ರಷ್ಯಾದ Su-35S ಮತ್ತು ಫ್ರಾನ್ಸ್‌ನ ರಫೇಲ್ ಪೈಕಿ ಯಾವುದು ಬೆಟರ್?
ಉಕ್ರೇನ್ ವಾಯುಪಡೆ ಇತ್ತೀಚೆಗೆ ರಷ್ಯಾದ ಎಸ್‌ಯು-35ಎಸ್ ಫೈಟರ್ ಜೆಟ್ ಅನ್ನು ತನ್ನ ಕ್ಷಿಪಣಿ ದಾಳಿಗಳಿಂದ ಹೊಡೆದುಹಾಕಿತು. ಸು-35ಎಸ್ ಯುದ್ಧವಿಮಾನದ ಅವಶೇಷಗಳ ಫೋಟೋಗಳನ್ನು ಉಕ್ರೇನ್ ಮಿಲಿಟರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿತ್ತು. ರಷ್ಯಾದ ಐದನೇ ತಲೆಮಾರಿನ ತಂತ್ರಜ್ಞಾನ ಇರುವ ಈ ಯುದ್ಧವಿಮಾನವು ಆ ದೇಶದ ಅತ್ಯಂತ ಬಲಿಷ್ಠ ಫೈಟರ್ ಜೆಟ್‌ಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಅಚ್ಚರಿ ಎಂದರೆ ಉಕ್ರೇನ್ ಬಳಿ ಇರುವುದು ಯಾವುದೋ ಹಳೆಯ ಕಾಲದ ವಾಯು ರಕ್ಷಣಾ ವ್ಯವಸ್ಥೆ. ಆದರೂ ರಷ್ಯಾದ ಪ್ರಬಲ ಹಾಗೂ ಬೃಹತ್ ಗಾತ್ರದ ಫೈಟರ್ ಜೆಟ್ ಅನ್ನು ಉಡಾಯಿಸಿದೆ. ಇನ್ನೂ ಅಚ್ಚರಿ ಎಂದರೆ ಸ್ಟೀಲ್ತ್ ತಂತ್ರ (ರಾಡಾರ್ ಕಣ್ಣಿಗೆ ಬೀಳದಂತೆ) ಇಲ್ಲದೆಯೇ ಕ್ಷಿಪಣಿಗಳು Su-35 S ಜೆಟ್ ಅನ್ನು ನೆಲಕ್ಕುರುಳಿಸಿದ್ದವು.
ಚೀನಾಗೆ ಶುರುವಾಯಿತು ಆತಂಕ: ರಷ್ಯಾದ ಸು-35ಎಸ್ ಫೈಟರ್ ಜೆಟ್ ಅನ್ನು ಉಕ್ರೇನ್ ಪಡೆಗಳು ಹೊಡೆದು ಹಾಕಿದ ಘಟನೆ ರಷ್ಯಾ ದೇಶವನ್ನು ತಲ್ಲಣಗೊಳಿಸಿದೆ. ತನ್ನ ಅತ್ಯಾಧುನಿಕ ಮತ್ತು ಭಾರೀ ಸಾಮರ್ಥ್ಯದ ಯುದ್ಧವಿಮಾನ ನಾಶವಾಗಿದ್ದು ರಷ್ಯಾದ ಕಣ್ಣು ಕೆಂಪಗಾಗಿಸಿದೆ. ಚೀನಾ ಕೂಡ ಕಂಗಾಲಾಗಿದೆ ಎಂದು ಹೇಳಲಾಗುತ್ತಿದೆ. ಒಂದು ಯುದ್ಧವಿಮಾನ ಉರುಳಿಬಿದ್ದರೆ ಅಷ್ಟು ಆತಂಕ ಪಡುವ ಅಗತ್ಯವಾದರೂ ಏನು ಅನಿಸಬಹುದು. ಅದಕ್ಕೆ ಕಾರಣ ಇದೆ. ಈ ಬಗ್ಗೆ ಇನ್ನಷ್ಟು ವಿವರ ಮುಂದಿದೆ...

