ಕೋವಿಡ್ 19: ತಾಯಂದಿರು ಮಗುವಿಗೆ ಹಾಲುಣಿಸಬಹುದು: ಡಾ.ವಿದ್ಯಾಭಟ್
''ಕೋವಿಡ್
ಪಾಸಿಟಿವ್ ಬಂದರೆ ಹಸುಗೂಸುಗಳಿಗೆ ಎದೆ ಹಾಲುಣಿಸಬೇಕೇ? ಬೇಡವೇ? ಎಂಬ ಜಿಜ್ಞಾಸೆ ಮತ್ತು ಆತಂಕ ಬಹುತೇಕ ತಾಯಂದಿರನ್ನು ಕಾಡುತ್ತಿದೆ. ಮಗುವನ್ನು ಹಿಡಿದುಕೊಂಡು ಅದಕ್ಕೆ ಹಾಲುಣಿಸಿದರೆ ಮಗುವಿನ ಆರೋಗ್ಯದ ಪರಿಣಾಮ ಬೀರುತ್ತದೆಯೇ? ಎಂಬುದರ ಬಗ್ಗೆ ಅವರಿಗೆ ಖಾತರಿ ಇಲ್ಲ. ಕೋವಿಡ್ ಪಾಸಿಟಿವ್ ಬಂದ ಸಂದರ್ಭದಲ್ಲಿ ಅನೇಕ ಕುಟುಂಬಗಳು ಮಗು ಮತ್ತು ತಾಯಿಯನ್ನು ಪ್ರತ್ಯೇಕ ಮಾಡುತ್ತಿವೆ ಮತ್ತು ಇವರಿಬ್ಬರನ್ನು ಕನಿಷ್ಠ 15 ರಿಂದ 20 ದಿನಗಳ ಕಾಲ ಪ್ರತ್ಯೇಕವಾಗಿಡುತ್ತವೆ. ಅಂದರೆ, ಇವರಿಬ್ಬರು ಹತ್ತಿರ ಬರಲು ಬಿಡುವುದಿಲ್ಲ'' ಎಂದು ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‍ನ ಲ್ಯಾಪರೋಸ್ಕೋಪಿಕ್ ಸರ್ಜನ್ & ಫರ್ಟಿಲಿಟಿ ಸ್ಪೆಷಲಿಸ್ಟ್, ವೈದ್ಯಕೀಯ ನಿರ್ದೇಶಕಿ ಡಾ.ವಿದ್ಯಾ ವಿ ಭಟ್ ಅವರು ಈಗಿನ ಮಗು ಮತ್ತು ತಾಯಿಯ ಪರಿಸ್ಥಿತಿಯ ಚಿತ್ರಣವನ್ನು ಬಿಡಿಸಿಟ್ಟಿದ್ದಾರೆ. id="toptextpromo"> id='are-slot-1' class='oiad oi-axt oiadv'>ವಿಶ್ವ
ಆರೋಗ್ಯ ಸಂಸ್ಥೆಯು ಕೋವಿಡ್-19 ಸೋಂಕು ಹೊಂದಿರುವ ತಾಯಂದಿರು ತಮ್ಮ ಮಗುವಿಗೆ ಎದೆ ಹಾಲುಣಿಸುವುದನ್ನು ಪ್ರೋತ್ಸಾಹಿಸಬೇಕು ಎಂದು ಶಿಫಾರಸು ಮಾಡಿದೆ. ಕೋವಿಡ್ ಪಾಸಿಟಿವ್ ಇರುವ ತಾಯಂದಿರಿಂದ ಸ್ತನ್ಯಪಾನವು ಸಂಪೂರ್ಣ ಸುರಕ್ಷಿತ ಎಂದು ಹೇಳಲಾಗದಿದ್ದರೂ, ಸ್ತನ್ಯಪಾನದಿಂದ ಆಗುವ ಪ್ರಯೋಜನಗಳು ಮಗುವಿಗೆ ತಾಯಿಯಿಂದ ಸೋಂಕು ಹರಡುವ ಅಪಾಯವನ್ನು ಮೀರಿಸುತ್ತದೆ. ಎದೆಹಾಲು ಮಗುವಿಗೆ ಪ್ರಾಥಮಿಕ ಪೌಷ್ಠಿಕಾಂಶವನ್ನು ನೀಡುವ ಮೂಲವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ ಮತ್ತು ಸ್ತನ್ಯಪಾನ ಮಾಡಬೇಕು ಎಂಬುದನ್ನು ಶಿಫಾರಸು ಮಾಡಿದೆ. id='are-slot-2' class='oiad oi-axt oiadv'>
ಮೊದಲ ಆರು ತಿಂಗಳು ಆಹಾರದ ಏಕೈಕ ಮೂಲ
