ಕೊರೊನಾಗಿಂತಲೂ ಮೊದಲು ವೈದ್ಯಕೀಯ ಲೋಕಕ್ಕೆ ಎಬೋಲಾ ಸವಾಲು
ನವದೆಹಲಿ, ಏಪ್ರಿಲ್.06: ಕೊರೊನಾ ವೈರಸ್ ನಿಂದ ಜಗತ್ತಿಗೆ ಜಗತ್ತೆ ತತ್ತರಿಸಿದ ಹೋಗಿದೆ. ಮಾರಕ ರೋಗಕ್ಕೆ ಮದ್ದು ಯಾವಾಗ ಸಿಗುತ್ತೋ ಎಂದು ಆಸೆಗಣ್ಣಿನಿಂದ ಪ್ರತಿಯೊಂದು ರಾಷ್ಟ್ರಗಳು ಎದುರು ನೋಡುತ್ತಿವೆ. ಕೊರೊನಾ ಕೀಚಕ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.
ಪ್ಲೇಗ್, ಮಲೇರಿಯಾ, ಏಡ್ಸ್ ಹಾಗೂ ಸ್ಪ್ಯಾನಿಷ್ ಫ್ಲೂ ಅಂದರೆ ಭಾರತದಲ್ಲಿ ಬಾಂಬೆ ಜ್ವರ ಹಾಗೂ ಕ್ಯಾತನೂರು ಜ್ವರ (ಮಂಗದ ಜ್ವರ) ಎಂದು ಕರೆಯಲ್ಪಟ್ಟ ಮಾರಕ ರೋಗಗಳಿಗೆ ಕೋಟ್ಯಂತರ ಜನರು ಬಲಿಯಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಇಂಥ ಮಾರಕ ರೋಗಗಳ ಪಟ್ಟಿಗೆ ಸೇರಿರುವ ಮತ್ತೊಂದು ಅಪಾಯಕಾರಿ ಸಾಂಕ್ರಾಮಿಕ ರೋಗ ಹೆಸರೇ ಎಬೋಲಾ.
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಲೋಕಕ್ಕೆ ಕೊರೊನಾ ವೈರಸ್ ಗಿಂತಲೂ ಮೊದಲು ಸವಾಲ್ ಆಗಿ ನಿಂತಿದ್ದೇ ಎಬೋಲಾ ವೈರಸ್. ಕೊರೊನಾಗಿಂತ ಮೊದಲು ಪ್ರಪಂಚವನ್ನು ಕಾಡಿದ ಎಬೋಲಾ ಬಗ್ಗೆ ಹಂತ ಹಂತವಾಗಿ ತಿಳಿಸುವುದು ನಮ್ಮ ಪ್ರಯತ್ನ.

ಅಸಲಿಗೆ 'ಎಬೋಲಾ' ಎಂದರೇನು?
ಐದು ತಳಿಯ ವೈರಸ್ ಗಳಿಂದ ಹರಡುವ ಮಾರಕ ರೋಗವನ್ನು ಎಬೋಲಾ ಎಂದು ವಿಜ್ಞಾನಿಗಳು ಗುರುತಿಸಿದ್ದರು. ಸುಡಾನ್ ವೈರಸ್, ತೈ ಫಾರೆಸ್ಟ್ ವೈರಸ್, ಬಂದಿಬುಂಗ್ಯಾ ವೈರಸ್, ರೆಸ್ಟೋನ್ ವೈರಸ್, ಬೊಂಬಲಿ ವೈರಸ್ ಹೀಗೆ ಐದು ತಳಿಯ ವೈರಸ್ ಗಳ ಒಂದು ಪಂಗಡವನ್ನು ಎಬೋಲಾ ವೈರಸ್ ಎಂದು ಕರೆಯಲಾಗುತ್ತಿತ್ತು. ಈ ಪೈಕಿ ನಾಲ್ಕು ವೈರಸ್ ಗಳು ಮಾತ್ರ ಮನುಷ್ಯರಿಗೆ ಅಪಾಯಕಾರಿ ಎನ್ನಲಾಗಿತ್ತು.

1976ರಲ್ಲಿ ಮೊದಲ ಸೋಂಕಿತ ಪ್ರಕರಣ ಪತ್ತೆ
ಆಫ್ರಿಕಾದ ಕೇಂದ್ರ ಭಾಗದಲ್ಲಿ ಇರುವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಪ್ರದೇಶದಲ್ಲಿ 1976ರಲ್ಲಿ ಮೊದಲಿಗೆ ವ್ಯಕ್ತಿಯೊಬ್ಬರಲ್ಲಿ ಎಬೋಲಾ ಸೋಂಕು ಪತ್ತೆಯಾಗಿತ್ತು. ಅಂದು ಮಾರಕ ಹೇಗೆ ಹುಟ್ಟಿಕೊಂಡಿತು ಎಂದು ವಿಜ್ಞಾನಿಗಳೂ ಪತ್ತೆ ಮಾಡಲು ಆಗಲಿಲ್ಲ. ಆರಂಭದಲ್ಲಿ ಎಬೋಲಾ ಕೂಡಾ ಸಾಮಾನ್ಯ ವೈರಸ್ ಗಳಂತೆ ಗೋಚರಿಸಿದ್ದು, ಬಾವತಿ ಅಥವಾ ಸಸ್ತನಿಗಳಲ್ಲಿ ಹುಟ್ಟಿಕೊಂಡಿದ್ದು, ಮನುಷ್ಯರಿಗೆ ಹರಡಿದೆ ಎಂದು ನಂಬಲಾಗಿತ್ತು.

