ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?
ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ, ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿಚಾರಣೆ ಬಳಿಕ ಅವರ ಆಪ್ತರಿಗೆ ಜಾರಿ ನಿರ್ದೇಶನಾಲಯ ಬಲೆ ಬೀಸಿದೆ. ಡಿಕೆ ಶಿವಕುಮಾರ್ ಅವರ ಆಪ್ತ ಆಂಜನೇಯ ಹನುಮಂತಯ್ಯ ಮನೆ ಮೇಲೆ 'ಇಡಿ' ಅಧಿಕಾರಿಗಳು ದಾಳಿ ನಡೆಸಲಾಗಿದೆ. ಡಿಕೆಶಿ ಪತ್ನಿ ಹಾಗೂ ಪುತ್ರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.
ಮನಿಲಾಂಡ್ರಿಂಗ್ ಪ್ರಕರಣದಲ್ಲಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಸೆ.13ರಂದು ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಈ ನಡುವೆ ಡಿಕೆಶಿ ಪತ್ನಿ ಉಷಾ ಹಾಗೂ ಪುತ್ರಿ ಐಶ್ವರ್ಯಾ ದೆಹಲಿಗೆ ತೆರಳಿದ್ದು, ಲೋಕನಾಯಕ ಭವನದಲ್ಲಿರುವ 'ಇಡಿ' ಕಚೇರಿಗೆ ಭೇಟಿ ನೀಡಲಿದ್ದಾರೆ. ಇಡಿ ವಿಚಾರಣೆ ವೇಳೆ ಪ್ರಮುಖವಾಗಿ ಡಿಕೆಶಿ ಕುಟುಂಬದ ಆಸ್ತಿ ವಿವರ, ಐಶ್ವರ್ಯಾ ಹಾಗೂ ಉಷಾ ಹೆಸರಿನಲ್ಲಿರುವ ಆಸ್ತಿ ಹಾಗೂ ಸಾಲ ವಿವರಗಳನ್ನು ಅಧಿಕಾರಿಗಳು ಪಡೆಯಲಿದ್ದಾರೆ.
ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾಗೆ ಇ.ಡಿ ಸಮನ್ಸ್
ಕನಕಪುರ ತಾಲೂಕಿನ ದೊಡ್ಡ ಅಲಹಳ್ಳಿ ಗ್ರಾಮದ ಕೆಂಪೇಗೌಡ, ಗೌರಮ್ಮ ದಂಪತಿಯ ಮಗ ಡಿಕೆ ಶಿವಕುಮಾರ್ ಉದ್ಯಮಿ, ಸಮಾಜ ಸೇವಕ, ಶಿಕ್ಷಣ ಸಂಸ್ಥೆಗಳ ಪಾಲಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಪುತ್ರಿ 23 ವರ್ಷ ಐಶ್ವರ್ಯಾ ಕೂಡಾ ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಇದರಿಂದ ಸಕತ್ ಆಗಿ ರಿಟರ್ನ್ಸ್ ಬಂದಿದ್ದು, ಐಶ್ವರ್ಯಾರನ್ನು ಕೋಟ್ಯಧಿಪತಿಯನ್ನಾಗಿಸಿದೆ.

ಡಿಕೆ ಶಿವಕುಮಾರ್ ಆಸ್ತಿ ಡಬ್ಬಲ್
2013ರ ಚುನಾವಣೆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅಫಿಡವಿಟ್ ಗೆ ಹೋಲಿಸಿದರೆ 2018ರಲ್ಲಿ ಆಸ್ತಿ ಡಬ್ಬಲ್ ಆಗಿದೆ. ಕಳೆದ ಚುನಾವಣೆಯಲ್ಲಿ 251 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಈಗ ಸ್ಥಿರಾಸ್ತಿ 548 ಕೋಟಿ 85 ಲಕ್ಷದ 20 ಸಾವಿರದ 592 ರೂ ಹಾಗೂ ಚರಾಸ್ತಿ 70 ಕೋಟಿ 94 ಲಕ್ಷದ 84 ಸಾವಿರದ 974 ರೂ. ನಷ್ಟಿದೆ. ಬ್ಯಾಂಕ್ ಸಾಲ 101 ಕೋಟಿ 77 ಲಕ್ಷದ 82 ಸಾವಿರದ 200 ರೂ.ನಷ್ಟಿದೆ.
