ನಟ ನಾಗಚೈತನ್ಯ ಖರೀದಿಸಿದ ₹3.51 ಕೋಟಿ ಮೌಲ್ಯದ ಐಷಾರಾಮಿ ಕಾರಿನ ವಿಶೇಷತೆ ಬಗ್ಗೆ ನಿಮಗೆ ಗೊತ್ತೇ?
ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗುತ್ತಿದ್ದು, ಜೊತೆಗೆ ಅಷ್ಟೇ ದೊಡ್ಡ ಮಟ್ಟದಲ್ಲಿ ಸ್ಪರ್ಧೆಯೂ ಏರ್ಪಟ್ಟಿದೆ. ಅದರಲ್ಲೂ ಯಾರಾದರೂ ಸೆಲೆಬ್ರೆಟಿಗಳು, ಕ್ರೀಡಾ ತಾರೆಯರು ಹೊಸ ಕಾರು ಖರೀದಿ ಮಾಡಿದರೆಂದರೆ, ಅದರ ವಿಶೇಷತೆ, ದರಗಳ ಬಗ್ಗೆಯೂ ಭಾರೀ ಸುದ್ದಿಯಾಗುತ್ತಲೇ ಇರುತ್ತದೆ. ಹಾಗೆಯೇ ಇತ್ತೀಚೆಗಷ್ಟೇ ತೆಲುಗು ನಟ ನಾಗಚೈತನ್ಯ ಅವರು 3.5 ಕೋಟಿ ರೂಪಾಯಿ ಬೆಲೆಯ ಐಷಾರಾಮಿ ಕಾರನ್ನು ಖರೀದಿ ಮಾಡಿ ಸುದ್ದಿಯಲ್ಲಿದ್ದಾರೆ. ಹಾಗಾದರೆ ಈ ಕಾರು ಏನೆಲ್ಲ ವಿಶೇಷತೆಗಳನ್ನು ಒಳಗೊಂಡಿದೆ ಎಂದು ಇಲ್ಲಿ ತಿಳಿಯಿರಿ.
ತೆಲುಗು ನಟ ನಾಗ ಚೈತನ್ಯ ಅವರು ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸುದಿಯಲ್ಲಿದ್ದಾರೆ. ಜೊತೆಗೆ ಅವರು ಕಾರು ಕಲೆಕ್ಷನ್ ವಿಚಾರದಲ್ಲೂ ಭಾರೀ ಸಂಚಲನ ಮೂಡಿಸಿದ್ದು, ಇದೀಗ ಅವರ ದುಬಾರಿ ಕಾರುಗಳ ಪಟ್ಟಿಗೆ ಮತ್ತೊಂದು ಹೊಸ ಕಾರೊಂದು ಎಂಟ್ರಿ ಕೊಟ್ಟಿದೆ.

ಇತ್ತೀಚೆಗಷ್ಟೇ ನಾಗ ಚೈತನ್ಯ ಅವರು ಐಷಾರಾಮಿ ಪೋರ್ಷೆ 911 GT3 ಸೂಪರ್ ಕಾರನ್ನು ಖರೀದಿ ಮಾಡಿದ್ದು, ಇದರ ಬೆಲೆ 3.51 ಕೋಟಿ ರೂಪಾಯಿ ಆಗಿದೆ. ಅತ್ಯಂತ ಆಕರ್ಷಕವಾದ ಈ ಕಾರು ಕೇವಲ 2 ಆಸನಗಳನ್ನು ಹೊಂದಿದ್ದು, ಇಬ್ಬರಿಗೆ ಮಾತ್ರ ಸರಿಹೊಂದುವ ದುಬಾರಿ ಪೋರ್ಷೆ ಕಾರಿನ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.
ಈ ಐಷಾರಾಮಿ ಪೋರ್ಷೆ ಕಾರು 3,996 ಸಿಸಿ, 6 ಸಿಲಿಂಡರ್ ಎಂಜಿನ್ ಅನ್ನು ಒಳಗೊಂಡಿದೆ. ಇದರ ಗರಿಷ್ಠ ವೇಗ ಗಂಟೆಗೆ 296 ಕಿಲೋ ಮೀಟರ್ ಆಗಿದೆ. ಆದರೆ ಈ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ಕೇವಲ 7.4 ಕಿಲೋ ಮೀಟರ್ ಮೈಲೇಜ್ ಅನ್ನು ಮಾತ್ರ ನೀಡುತ್ತದೆ ಅಷ್ಟೇ. ಅಲ್ಲದೆ, 7 ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ಹೆಚ್ಚಿನ ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿದೆ.
ಇದು 518 bhp ಪವರ್ ಮತ್ತು 465 Nm ಟಾರ್ಕ್ ಹೊಂದಿದೆ. ಆದ್ದರಿಂದ ಅದರ ಕಾರ್ಯಕ್ಷಮತೆ ಅತ್ಯಂತ ಉತ್ತವಾಗಿದೆ. ಇನ್ನು ಕಾರು ಖರೀದಿ ಮಾಡಿರುವ 37 ವರ್ಷದ ನಾಗ ಚೈತನ್ಯ ಅವರ ಒಟ್ಟು ಆಸ್ತಿ ಮೌಲ್ಯ 154 ಕೋಟಿ ರೂಪಾಯಿ ಆಗಿದ್ದು, ಅವರು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಭವ್ಯವಾದ ಅರಮನೆಯನ್ನು ಸಹ ಒಳಗೊಂಡಿದ್ದಾರೆ.
ನಟ ನಾಗ ಚೈತನ್ಯ ಅವರು 1.75 ಕೋಟಿ ರೂಪಾಯಿ ಮೌಲ್ಯದ ಫೆರಾರಿ F430 ಹಾಗೂ 3.43 ಕೋಟಿ ಮೌಲ್ಯದ ರೇಂಜ್ ರೋವರ್ ಹೊಂದಿದ್ದಾರೆ. ಜೊತೆ 13 ಲಕ್ಷ ರೂಪಾಯಿ ಬೆಲೆಯ BWM ಬೈಕ್, ಟ್ರಯಂಫ್ ಥ್ರಕ್ಸ್‌ಟನ್ ಆರ್ ಬೈಕ್‌ನಲ್ಲಿಯೂ ಸಹ ಹಲವಾರು ಬಾರಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಒಟ್ಟಿನಲ್ಲಿ ಹೀಗೆ ಯಾವುದೇ ಸೆಲೆಬ್ರೆಟಿಗಳು, ಕ್ರೀಡಾ ತಾರೆಯರು ಐಷಾರಾಮಿ ವಾಹನಗಳನ್ನು ಖರಿದೀಸುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.












Click it and Unblock the Notifications