ಮೂರನೇ ಅಲೆ: ಹಿಂದೆಂದಿಗಿಂತಲೂ ತೀವ್ರವಾಗಿ ಹರಡಲಿದೆ ಕೊರೊನಾ!

ನವದೆಹಲಿ, ಜನವರಿ 05: ಭಾರತವು ಪ್ರಸ್ತುತ ಕೊರೊನಾ ವೈರಸ್‌ನ ಮೂರನೇ ಅಲೆಯನ್ನು ಎದುರಿಸುತ್ತಿದೆ ಹಾಗೂ ಹಿಂದೆಂದಿಗಿಂತಲೂ ತೀವ್ರವಾಗಿ ಕೊರೊನಾ ವೈರಸ್‌ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಭಾರತದ ಕೊರೊನಾ ಲಸಿಕೆ ಕಾರ್ಯಪಡೆ ಮುಖ್ಯಸ್ಥ ಡಾ. ಎನ್‌ಕೆ ಅರೋರಾ ಹೇಳಿದ್ದಾರೆ.

ನ್ಯೂಸ್‌ 18 ಡಾ. ಎನ್‌ಕೆ ಅರೋರಾರ ಜೊತೆ ನಡೆಸಿದ ಸಂವಾದದಲ್ಲಿ ಈ ಹೇಳಿಕೆಯನ್ನು ಎನ್‌ಕೆ ಅರೋರಾ ನೀಡಿದ್ದಾರೆ. ಓಮಿಕ್ರಾನ್‌ ರೂಪಾಂತರದ ಹಿನ್ನೆಲೆ ದೇಶದಲ್ಲಿ ಹೆಚ್ಚುತ್ತಿರುವ ಆತಂಕದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆಯೇ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಇದು ಕೋವಿಡ್‌ನ ಮೂರನೇ ಅಲೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಎನ್‌ಕೆ ಅರೋರಾ, "ಖಂಡಿತವಾಗಿ ಇದು ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯಾಗಿದೆ. ಕಳೆದ ವಾರದಲ್ಲಿ ಕೋವಿಡ್‌ನ ಹೊಸ ಪ್ರಕರಣಗಳು ಏರಿಕೆ ಕಂಡಿದೆ. ಈ ನಡುವೆ ಓಮಿಕ್ರಾನ್‌ ಪ್ರಕರಣಗಳು ಕೂಡಾ ಹೆಚ್ಚಾಗಿದೆ," ಎಂದು ತಿಳಿಸಿದ್ದಾರೆ.

 ಈ ಮೂರನೇ ಅಲೆ ಎಷ್ಟು ಸಮಯದವರೆಗೆ ಇರಲಿದೆ?

ಈ ಮೂರನೇ ಅಲೆ ಎಷ್ಟು ಸಮಯದವರೆಗೆ ಇರಲಿದೆ?

ದೇಶದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆ ಆಗುತ್ತಿದೆ. ಇದನ್ನು ನೋಡಿದಾಗ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯು ಈಗಾಗಲೇ ಆರಂಭವಾಗಿದೆ ಎಂಬುವುದು ಸ್ಪಷ್ಟವಾಗಿದೆ ಎಂದು ಹೇಳಿದ ಭಾರತದ ಕೊರೊನಾ ಲಸಿಕೆ ಕಾರ್ಯಪಡೆ ಮುಖ್ಯಸ್ಥ ಡಾ. ಎನ್‌ಕೆ ಅರೋರಾ ಈ ವೇಳೆಯೇ ಕೋವಿಡ್‌ ಮೂರನೇ ಅಲೆಯು ಎಷ್ಟು ಸಮಯದವರೆಗೆ ಇರಲಿದೆ ಎಂಬುವುದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಕೋವಿಡ್‌ ಮೂರನೇ ಅಲೆಯು ಎಷ್ಟು ಸಮಯದವರೆಗೆ ಇರಲಿದೆ ಎಂದು ನಾವು ಹೇಳುವುದು ಕಷ್ಟ. ಆದರೆ ಹಿಂದೆಂದಿಗಿಂತಲೂ ತೀವ್ರವಾಗಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಹರಡಲಿದೆ," ಎಂದು ಹೇಳಿದ್ದಾರೆ.

 ಮೂರನೇ ಅಲೆಯಲ್ಲಿ ದಿನಕ್ಕೆ ಎಷ್ಟು ಕೋವಿಡ್ ಪ್ರಕರಣ ದಾಖಲು?

ಮೂರನೇ ಅಲೆಯಲ್ಲಿ ದಿನಕ್ಕೆ ಎಷ್ಟು ಕೋವಿಡ್ ಪ್ರಕರಣ ದಾಖಲು?

