲಿ ಬರುತ್ತೆ. ರಾಜಕಾರಣಕ್ಕೆ ಬಂದ ನಂತರ ಎರಡ್ಮೂರು ಗಂಟೆ ಕೂತು ಸಿನಿಮಾ ನೋಡಿದ ನೆನಪಿಲ್ಲ.

   ನಮ್ಮೂರಿನಲ್ಲಿ ಪೌರಾಣಿಕ ಯಕ್ಷಗಾನಗಳು ನಡೆಯುತ್ತದೆ. ಅದನ್ನು ಒಂದೆರಡು ಗಂಟೆ ಕೂತು ನೋಡಿದ್ದುಂಟು. ಮಲೆಮಕ್ಕಳು, ಚೋಮನದುಡಿ ಮುಂತಾದ ನಾಟಕಗಳನ್ನು ನೋಡಿದ್ದೇನೆ.

   ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

   English summary
   An Exclusive Interview With Karnataka Fisheries Minister Kota Srinivasa Poojary.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X