ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಘಾತದ ಮುನ್ನ ಸೈರಸ್ ಮಿಸ್ತ್ರಿಯ ಮರ್ಸಿಡಿಸ್-ಬೆನ್ಜ್ ಕಾರು ಎಷ್ಟು ವೇಗವಾಗಿ ಚಲಿಸುತ್ತಿತ್ತು?

|
Google Oneindia Kannada News

ಪಾಲ್ಘರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ಬೆಂಜ್ ಪಂಪನಿಯು ಪೊಲೀಸರಿಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಅಪಘಾತಕ್ಕೂ ಮುನ್ನ ಮಿಸ್ತ್ರಿ ಅವರ ಕಾರು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಮರ್ಸಿಡಿಸ್ ಹೇಳಿದೆ. ಕಾರ್ ಡ್ರೈವ್‌ ಮಾಡುತ್ತಿದ್ದ ಡಾ. ಅನಾಹಿತಾ ಪಾಂಡೋಲೆ ಅವರು ಡಿವೈಡರ್‌ಗೆ ಡಿಕ್ಕಿ ಹೊಡೆಯುವ ಐದು ಸೆಕೆಂಡುಗಳ ಮೊದಲು ಬ್ರೇಕ್ ಹಾಕಿದರು. ಈ ಬ್ರೇಕಿಂಗ್ ನಂತರ ಕಾರಿನ ವೇಗ ಗಂಟೆಗೆ 89 ಕಿ.ಮೀ. ಕ್ರಮೇಣ ಕಡಿಮೆ ಆಗಿದೆ ಆಗ ಡಿವೈಡರ್‌ಗೆ ಡಿಕ್ಕಿಯಾಗಿದೆ.

ಜೆಜೆ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಸೈರಸ್ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ದೇಹದಲ್ಲಿ ಹಲವಾರು ಗಂಭೀರ ಗಾಯಗಳಿವೆ. ಆತನ ಎದೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿರಬಹುದು. ವರದಿಯ ಪ್ರಕಾರ, ಅಪಘಾತವು ಎಷ್ಟು ಭೀಕರವಾಗಿದೆಯೆಂದರೆ ಅವರ ರಕ್ತನಾಳಗಳು ಸಹ ಹರಿದುಹೋಗಿವೆ ಮತ್ತು ದೇಹದೊಳಗೆ ಸಾಕಷ್ಟು ರಕ್ತ ಚೆಲ್ಲಿದೆ. ಮಿಸ್ತ್ರಿ ಮತ್ತು ಪಾಂಡೋಲೆ ಅವರ ದೇಹದ ಮೇಲೆ ಕಾರಿನ ಚಲನೆಯಿಂದಾಗಿ ಘರ್ಷಣೆಯ ಪರಿಣಾಮವು ಹಠಾತ್ ಮತ್ತು ಪ್ರಚಂಡವಾಗಿತ್ತು. ಇದರಿಂದಾಗಿ ಅನೇಕ ಗಾಯಗಳು ಮತ್ತು ಎದೆಗೆ ತೀವ್ರ ಹಾನಿಯಾಗಿದೆ. ವಿವರವಾದ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಸೈರಸ್ ಮಿಸ್ತ್ರಿ ವಿಶ್ವದ ಸುರಕ್ಷಿತ ಕಾರಿನಲ್ಲಿದ್ದರು! 7 ಏರ್‌ಬ್ಯಾಗ್‌, 5 ಸ್ಟಾರ್ ರೇಟಿಂಗ್, ಏನಿದರ ರಹಸ್ಯ?ಸೈರಸ್ ಮಿಸ್ತ್ರಿ ವಿಶ್ವದ ಸುರಕ್ಷಿತ ಕಾರಿನಲ್ಲಿದ್ದರು! 7 ಏರ್‌ಬ್ಯಾಗ್‌, 5 ಸ್ಟಾರ್ ರೇಟಿಂಗ್, ಏನಿದರ ರಹಸ್ಯ?

 ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ದರೆ 1000 ರೂಪಾಯಿ ದಂಡ?

ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ದರೆ 1000 ರೂಪಾಯಿ ದಂಡ?

ಈ ವೇಳೆ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಹಾಂಕಾಂಗ್‌ನಿಂದ ಮರ್ಸಿಡಿಸ್ ಬೆಂಜ್ ತಜ್ಞರ ತಂಡ ಭಾರತಕ್ಕೆ ಬರಲಿದೆ. ಸೆಪ್ಟೆಂಬರ್ 12ರಂದು, ಈ ತಂಡವು ಅಪಘಾತದ ಕಾರಣವನ್ನು ತಿಳಿಯಲು ಕಾರನ್ನು ತನಿಖೆ ಮಾಡಬಹುದು. ಕಂಪನಿಯು ಕಾರಿನಲ್ಲಿರುವ ಚಿಪ್ ಅನ್ನು ವಿಶ್ಲೇಷಣೆಗಾಗಿ ಜರ್ಮನಿಗೆ ಕಳುಹಿಸಿದೆ. ಅದೇ ಸಮಯದಲ್ಲಿ, RTO ತನ್ನ ವರದಿಯನ್ನು ಪಾಲ್ಘರ್ ಪೊಲೀಸರಿಗೆ ನೀಡಿದೆ. ಈಗ ಹಿಂಬದಿ ಸೀಟಿನಲ್ಲಿ ಬೆಲ್ಟ್ ಕಡ್ಡಾಯ, ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ! ಚರ್ಚೆಯು ಜೋರಾಗಿದೆ.

ಅಪಘಾತದ ವೇಳೆ ಕಾರಿನ ನಾಲ್ಕು ಏರ್‌ಬ್ಯಾಗ್‌ಗಳು ತೆರೆದಿದ್ದವು ಎಂದು ಆರ್‌ಟಿಒ ತಿಳಿಸಿದ್ದಾರೆ. ಇವುಗಳಲ್ಲಿ ಚಾಲಕ ಡಾ.ಅನಾಹಿತಾ ಮೂರು ಏರ್ ಬ್ಯಾಗ್‌ನಿಂದ ರಕ್ಷಣೆ ಪಡೆದರು. ಮುಂದೆ ಎರಡನೇ ಸೀಟಿನಲ್ಲಿ ಕುಳಿತಿದ್ದ ಡೇರಿಯಸ್ ಎದುರಿನ ಏರ್ ಬ್ಯಾಗ್ ಕೂಡ ತೆರೆದುಕೊಂಡಿತ್ತು. ವೈದ್ಯರು ಮತ್ತು ಅವರ ಪತಿ ಡೇರಿಯಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಟಾಟಾ ಗ್ರೂಪ್‌ನ ಮಾಜಿ ಮುಖ್ಯಸ್ಥ ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಸಾವನ್ನಪ್ಪಿದ್ದಾರೆ. ಮಿಸ್ತ್ರಿ ಅವರು ನಿರ್ಮಾಣ ಉದ್ಯಮದ ದಿಗ್ಗಜ ಶಾಪೂರ್ಜಿ ಪಲ್ಲೊಂಜಿ (ಎಸ್‌ಪಿ) ನೇತೃತ್ವ ವಹಿಸಿದ್ದರು.

 ಜರ್ಮನಿಯ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆನ್ಜ್

ಜರ್ಮನಿಯ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆನ್ಜ್

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಅಪಘಾತಕ್ಕೀಡಾದ ಕಾರಿನ ಬಗ್ಗೆ ಜರ್ಮನಿಯ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆನ್ಜ್ ತಂಡ ಮಂಗಳವಾರ ಡೇಟಾವನ್ನು ಸಂಗ್ರಹಿಸಿದೆ. ಸಂಪೂರ್ಣ ಡೇಟಾ ಚಿಪ್ ಅನ್ನು ಈಗ ಜರ್ಮನಿಗೆ ಕಳುಹಿಸಲಾಗುವುದು ಅಲ್ಲಿ ಅಪಘಾತದ ಕಾರಣವನ್ನು ತನಿಖೆ ಮಾಡಲಾಗುತ್ತದೆ. ಏತನ್ಮಧ್ಯೆ, ಕಾರು ಅಪಘಾತಕ್ಕೆ ತಾಂತ್ರಿಕ ದೋಷವೇ ಕಾರಣವೇ ಎಂಬುದರ ಬಗ್ಗೆ ಮುಂಬೈ ಪೊಲೀಸರು ಮರ್ಸಿಡಿಸ್‌ನಿಂದ ವರದಿಯನ್ನು ಕೇಳಿದ್ದಾರೆ.

