ಮೋದಿ ಸಂಪುಟ ಸೇರುವ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಪರಿಚಯ

Recommended Video

      ನರೇಂದ್ರ ಮೋದಿ ಸಂಪುಟ ಸೇರಿರುವ ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಪರಿಚಯ

      ಧಾರವಾಡ, ಮೇ 30 : ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರುತ್ತಿದ್ದಾರೆ. ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಜೋಶಿ ಅವರಿಗೆ ಈ ಬಾರಿ ಸಚಿವ ಸ್ಥಾನ ಒಲಿದು ಬಂದಿದೆ.

      ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಹ್ಲಾದ್ ಜೋಶಿ ಅವರು ಕೇಂದ್ರ ಸಚಿವರಾಗುತ್ತಿದ್ದಾರೆ. ಕರ್ನಾಟಕ 25 ಬಿಜೆಪಿ ಸಂಸದರ ಪೈಕಿ ಕೇಂದ್ರ ಸಚಿವರಾಗುತ್ತಿರುವವರಲ್ಲಿ ಜೋಶಿ ಅವರು ಕೂಡಾ ಒಬ್ಬರು. ಹುಬ್ಬಳ್ಳಿ-ಧಾರವಾಡದಲ್ಲಿ ಈಗಾಗಲೇ ಸಂಭ್ರಮ ಮುಗಿಲು ಮುಟ್ಟಿದೆ.

      ಕೇಂದ್ರ ಪೆಟ್ರೋಲಿಂ ಮತ್ತು ನೈಸರ್ಗಿಕ ಅನಿಲ ಸಂಸದೀಯ ಸಮಿತಿ ಅಧ್ಯಕ್ಷರಾಗಿ, ಹಂಗಾಮಿ ಸ್ಫೀಕರ್ ಆಗಿ ಕಾರ್ಯನಿರ್ವಹಣೆ ಮಾಡಿರುವ ಪ್ರಹ್ಲಾದ್ ಜೋಶಿ ಅವರು ಉತ್ತಮ ಸಂಸದೀಯಪಟು. ಇಂಗ್ಲಿಶ್ ಮತ್ತು ಹಿಂದಿ ಭಾಷೆ ಮೇಲೆ ಜೋಶಿ ಅವರಿಗೆ ಹಿಡಿತವಿದೆ.

      Dharwad BJP MP Pralhad Joshi profile

      2019ರ ಲೋಕಸಭಾ ಚುನಾವಣೆಯಲ್ಲಿ 6,84,837 ಮತಗಳನ್ನು ಪಡೆದು ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರನ್ನು 205072 ಮತಗಳ ಅಂತರದಿಂದ ಸೋಲಿಸಿದ್ದಾರೆ.

      ಪ್ರಹ್ಲಾದ್ ಜೋಶಿ ಪರಿಚಯ

      * ಜನನ : 1962 (56 ವರ್ಷ)
      * ತಂದೆ : ವೆಂಕಟೇಶ ಜೋಶಿ, ತಾಯಿ : ಮಾಲತಿಬಾಯಿ
      * ಹುಬ್ಬಳ್ಳಿ ರೈಲ್ವೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ
      * ಹುಬ್ಬಳ್ಳಿ ನ್ಯೂ ಇಂಗ್ಲಿಶ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ
      * ಶ್ರೀ ಕಾಡಸಿದ್ದೇಶ್ವರ ಕಲಾ ವಿದ್ಯಾಲಯದಿಂದ ಬಿಎ ಪದವಿ
      * ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿ ಕೆಲಸ
      * 1992ರಲ್ಲಿ ಜ್ಯೋತಿ ಅವರೊಂದಿಗೆ ವಿವಾಹ
      * 1992ರಲ್ಲಿ ರಾಜಕೀಯ ಪ್ರವೇಶ
      * ಹುಬ್ಬಳ್ಳಿ ಈದ್ಗಾ ಮೈದಾನ ಉಳಿಸಿ ಹೋರಾಟದಲ್ಲಿ ಭಾಗಿ
      * ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಿ ದೇಶದ ಗಮನ ಸೆಳೆದರು
      * ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ
      * 2004, 2009, 2014, 2019ರಲ್ಲಿ ಧಾರವಾಡ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ
      * ಪೆಟ್ರೋಲಿಂ ಮತ್ತು ನೈಸರ್ಗಿಕ ಅನಿಲ ಸಂಸದೀಯ ಸಮಿತಿ ಅಧ್ಯಕ್ಷರಾಗಿ ಕೆಲಸ
      * ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಅನುಭವ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+