ಎರಡನೇ ಕೋವಿಡ್‌ ಅಲೆಯ ಸಂದರ್ಭದಲ್ಲಿ ದಿನಕ್ಕೆ ಸುಮಾರು ನಾಲ್ಕು ಲಕ್ಷದಷ್ಟು ಕೋವಿಡ್‌ ಪ್ರಕರಣಗಳು ವರದಿ ಆಗುತ್ತಿದ್ದವು. ಆದರೆ ಈ ಮೂರನೇ ಅಲೆಯ ಸಂದರ್ಭದಲ್ಲಿ ಪರಿಸ್ಥಿತಿ ಹೇಗೆ ಇರಲಿದೆ ಎಂಬ ಬಗ್ಗೆಯೂ ಅರೋರಾ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರತಿ ದಿನ ಎಷ್ಟು ಕೋವಿಡ್‌ ಪ್ರಕರಣಗಳು ದಾಖಲು ಆಗಲಿದೆ ಎಂದು ಹೇಳುವುದು ಕಷ್ಟ. ಉತ್ತರ ಕೊರಿಯಾದಲ್ಲಿ ಪ್ರತಿ ದಿನ ಸುಮಾರು ಹತ್ತು ಲಕ್ಷ ಕೋವಿಡ್ ಪ್ರಕರಣಗಳು ವರದಿ ಆಗುತ್ತಿದೆ. ಇನ್ನು ಫ್ರಾನ್ಸ್‌ನಲ್ಲಿ ದಿನಕ್ಕೆ 2.5 ಲಕ್ಷ ಕೋವಿಡ್‌ ಪ್ರಕರಣಗಳು ವರದಿ ಆಗುತ್ತಿದೆ. ಇನ್ನು ಸ್ವಿಜರ್‌ಲ್ಯಾಂಡ್‌ನಲ್ಲಿ ಸುಮಾರು 20,000 ದೈನಂದಿನ ಪ್ರಕರಣಗಳು ವರದಿ ಆಗುತ್ತಿದೆ. ಹಾಗಿರುವಾಗ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ," ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 ಕೋವಿಡ್‌ ಸಾವಿಗೆ ಇನ್ನೂ ಕೂಡಾ ಡೆಲ್ಟಾ ಕಾರಣವಾಗುತ್ತಾ?

ಕೋವಿಡ್‌ ಸಾವಿಗೆ ಇನ್ನೂ ಕೂಡಾ ಡೆಲ್ಟಾ ಕಾರಣವಾಗುತ್ತಾ?

ಇನ್ನು ಈ ಹಿಂದೆ ಭಾರತದಲ್ಲಿ ಮೊದಲು ಕಾಣಿಸಿಕೊಂಡು ವಿಶ್ವದೆಲ್ಲೆಡೆ ಎಚ್ಚರಿಕೆಯನ್ನು ಹುಟ್ಟಿಸಿದ ಕೊರೊನಾ ವೈರಸ್‌ನ ರೂಪಾಂತರ ಡೆಲ್ಟಾದಿಂದಾಗಿ ಈಗಲೂ ಸಾವುಗಳು ಸಂಭವಿಸುತ್ತದೆಯೇ ಎಂಬ ಪ್ರಶ್ನೆಗೂ ಅರೋರಾ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಪ್ರಸ್ತುತ ಡೆಲ್ಟಾ ಅಥವಾ ಡೆಲ್ಟಾ ಪ್ಲಸ್‌ನಿಂದಾಗಿ ಕೋವಿಡ್‌ ಸಾವುಗಳು ಸಂಭವಿಸುತ್ತಿದೆ. ಈವರೆಗೂ ಓಮಿಕ್ರಾನ್‌ ರೂಪಾಂತರದಿಂದಾಗಿ ಅಧಿಕ ಕೋವಿಡ್‌ ಸಾವುಗಳು ಸಂಭವಿಸಿಲ್ಲ," ಎಂದು ಸ್ಪಷ್ಪಪಡಿಸಿದ್ದಾರೆ. "ಓಮಿಕ್ರಾನ್‌ ಹೆಚ್ಚಳವಾದ ಬಳಿಕ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯು ಅಧಿಕವಾಗಿದೆ. ಆದರೆ ಸುಮಾರು ಶೇಕಡ 90-95ರಿಂದ ಬೆಡ್‌ಗಳು ಖಾಲಿಯಾಗಿದೆ. ಈ ಬಾರಿ ಹೆಚ್ಚಿನ ಜನರಲ್ಲಿ ಯಾವುದೇ ಸೋಂಕು ಲಕ್ಷಣಗಳು ಕಂಡು ಬಂದಿಲ್ಲ. ಈ ಓಮಿಕ್ರಾನ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇಲ್ಲ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.

 ಮತ್ತೆ ಲಾಕ್‌ಡೌನ್‌ ಆಗುತ್ತಾ?

ಮತ್ತೆ ಲಾಕ್‌ಡೌನ್‌ ಆಗುತ್ತಾ?

ಇನ್ನು ಈ ಮೂರನೇ ಅಲೆಯ ಸಂದರ್ಭದಲ್ಲಿ ಮತ್ತೆ ಲಾಕ್‌ಡೌನ್‌ ಆಗಲಿದೆಯೇ ಎಂಬ ಪ್ರಶ್ನೆಯೂ ಕೂಡಾ ಹಲವರಲ್ಲಿ ಹುಟ್ಟಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಎನ್‌ಕೆ ಅರೋರಾ, "ಲಾಕ್‌ಡೌನ್‌ ಮಾಡುವುದು ಉತ್ತಮ ಆಯ್ಕೆ ಆಗಿದೆ. ಇದರ ಬದಲಾಗಿ ಕಂಟೈನ್‌ಮೆಂಟ್‌ ಝೋನ್‌ ಅನ್ನು ಮಾಡಬಹುದು. ಹಾಗೆಯೇ ಬೇರೆ ಅಗತ್ಯ ಕ್ರಮಗಳನ್ನು ಕೂಡಾ ಕೈಗೊಳ್ಳಬೇಕಾಗಿದೆ," ಎಂದು ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+