ಹೊಂಜು ಗೋಪುರ ಎಂದರೇನು? ಅದರಿಂದಾಗುವ ಪ್ರಯೋಜನಗಳು

ನವದೆಹಲಿ, ಆಗಸ್ಟ್ 23: ದೆಹಲಿಯಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ದೇಶದ ಮೊದಲ ಸ್ಮಾಗ್ ಟವರ್( ಹೊಂಜು ಗೋಪುರ)ಅನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಉದ್ಘಾಟಿಸಿದರು.

ಈ ಟವರ್ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಸೆಕೆಂಡಿಗೆ 1 ಸಾವಿರ ಘನ ಮೀಟರ್‌ನಷ್ಟು ಗಾಳಿ ಶುದ್ಧೀಕರಿಸಲಿದೆ. ಈ ಗಾಳಿ ಶುದ್ಧೀಕರಣ ಯಂತ್ರವನ್ನು ಪ್ರಾಯೀಗಿಕ ಯೋಜನೆ ರೂಪದಲ್ಲಿ ಸ್ಥಾಪಿಸಲಾಗಿದೆ.

ಗಾಳಿ ಶುದ್ಧೀಕರಣ ಯಂತ್ರದ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ಎರಡು ವರ್ಷಗಳ ಪ್ರಾಯೋಗಿಕ ಅಧ್ಯಯನವನ್ನು ನಡೆಸಲಾಗುವುದು ಎಂದು ಈ ಹಿಂದೆ ಅಧಿಕಾರಿಗಳು ತಿಳಿಸಿದ್ದರು.

Delhi Gets Smog Tower All you Need To Know About It

ಈ ಟವರ್ ಕಾರ್ಯಕ್ಷಮತೆ ಮೇಲೆ ನಿಗಾ ವಹಿಸಲು ನಿಯಂತ್ರಣ ಕೊಠಿಯನ್ನು ಸ್ಥಾಪಿಸಲಾಗಿದೆ. ಒಂದು ತಿಂಗಳೊಳಗೆ ಆರಂಭಿಕ ಗುಣಲಕ್ಷಣಗಳು ಲಭ್ಯವಾಗಲಿದೆ. ಈ ಯೋಜನೆ ಯಶಸ್ವಿಯಾದರೆ, ದೆಹಲಿಯ ಇತರೆ ಭಾಗಗಳಲ್ಲೂ ಸ್ಮಾಗ್ ಟವರ್ ಅನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ರಾಜಧಾನಿ ದೆಹಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯದಿಂದಾಗಿ ತುರ್ತು ಪರಿಸ್ಥಿತಿ ಇದೆ. ಜನರು ಮನೆಯಿಂದ ಹೊರಬರಲು ಕಷ್ಟಪಡುತ್ತಿದ್ದಾರೆ. ಎಲ್ಲರಿಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ.

ಸ್ಮಾಗ್ ಟವರ್ ಎಂದರೇನು?: ಸರಳವಾಗಿ ಹೇಳುವುದಾದರೆ, ಸ್ಮಾಗ್ ಟವರ್ ಎಂಬುದು ಗಾಳಿ ಶುದ್ಧೀಕರಣ ಘಟಕವಾಗಿದೆ. ಇದು ಕಲುಷಿತ ಗಾಳಿ ಅಥವಾ ಅದರ ಕಣಗಳನ್ನು ಸುತ್ತಮುತ್ತಲಿನಿಂದ ಹೀರಿಕೊಳ್ಳುತ್ತದೆ. ನಂತರ ಪರಿಸರಕ್ಕೆ ಶುದ್ಧ ಗಾಳಿಯನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯ ಹೋಂ ಪ್ಯೂರಿಫೈಯರ್‌ಗಳಂತೆ ವಿದ್ಯುತ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇವುಗಳನ್ನು ಸೌರಶಕ್ತಿಯಿಂದಲೂ ನಡೆಸಬಹುದು.

ಯಾವ ಪ್ರಮಾಣದಲ್ಲಿ ಗಾಳಿಯನ್ನು ಶುದ್ಧಗೊಳಿಸುತ್ತದೆ: ಇದು ಗಾಳಿ ಶುದ್ಧೀಕರಣ ಘಟಕದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. 2016ರಲ್ಲಿ ಚೀನಾದಲ್ಲಿ ಅಳವಡಿಸಲಾದ ಏರ್ ಪ್ಯೂರುಫೈಯರ್‌ಗಳು ಏಳು ಮೀಟರ್ ಉದ್ದವಿತ್ತು. ಇದು ಒಂದು ಗಂಟೆಯಲ್ಲಿ 29,000 ಎಂ3 ಗಾಳಿಯನ್ನು ಸ್ವಚ್ಛಗೊಳಿಸುತ್ತಿತ್ತು.