ಕುಟುಂಬದ ಆಸ್ತಿ ಮೊತ್ತವನ್ನು ಸೇರಿಸಿದರೆ 840 ಪ್ಲಸ್ ಕೋಟಿ ರು. ಪುತ್ರಿ ಐಶ್ವರ್ಯಾ ಹೆಸರಿನಲ್ಲಿ 102 ಕೋಟಿ ರೂ. ಆಸ್ತಿ ಇದೆ, ಡಿಕೆ ಶಿವಕುಮಾರ್ ಪತ್ನಿ ಉಷಾ ಹೆಸರಿನಲ್ಲಿ 48 ಕೋಟಿ ರೂ. ಆಸ್ತಿ ಇದೆ
ಇಡಿ ವಿಚಾರಣೆಗೆ ದೆಹಲಿಗೆ ತೆರಳಿದ ಡಿಕೆಶಿ ಪುತ್ರಿ ಐಶ್ವರ್ಯಾ

ಜಂಟಿ ಬ್ಯಾಂಕ್ ಖಾತೆಗಳಿವೆ
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದ ಡಿಕೆಶಿ, ಒಟ್ಟು 70,94,84,974.32 ರು ಚರಾಸ್ತಿ ಹಾಗೂ 5,48,85,20,592 ರು ಸ್ಥಿರಾಸ್ತಿ ಒಟ್ಟಾರೆ, 6,19,80,05,566.32 ರು ಆಸ್ತಿ ಘೋಷಿಸಿದ್ದಾರೆ. ಜತೆ ಪತ್ನಿ ಉಷಾ, ಮಕ್ಕಳಾದ ಆಭರಣ, ಆಕಾಶ್ ಹಾಗೂ ಐಶ್ವರ್ಯಾ ಅವರ ಆಸ್ತಿ ವಿವರಗಳನ್ನು ಸಲ್ಲಿಸಲಾಗಿದೆ.
ನಗದು: ಡಿಕೆಶಿ 6.47 ಲಕ್ಷ, ಪತ್ನಿ ಹೆಸರಿನಲ್ಲಿ 8 ಲಕ್ಷ ಒಟ್ಟು 23 ಲಕ್ಷ ರು ಬ್ಯಾಂಕಿನಲ್ಲಿ ಜಮೆ: ಒಟ್ಟು 1 ಕೋಟಿ ರು.
ಎಲ್ ಐಸಿ: 21 ಲಕ್ಷರು

ಸ್ಥಿರಾಸ್ತಿ ಮೌಲ್ಯವೇ ಅಧಿಕ
ಕನಕಪುರ, ಸರ್ಜಾಪುರದಲ್ಲಿರುವ ಜಮೀನುಗಳ ಮೊತ್ತ 1 ಕೋಟಿ ರು
ಕನಕಪುರ ಟೌನ್, ದೆಹಲಿ ಸಫ್ದರ್ಜಂಗ್ ಎನ್ ಕ್ಲೇವ್, ಕೃಷ್ಣನಗರ್, ಮುಂಬೈನಲ್ಲಿ ಫ್ಲಾಟ್,ಸದಾಶಿವ ನಗರ, ಕನಕಪುರ, ಬೆಂಗಳೂರಿನಲ್ಲಿ ಫ್ಲಾಟ್ ಎಲ್ಲವೂ ಸೇರಿ 14 ಕೋಟಿ ರು
ಉತ್ತರಹಳ್ಳಿ ಹೋಬಳಿ, ಭೂಪಸಂದ್ರ, ಕೆ.ಆರ್ ಪುರಂ, ಕನಕಪುರ, ಮೈಸೂರು, ಗೋಪಾಲಪುರ, ಓಕಳಿಪುರಂ, ಮೈಸೂರಿನ ಮೂರು ಕಡೆ ಇರುವ ಕಟ್ಟಡ ಸೇರಿ 149 ಕೋಟಿ ರು.
