ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

60 ವರ್ಷಗಳ ಹಿಂದೆ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಹಾರಿದ್ದ ಮಾನವ!

|
Google Oneindia Kannada News

ಆಗಿನ್ನೂ ಮಹಾಯುದ್ಧ ಮುಗಿದು, ಶೀತಲ ಸಮರ ತಾರಕಕ್ಕೇರಿತ್ತು. ಅಮೆರಿಕ ಹಾಗೂ ರಷ್ಯಾ ನಡುವಿನ ಈ ಸಮರ 3ನೇ ಮಹಾಯುದ್ಧದ ಭೀತಿ ಹುಟ್ಟಿಸಿತ್ತು. ಎರಡೂ ರಾಷ್ಟ್ರಗಳು ಪ್ರತಿಯೊಂದರಲ್ಲೂ ಸ್ಪರ್ಧೆಗೆ ಇಳಿದು ಪೈಪೋಟಿ ನಡೆಸುತ್ತಿದ್ದವು. ಅದರಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಿದ್ದಿಗೆ ಬಿದ್ದಿದ್ದವು. ಈ ಪೈಪೋಟಿಯಲ್ಲಿ ರಷ್ಯಾ ದೊಡ್ಡ ಗೆಲುವು ಸಾಧಿಸುತ್ತಿದ್ದರೆ ಅಮೆರಿಕ ಸೋತು ಸೋತು ಸುಣ್ಣವಾಗಿತ್ತು.

ಇದೇ ರೀತಿ ಯೂರಿ ಗ್ಯಾಗರಿನ್ ಮೊಟ್ಟ ಮೊದಲು ಬಾಹ್ಯಾಕಾಶಕ್ಕೆ ಹಾರಿ ರಷ್ಯಾವನ್ನು ಪ್ರತಿನಿಧಿಸಿದರು. ಈಗ ಯಾಕಪ್ಪಾ ಯೂರಿ ಗ್ಯಾಗರಿನ್‌ರ ಚರ್ಚೆ ಅಂದ್ರೆ, ಗ್ಯಾಗರಿನ್ ಬಾಹ್ಯಾಕಾಶಕ್ಕೆ ಹಾರಿ ಇದೀಗ ಬರೋಬ್ಬರಿ 60 ವರ್ಷಗಳೇ ಕಳೆದಿವೆ.

ಏಪ್ರಿಲ್ 12, 1961ರಂದು ಯೂರಿ ಗ್ಯಾಗರಿನ್ ಈ ಸಾಧನೆ ಮಾಡಿದ್ದರು. ಈಗ 60ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ರಷ್ಯಾ ಸೂಯೆಜ್ ನೌಕೆಯನ್ನ ಕಝಾಕಿಸ್ತಾನದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾವಣೆ ಮಾಡಿತ್ತು. ಇದೀಗ ಮೂವರು ವಿಜ್ಞಾನಿಗಳು ಬಾಹ್ಯಾಕಾಶ ಕೇಂದ್ರ ತಲುಪಿದ್ದಾರೆ. ಅಲ್ಲೇ ಯೂರಿ ಗ್ಯಾಗರಿನ್‌ರ ಸಾಧನೆಯ 60ನೇ ವಾರ್ಷಿಕೋತ್ಸವ ಆಚರಿಸಲಿದ್ದಾರೆ. ಇಡೀ ಜಗತ್ತೇ ಈ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಕಾದು ಕೂತಿದೆ. ಏಪ್ರಿಲ್ 17 ರಂದು ಬಾಹ್ಯಾಕಾಶ ಕೇಂದ್ರದಿಂದ ವಿಜ್ಞಾನಿಗಳು ಭೂಮಿಗೆ ಮರಳಲಿದ್ದಾರೆ.

ಯಾರು ಈ ಯೂರಿ ಗ್ಯಾಗರಿನ್..?

ಯಾರು ಈ ಯೂರಿ ಗ್ಯಾಗರಿನ್..?

