• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಮಾರಾಟ; ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ!

|
Google Oneindia Kannada News

ಒಂದಿಲ್ಲೊಂದು ವಿಚಾರಕ್ಕೆ ರಾಜ್ಯದಲ್ಲಿ ಸದಾ ಸುದ್ದಿಯಲ್ಲಿರುವ ಬುದ್ದಿವಂತರ ಜಿಲ್ಲೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ ಈ ಬಾರಿ 'ಎಣ್ಣೆ' ವಿಚಾರಕ್ಕೆ ಸುದ್ದಿಯಾಗಿದೆ. ಹೌದು ಇಡೀ ರಾಜ್ಯದಲ್ಲೇ ಮದ್ಯ ಮಾರಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನದಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 2.2 ಕೋಟಿ ಲೀಟರ್ ಮದ್ಯ ಮಾರಾಟವಾಗುತ್ತಿದೆ. ಅಂದರೆ ಪ್ರತಿ ದಿನ ಸುಮಾರು 60,000 ಸಾವಿರ ಲೀಟರ್ ಮದ್ಯ ಜಿಲ್ಲೆಯೊಂದರಲ್ಲೇ ಮಾರಾಟವಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 1.4 ಕೋಟಿ ಲೀಟರ್ ಬಿಯರ್ ಮಾರಾಟವಾಗುತ್ತಿದೆ.

ಕುಡುಕರು ಖುಷಿಪಡುವ ಸುದ್ದಿ: ಬಿಯರ್ ಕುಡಿದರೆ ಮಧುಮೇಹ, ಬೊಜ್ಜು, ಕರುಳಿನ ಸಮಸ್ಯೆ ಮಾಯ!ಕುಡುಕರು ಖುಷಿಪಡುವ ಸುದ್ದಿ: ಬಿಯರ್ ಕುಡಿದರೆ ಮಧುಮೇಹ, ಬೊಜ್ಜು, ಕರುಳಿನ ಸಮಸ್ಯೆ ಮಾಯ!

ಅಬಕಾರಿ ಇಲಾಖೆಯಿಂದ ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಸರಾಸರಿ 25 ಲಕ್ಷ ಬಾಕ್ಸ್‌ ಮದ್ಯವನ್ನು ಮಾರಾಟ ಮಾಡಲಾಗಿದೆ. ಇಲಾಖೆಯ ಪ್ರಮಾಣಿತ ಮಾಪನ ನಿಯಮಗಳ ಪ್ರಕಾರ, ಪ್ರತಿ ಬಾಕ್ಸ್‌ನಲ್ಲಿ 8.6 ಲೀಟರ್ ಮದ್ಯವನ್ನು ಹೊಂದಿರುತ್ತದೆ.

ಒಂದು ಬಿಯರ್ ಬಾಕ್ಸ್‌ನಲ್ಲಿ ಸುಮಾರು 7.8 ಲೀಟರ್ ಬಿಯರ್ ಇರುತ್ತದೆ. ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 18 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟದಿಂದ 370 ಕೋಟಿ ರುಪಾಯಿ ಆದಾಯ ಬಂದಿದೆ.

ಕೇರಳ ರಾಜ್ಯದವರಿಂದ ಮದ್ಯ ಖರೀದಿ; ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ 180 ಎಂ.ಎಲ್‌.ನ ಸ್ಯಾಚೆಟ್ ಅಥವಾ ಬಾಟಲಿಗಳು ಅತಿ ಹೆಚ್ಚು ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತೆ ಬಿಂದುಶ್ರೀ ಮಾಹಿತಿ ನೀಡಿದ್ದಾರೆ.

ಕೇರಳದವರು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ಮದ್ಯವನ್ನು ಖರೀದಿಸುತ್ತಾರೆ. "ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಮಾರಾಟವು ಕಡಿಮೆಯಾಗಿದೆ, ಇನ್ನೂ ಮದ್ಯ ಮಾರಾಟದಲ್ಲಿ ಚೇತರಿಕೆ ಕಾಣಬೇಕಾಗಿದೆ" ಎಂದು ಬಿಂದುಶ್ರೀ ಹೇಳಿದರು.

