ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾಲದಲ್ಲಿ ಸೊರಗಿದ್ದ ಪ್ರವಾಸೋದ್ಯಮಕ್ಕೆ ಆನಂದ್ ಸಿಂಗ್ ಅಭಿವೃದ್ಧಿ ಸ್ಪರ್ಷ

|
Google Oneindia Kannada News

ಬೆಂಗಳೂರು, ಜುಲೈ29: ಬೊಮ್ಮಾಯಿ ಸರ್ಕಾರ ರಾಜ್ಯದಲ್ಲಿ ತನ್ನ 1 ವರ್ಷದ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿದೆ. ರಾಜ್ಯದಲ್ಲಿ ವಿವಿಧ ಅಭಿವೃದ್ದಿ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಸರ್ಕಾರ ತಿಳಿಸಿದೆ. ಇದೇ ಸಮಯದಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಯಾವೆಲ್ಲಾ ಯೋಜನೆ ಜಾರಿಯಾಗ್ತಿವೆ. ಪ್ರವಾಸೋದ್ಯಮ ಇಲಾಖೆಯ ಸಾಧನೆಗಳೇನು ಅನ್ನೋದರ ಮಾಹಿತಿ ಇಲ್ಲಿದೆ.

ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರನ್ನು ಸೆಳೆಯುವ ಕೆಲಸವನ್ನು ಮಾಡುತ್ತದೆ. ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಯೋಜನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಶ್ರೀಲಂಕಾ, ಥೈಲಾಂಡ್ ನಂತಹ ರಾಷ್ಟ್ರಗಳೇ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ ಅಂದರೆ ಪ್ರವಾಸೋದ್ಯಮ ಖಾತೆಯ ಮಹತ್ವ ಅರಿವಾಗುತ್ತದೆ. ಪ್ರವಾಸೋದ್ಯಮ ಜನರನ್ನು ತನ್ನೆಡೆಗೆ ಸೆಳೆಯುವಂತ ಪ್ರವಾಸಿ ತಾಣವನ್ನು ಅಭಿವೃದ್ದಿ ಪಡಿಸಬೇಕಾಗುತ್ತದೆ.

Breaking: ಭಾರತದಲ್ಲಿ ಒಂದೇ ದಿನ 20409 ಮಂದಿಗೆ ಕೊರೊನಾ ವೈರಸ್! Breaking: ಭಾರತದಲ್ಲಿ ಒಂದೇ ದಿನ 20409 ಮಂದಿಗೆ ಕೊರೊನಾ ವೈರಸ್!

ಕೋವಿಡ್ 19ರ ತೊಂದರೆ ಜನಸಾಮಾನ್ಯರಿಗೆ ಮಾತ್ರವಲ್ಲ ಪ್ರವಾಸೋದ್ಯಮದ ಮೇಲೂ ಬೀರಿದೆ. ಪ್ರವಾಸಿ ತಾಣಗಳು ಜನರಿಗಲ್ಲದೇ ಕೋವಿಡ್ ಸಮಯದಲ್ಲಿ ಸೋರಗಿವೆ. ಪ್ರವಾಸೋದ್ಯಮಕ್ಕೆ ಹಳೆಯ ಮೆರಗನ್ನು ತರಲು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ತಮ್ಮ ಇಲಾಖೆಗೆ ಕಾಡಿಬೇಡಿ ಅನುದಾನವನ್ನು ತಂದು ಪ್ರವಾಸೋದ್ಯಮಕ್ಕೆ ಅನುಕೂಲವಾಗಿರುವ ಪ್ರದೇಶಗಳನ್ನು ಅಭಿವೃದ್ದಿ ಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೈಸೂರು, ಅಂಜನಾದ್ರಿ ಸೇರಿದಂತೆ ವಿವಿಧ ಪ್ರದೇಶಗಳ ಅಭಿವೃದ್ದಿಗೆ ಪಣತೊಟ್ಟಿದ್ದಾರೆ.