ರಹಸ್ಯ ತಂತ್ರಜ್ಞಾನದ ಫೈಟರ್ ಜೆಟ್ ಅದಾಗಿತ್ತು:
ರಷ್ಯಾದ ಸುಖೋಯ್ ಸು-35ಎಸ್ ಫೈಟರ್ ಜೆಟ್ ಮೊದಲೇ ಹೇಳಿದಂತೆ ಐದನೇ ತಲೆಮಾರಿನ ಯುದ್ಧವಿಮಾನ ಎನಿಸಿದೆ. ಜಗತ್ತಿನ ಅತ್ಯಂತ ಪ್ರಬಲ ಫೈಟರ್ ಜೆಟ್ ಇದು ಎಂದು ಹೇಳಿಕೊಳ್ಳಲಾಗುತ್ತಿತ್ತು. ಈಗ ಈ ಯುದ್ಧವಿಮಾನದ ಅವಶೇಷಗಳು ಉಕ್ರೇನ್ ಪಡೆಗಳ ಸುಪರ್ದಿಗೆ ಸಿಕ್ಕಿದೆ. ಈ ತಂತ್ರಜ್ಞಾನದ ರಹಸ್ಯ ಶತ್ರುಗಳಿಗೆ ತಿಳಿದುಹೋದರೆ ಭಾರೀ ಹಿನ್ನಡೆ ಆದಂತಾಗುತ್ತದೆ. ಇದು ರಷ್ಯಾ ಮತ್ತು ಚೀನಾಗೆ ಆತಂಕ ತರುತ್ತಿರುವ ಸಂಗತಿ.

ಅಮೆರಿಕ ಅಂಡ್ ಕೋ ಇಂದ ನಡೆಯುತ್ತಿದೆ ಅಧ್ಯಯನ:
ಸುಖೋಯ್ ಸು-35ಎಸ್ ಯುದ್ಧವಿಮಾನದ ಅವಕಶೇಷಗಳ ಬಗ್ಗೆ ಉಕ್ರೇನ್ ವಾಯುಪಡೆ ತಜ್ಞರು ಬಹಳ ಮುಖ್ಯವಾದ ಮತ್ತು ರಹಸ್ಯವಾದ ಮಾಹಿತಿಯನ್ನು ಪತ್ತೆಹಚ್ಚಿದ್ದಾರೆನ್ನಲಾಗಿದೆ. ಈ ಮಾಹಿತಿ ಮತ್ತು ವಿಮಾನದ ಅವಶೇಷದ ಭಾಗಗಳನ್ನ ಬ್ರಿಟಿಷ್ ಗುಪ್ತಚರ ಸಂಸ್ಥೆಗೂ ಕಳುಹಿಸಿಕೊಡಲಾಗಿದೆ. ಬ್ರಿಟನ್ ಮತ್ತು ಅಮೆರಿಕನ್ ವಿಜ್ಞಾನಿಗಳು ಈಗ ಈ ಫೈಟರ್ ಜೆಟ್‌ನ ರಹಸ್ಯವನ್ನು ಸಂಪೂರ್ಣವಾಗಿ ಜಾಲಾಡುವ ಕೆಲಸದಲ್ಲಿದ್ದಾರೆ.

ಚೀನಾಗೆ ಯಾಕೆ ಕಳವಳ?
ತನ್ನ ಫೈಟರ್ ಜೆಟ್ ಪತನಗೊಂಡು ಶತ್ರುಗಳಿಗೆ ಸಿಕ್ಕಿಹೋಗಿರುವುದು ರಷ್ಯಾ ಮತ್ತು ಚೀನಾಗೆ ಆತಂಕ ತಂದಿದೆ. ರಷ್ಯಾ ಬಳಿ 47 ಎಸ್‌ಯು-35ಎಸ್ ಫೈಟರ್ ಜೆಟ್‌ಗಳಿವೆ. ಈ ಜೆಟ್‌ನ ತಂತ್ರಜ್ಞಾನದ ರಹಸ್ಯ ಶತ್ರುಗಳಿಗೆ ತಿಳಿದುಹೋದರೆ ಇವುಗಳನ್ನ ಯುದ್ಧದಲ್ಲಿ ಬಳಕೆ ಮಾಡುವುದೇ ನಿರರ್ಥಕ ಎನಿಸಿಬಿಡಬಹುದು. ಹಾಗೆಯೇ, ರಷ್ಯಾದ ಪ್ರಮುಖ ಡಿಫೆನ್ಸ್ ಪಾರ್ಟ್ನರ್ ಎನಿಸಿರುವ ಚೀನಾ ಕೂಡ ರಷ್ಯಾದಿಂದ 24 ಸು-35ಎಸ್ ಫೈಟರ್ ಜೆಟ್‌ಗಳನ್ನ ಖರೀದಿ ಮಾಡುತ್ತಿದೆ. ಇದು ಚೀನಾದ ಆತಂಕಕ್ಕೆ ಕಾರಣ.