Dakshina Kannada District Top In Consumption Of Alcohol In State

ಮದ್ಯ ಮಾರಾಟದಲ್ಲಿ ಹೆಚ್ಚಳ; ಕಳೆದ ಐದು ವರ್ಷಗಳಲ್ಲಿ, ಮದ್ಯದ ಅಂಗಡಿಗಳ ಸಂಖ್ಯೆಯು 463 ರಿಂದ 2022 ರಲ್ಲಿ 520 ದಾಟಿದೆ. 2017-2018 ರ ಆರ್ಥಿಕ ವರ್ಷದಿಂದ ಮದ್ಯದ ಮಾರಾಟವು ಸ್ಥಿರವಾಗಿದೆ. ಅಲ್ಲಿ 2020-21 ರವರೆಗೆ ವಾರ್ಷಿಕವಾಗಿ ಸರಾಸರಿ 25 ಲಕ್ಷ ಬಾಕ್ಸ್ ಮಾರಾಟವಾಗಿವೆ. ಅದರ ನಂತರ ಕೋವಿಡ್-19 ಪರಿಣಾಮ ಲಾಕ್‌ಡೌನ್ ಮತ್ತು ಮದ್ಯದ ಅಂಗಡಿಗಳ ಮುಚ್ಚುವಿಕೆಯಿಂದಾಗಿ ಇದು 22 ಲಕ್ಷ ಬಾಕ್ಸ್‌ಗಳಿಗೆ ಕಡಿಮೆಯಾಗಿದೆ.

2021-22ನೇ ಹಣಕಾಸು ವರ್ಷದಲ್ಲಿ ಇದು 27 ಲಕ್ಷ ಬಾಕ್ಸ್‌ಗಳಿಗೆ ಏರಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ, 2021-22ರ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟದಿಂದ ಬರುವ ಆದಾಯವು 285 ಕೋಟಿ ರು.ಗಳಿಂದ 370 ಕೋಟಿ ರುಪಾಯಿಗೆ ಏರಿಕೆಯಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ.

ಅಗ್ಗದ ದರದ ಮದ್ಯ ಖರೀದಿ ಹೆಚ್ಚು; ಮದ್ಯದ ಅಂಗಡಿ ಮಾಲೀಕರೊಬ್ಬರ ಹೇಳಿಕೆಯ ಪ್ರಕಾರ, "ದಕ್ಷಿಣ ಕನ್ನಡದಲ್ಲಿ ಸೇವಿಸುವ ಸುಮಾರು ಶೇಕಡ 85 ರಷ್ಟು ಮದ್ಯವು ಅಗ್ಗದ ದರದ ವಿಭಾಗದಲ್ಲಿ ಬರುತ್ತದೆ. ಕೇವಲ ಶೇಕಡ 3 ಮಾತ್ರ, ಪ್ರೀಮಿಯಂ, ಡೀಲಕ್ಸ್, ಸ್ಕಾಚ್ ಮತ್ತು ಸಿಂಗಲ್ ಮಾಲ್ಟ್ ಮದ್ಯವನ್ನು ಸೇವಿಸಲಾಗುತ್ತದೆ. ಮಾರಾಟದ ವಿಷಯಕ್ಕೆ ಬಂದರೆ, ಏಪ್ರಿಲ್, ಮೇ ಮತ್ತು ಡಿಸೆಂಬರ್‌ಗಳಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗುತ್ತದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮದ್ಯ ಮಾರಾಟ ಪ್ರಮಾಣ ಕಡಿಮೆ ಇರುತ್ತದೆ" ಎಂದು ಹೇಳಿದ್ದಾರೆ.

Recommended Video

   Jaggesh ಮೋದಿಯವರನ್ನೇ ಲಾಂಛನದ ಸಿಂಹಕ್ಕೆ ಹೋಲಿಸಿದ್ದಾರೆ | *Politics | OneIndia Kannada
   English summary
   Dakshina Kannada is one among the top districts in the state, in the consumption of alcohol. This fiscal year’s district income, from the sale of liquor, is Rs 370 crore. Bindushree P, deputy commissioner, excise department Gives Details.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X