 ಆಂಜನೇಯನ ಜನ್ಮಸ್ಥಳ ಅಭಿವೃದ್ದಿ

ಆಂಜನೇಯನ ಜನ್ಮಸ್ಥಳ ಅಭಿವೃದ್ದಿ

ಆಂಜನೇಯ ಜನಿಸಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಹೊಸ ರೂಪ ಕೊಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.

ಆಂಜನೇಯ ಜನಿಸಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಅಂಜನಾದ್ರಿ ಬೆಟ್ಟವಿದೆ. ಅಂಜನಾದ್ರಿ ಬೆಟ್ಟಕ್ಕೆ ಹೊಸ ಸ್ವರೂಪವನ್ನು ಕೊಡಲು ಯೋಜನೆಯನ್ನು ರೂಪಿಸಲಾಗಿದೆ. ಅಂಜನಾದ್ರಿಯನ್ನು 50 ಕೋಟಿ ರೂಪಾಯಿ ವ್ಯಚ್ಚದಲ್ಲಿ ಅಭಿವೃದ್ದಿ ಮಾಡಲಾಗುತ್ತಿದೆ. ಅಂಜನಾದ್ರಿಯಲ್ಲಿ ರೋಪ್ ವೇ , ಯಾತ್ರಿನಿವಾಸ್ , ವಾಟರ್ ಸ್ಪೋರ್ಟ್ಸ್ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಆ ಮೂಲಕ ಆಂಜನೇಯನ ಹುಟ್ಟೂರು ತಿರುಪತಿ ಎಂದು ಹೇಳುವ ತಿರುಮಲಕ್ಕೆ ಸಡ್ಡು ಹೊಡೆದು ಪೌರಾಣಿಕ ಮಹತ್ವವುಳ್ಳ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ದಿ ಮಾಡಿ ಹನುಮಂತನ ಹುಟ್ಟೂರು ಅಂಜನಾದ್ರಿ ಕರ್ನಾಟಕದ್ದೂ ಎಂದು ಸಾರಲಿದ್ದಾರೆ.

 ಕೇಂದ್ರ ಸರ್ಕಾರ ಅನುದಾನದಲ್ಲಿ ಅಭಿವೃದ್ದಿ

ಕೇಂದ್ರ ಸರ್ಕಾರ ಅನುದಾನದಲ್ಲಿ ಅಭಿವೃದ್ದಿ

ಮೈಸೂರಿನಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ಈ ಪ್ರದೇಶವನ್ನು ಮತ್ತಷ್ಟು ಅಭಿವೃದ್ದಿ ಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ. ಪ್ರಸಾದ್ ಯೋಜನೆಯಡಿ 50 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ದಿಗೆ ಅಣಿಯಾಗಿದೆ. ದೇವಾಸ್ಥಾನದ ಭಜನಾ ಸ್ಥಳ, ರಥ ಸಾಗುವ ಮಾರ್ಗ ಸೇರಿ, ಮೆಟ್ಟಿಲುಗಳ ಪುನಶ್ಚೇತನ ಸೇರ ವಿವಿಧ ಯೋಜನೆ ಹಾಕಿಕೊಳ್ಳಲಾಗಿದೆ. ಚಾಮುಂಡಿ ಬೆಟ್ಟದ ಕೆಳಭಾಗದಿಂದ ಮೇಲಕ್ಕೆ ತೆರಳಲು ಎಲೆಕ್ಟ್ರಿಕ್ ಬಸ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ದೇಗುಲದ ಅಣಿತಿ ದೂರದಲ್ಲಿರುವ ದೇವಿ ಕೆರೆಯನ್ನು ಅಭಿವೃದ್ಧಿ ಮಾಡಿ ಜೀವ ಕಳೆ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ.ಲಲಿತ್ ಮಹಲ್ ಪ್ಯಾಲೇಸ್ ಮರಳಿ ವಾಪಸ್ ಪಡೆಯುವಲ್ಲಿ ಆನಂದ್ ಸಿಂಗ್ ರ ಪ್ರವಾಸೋದ್ಯಮ ಇಲಾಖೆ ಯಶಸ್ವಿಯಾಗಿದೆ.