ಡಿಕೆ ಶಿವಕುಮಾರ್ 191 ಕೋಟಿ ರು ಸ್ತಿರಾಸ್ತಿ ಮೌಲ್ಯ ಹೊಂದಿದ್ದು ಇದರಲ್ಲಿ ಪತ್ನಿ ಹಾಗೂ ಮಗಳು ಐಶ್ವರ್ಯಾ ಹೆಸರಿನಲ್ಲಿ ಕೆಲವೊಂದು ಜಂಟಿ ಅಧೀನ ಹೊಂದಿದ್ದಾರೆ. ಜೊತೆಗೆ ಪಿತ್ರಾರ್ಜಿತ ಆಸ್ತಿಯಲ್ಲೂ ಐಶ್ವರ್ಯಾಗೆ ಪಾಲು ಸಿಗಲಿದೆ.
619 ಕೋಟಿ ಒಡೆಯ ಡಿಕೆಶಿ; 8 ಕೋಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ಯಾಕೆ?

78 ಕೋಟಿ ರು ಹೂಡಿಕೆ ಬಗ್ಗೆ ಪ್ರಶ್ನೆ
ಬೆಂಗಳೂರಿನ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ಟ್ರಸ್ಟಿಯಾಗಿರುವ ಐಶ್ವರ್ಯಾ ಸೋಲ್ ಆಂಡ್ ಸೇಲ್ಸ್ನಲ್ಲಿ 78 ಕೋಟಿ ರೂ ಹೂಡಿಕೆ ಕಂಪನಿಯ ಶೇ50ರಷ್ಟು ಷೇರು ಖರೀದಿ ಮಾಡಿರುವ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನಿಸಲು ಮುಂದಾಗಿದ್ದಾರೆ. ಈ ಹಿಂದೆ ಐಟಿ ದಾಳಿ ನಡೆದಾಗ ಸಂಗ್ರಹವಾದ ದಾಖಲೆಯಲ್ಲೂ ಈ ಬಗ್ಗೆ ಉಲ್ಲೇಖವಿದೆ.
* ಬೆಂಗಳೂರಿನಲ್ಲಿರುವ 24 ಕೋಟಿ ರು ನಿವೇಶನ, ಮುಂಬೈನಲ್ಲಿ 1.2 ಕೋಟಿ ರೂ.ಮೌಲ್ಯದ ಅಪಾರ್ಟ್ಮೆಂಟ್.
* ಕನಕಪುರ ಹಾಗೂ ಬೆಂಗಳೂರಿನಲ್ಲಿ ಅಜ್ಜಿಯ ಹೆಸರಿನಲ್ಲಿದ್ದ 3 ಎಕರೆ ಜಾಗ ಐಶ್ವರ್ಯಾಗೆ ಗಿಫ್ಟ್ ಆಗಿ ಸಿಕ್ಕಿದ್ದು ಇದಕ್ಕೆ ಗಿಫ್ಟ್ ಡೀಡ್ ಇದೆ
* ಕೆಫೆ ಕಾಫಿಡೇಗೆ ಕೋಟ್ಯಂತರ ರುಪಾಯಿ ಸಾಲ ನೀಡಿದ್ದಾರೆ ಎಂಬ ಮಾಹಿತಿಯಿದೆ ಆದರೆ, ವಿವರ ಲಭ್ಯವಿಲ್ಲ.
ಐಶ್ವರ್ಯಾ ಒಟ್ಟಾರೆ, 108 ಕೋಟಿ ರೂ. ಘೋಷಿತ ಆಸ್ತಿಹೊಂದಿದ್ದು, 81.92 ಕೋಟಿ ರು ಸಾಲ ಹೊಂದಿದ್ದಾರೆ.