ವಿಡಿಯೋ: ನಾಯಿ ಮೇಲೆ ಏರಿ ಹಗಲು ದರೋಡೆ ಮಾಡಿದ ಐನಾತಿ ಕೋತಿ
ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಕೋತಿಗೆ ನಾಯಿ ಸಹಾಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೋತಿಗಳು, ನಾಯಿಗಳು ಕೈಯಲ್ಲಿದ್ದ ಅಥವಾ ಅಂಗಡಿಯಲ್ಲಿರುವ ಆಹಾರವನ್ನು ಕದಿಯುತ್ತವೆ. ಆದರೆ ಈ ವಿಡಿಯೋದಲ್ಲಿ ನಾಯಿ ಮೇಲೆ ಏರಿದ ಐನಾತಿ ಕೋತಿ ಹಗಲು ದರೋಡೆ ಮಾಡಿದೆ.
ಅಂಗಡಿಯ ಮುಂದೆ ನೇತು ಹಾಕಿದ್ದ ಚಿಪ್ಸ್ ಪಾಕೇಟ್ ಅನ್ನು ಕದಿಯಲು ಕೋತಿ ನಾಯಿಯ ಮೇಲೇರಿದೆ. ನಾಯಿ ಕೂಡ ಚಿಪ್ಸ್ ಪಾಕೇಟ್ ಕದಿಯಲು ಕೋತಿಗೆ ಸಾಥ್ ನೀಡಿದೆ. ಈ ಅಪರೂಪದ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಮತ್ತು ದೃಶ್ಯವನ್ನು ಆನಂದಿಸಿದ್ದಾರೆ.
ವಿಡಿಯೊ ಹಳೆಯದಾಗಿದ್ದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೀಗ ಮತ್ತೆ ವೈರಲ್ ಆಗುತ್ತಿದೆ. ಮಂಗ ನಾಯಿಯ ಬೆನ್ನಿನ ಮೇಲೆ ನಿಂತು ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಅನ್ನು ಕದಿಯುತ್ತಿದೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ Memes.bks ಹಂಚಿಕೊಂಡಿದ್ದು "ಮಂಗ ಮತ್ತು ನಾಯಿ ಒಳ್ಳೆಯ ಸ್ನೇಹಿತರಲ್ಲ ಎಂದು ಯಾರು ಹೇಳುತ್ತಾರೆ" ಎಂದು ವಿಡಿಯೋ ಶೀರ್ಷಿಕೆ ಹಾಕಲಾಗಿದೆ.
ಈ ವಿಡಿಯೊ ವೀಕ್ಷಕರನ್ನು ರಂಜಿಸಿದೆ. ನೆಟ್ಟಿಗರು ಸ್ವಂತ ಸ್ನೇಹದ ಬಗ್ಗೆ ನೆನೆಸಿಕೊಳ್ಳುತ್ತಾ ಉಲ್ಲಾಸದ ಕಾಮೆಂಟ್‌ಗಳೊಂದಿಗೆ ಪ್ರತಿಕ್ರಿಯಿಸುತ್ತಿದ್ದಾರೆ.
The 🐒 trying to pick up a packet of chips with the help of 🐕 is the cutest thing you will watch today ❣️❣️. #goodmorning #dog #dogs #monkey #monkeys #animal #AnimalLovers #cute #lovable #adorable #friendship #bond #team pic.twitter.com/bkMAEU13NC
— Tarana Hussain (@hussain_tarana) May 8, 2022
ಈ ವಿಡಿಯೋಕ್ಕೆ ಕಾಮೆಂಟ್‌ಗಳು ಹೇಗಿವೆ ನೋಡಿ-
"ಇದನ್ನು ನೋಡಿದ ನಂತರ ನಾನು ನನ್ನ ಸ್ನೇಹಿತನನ್ನು ನೆನಪಿಸಿಕೊಳ್ಳುತ್ತೇನೆ" ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
"ಟೀಮ್ವರ್ಕ್ಸ್," ಎರಡನೇ ಬಳಕೆದಾರರು ಬರೆದಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ 2,500 ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 29,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಿದೆ. ಮಂಗಗಳು ಮತ್ತು ನಾಯಿಗಳು ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಪ್ರಾಚೀನ ಕಾಲದಿಂದಲೂ ಹೇಳಲಾಗಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವಿಡಿಯೊಗಳು ಅವುಗಳನ್ನು ತಪ್ಪೆಂದು ಸಾಬೀತುಪಡಿಸಿವೆ.

ಎರಡು ವರ್ಷಗಳ ಹಿಂದೆ ಕಾಡು ಕೋತಿಯೊಂದು ತನ್ನ ನೆಚ್ಚಿನ ನಾಯಿಯನ್ನು ಎಲ್ಲೆಂದರಲ್ಲಿ ಸವಾರಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯೂಟ್ಯೂಬ್‌ನಲ್ಲಿ ದಿ ಡೋಡೋ ಈ ವೀಡಿಯೊವನ್ನು ಹಂಚಿಕೊಂಡಿದೆ ಮತ್ತು 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 17,000 ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಗಳಿಸಿದೆ.












Click it and Unblock the Notifications