ತಾಯಿಯ ಎದೆಹಾಲು ಮಗುವಿಗೆ ತನ್ನ ಜೀವನದ ಮೊದಲ ಆರು ತಿಂಗಳು ಆಹಾರದ ಏಕೈಕ ಮೂಲವಾಗಿದೆ. ಮಗು ಮತ್ತು ತಾಯಿ ದೇಹದ ಸಂಪರ್ಕವು ಅನಿರ್ಬಂಧಿತವಾಗಿದ್ದರೆ ನವಜಾತು ಶಿಶುಗಳ ಆರೋಗ್ಯವು ಗಣನೀಯ ಪ್ರಮಾಣದಲ್ಲಿ ಸುಧಾರಣೆಯಾಗಲಿದೆ ಮತ್ತು ಮಗುವಿನ ಅಸ್ವಸ್ಥತೆ ಪ್ರಮಾಣವು ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ತಾಯಿಯು ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಿ ಮಗುವಿಗೆ ಎದೆಹಾಲುಣಿಸಬೇಕು. ಒಂದು ವೇಳೆ ಆಕೆಗೆ ಕೋವಿಡ್ ಪಾಸಿಟಿವ್ ಇದ್ದರೂ ಸಹ ಮಗು ಆರು ತಿಂಗಳಿಗಿಂತ ಕಡಿಮೆ ವಯೋಮಾನದಲ್ಲಿದ್ದರೆ ಅದಕ್ಕೆ ಹಾಲುಣಿಸುವುದನ್ನು ಮುಂದುವರಿಸಬೇಕು.

ಕೋವಿಡ್ ಮುಂಜಾಗ್ರತೆ ವಹಿಸಿ ಹಾಲುಣಿಸಬಹುದು
ಒಂದು ವೇಳೆ ಕೋವಿಡ್ ಪಾಸಿಟಿವ್ ಇರುವ ತಾಯಂದಿರ ಮಗುವು ಆರು ತಿಂಗಳಿಗಿಂತ ಹೆಚ್ಚಿನ ವಯಸ್ಸಿನದಾಗಿದ್ದರೆ ತಾಯಿಯು ತನ್ನ ಎದೆ ಹಾಲನ್ನು ಸಂಗ್ರಹಿಸಿ ಅದನ್ನು ಬಾಟಲಿ ಮೂಲಕ ಮಗುವಿಗೆ ನೀಡುವುದನ್ನು ಅಭ್ಯಾಸ ಮಾಡಬೇಕು. ಕೋವಿಡ್ ಪಾಸಿಟಿವ್ ಇರುವ ತಾಯಂದಿರಲ್ಲಿ ಅತ್ಯಂತ ಕಡಿಮೆ ಗುಣಲಕ್ಷಣಗಳು ಇದ್ದರೆ ಅಥವಾ ಗುಣಲಕ್ಷಣಗಳು ಕಂಡು ಬರದಿದ್ದರೆ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಮಾಸ್ಕನ್ನು ಧರಿಸುವುದು ಸೇರಿದಂತೆ ಇನ್ನಿತರೆ ಕೋವಿಡ್ ಮುಂಜಾಗ್ರತೆಗಳನ್ನು ವಹಿಸುವ ಮೂಲಕ ಮಗುವಿಗೆ ಹಾಲುಣಿಸಬಹುದು.
ತಾಯಂದಿರಿಗೆ ಕೋವಿಡ್ ಗುಣಲಕ್ಷಣಗಳಿದ್ದು, ಗಂಭೀರ ಸ್ವರೂಪದಲ್ಲಿ ಅಸ್ವಸ್ಥತೆಗೆ ಒಳಗಾದ ಸಂದರ್ಭದಲ್ಲಿ ಆಕೆಯಿಂದ ಮಗುವನ್ನು ಪ್ರತ್ಯೇಕವಾಗಿಡಬೇಕು. ಇಂತಹ ಸಂದರ್ಭಗಳಲ್ಲಿ ಕಂಟೇನರ್ ಅನ್ನು ಸ್ವಚ್ಛಗೊಳಿಸಿ ಅದರಲ್ಲಿ ತಾಯಿಯ ಎದೆಹಾಲನ್ನು ಸಂಗ್ರಹಿಸಿ ಮಗುವಿಗೆ ಉಣಿಸಬೇಕು.
ಸೂಕ್ತವಾದ ಪರಿಗಣನೆಯ ನಂತರ ಭಾರತ ಸರ್ಕಾರವು ಹಾಲುಣಿಸುವ ಮಹಿಳೆಯರಿಗೆ ಕೋವಿಡ್-19 ಲಸಿಕೆ ನೀಡಲು ಅನುಮೋದನೆ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ಸೋಂಕು ಇರುವ ಮಹಿಳೆಯರು ಮತ್ತು ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದವರಿಗೆ ಲಸಿಕೆ ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಿದಂತಾಗಿದೆ.

ಲಸಿಕೆ ಗರ್ಭಿಣಿಯರಿಗೆ ಯಾವುದೇ ಅಪಾಯವಿಲ್ಲ
ಕೋವಿಡ್ ಲಸಿಕೆಗಳಿಂದ ಹಾಲುಣಿಸುವ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಯಾವುದೇ ಅಪಾಯವಿಲ್ಲ ಎಂಬುದು ದೃಢವಾಗಿರುವ ಹಿನ್ನೆಲೆಯಲ್ಲಿ ಈ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಯಾವುದೇ ಆತಂಕವಿಲ್ಲದೇ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಭಾರತದಲ್ಲಿ ಲಭ್ಯವಿರುವ ಬಹುತೇಕ ಲಸಿಕೆಗಳು ಹೊಸ ಕೋವಿಡ್ ಸೋಂಕುಗಳ ವಿರುದ್ಧ ಪರಿಣಾಮಕಾರಿಯಾಗಿವೆ.
ಲಸಿಕೆ ತೆಗೆದುಕೊಂಡ ನಂತರ ಸ್ತನ್ಯಪಾನವನ್ನು ಮುಂದುವರಿಸಬಹುದಾಗಿದೆ. ಲಸಿಕೆ ಪಡೆದ ಕಾರಣಕ್ಕೆ ಸ್ತನ್ಯಪಾನವನ್ನು ನಿರ್ಬಂಧಿಸುವ ಅಗತ್ಯವಿಲ್ಲ. ಕೋವಿಡ್ ಲಸಿಕೆಯು ತಾಯಿಯ ಆರೋಗ್ಯಕ್ಕೆ ಮಾತ್ರವಲ್ಲದೇ, ಮಗುವಿನ ಆರೋಗ್ಯಕ್ಕೂ ಒಳ್ಳೆಯದು. ಲಸಿಕೆಯನ್ನು ಪಡೆದುಕೊಂಡ ನಂತರ ತಾಯಿಯ ದೇಹದಲ್ಲಿ ಬೆಳವಣಿಗೆಯಾಗುವ ಪ್ರತಿಕಾಯಗಳು ಮಗುವಿನ ಹಾಲಿನೊಂದಿಗೆ ವರ್ಗಾವಣೆಯಾಗುತ್ತವೆ. ಇದರಿಂದ ಮಗುವಿಗೂ ಕೋವಿಡ್ ವಿರುದ್ಧ ರಕ್ಷಣೆ ದೊರೆಯುತ್ತದೆ.
Recommended Video
ಸ್ತನ್ಯಪಾನಕ್ಕೆ ಪ್ರೋತ್ಸಾಹ ನೀಡಬೇಕು
ನವಜಾತ ಶಿಶುವಿಗೆ ಸ್ತನ್ಯಪಾನವು ಅತ್ಯಂತ ನಿರ್ಣಾಯಕವಾಗಿರುತ್ತದೆ ಮತ್ತು ತಾಯಿಯ ಎದೆಹಾಲಿಗೆ ಇರುವ ಫಾರ್ಮುಲಾ ಹಾಲಿನಂಥ ಉತ್ಪನ್ನಗಳು ಕಳಪೆಯದ್ದಾಗಿರುತ್ತವೆ. ಕುಟುಂಬ ಸದಸ್ಯರು ಮನೆಯಲ್ಲಿ ತಾಯಿಯು ತನ್ನ ಮಗುವಿಗೆ ಹಾಲುಣಿಸಲು ಸಮರ್ಪಕವಾದ ಖಾಸಗಿತನವನ್ನು ಒದಗಿಸಬೇಕು. ಕಚೇರಿಗಳಲ್ಲಿ ತಾಯಿಯು ಮಗುವಿಗೆ ಹಾಲುಣಿಸುವ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸ್ತನ್ಯಪಾನಕ್ಕೆ ಪ್ರೋತ್ಸಾಹ ನೀಡಬೇಕು.
ಎಚ್‍ಐವಿ ಪಾಸಿಟಿವ್ ಇರುವ ಅಥವಾ ಸ್ತನ ಕ್ಯಾರ್ಸಿನೋಮಾ ಅಥವಾ ಆಕ್ಟೀವ್ ಪಲ್ಮನರಿ ಟಿಬಿಯಂತಹ ರೋಗಗಳಿಂದ ಬಳಲುತ್ತಿರುವ ಮಹಿಳೆಯರು ಹಾಲುಣಿಸುವಂತಿಲ್ಲ. ಇನ್ನುಳಿದಂತೆ ಎಲ್ಲಾ ಸಂದರ್ಭಗಳಲ್ಲಿ ಸ್ತನ್ಯಪಾನ ಅತ್ಯುತ್ತಮ ಆಯ್ಕೆಯಾಗಿದೆ.












Click it and Unblock the Notifications