ಯೂರಿ ಗ್ಯಾಗರಿನ್ ರಷ್ಯಾದ ಪೈಲೆಟ್ ಹಾಗೂ ಬಾಹ್ಯಾಕಾಶ ವಿಜ್ಞಾನಿ. 1934ರ ಮಾರ್ಚ್ 9ರಂದು ಜನಿಸಿದ ಯೂರಿ ಗ್ಯಾಗರಿನ್‌ಗೆ ವಿಮಾನಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್. ಅದರಲ್ಲೂ ಉನ್ನತ ವಿದ್ಯಾಭ್ಯಾಸದ ಸಮಯದಲ್ಲಿ ಇದು ತುಸು ಹೆಚ್ಚಾಗಿತ್ತು. ಹೀಗಾಗಿಯೇ 1955ರಲ್ಲಿ ಗ್ಯಾಗರಿನ್‌ ಪೈಲೆಟ್ ಶಿಕ್ಷಣವನ್ನೂ ಪಡೆದರು. ರಷ್ಯಾದಲ್ಲಿ ಆಗ ಬಾಹ್ಯಾಕಾಶಕ್ಕೆ ಹೋಗಲು ಸರ್ಕಸ್ ನಡೆಯುತ್ತಿತ್ತು. 1960ರಲ್ಲಿ ಇದಕ್ಕಾಗಿ ಆಯ್ಕೆ ಪ್ರಕ್ರಿಯೆ ನಡೆದಾಗ ಗ್ಯಾಗರಿನ್‌ ಜೊತೆ 20 ಜನ ಆಯ್ಕೆ ಆಗಿದ್ದರು. ಆದರೆ ಅಂತಿಮವಾಗಿ ಯೂರಿ ಗ್ಯಾಗರಿನ್‌ ಎಲ್ಲರನ್ನೂ ಮೀರಿಸಿ, ಬಾಹ್ಯಾಕಾಶದ ಗಡಿ ಮುರಿದುಬಿಟ್ಟರು.

ವಾಪಸ್ ಬರೋದಿಲ್ಲ ಎಂದಿದ್ದರು..!

ವಾಪಸ್ ಬರೋದಿಲ್ಲ ಎಂದಿದ್ದರು..!

ಹೌದು, ಆಗಿನ್ನೂ ವಿಮಾನಗಳ ಬಗ್ಗೆಯೇ ಸರಿಯಾದ ಹಿಡಿತ ಇಲ್ಲದ ಸಮಯ. ಅದರಲ್ಲೂ ಬಾಹ್ಯಾಕಾಶದ ಗಡಿ ಮುಟ್ಟಿ ಬರುವ ಸಾಹಸ ಮಾರಣಾಂತಿಕ ಎನ್ನುವಂತಿತ್ತು. 1961ರ ಏಪ್ರಿಲ್ 12ರಂದು ಯೂರಿ ಗ್ಯಾಗರಿನ್‌ ಬಾಹ್ಯಾಕಾಶ ಮುಟ್ಟಿ ಸಂಭ್ರಮಿಸಿದಾಗ, ಆತ ವಾಪಸ್ ಬರುವುದಿಲ್ಲ ಬಿಡಿ. ಅಲ್ಲೇ ಸತ್ತು ಹೋಗಲಿದ್ದಾನೆ ಅಂತಾ ರಷ್ಯಾದ ಕೆಲ ಅಧಿಕಾರಿಗಳು ಗೊಣಗಿದ್ದರಂತೆ. ಆದರೆ ಒಬ್ಬ ಶ್ರೇಷ್ಠ ವಿಜ್ಞಾನಿಗೆ ಮಾತ್ರ ಎಲ್ಲವನ್ನೂ ಎದರಿಸುವ ತಾಕತ್ತು ಇರುತ್ತೆ ಎಂಬುದನ್ನ ಗ್ಯಾಗರಿನ್‌ ತೋರಿಸಿಕೊಟ್ಟರು. ಬಾಹ್ಯಾಕಾಶದಿಂದ ಮರಳಿ ಭೂಮಿಗೆ ಬಂದಿದ್ದರು ಗ್ಯಾಗರಿನ್‌, ಈ ಮೂಲಕ ಆಡಿಕೊಂಡವರ ಬಾಯಿ ಮುಚ್ಚಿಸಿದ್ದರು.

ಲೆಜೆಂಡ್ ಎಂದಿತ್ತು ಜಗತ್ತು..!

ಲೆಜೆಂಡ್ ಎಂದಿತ್ತು ಜಗತ್ತು..!

