ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲಿಕಾರ್ಜುನ ಖರ್ಗೆ ಆಸ್ತಿ ವಿವರ: ಖರ್ಗೆ ಬಳಿ ಕಾರಿಲ್ಲ!

|
Google Oneindia Kannada News

Recommended Video

ಮಲ್ಲಿಕಾರ್ಜುನ ಖರ್ಗೆ ಒಟ್ಟಾರೆ ಆಸ್ತಿ ಎಷ್ಟು? Lok Sabha Elections 2019 | Oneindia Kannada

ಕಲಬುರಗಿ, ಏಪ್ರಿಲ್ 05: ಕಾಂಗ್ರೆಸ್ ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ನ ಹಿರಿಯ ಸಂಸದರಾಗಿರುವ ಅವರು ಹಲವು ದಶಕಗಳಿಂದಲೂ ಸಕ್ರಿಯ ರಾಜಕಾರಣದಲ್ಲಿ ಇರುವವರು. ದಲಿತ ಹೋರಾಟಗಳ ಮೂಲಕ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಖರ್ಗೆ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡರು.

ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಏರಿಕೆ!ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಏರಿಕೆ!

ಖರ್ಗೆ ಅವರು ನಾಮಪತ್ರದ ಜೊತೆಗೆ ನಿಯಮಾನುಸಾರ ತಮ್ಮ ಆಸ್ತಿ ಸೇರಿದಂತೆ ಹಲವು ಮಾಹಿತಿಗಳನ್ನು ಆಯೋಗಕ್ಕೆ ನೀಡಿದ್ದಾರೆ ಅದರಂತೆ, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ, ಅವರು ಬಿಎ, ಎಲ್‌ಎಲ್‌ಬಿ ಓದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಲ್ಲಿಕಾರ್ಜುನ ಖರ್ಗೆ ಅವರು 2017-18ನೇ ಆರ್ಥಿಕ ಸಾಲಿನಲ್ಲಿ 27.38 ಲಕ್ಷ ಆದಾಯಕ್ಕೆ ತೆರಿಗೆ ಪಾವತಿಸಿದ್ದಾರೆ. ಅವರ ಪತ್ನಿ ರಾಧಾಬಾಯಿ ಖರ್ಗೆ ಅವರು ಇದೇ ಆರ್ಥಿಕ ಸಾಲಿನಲ್ಲಿ 56.73 ಲಕ್ಷಕ್ಕೆ ಆದಾಯ ತೆರಿಗೆ ಪಾವತಿಸಿದ್ದಾರೆ. ಖರ್ಗೆ ಅವರ ಬ್ಯಾಂಕ್ ಖಾತೆಯಲ್ಲಿ 85.72 ಲಕ್ಷ ರೂಪಾಯಿ ಇದೆ. ಪತ್ನಿ ಅವರ ಬ್ಯಾಂಕ್ ಖಾತೆಯಲ್ಲಿ 66.39 ಲಕ್ಷ ರೂಪಾಯಿ ಹಣವಿದೆ.

ಖರ್ಗೆ ಬಳಿ ಚಿನ್ನಾಭರಣ ಎಷ್ಟು?

ಖರ್ಗೆ ಬಳಿ ಚಿನ್ನಾಭರಣ ಎಷ್ಟು?

ಖರ್ಗೆ ಅವರು 22.67 ಲಕ್ಷ ಹಣವನ್ನು ಷೇರು, ಡಿವಿಡೆಂಡ್‌ಗಳ ಮೇಲೆ ಹೂಡಿದ್ದಾರೆ, ಪತ್ನಿ ಹೆಸರಲ್ಲಿ 2.60 ಲಕ್ಷ ಹೂಡಿಕೆ ಇದೆ. ಖರ್ಗೆ ಹಾಗೂ ಅವರ ಪತ್ನಿ ಬಳಿ ಯಾವುದೇ ಕಾರು ಇಲ್ಲ, ಸಾಲವೂ ಇಲ್ಲ, ಖರ್ಗೆ ಅವರ ಬಳಿ 10.30 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಇದೆ. ಪತ್ನಿ ಬಳಿ 29.35 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ.

ಖರ್ಗೆ ಅವರ ಬಳಿ ಇರುವ ಕೃಷಿ ಭೂಮಿಯ ಲೆಕ್ಕ

ಖರ್ಗೆ ಅವರ ಬಳಿ ಇರುವ ಕೃಷಿ ಭೂಮಿಯ ಲೆಕ್ಕ

ಖರ್ಗೆ ಅವರ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ, ಪತ್ನಿ ರಮಾಬಾಯಿ ಹೆಸರಲ್ಲಿ 22 ಎಕರೆ ಕೃಷಿ ಜಮೀನಿದೆ, ಇದರ ಈಗಿನ ಮೌಲ್ಯ 44.08 ಲಕ್ಷ ರೂಪಾಯಿ. ಖರ್ಗೆ ಅವರ ಹೆಸರಿನಲ್ಲಿ 1.08 ಎಕರೆ ಕೃಷಿಯೇತರ ಜಮೀನು ಇವೆ. ಇದರ ಮಾರುಕಟ್ಟೆ ಮೌಲ್ಯ 7.75 ಲಕ್ಷ. ಪತ್ನಿ ಹೆಸರಲ್ಲಿ 4.9 ಎಕರೆ ಕೃಷಿಯೇತರ ಜಮೀನಿದೆ ಇದರ ಮೌಲ್ಯ 35.18 ಲಕ್ಷ ರೂಪಾಯಿ ಇದೆ.