Delhi Gets Smog Tower All you Need To Know About It

ಇದರ ನಂತರ 100 ಮೀಟರ್ ಘಟಕವನ್ನು ಚೀನಾದಲ್ಲಿ ಸ್ಥಾಪಿಸಲಾಯಿತು. ಇದು ಪ್ರತಿದಿನ ಬೇಸಿಗೆಯಲ್ಲಿ 16 ಮಿಲಿಯನ್ ಎಂ3 ಗಾಳಿಯನ್ನು ಸ್ವಚ್ಛಗೊಳಿಸುತ್ತಿದೆ ಎಂದು ಹೇಳಲಾಗಿದೆ. ಚಳಿಗಾಲದಲ್ಲಿ ಈ ಅಂಕಿ 8 ಮಿಲಿಯನ್ ಎಂ3 ಆಗಿದೆ.

ದೆಹಲಿ ಮೂಲದ ಸ್ಮಾರ್ಟಪ್ 20 ಅಡಿ ಎತ್ತರದ ಏರ್ ಪ್ಯೂರಿಫೈಯರ್ ತಯಾರಿಸಿದೆ. ಫಾಗ್ ಟವರ್‌ಗಳು ದೊಡ್ಡ ಪ್ರಮಾಣದಲ್ಲಿ ಶುದ್ಧಿಕಾರಕಗಳಾಗಿ ಕೆಲಸ ಮಾಡುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಗಾಳಿಯನ್ನು ಹೀರುವಂತೆ ಮಾಡಲು ತಳದಲ್ಲಿ ಅನೇಕ ಪದರಗಳ ಏರ್ ಫಿಲ್ಟರ್‌ಗಳು ಹಾಗೂ ಫ್ಯಾನ್‌ಗಳನ್ನು ಅಳವಡಿಸಲಾಗಿದೆ.

ಕಲುಷಿತ ಗಾಳಿಯು ಘಟಕದೊಳಗೆ ಪ್ರವೇಶಿಸಿ ನಂತರ ಅದನ್ನು ವಾತಾವರಣಕ್ಕೆ ಪುನಃ ಪ್ರಸಾರ ಮಾಡುವ ಮೊದಲು ಅದನ್ನು ಬಹು ಪದರಗಳಿಂದ ಶುದ್ಧೀಕರಿಸಲಾಗುತ್ತದೆ.
ಘಟಕವನ್ನು 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಮಳೆಗಾಲದ ಬಳಿಕ ಇದು ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುತ್ತದೆ.

ಕನ್ನಾಟ್ ಪ್ಲೇಸ್‌ನಲ್ಲಿರುವ ಶಿವಾಜಿ ಸ್ಟೇಡಿಯಂ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿರುವ ಈ ಗೋಪುರವನ್ನು 24.2 ಮೀಟರ್ ಎತ್ತರದಲ್ಲಿದೆ.

ಎರಡು ವರ್ಷಗಳ ಕಾರ್ಯಾಚರಣೆಯ ವೆಚ್ಚ ಸೇರಿದಂತೆ ಒಟ್ಟು ಯೋಜನಾ ವೆಚ್ಚ ಸುಮಾರು ರೂ. 20 ಕೋಟಿ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ (ಡಿಪಿಸಿಸಿ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಪಿಸಿಸಿ, ಗೋಪುರದ ನೋಡಲ್ ಏಜೆನ್ಸಿಯಾಗಿದೆ.

Delhi Gets Smog Tower All you Need To Know About It

ಈ ಗೋಪುರ ನಗರ ಪ್ರದೇಶಗಳಲ್ಲಿನ ವಾಯು ಮಾಲಿನ್ಯದ ಕಡಿತವನ್ನು 'ಏರ್ ಕ್ಲೀನಿಂಗ್' ಮೂಲಕ ಮೌಲ್ಯಮಾಪನ ಮಾಡಲು ಪ್ರಾಯೋಗಿಕ ಅಧ್ಯಯನವನ್ನು ರೂಪಿಸಿದೆ. ಎರಡು ವರ್ಷಗಳ ಅವಧಿಯ ಪ್ರಾಯೋಗಿಕ ಅಧ್ಯಯನವನ್ನು ಐಐಟಿ ದೆಹಲಿ ಮತ್ತು ಐಐಟಿ ಬಾಂಬೆ ನಡೆಸುತ್ತದೆ. ಎರಡು ಸಂಸ್ಥೆಗಳು ಯೋಜನೆಗೆ ತಾಂತ್ರಿಕ ಸಲಹೆಗಾರರಾಗಿದ್ದಾರೆ.

ಟವರ್​​ನ ಕೆಳಭಾಗದಲ್ಲಿ ಒಟ್ಟು 40 ಫ್ಯಾನ್ ಗಳನ್ನು ಅಳವಡಿಸಲಾಗಿದೆ. ಗೋಪುರದ ಮೇಲ್ಭಾಗದಿಂದ ಗಾಳಿಯನ್ನು ಹೀರಿಕೊಳ್ಳಲಾಗುತ್ತದೆ, ಫಿಲ್ಟರ್ ಮಾಡಿ ಮತ್ತು ಕೆಳಭಾಗದಲ್ಲಿರುವ ಫ್ಯಾನ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಪ್ರಾಯೋಗಿಕ ಅಧ್ಯಯನದ ಪ್ರವೃತ್ತಿಗಳು ಒಂದು ತಿಂಗಳಲ್ಲಿ ಲಭ್ಯವಾಗಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+