ಸು-35ಎಸ್ ಶ್ರೇಷ್ಠತೆಗಳು ಹಲವು:
ಸುಖೋಯ್ ಸು35ಎಸ್ ಯುದ್ಧವಿಮಾನ ರಷ್ಯಾದ ಬೆಸ್ಟ್ ಫೈಟರ್ ಜೆಟ್ ಎಂದು ಪರಿಗಣಿತವಾಗಿದೆ. ಡಬಲ್ ಎಂಜಿನ್ ಇರುವ ಈ ಯುದ್ಧವಿಮಾನಕ್ಕೆ ಡಿಜಿಟಲ್ ಮಾಹಿತಿ ನಿಯಂತ್ರಣ ವ್ಯವಸ್ಥೆ ಇದೆ. ಹಾಗೆಯೇ, ಎಂಟು ಗುರಿಗಳನ್ನ ಏಕಕಾಲದಲ್ಲಿ ನಿರ್ವಹಿಸಬಲ್ಲ ಹೊಸ ರಾಡಾರ್ ವ್ಯವಸ್ಥೆ ಹೊಂದಿದೆ. ಬರೋಬ್ಬರಿ 2400 ಕಿಮೀ ವೇಗದಲ್ಲಿ 3600 ಕಿಮೀ ದೂರ ಕ್ರಮಿಸಬಲ್ಲ ಈ ಸೂಪರ್ ಮಲ್ಟಿ-ಪರ್ಪೋಸ್ ಯುದ್ದವಿಮಾನವು ರಾಕೆಟ್, ವಿವಿಧ ಕ್ಷಿಪಣಿಗಳನ್ನ ಹೊತ್ತೊಯ್ಯಬಲ್ಲುದು. ಇದರಲ್ಲಿರುವ ಪ್ರಬಲ ರಾಡಾರ್ 500 ಕಿಮೀ ದೂರದಿಂದಲೇ ಶತ್ರುಗಳ ಜೆಟ್‌ಗಳನ್ನ ಗುರುತಿಸಬಲ್ಲುದು.

ಸು-35ಎಸ್‌ಗೆ ಹೋಲಿಸಿದರೆ ರಫೇಲ್ ಹೇಗೆ?
ಸುಖೋಯ್ ಸು-35ಎಸ್‌ನಂತೆ ರಫೇಲ್ ಕೂಡ ಐದನೇ ತಲೆಮಾರಿನ ತಂತ್ರಜ್ಞಾನ ಇರುವ ಯುದ್ಧವಿಮಾನವಾಗಿದೆ. ಫ್ರಾನ್ಸ್ ದೇಶದ ಡಸ್ಸೋ ಸಂಸ್ಥೆ ತಯಾರಿಸಿರುವ ರಫೇಲ್ 190 ಕಿಲೋ ತೂಕಷ್ಟು ಕ್ಷಿಪಣಿಗಳನ್ನ ಹೊತ್ತು 2200 ಕಿಮೀ ವೇಗದಲ್ಲಿ ಸಾಗಬಲ್ಲುದು. ರಫೇಲ್ 50 ಸಾವಿರ ಅಡಿಯಷ್ಟು ಎತ್ತರದಲ್ಲಿ ಹಾರಾಡಬಲ್ಲುದು.
ಆದರೆ, ರಫೇಲ್‌ಗೆ ಹೋಲಿಸಿದರೆ ರಷ್ಯಾದ ಸೂಪರ್ ಫೈಟರ್ ಜೆಟ್ ಬಹಳ ಶಕ್ತಿಶಾಲಿ ಮತ್ತು ಪರಿಣಾಮಕಾರಿ ಎನಿಸಿದೆ. ಇದು 60 ಸಾವಿರ ಅಡಿ ಎತ್ತರದಲ್ಲಿ ಸಾಗಬಲ್ಲುದು. ಡಾಗ್ ಫೈಟ್ ಅಥವಾ ವೈಮಾನಿಕ ಸಂಘರ್ಷದ ವೇಳೆ ಶತ್ರುಗಳ ಜೆಟ್‌ಗಳ ಎದುರು ಫೈಟ್ ಮಾಡುವುದು ಸುಲಭವಾಗುತ್ತದೆ.