7 ಬಾರಿ ಸಂಸದ ಕೆ.ಎಚ್.ಮುನಿಯಪ್ಪ ಗಿಂತಲೂ ಪತ್ನಿ 64 ಪಟ್ಟು ಸಿರಿವಂತೆ! 7 ಬಾರಿ ಸಂಸದ ಕೆ.ಎಚ್.ಮುನಿಯಪ್ಪ ಗಿಂತಲೂ ಪತ್ನಿ 64 ಪಟ್ಟು ಸಿರಿವಂತೆ!

ಖರ್ಗೆ ಅವರ ಹೆಸರಲ್ಲಿರುವ ಮನೆಗಳೆಷ್ಟು?

ಖರ್ಗೆ ಅವರ ಹೆಸರಲ್ಲಿರುವ ಮನೆಗಳೆಷ್ಟು?

ಖರ್ಗೆ ಅವರ ಹೆಸರಿನಲ್ಲಿ ಯಾವುದೇ ವಾಣಿಜ್ಯ ಕಟ್ಟಡಗಳು ಇಲ್ಲ, ಪತ್ನಿ ಹೆಸರಿನಲ್ಲಿ 1.79 ಕೋಟಿ ಮೌಲ್ಯದ ಒಂದು ಹಾಗೂ 84 ಲಕ್ಷ ಮೌಲ್ಯದ ಒಂದು ವಾಣಿಜ್ಯ ಕಟ್ಟಡ ಇದೆ. ಖರ್ಗೆ ದಂಪತಿಗಳ ಹೆಸರಿನಲ್ಲಿ ಸದಾಶಿವನಗರದಲ್ಲಿ ಮನೆ ಇದ್ದು, ಇದರ ಮಾರುಕಟ್ಟೆ ಮೌಲ್ಯ 1.23 ಕೋಟಿ. ಖರ್ಗೆ ಅವರ ಹೆಸರಿನಲ್ಲಿ ಕಲಬುರಗಿಯಲ್ಲಿ 32 ಲಕ್ಷ ಮೌಲ್ಯದ ವಸತಿ ಕಟ್ಟಡವಿದೆ. ಆರ್‌ಎಂವಿ ಎರಡನೇ ಹಂತದಲ್ಲಿ 4.64 ಕೋಟಿ ಮೌಲ್ಯದ ವಸತಿ ಕಟ್ಟಡ ಇದೆ. ಪತ್ನಿ ಹೆಸರಲ್ಲಿ 48.16 ಲಕ್ಷದ ಮನೆಯೊಂದಿದೆ.

ವೀರಪ್ಪ ಮೊಯ್ಲಿ ಅವರ ಒಟ್ಟು ಆಸ್ತಿಗಿಂತಲೂ 14 ಪಟ್ಟು ಹೆಚ್ಚು ಸಾಲವಿದೆ ವೀರಪ್ಪ ಮೊಯ್ಲಿ ಅವರ ಒಟ್ಟು ಆಸ್ತಿಗಿಂತಲೂ 14 ಪಟ್ಟು ಹೆಚ್ಚು ಸಾಲವಿದೆ

ಖರ್ಗೆ ಅವರ ಒಟ್ಟು ಆಸ್ತಿ ಎಷ್ಟು?

ಖರ್ಗೆ ಅವರ ಒಟ್ಟು ಆಸ್ತಿ ಎಷ್ಟು?

ಖರ್ಗೆ ಅವರ ಮೇಲೆ 10 ಲಕ್ಷ ರೂಪಾಯಿ ಸಾಲದ ಹೊರೆ ಇದೆ. ಪತ್ನಿ ಹೆಸರಿನಲ್ಲಿ 21.22 ಲಕ್ಷ ಸಾಲವಿದೆ. ಖರ್ಗೆ ಅವರ ಒಟ್ಟು ಚರಾಸ್ತಿ ಮೌಲ್ಯ 1.36 ಕೋಟಿ. ಸ್ಥಿರಾಸ್ತಿ ಮೌಲ್ಯ 6.21 ಕೋಟಿ. ಖರ್ಗೆ ಅವರ ಒಟ್ಟು ಆಸ್ತಿ 7.61 ಕೋಟಿ ಇದೆ. ಖರ್ಗೆ ಅವರ ಪತ್ನಿ ಅವರ ಬಳಿ ಒಟ್ಟು 7.15 ಕೋಟಿ ಆಸ್ತಿ ಇದೆ.

ರಾಹುಲ್ ಆಸ್ತಿ 15.88 ಕೋಟಿ, 72 ಲಕ್ಷ ಸಾಲ, ಎಮ್.ಫಿಲ್., ವಿದ್ಯಾಭ್ಯಾಸ ರಾಹುಲ್ ಆಸ್ತಿ 15.88 ಕೋಟಿ, 72 ಲಕ್ಷ ಸಾಲ, ಎಮ್.ಫಿಲ್., ವಿದ್ಯಾಭ್ಯಾಸ

English summary
Congress leader Mallikarjun Kharge filled nomination from Kalburagi yesterday. Here is the asset details of Mallikarjun Kharge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X