 ಸೆಂಟ್ರಲ್ ವೆಹಿಕಲ್ ಆಕ್ಟ್ ಸೆಕ್ಷನ್ 138

ಸೆಂಟ್ರಲ್ ವೆಹಿಕಲ್ ಆಕ್ಟ್ ಸೆಕ್ಷನ್ 138

ಸೆಂಟ್ರಲ್ ವೆಹಿಕಲ್ ಆಕ್ಟ್ ಸೆಕ್ಷನ್ 138 ಉಪ-ವಿಭಾಗ 3ರ ಅಡಿಯಲ್ಲಿ, ಹಿಂಬದಿ ಕುಳಿತವರು ಸೀಟ್ ಬೆಲ್ಟ್ ಧರಿಸುವುದನ್ನು ಅಕ್ಟೋಬರ್ 2002ರಿಂದ ಕಡ್ಡಾಯಗೊಳಿಸಲಾಗಿದೆ. ಯಾರಾದರೂ ಇದನ್ನು ಮಾಡದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು 1000 ರೂಪಾಯಿ ದಂಡ ವಿಧಿಸಬಹುದು. ಈ ಚರ್ಚೆ ಶುರುವಾದಾಗ ಈ ವಿಷಯ ನಿಯಮಗಳ ಪುಸ್ತಕದಿಂದ ಹೊರಬಿದ್ದು ಸಾರ್ವಜನಿಕವಾಗುತ್ತಿದೆ, ಇಲ್ಲವಾದರೆ ಈ ಸಂದರ್ಭದ ಅರಿವಿದ್ದವರು ಬಹಳ ಕಡಿಮೆ.

 8 ಆಸನಗಳ ವಾಹನಗಳಲ್ಲಿ ಆರು ಏರ್‌ಬ್ಯಾಗ್‌ಗಳ ಅಗತ್ಯ

8 ಆಸನಗಳ ವಾಹನಗಳಲ್ಲಿ ಆರು ಏರ್‌ಬ್ಯಾಗ್‌ಗಳ ಅಗತ್ಯ

ಅಕ್ಟೋಬರ್‌ನಿಂದ ಎಂಟು ಆಸನಗಳ ವಾಹನಗಳಿಗೆ ತಯಾರಕರು ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಸಂಬಂಧ ಕರಡು ಅಧಿಸೂಚನೆಯನ್ನು ಜನವರಿ 14, 2022ರಂದು ಹೊರಡಿಸಲಾಗಿದೆ. ಸೈರಸ್ ಮಿಸ್ತ್ರಿ ನಿಧನದ ನಂತರ ಹಿಂಬದಿ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಅಲಾರಾಂ ವ್ಯವಸ್ಥೆ ಇರಬೇಕೆಂದು ನಿರ್ಧರಿಸಿದ್ದೇವೆ ಎಂದು ಗಡ್ಕರಿ ಮಂಗಳವಾರ ಹೇಳಿದ್ದಾರೆ. ರಸ್ತೆ ಸಚಿವಾಲಯದ ವರದಿಯ ಪ್ರಕಾರ, 2020ರಲ್ಲಿ 15,146 ಜನರು ಸಾವನ್ನಪ್ಪಿದ್ದಾರೆ ಮತ್ತು 39,102 ಜನರು ಸೀಟ್ ಬೆಲ್ಟ್ ಧರಿಸದ ಕಾರಣ ರಸ್ತೆ ಅಪಘಾತಗಳಲ್ಲಿ ಗಾಯಗೊಂಡಿದ್ದಾರೆ.

English summary
Cyrus Mistry accident: Mercedes was speeding at 100kmph 5 seconds before crash Check here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X