ಸು-35ಎಸ್ ಯುದ್ಧವಿಮಾನ ಹಲವಾರು ಕೋನಗಳಿಂದ ದಾಳಿ ಮಾಡಲು ಸಮರ್ಥವಾಗಿದೆ. ಎದುರಾಳಿಗಳ ರಾಡಾರ್ ಅನ್ನು ನಿಷ್ಕ್ರಿಯಗೊಳಿಸಬಲ್ಲ ತಂತ್ರಜ್ಞಾನ ಇದಕ್ಕಿದೆ. ಜೆಟ್‌ನ ಮೂತಿ ಒಂದು ದಿಕ್ಕಿಗೆ ತಿರುಗಿಸುತ್ತಾ, ಮತ್ತೊಂದು ದಿಕ್ಕಿನಲ್ಲಿ ಚಲಿಸುವ ಸಾಮರ್ಥ್ಯ ರಷ್ಯಾದ ಈ ವಿಮಾನಕ್ಕಿದೆ.
ರಷ್ಯಾದ ಸು-35ಎಸ್ ತಂತ್ರಜ್ಞಾನಕ್ಕೆ ಹೋಲಿಸಬಹುದಾದ ಎಂಜಿನ್ ಇರುವುದು ಅಮೆರಿಕದ ಎಫ್-22 ಯುದ್ಧವಿಮಾನಕ್ಕೆ ಮಾತ್ರ ಎಂದು ತಜ್ಞರು ಹೇಳುತ್ತಾರೆ. ಆದರೆ, ಯುದ್ಧಸ್ಥಿತಿಯಲ್ಲಿ ಎಫ್-22 ಜೊತೆ ಹಣಾಹಣಿಗೆ ಇಳಿದರೆ ಸು-35ಎಸ್ ಯುದ್ಧವಿಮಾನಕ್ಕೆ ಮೇಲುಗೈ ಆಗುವ ನಿರೀಕ್ಷೆ ಇದೆ.

ಸಾಮಾನ್ಯ ದಾಳಿಗೆ ನೆಲಕ್ಕುರುಳಿದ ಶಕ್ತಿಶಾಲಿ ಯುದ್ಧವಿಮಾನ:
ಇಂಥ ಯುದ್ಧವಿಮಾನ ಈಗ ಉಕ್ರೇನ್‌ನ ಸಾಮಾನ್ಯ ರಕ್ಷಣಾ ವ್ಯವಸ್ಥೆಗೆ ಸಿಕ್ಕು ಪತನಗೊಂಡಿರುವುದು ವಿಪರ್ಯಾಸವೇ ಸರಿ. ಸ್ಟೀಲ್ತ್ ತಂತ್ರ ಇಲ್ಲದೆಯೇ ಉಕ್ರೇನ್ ಪಡೆಗಳು ಕ್ಷಿಪಣಿ ದಾಳಿ ನಡೆಸಿ ಸು-35ಎಸ್ ಅನ್ನು ಹೊಡೆದುಹಾಕಿವೆ. ನೂರಾರು ಕಿಮೀ ದೂರದಿಂದಲೇ ಎದುರಾಳಿಯ ಕ್ಷಿಪಣಿ ಅಥವಾ ಯುದ್ಧವಿಮಾನವನ್ನು ಗುರುತಿಸುವ ರಾಡಾರ್ ಇದ್ದರೂ ಸು-35ಎಸ್ ಪತನಗೊಂಡಿರುವುದು ಅಚ್ಚರಿ ತಂದಿದೆ. ಈ ಯುದ್ಧವಿಮಾನದಲ್ಲಿ ಬೇರಾವುದೋ ತಾಂತ್ರಿಕ ದೋಷ ಇದ್ದರೂ ಇರಬಹುದು. ಬ್ರಿಟನ್ ಮತ್ತು ಅಮೆರಿಕನ್ ವಿಜ್ಞಾನಿಗಳು ನಡೆಸುತ್ತಿರುವ ಅಧ್ಯಯನದಿಂದ ಕೆಲ ಮಹತ್ವ ಸಂಗತಿಗಳು ಬೆಳಕಿಗೆ ಬಂದರೆ ಅಚ್ಚರಿ ಇಲ್ಲ.
(ಒನ್ಇಂಡಿಯಾ ಸುದ್ದಿ)
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications