Get Updates
Get notified of breaking news, exclusive insights, and must-see stories!

ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಏಕೆ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ಭಾರತದಲ್ಲೂ ಕಂಡುಬಂದಿದೆ. ನಾಲ್ಕು ತಿಂಗಳ ಬಳಿಕ ಇಂಧನ ದರ ಪರಿಷ್ಕರಣೆ ಮಾಡಿದರೂ ಕಳೆದ 20 ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ. ಆದರೆ, ಅಡುಗೆ ಅನಿಲ ಸಿಲಿಂಡರ್ ಬೆಲೆ, ಸಿಎನ್ ಜಿ ಸೇರಿದಂತೆ ಹಲವು ಇಂಧನ ಉಪ ಉತ್ಪನ್ನಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ. ಮೇ 1ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಹಾಗೂ 5 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆಯಾಗಿದೆ.

ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗದಿದ್ದರೂ, ವಾಣಿಜ್ಯ ಬಳಕೆಯ ಸಿಲಿಂಡರ್‌ನ ಬೆಲೆಗಳನ್ನು ಸತತವಾಗಿ ಪ್ರತಿ ತಿಂಗಳ ಮೊದಲ ದಿನ ಏರಿಕೆ ಮಾಡಲಾಗುತ್ತಿದೆ. 14.2 ಕೆಜಿ ತೂಗುವ ಗೃಹಬಳಕೆಯ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಮಾರ್ಚ್ ತಿಂಗಳಲ್ಲಿ 50 ರು ಏರಿಕೆ ಮಾಡಲಾಗಿತ್ತು. ಸದ್ಯ ಬೆಲೆ 949.50 ಪ್ರತಿ ಸಿಲಿಂಡರ್‌ನಂತಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಆದರೆ ಈಗ ಪೆಟ್ರೋಲ್‌-ಡೀಸೆಲ್‌ ಬೆಲೆಯು ಏರಿದೆ. ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 100 US ಡಾಲರ್‌ಗಳಷ್ಟು ಏರಿಕೆಯಾಗಿತ್ತು. ಇಂದು ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 107.8 ಯುಸ್ ಡಾಲರ್‌ನಂತೆ ವ್ಯವಹಾರ ನಡೆಸುತ್ತಿದೆ.

Commercial LPG price hiked on May 01, 2022, Know reason behind price hike

ವಾಣಿಜ್ಯ ಬಳಕೆ ಸಿಲಿಂಡರ್ ದರ ಏರಿಕೆ
ಮೇ 1, ಭಾನುವಾರದಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 102.50 ರೂ.ಗಳಷ್ಟು ಹೆಚ್ಚಿಸಲಾಗಿದೆ. ಸಿಲಿಂಡರ್‌ನ ಬೆಲೆ ಈಗ ರೂ. 2355.50 ಆಗಿದ್ದು, ಈ ಹಿಂದೆ 2253 ರೂ. ನಷ್ಟಿತ್ತು. ಏಪ್ರಿಲ್ 1ರಂದು ವಾಣಿಜ್ಯ ಸಿಲಿಂಡರ್ ಬೆಲೆ 250 ರೂ. ಏರಿಕೆಯಾಗಿತ್ತು. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಳೆದ ತಿಂಗಳು ₹105 ಹೆಚ್ಚಿಸಿದ ನಂತರ, ಪ್ರತಿ ಸಿಲಿಂಡರ್‌ಗೆ (19 ಕೆಜಿ) ₹2,003ಕ್ಕೆ ಏರಿದ ನಂತರ ಇದು ಮೂರನೇ ಅತಿ ಹೆಚ್ಚು ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹2,351. ಮುಂಬೈ ಮತ್ತು ಚೆನ್ನೈನಲ್ಲಿ, ಬೆಲೆಗಳು ಕ್ರಮವಾಗಿ ₹2,205 ಮತ್ತು 2,406 ಆಗಿರುತ್ತದೆ. 5 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 655 ರು ಏರಿಕೆಯಾಗಿದೆ.