ತಂತ್ರಜ್ಞಾನ ಬಲವಾಗಿ ಬೆಳೆದು ನಿಂತಿರುವ ಈ ಸಮಯದಲ್ಲೇ ಬಾಹ್ಯಾಕಾಶ ಯಾನ ಎಂದರೆ ವಿಜ್ಞಾನಿಗಳು ಸ್ವಲ್ಪ ಹಿಂದೆ, ಮುಂದೆ ನೋಡುತ್ತಾರೆ. ಆದರೆ ಈ ಎಲ್ಲಾ ಭಯವನ್ನೂ ಮೀರಿ ಗ್ಯಾಗರಿನ್‌ ಅಲ್ಲಿಗೆ ನುಗ್ಗಿಬಿಟ್ಟರು. ಬಾಹ್ಯಾಕಾಶಕ್ಕೆ ಹಾರಿ ತನ್ನ ಕನಸು ನನಸು ಮಾಡಿಕೊಂಡಿದ್ದರು. ಹಾಗೇ ರಷ್ಯಾದ ಕೀರ್ತಿ ಪತಾಕೆ ಬಾಹ್ಯಾಕಾಶ ಕ್ಷೇತ್ರದಲ್ಲೂ ಹಾರುವಂತೆ ಮಾಡಿದ್ದರು. ರಷ್ಯಾದ ಈ ಸಾಧನೆ ಕಂಡು ಅಮೆರಿಕ ಫುಲ್ ಸೈಲೆಂಟ್ ಆಗಿಬಿಟ್ಟಿತ್ತು. ತನ್ನ ಶತ್ರು ರಾಷ್ಟ್ರದ ಸಾಧನೆ ಆಗ ಅಮೆರಿಕದ ಗಮನ ಸೆಳೆದಿತ್ತು. ಹಾಗೇ ಪೈಪೋಟಿ ಮತ್ತಷ್ಟು ಹೆಚ್ಚಾಗಿತ್ತು.

ದುರಂತ ಸಾವು ಕಂಡ ಗ್ಯಾಗರಿನ್‌

ದುರಂತ ಸಾವು ಕಂಡ ಗ್ಯಾಗರಿನ್‌

ಗ್ಯಾಗರಿನ್‌ ಎಲ್ಲವನ್ನೂ ಎದುರಿಸಿದ್ದರು. ಬಾಹ್ಯಾಕಾಶದ ಕನಸು ಕಾಣುವುದರಿಂದ ಆರಂಭವಾಗಿ, ಅದನ್ನ ನನಸು ಮಾಡುವವರೆಗೂ ನೂರಾರು ಸಮಸ್ಯೆ ಎದುರಿಸಿದ್ದರು. ಬಾಹ್ಯಾಕಾಶಕ್ಕೆ ಹೋದವ ವಾಪಸ್ ಬರೋದಿಲ್ಲ ಬಿಡಿ ಅಂದವರ ಬಾಯಿ ಮುಚ್ಚಿಸಿದ್ದರು. ಹೀಗೆ ರಾಕೆಟ್‌ನಿಂದಲೇ ಜೀವ ಉಳಿಸಿಕೊಂಡು ಬಂದಿದ್ದ ಗ್ಯಾಗರಿನ್‌ ಮಿಗ್ ವಿಮಾನದಲ್ಲಿ ಅಭ್ಯಾಸ ನಡೆಸುವಾಗ ದುರಂತ ಸಾವು ಕಂಡುಬಿಟ್ಟರು. 1968ರ ಮಾರ್ಚ್ 27ರಂದು ಗ್ಯಾಗರಿನ್‌ ಇದ್ದ ಮಿಗ್ ವಿಮಾನ ಅಪಘಾತಕ್ಕೆ ಈಡಾಗಿ ಮೃತಪಟ್ಟರು. ಅಲ್ಲಿಯವರೆಗೂ ರಷ್ಯಾ ಸರ್ಕಾರ ನೀಡುತ್ತಿದ್ದ ಎಲ್ಲಾ ಗೌರವಗಳನ್ನು ಗ್ಯಾಗರಿನ್‌ ಪಡೆದಿದ್ದರು. ಕೋಟ್ಯಂತರ ರಷ್ಯನರ ಪಾಲಿಗೆ ಗ್ಯಾಗರಿನ್‌ ಹೀರೋ ಆಗಿದ್ದರು.

English summary
A three-man crew docked at International Space Station honouring the 60th anniversary of Yuri Gagarin becoming the first person in space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X