 ಜೋಗ ಜಲಪಾತ ಬಳಿ ಪಂಚತಾರ ಹೋಟೆಲ್

ಜೋಗ ಜಲಪಾತ ಬಳಿ ಪಂಚತಾರ ಹೋಟೆಲ್

ವಿಶ್ವ ವಿಖ್ಯಾತ ಜೋಗ ಜಲಪಾತ ಜನಮನವನ್ನು ಸೆಳೆದಿರುವ ಪ್ರವಾಸಿ ತಾಣ. ಇಲ್ಲಿ ರೂ 185 ಕೋಟಿ ವೆಚ್ಚದಲ್ಲಿ ಶರಾವತಿ ನದಿಗೆ ಅಡ್ಡಲಾಗಿ ಎಡದಂಡೆ ಬಲದಂಡೆಯ ನಡುವೆ ರೋಪ್ ವೇ ತಯಾರಾಗಲಿದೆ. ಜೋಗ ಜಲಪಾತ ಬಳಿಯಲ್ಲಿ ಪಂಚತಾರ ಹೊಟೇಲ್ ಕಟ್ಟಲಾಗುವುದು ಸೇರಿದಂತೆ ಜೋಗ ಜಲಪಾದ ಬಳಿ ವೈದ್ಯಕೀಯ ವ್ಯವಸ್ಥೆಗೆ ಅನುವು ಮಾಡಿಕೊಡುವ ವಿವಿಧ ಯೋಜನಗಳನ್ನು ಹಾಕಿಕೊಳ್ಳಲಾಗುತತ್ತಿದೆ.

 ತ್ರೀಸ್ಟಾರ್ ಹೊಟೆಲ್ ನಿರ್ಮಾಣ

ತ್ರೀಸ್ಟಾರ್ ಹೊಟೆಲ್ ನಿರ್ಮಾಣ

ಬಾದಾಮಿ, ಹಂಪಿ, ಬೇಲೂರು ಐತಿಹಾಸಿಕ ಸ್ಥಳಗಳಾಗಿವೆ, ಹಂಪಿ ಯುನೆಸ್ಕೋ ವಿಶ್ವಪಾರಂಪರಿಕ ಸ್ಥಳವಾಗಿದೆ. ಈ ಮೂರು ಸ್ಥಳಗಳಲ್ಲಿ ತ್ರೀಸ್ಟಾರ್ ಹೊಟೇಲ್ ನಿರ್ಮಾಣ ಮಾಡಲು 78 ಕೋಟಿ ವ್ಯಚ್ಚದಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಹಂಪಿಯಲ್ಲಿ ರಾಣಿ ಸ್ನಾನಗೃಹದಿಂದ ಲೋಟಸ್ ಮಹಲ್ ವರೆಗೂ 1.30 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ಅನಂತ ಶಯನ ಗುಡಿಯಿಂದ ಕಮಲಾಶಯನದವರೆಗೆ ಸಂಡೂರು ಶಿರಗುಪ್ಪ ರಾಜ್ಯ ಹೆದ್ದಾರಿಗೆ 28.50ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಕೋವಿಡ್ ಹೊರತಾಗಿಯು ಪ್ರವಾಸೋದ್ಯಮದಲ್ಲಿ ಹತ್ತಾರು ಯೋಜನೆಗಳು ನಡೆಯುತ್ತಿದ್ದು. ಆನಂದ್ ಸಿಂಗ್ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Recommended Video

ಆಸ್ತಿ ಮಾಲೀಕರು ಕಟ್ಟಡದ ಪ್ಲಿಂತ್ ಲೈನ್ (ಬಿಪಿಎಲ್) ಸರಿಪಡಿಸುವಾಗ ಹುಷಾರ್ !! | OneIndia Kannada

English summary
CM Basavaraj Bommai Govt Completes 1 Year; As bjp govt completes 3 years, 2 years of BS Yediyurappa govt and 1 year of Basavarj bommai, Know Achievements of Tourism Department in last 1 year. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X