Commercial LPG price hiked on May 01, 2022, Know reason behind price hike

ಇನ್ನಷ್ಟು ಬೆಲೆ ಏರಿಕೆ?
ಜಾಗತಿಕ ಅನಿಲ ಬಿಕ್ಕಟ್ಟಿನಿಂದಾಗಿ ಅಡುಗೆ ಅನಿಲಗಳ ಬೆಲೆಗಳು ಏರಿಕೆ ಆಗುವ ಸಾಧ್ಯತೆ ಇದೆ. ಜಾಗತಿಕ ಬಿಕ್ಕಟ್ಟಿನೊಂದಿಗೆ, ಸಿಎನ್‌ಜಿ, ಪಿಎನ್‌ಜಿ ಮತ್ತು ವಿದ್ಯುತ್ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಇದು ಸಾರಿಗೆ ವೆಚ್ಚ ಮತ್ತು ಕೈಗಾರಿಕೆಗಳ ಕಾರ್ಯಾಚರಣೆಯ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸರ್ಕಾರದ ರಸಗೊಬ್ಬರ ಸಬ್ಸಿಡಿ ಬಿಲ್ ಕೂಡ ಏರಿಕೆ ಕಾಣಬಹುದು. ಈ ಎಲ್ಲಾ ಅಂಶಗಳ ನೇರ ಪರಿಣಾಮವನ್ನು ಗ್ರಾಹಕರು ಎದುರಿಸಬಹುದು. ರಷ್ಯಾ ಹಾಗೂ ಉಕ್ರೇನ್‌ ನಡುವಿನ ಬಿಕ್ಕಟ್ಟು ಇಂಧನ ಪೂರೈಕೆಯನ್ನು ಅಡ್ಡಿಯಾಗಿದೆ. ಕೋವಿಡ್ -19 ಸಾಂಕ್ರಾಮಿಕದ ಪರಿಣಾಮ ಜಾಗತಿಕ ಆರ್ಥಿಕತೆ ಕುಸಿತ ಕಂಡರೂ ಕ್ರಮೇಣ ಚೇತರಿಸಿಕೊಳ್ಳುತ್ತಿದೆ.

ಭಾರತದಲ್ಲಿ ಎಲ್‌ಪಿಜಿ ದರ ದುಬಾರಿ:
ಭಾರತದಲ್ಲಿ ಒಂದು ಲೀಟರ್ ಎಲ್‌ಪಿಜಿ ಬೆಲೆ 3.5 ಅಂತಾರಾಷ್ಟ್ರೀಯ ಡಾಲರ್ ಬೆಲೆ ಇದೆ. ನಂತರದ ಸ್ಥಾನದಲ್ಲಿ ಟರ್ಕಿ, ಫಿಜಿ, ಮಾಲ್ಡೋವಾ ಮತ್ತು ಉಕ್ರೇನ್ ದೇಶಗಳಿವೆ. ಆದರೆ, ಸ್ವಿಟ್ಜರ್ಲ್ಯಾಂಡ್, ಫ್ರಾನ್ಸ್, ಕೆನಡಾ, ಬ್ರಿಟನ್ ದೇಶಗಳಲ್ಲಿ ಒಂದು ಲೀಟರ್ ಎಲ್‌ಪಿಜಿ ಬೆಲೆ ಕೇವಲ 1 ಡಾಲರ್ ಮಾತ್ರ ಇದೆ. ಪರ್ಚೇಸ್ ಪವರ್ ಪ್ಯಾರಿಟಿ ಲೆಕ್ಕಾಚಾರಕ್ಕೆ ಹಲವು ಲೆಕ್ಕಾಚಾರಗಳಿವೆ. ಒಂದು ದೇಶದ ಜಿಡಿಪಿ, ತಲಾದಾಯ ಇತ್ಯಾದಿಯನ್ನು ಪರಿಗಣಿಸಲಾಗುತ್ತದೆ

ಸಾರ್ವಜನಿಕರಿಂದ ಆಕ್ರೋಶ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+