Night Walk: ಮಲಗುವ ಮೊದಲು ಇಷ್ಟು ನಡೆದರೆ ಬೆಸ್ಟ್
ವಾಕಿಂಗ್ ಮಾಡುವುದು ಮನುಷ್ಯನ ದೇಹಕ್ಕೆ ತುಂಬ ಉಪಯೋಗ. ಈ ಸುಲಭ ವ್ಯಾಯಮ ಮಾಡುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲವೇ ಇಲ್ಲ. ಮುಸುಕಿನ ಸಮಯದಲ್ಲಿ ಹಸಿರು ಪರಿಸರದಲ್ಲಿ ವಾಕ್ ಮಾಡಿದರೆ ಆರೋಗ್ಯಕ್ಕೆ ಬೆಸ್ಟ್.. ಇದರಿಂದ ಆರೋಗ್ಯ ಸುಧಾರಿಸುವುದಲ್ಲದೆ, ದಿನವೀಡಿ ಉಲ್ಲಾಸದಿಂದ ಇರಲು ಸಹಾಯವಾಗುತ್ತದೆ. ಹೀಗಾಗಿ ಬೆಳಗ್ಗೆ ವಾಕ್ ಮಾಡುವರ ಸಂಖ್ಯೆ ಹೆಚ್ಚಿದೆ.
ವೈದ್ಯರು ಸಹ ಬೆಳಗ್ಗೆ ಒಂದು ವಾಕ್ ಮಾಡುವ ಸಲಹೆಯನ್ನು ನೀಡಿತ್ತಾರೆ. ಇದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಯಬಹುದು. ಅಲ್ಲದೆ ದೇಹದ ಆರೋಗ್ಯಕ್ಕೆ ಬೆಳಗ್ಗೆ ನಡೆಯುವುದ ಒಳ್ಳೆಯದು. ಹಾಗೆಯೇ ರಾತ್ರಿ ನಡೆಯುವುದು ಸಹ ಹಲವು ಉಪಯೋಗಳನ್ನು ಹೊಂದಿದೆ. ಆದರೆ ಮಲಗುವ ಮುನ್ನ ಸ್ವಲ್ಪ ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ಮಲಗುವ ಮುನ್ನ ಸ್ವಲ್ಪ ಹೊತ್ತು ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ.

ರಾತ್ರಿ ವಾಕ್ ಮಾಡುವುದರಿಂದ ಏನು ಲಾಭ?
ಸಂಜೆ ವಾಕಿಂಗ್ ಮಾಡುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಇದಲ್ಲದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಖಿನ್ನತೆಯ ಅಪಾಯವನ್ನು ಸಹ ಕಡಿಮೆ ಮಾಡಬಹುದು. ಮಲಗುವ ಮುನ್ನ ಪ್ರತಿದಿನ ವಾಕ್ ಮಾಡುವುದರಿಂದ ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯಕ.
ಊಟದ ಬಳಿಕ ವಾಕ್ ಮಾಡಿದರೆ ನಿದ್ರೆ ಚೆನ್ನಾಗಿ ಬರುತ್ತದಾ?
ರಾತ್ರಿ ವಾಕ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಅದರಲ್ಲಿ ಪ್ರಮುಖವಾಗಿ ರಾತ್ರಿ ಊಟದ ಬಳಿಕ ವಾಕ್ ಮಾಡಿದರೆ ಬೆಸ್ಟ್. ಮಲಗುವ ಮುನ್ನ ನೀವು ಲಘುವಾದ ನಡಿಗೆಯನ್ನು ಮಾಡಿದರೆ, ಅದು ನಿಮ್ಮ ನಿದ್ರೆಯನ್ನು ಸುಧಾರಿಸುತ್ತದೆ. ಇದು ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ಉತ್ತಮ ನಿದ್ರೆಯನ್ನು ಮಾಡಲು ಸಹಾಯಕವಾಗುತ್ತದೆ.
ರಾತ್ರಿ ವಾಕ್ ಮಾಡುವುದರಿಂದ ಏನೆಲ್ಲಾ ಪ್ರಯೋಜನ
ನಿಯಮಿತವಾಗಿ ಸಂಜೆಯ ನಡಿಗೆಯನ್ನು ಮಾಡುವುದರಿಂದ, ಹೃದಯದ ಚಟುವಟಿಕೆ ಉತ್ತಮವಾಗುತ್ತದೆ. ಮತ್ತು ರಕ್ತದೊತ್ತಡವೂ ನಿಯಂತ್ರಣದಲ್ಲಿಡಲು ಸಹಾಯಕ. ರಾತ್ರಿ ವಾಕ್ ಮಾಡುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಮತ್ತು ಕೀಲುಗಳನ್ನು ಸಹ ಬಲಪಡಿಸುತ್ತದೆ.

ಹೀಗೆ ಮಾಡಲೇ ಬೇಡಿ?
ಸಾಮನ್ಯವಾಗಿ ರಾತ್ರಿ ಊಟದ ಬಳಿಕ ವಾಕ್ ಮಾಡುವುದು ಉತ್ತಮ. ಆದರೆ ಅದನ್ನು ಯಾವಾಗ ಮಾಡಬೇಕು ಎನ್ನುವುದರ ಬಗ್ಗೆ ಪ್ರಶ್ನೆಗಳು ಇವೆ. ರಾತ್ರಿಯ ಊಟದ ನಂತರ ಕನಿಷ್ಠ 2 ಗಂಟೆಗಳ ನಂತರ ನಡೆದರೆ ಉತ್ತಮ ಎಂದು ಹೇಳಲಾಗುತ್ತದೆ. ರಾತ್ರಿ ನಡೆಯುವಾಗ ವೇಗವಾಗಿ ನಡಿಯಲೇ ಬೇಡಿ, ನಾರ್ಮಲ್ ಸ್ಪೀಡ್‌ನಲ್ಲಿ ನಡೆದರೆ ಸಾಕು. ನಿಮ್ಮ ದೇಹಕ್ಕೆ ಹೊಂದಿಕೊಳ್ಳುವ ಬಟ್ಟೆ ಹಾಗೂ ಶೂಗಳನ್ನು ಧರಿಸಿ. ರಾತ್ರಿ ವಾಕ್ ಮಾಡಲು ನೀವು ಬಯಸಿದ್ದು, ನಿಮಗೆ ಆರೋಗ್ಯ ಸಮಸ್ಯೆಗಳಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.












Click it and Unblock the Notifications