ಮಾರಕ ಎಬೋಲಾ ವೈರಸ್ ಎಷ್ಟು ಅಪಾಯಕಾರಿ?
ಎಬೋಲಾ ವೈರಸ್ ಸೋಂಕಿತನನ್ನು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತವೆ. ಮನುಷ್ಯರ ದೇಹವನ್ನು ಸೇರುವ ಸೂಕ್ಷ್ಮಾಣುಗಳು ನರಮಂಡಲದ ಮೇಲೆ ಪ್ರಭಾವ ಬೀರುತ್ತವೆ. ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಸೋಂಕಿತನ ಪ್ರತಿಯೊಂದು ಅಂಗದ ಮೇಲೂ ವೈರಸ್ ಗಳು ದಾಳಿ ನಡೆಸಿ ದುರ್ಬಲಗೊಳಿಸುತ್ತವೆ. ಇದರಿಂದ ದೇಹದಲ್ಲಿ ರಕ್ತ ಸೋರಿಕೆಯಾಗುವ ಅಪಾಯವಿರುತ್ತದೆ.

ಡೆಡ್ಲಿ ಎಬೋಲಾ ವೈರಸ್ ಹರಡುವುದು ಹೇಗೆ?
ಮಂಗ, ಕೋತಿ, ಬಾವಲಿ ಹೀಗೆ ಪ್ರಾಣಿಗಳಲ್ಲಿ ಕಾಣಿಸಿಕೊಂಡ ಎಬೋಲಾ ಸೋಂಕು ಕ್ರಮೇಣ ಮನುಷ್ಯರನ್ನೂ ಪ್ರವೇಶಿಸಿತು. ಮೊದಲು ಪ್ರಾಣಿಗಳಿಂದ ಆರಂಭವಾದ ಸೋಂಕಿನ ಹಾವಳಿ ನಂತರ ಜನರ ನಡುವಿನ ನೇರ ಸಂಪರ್ಕ ಮತ್ತು ಸ್ಪರ್ಶ, ಸೋಂಕಿತನ ರಕ್ತ, ಸೋಂಕಿತನ ಎಂಜಲು, ಸೋಂಕಿತ ವ್ಯಕ್ತಿ ಜೊತೆಗಿನ ಲೈಂಗಿಕ ಸಂಪರ್ಕದಿಂದಲೂ ಎಬೋಲಾ ಹರಡುತ್ತದೆ.

ಎಬೋಲಾ ಸೋಂಕಿತರ ಲಕ್ಷಣಗಳು ಹೇಗಿರುತ್ತವೆ?
ಒಮ್ಮೆ ಎಬೋಲಾ ವೈರಸ್ ಸೋಂಕು ತಗಲಿದ ನಂತರ 2 ರಿಂದ 21 ದಿನಗಳವರೆಗೂ ಸೋಂಕಿತರಲ್ಲಿ ಈ ಲಕ್ಷಣಗಳು ಕಂಡು ಬರುತ್ತವೆ ಎಂದು ವಿಜ್ಞಾನಿಗಳು ಮತ್ತು ವೈದ್ಯರು ತಿಳಿಸಿದ್ದಾರೆ.
- ಜ್ವರ
- ತಲೆನೋವು, ಮೈ-ಕೈ ನೋವು,
- ಹೊಟ್ಟೆನೋವು
- ಅತಿಸಾರ ಮತ್ತು ವಾಂತಿ
- ತೀವ್ರ ರಕ್ತಸ್ರಾವ

ಎಬೋಲಾ ಮತ್ತು ಕೊರೊನಾ ನಡುವಿನ ವ್ಯತ್ಯಾಸ
1976ರಲ್ಲೇ ಕಾಣಿಸಿಕೊಂಡ ಎಬೋಲಾ ಕೂಡಾ ಆರಂಭಿಕ ಹಂತದಲ್ಲಿ ಸಾಕಷ್ಟು ಅಪಯಕಾರಿಯಾಗಿ ವಿಶ್ವವನ್ನು ವ್ಯಾಪಿಸಿತು. ಸಾವಿರಾರು ಜನರು ಇದೇ ಎಬೋಲಾ ರೋಗದಿಂದ ಪ್ರಾಣ ಬಿಟ್ಟಿದ್ದಾರೆ. ಆದರೆ ಅಂದು ವೈದ್ಯರು ಸೋಂಕಿತರಿಗೆ ನೀಡಿದ ಚಿಕಿತ್ಸೆ ಮತ್ತು ಅನುಸರಿಸಿದ ಮುನ್ನೆಚ್ಚರಿಕೆ ಕ್ರಮಗಳು ಇಂದಿಗೂ ಮಾದರಿಯಾಗಲಿವೆ. ಹಾಗಿದ್ದಲ್ಲಿ ಎಬೋಲಾ ಸೋಂಕಿತರಿಗೆ ನೀಡಿದ ಚಿಕಿತ್ಸಾ ವಿಧಾನ ಹೇಗಿತ್ತು ಎಂಬುದನ್ನು ಮುಂದಿನ ಭಾಗದಲ್ಲಿ ತಿಳಿಯೋಣ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications