• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸೋಂಕಿಗೆ ಸಿದ್ಧವಾಯ್ತು ಮೊದಲ "ರೋಲ್ ಆನ್" ಆಯುರ್ವೇದ ಔಷಧಿ

|
Google Oneindia Kannada News

ಬೆಂಗಳೂರು, ಜೂನ್ 15: ಜೀವನಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಹಾಗೂ ಹಲವು ವಿಧದ ಸೋಂಕುಗಳ ನಿವಾರಣೆಗೆ ಸಹಕಾರಿಯಾಗಬಲ್ಲ ಆಯುರ್ವೇದ ಔಷಧದ ಸಂಶೋಧನೆಯತ್ತ ಗಮನ ಹರಿಸಬೇಕಿದೆ ಎಂದು ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕಿನ ನಿವಾರಣೆಗೆ ನೂತನ ವಿಧದ ಔಷಧವೊಂದು ಪರಿಚಿತಗೊಳ್ಳುವ ಹಾದಿಯಲ್ಲಿದೆ.

ಬೆಂಗಳೂರಿನ ನ್ಯಾನೋ ತಂತ್ರಜ್ಞಾನದ ಸ್ಟಾರ್ಟ್ ಅಪ್ ಸಂಸ್ಥೆ ನೂತನ್ ಲ್ಯಾಬ್, ಕೊರೊನಾ ಸೋಂಕಿಗೆ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಅಂಶಗಳುಳ್ಳ "ಕೋವಿರಕ್ಷಾ" ಔಷಧಿಯನ್ನು ಮಂಗಳವಾರ ಪರಿಚಯಿಸಿದೆ. ಇದು ರೋಲ್ ಆನ್ ರೂಪದಲ್ಲಿರುವುದು ನೂತನವೆನಿಸಿದೆ. ಈ ಔಷಧಿ ಅಭಿವೃದ್ಧಿಗೊಳಿಸಿದ್ದು ಯಾರು? ಈ ಔಷಧಿಯ ಲಕ್ಷಣಗಳೇನು? ಇಲ್ಲಿದೆ ಮಾಹಿತಿ...

ಸರ್ಕಾರದ ಮಾರ್ಗಸೂಚಿ: ಕೊರೊನಾ ರೋಗಿಗಳು ಈ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲ ಸರ್ಕಾರದ ಮಾರ್ಗಸೂಚಿ: ಕೊರೊನಾ ರೋಗಿಗಳು ಈ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲ

   ಕೊರೊನಾ ಲಸಿಕೆಯಿಂದ ವ್ಯಕ್ತಿಯ ಸಾವಾಗಿದೆ ಅನ್ನೋದನ್ನ ಒಪ್ಪಿಕೊಂಡ ಕೇಂದ್ರ ಸರ್ಕಾರ | Oneindia Kannada
    ಸೋಂಕು ನಿವಾರಣೆಗೆ ಮೊದಲ ರೋಲ್ ಆನ್ ಔಷಧ

   ಸೋಂಕು ನಿವಾರಣೆಗೆ ಮೊದಲ ರೋಲ್ ಆನ್ ಔಷಧ

   ಐಐಎಸ್‌ಸಿ ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಸೈನ್ಸ್ ಇಂಜಿನಿಯರಿಂಗ್ ಹಾಗೂ ನೂತನ್ ಲ್ಯಾಬ್, ಕೊರೊನಾ ಸೋಂಕಿಗೆ ಭಾರತದಲ್ಲಿಯೇ ಮೊದಲು ಎನ್ನಲಾದ ಈ ವಿಧದ ಔಷಧ ಪರಿಚಯಿಸಿದ್ದು, ಹತ್ತು ಸಾವಿರ ಜನರ ಮೇಲೆ ಪರೀಕ್ಷೆ ನಡೆಸಿದೆ. ಈ ರೋಲ್ ಆನ್, ಉಸಿರಾಟವನ್ನು ಸರಾಗಗೊಳಿಸುವ ಮೂಲಕ ಆಮ್ಲಜನಕದ ಸಾಂದ್ರತೆ ಹೆಚ್ಚಿಸಲು ಹಾಗೂ ಕೊರೊನಾದ ಇನ್ನಿತರ ಲಕ್ಷಣಗಳಾದ ಕೆಮ್ಮು, ಗಂಟಲು ಕೆರೆತವನ್ನು, ನೋವನ್ನು ತಗ್ಗಿಸುವುದೆಂದು ಸಂಶೋಧನೆ ಸಾಬೀತುಪಡಿಸಿದೆ.

   "ರೋಲ್ ಆನ್ 99% ಪರಿಣಾಮಕಾರಿ"

   "ಎಲ್ಲಾ ಔಪಚಾರಿಕ ನಿಯಮಗಳು ಹಾಗೂ ಅಗತ್ಯ ಅನುಮೋದನೆಗಳು ನಮ್ಮ ಕೈಯಲ್ಲಿದ್ದು, ಈ ಔಷಧದ ಹೆಚ್ಚಿನ ಮಟ್ಟದ ಉತ್ಪಾದನೆಗೆ ಸಿದ್ಧರಿದ್ದೇವೆ. ಈ ರೋಲ್ ಆನ್ ಔಷಧಿ 99.999% ಪರಿಣಾಮಕಾರಿ ಎಂಬುದನ್ನೂ ನಾವು ಸಾಬೀತುಪಡಿಸಿದ್ದೇವೆ. ನೈಸರ್ಗಿಕ ವಸ್ತುಗಳು ಹಾಗೂ ಆಧುನಿಕ ನ್ಯಾನೋ ತಂತ್ರಜ್ಞಾನದ ಬಳಕೆಯೊಂದಿಗೆ ಈ ಉತ್ಪನ್ನ ಅಭಿವೃದ್ಧಿಗೊಳಿಸಿದ್ದೇವೆ," ಎಂದು ನೂತನ್ ಲ್ಯಾನ್‌ನ ಸಂಸ್ಥಾಪಕ ನೂತನ್ ಮಾಹಿತಿ ನೀಡಿದ್ದಾರೆ.

   ಮಕ್ಕಳಿಗೆ ಕೊರೊನಾ ಬಂದರೆ ಏನು ಮಾಡಬೇಕು; ಕೇಂದ್ರದಿಂದ ಮಾರ್ಗಸೂಚಿ ಪ್ರಕಟಮಕ್ಕಳಿಗೆ ಕೊರೊನಾ ಬಂದರೆ ಏನು ಮಾಡಬೇಕು; ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

    ಕನಿಷ್ಠ ಮೂರು ಗಂಟೆಗಳ ಕಾಲ ಸೋಂಕಿನಿಂದ ರಕ್ಷಣೆ

   ಕನಿಷ್ಠ ಮೂರು ಗಂಟೆಗಳ ಕಾಲ ಸೋಂಕಿನಿಂದ ರಕ್ಷಣೆ

   ಈ ಉತ್ಪನ್ನಕ್ಕೆ ಕೋವಿರಕ್ಷಾ ಎಂದು ಹೆಸರಿಡಲಾಗಿದೆ. ಈ ಔಷಧವು ಕೊರೊನಾ ಹಾಗೂ ಕೊರೊನಾ ರೂಪಾಂತರಗಳ ತಡೆಗೆ ನೆರವಾಗುತ್ತದೆ. ಹಲವು ವಸ್ತುಗಳ ಸಂಯೋಜನೆಯೊಂದಿಗೆ ಈ ಕೋವಿರಕ್ಷಾ ರೂಪಿಸಲಾಗಿದೆ ಎಂದು ನೂತನ್ ಹೇಳಿದ್ದಾರೆ.

   ಔಷಧಿಯು ರೋಲ್‌ಆನ್‌ ಬಾಟಲ್ ರೂಪದಲ್ಲಿದ್ದು, 10 ಮಿಲಿ ಲೀಟರ್ ಪ್ರಮಾಣದ್ದಾಗಿದೆ. ಸಿಲ್ವರ್ ಕೊಲೈಡ್ ಅವಲಂಬಿತ ದ್ರವ ಇದಾಗಿದ್ದು, ಹಲವು ಆರೋಗ್ಯ ಸಮಸ್ಯೆಗಳಿಗೆ, ಕೊರೊನಾ ಸೋಂಕಿಗೆ ಹಾಗೂ ಬ್ಲ್ಯಾಕ್ ಫಂಗಸ್ ನಿವಾರಣೆಗೆ ಇದನ್ನು ಬಳಸಬಹುದು. ಈ ರೋಲ್ ಆನ್ ಕನಿಷ್ಠ ಮೂರು ಗಂಟೆಗಳ ಕಾಲ ವೈರಸ್‌ನಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ರೋಲ್ ಆನ್ ಬಳಕೆ ಕುರಿತು ಸಂಸ್ಥೆ ಇನ್ನಷ್ಟು ವಿವರಗಳನ್ನು ನೀಡಬೇಕಿದೆ.

    ಆಯುಷ್ ಇಲಾಖೆಯಿಂದ ಅನುಮೋದನೆ

   ಆಯುಷ್ ಇಲಾಖೆಯಿಂದ ಅನುಮೋದನೆ

   "ರೋಲ್‌ ಆನ್‌ ಉತ್ಪಾದನೆಯನ್ನು ಈಗಾಗಲೇ ಆರಂಭಿಸಲಾಗಿದೆ. ಆದರೆ ಪಾಲುದಾರರ ಅವಶ್ಯಕತೆಯಿದೆ. ಇಡೀ ದೇಶಕ್ಕೆ, ವಿಶ್ವಕ್ಕೆ ಈ ಔಷಧ ತಲುಪಬೇಕಿದೆ. ಕೊರೊನಾ ನಮ್ಮೊಂದಿಗೆ ಇನ್ನೂ ಹಲವು ರೂಪಗಳಲ್ಲಿ ಇರಲಿದೆ. ಹೀಗಾಗಿ ಈ ಔಷಧದ ಅವ್ಯಕತೆಯೂ ಹೆಚ್ಚಿದೆ," ಎಂದು ಲ್ಯಾಬ್ ನಿರ್ವಹಣಾ ಸಲಹೆಗಾರ ವೇಣು ಶರ್ಮಾ ಹೇಳುತ್ತಾರೆ.

   ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ನೂತನ್ ಲ್ಯಾಬ್ ಅಭಿವೃದ್ಧಿಪಡಿಸಿದ ಈ ಉತ್ಪನ್ನವು ಕರ್ನಾಟಕದ ಆಯುಷ್ ಇಲಾಖೆಯಿಂದ ಅನುಮೋದನೆ ಪಡೆದಿದೆ. ಆದರೆ ಕೇಂದ್ರ ಇಲಾಖೆಯಿಂದ ಅನುಮೋದನೆಗೆ ಕಾಯುತ್ತಿದೆ. "ಪ್ರಸ್ತುತ ಕಚ್ಚಾ ಸಾಮಗ್ರಿಗಳು ಹಾಗೂ ಉತ್ಪಾದನಾ ವೆಚ್ಚವು ಹೆಚ್ಚಿದೆ. ಸಣ್ಣ ಪ್ರಮಾಣಕ್ಕೆ ಅತಿ ಹೆಚ್ಚಿನ ಬೆಲೆ ತಗುಲುತ್ತಿದೆ. ಸದ್ಯಕ್ಕೆ 18% ಜಿಎಸ್‌ಟಿ ಹಾಗೂ ವಿತರಣಾ ಮಾದರಿ ಸೇರಿ ಬಾಟಲಿಗೆ 300-350 ರೂ ತಗುಲುತ್ತದೆ. ಆದರೆ ಬೃಹತ್ ಉತ್ಪಾದನೆಯಿಂದ ಕೋವಿರಕ್ಷಾ ಬೆಲೆ 20-30% ಕಡಿಮೆಯಾಗಲಿದೆ," ಎಂದು ವೇಣು ಶರ್ಮಾ ಮಾಹಿತಿ ನೀಡಿದ್ದಾರೆ.

   English summary
   Country's first rollon ayurveda medicine "Coviraksha" for coronavirus launched by Nutan Lab in Bengaluru,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X