ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Children's Day 2022: ಮಕ್ಕಳ ದಿನಾಚರಣೆ: ನೆಹರು ಬಗೆಗಿನ 10 ಕುತೂಹಲಕಾರಿ ಸಂಗತಿಗಳು

|
Google Oneindia Kannada News

ಬೆಂಗಳೂರು, ನವೆಂಬರ್‌ 14: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಇದನ್ನು ಮಕ್ಕಳ ದಿನವೆಂದು ಆಚರಿಸಲು ಕಾರಣವೆಂದರೆ ನೆಹರು ಅವರು ಮಕ್ಕಳನ್ನು ತುಂಬಾ ಇಷ್ಟಪಡುತ್ತಿದ್ದರು. ಇದಕ್ಕೆ ಮಕ್ಕಳು ಅವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು.

ಮಕ್ಕಳ ದಿನಾಚರಣೆಯು ಮಕ್ಕಳಿಗಾಗಿ ಮೀಸಲಾದ ಭಾರತದ ರಾಷ್ಟ್ರೀಯ ಹಬ್ಬವಾಗಿದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ನವೆಂಬರ್ 14, 1889ರಂದು ಜನಿಸಿದರು. ಈ ವರ್ಷ ಭಾರತವು ಪಂಡಿತ್ ಜವಾಹರ್ ಲಾಲ್ ನೆಹರು ಅವರ 133ನೇ ಜನ್ಮದಿನವನ್ನು ಆಚರಿಸುತ್ತಿದೆ. ಜವಾಹರಲಾಲ್ ನೆಹರು ಮಕ್ಕಳನ್ನು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂದು ಪರಿಗಣಿಸಿದ್ದರು.

ಹಾಗಾಗಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

1. ನೆಹರು ಅವರ ತಾತನ ಹೆಸರು ಗಂಗಾಧರ ಪಂಡಿತ್. ಅವರು ದೆಹಲಿಯ ಕೊನೆಯ ಕೊತ್ವಾಲ್ ಆಗಿದ್ದರು. 1857ರ ಸ್ವಾತಂತ್ರ್ಯ ಸಂಗ್ರಾಮದ ಕೆಲವು ದಿನಗಳ ಮೊದಲು ಅವರನ್ನು ನೇಮಿಸಲಾಗಿತ್ತು. ಬ್ರಿಟಿಷ್ ಸೈನ್ಯವು ದೆಹಲಿಯನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದಾಗ ಅವರು ತಮ್ಮ ಹೆಂಡತಿ ಮತ್ತು ನಾಲ್ಕು ಮಕ್ಕಳೊಂದಿಗೆ ಆಗ್ರಾಕ್ಕೆ ತೆರಳಿದರು. ಅಲ್ಲಿ ಅವರು ನಾಲ್ಕು ವರ್ಷಗಳ ನಂತರ 1861ರಲ್ಲಿ ನಿಧನರಾದರು.

2. ಜವಾಹರಲಾಲ್ ನೆಹರು ಅವರು ಕೇಂಬ್ರಿಡ್ಜ್‌ನ ಹ್ಯಾರೋ ಮತ್ತು ಟ್ರಿನಿಟಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅವರು ಇನ್ನರ್ ಟೆಂಪಲ್‌ನಿಂದ ತಮ್ಮ ಬ್ಯಾಚುಲರ್ ಆಫ್ ಲಾಸ್ ಅನ್ನು ಪೂರ್ಣಗೊಳಿಸಿದರು. ಅಲ್ಲಿ ಅವರನ್ನು ಎಲ್ಲರು ಪ್ರೀತಿಯಿಂದ ಜೋ ನೆಹರು ಎಂದು ಕರೆಯುತ್ತಿದ್ದರು.

ನೆಹರೂ ಬಗ್ಗೆ ಮಾತಾಡಿದ್ದಕ್ಕೆ ಬಾಲಿವುಡ್ ನಟಿಗೆ ನ್ಯಾಯಾಂಗ ಬಂಧನನೆಹರೂ ಬಗ್ಗೆ ಮಾತಾಡಿದ್ದಕ್ಕೆ ಬಾಲಿವುಡ್ ನಟಿಗೆ ನ್ಯಾಯಾಂಗ ಬಂಧನ

3. ನೆಹರು ಅವರು ಜನವರಿ 1934 ರಿಂದ ಫೆಬ್ರವರಿ 1935 ರವರೆಗೆ ಜೈಲಿನಲ್ಲಿದ್ದಾಗ, ಅವರು ತಮ್ಮ ಆತ್ಮಚರಿತ್ರೆಯನ್ನು 'ಸ್ವಾತಂತ್ರ್ಯದ ಕಡೆಗೆ' ಎಂಬ ಶೀರ್ಷಿಕೆಯಲ್ಲಿ ಬರೆದರು. ಇದು 1936 ರಲ್ಲಿ ಅಮೇರಿಕಾದಲ್ಲಿ ಪ್ರಕಟವಾಯಿತು.

4. ಜವಾಹರಲಾಲ್ ನೆಹರು ಅವರು ಬ್ರಿಟಿಷರ ವಿರುದ್ಧ ಪ್ರತಿಭಟನೆಯಾಗಿ ಪಾಶ್ಚಿಮಾತ್ಯ ಬಟ್ಟೆಗಳನ್ನು ಧರಿಸುವುದನ್ನು ನಿಲ್ಲಿಸಿದರು. ಬದಲಿಗೆ ಅವರು ಧರಿಸಿದ್ದ ಜಾಕೆಟ್ 'ನೆಹರೂ ಜಾಕೆಟ್' ಎಂದು ಕರೆಯಲ್ಪಟ್ಟಿತು. ಅವರು ಯಾವಾಗಲು ತಮ್ಮ ಜಾಕೆಟ್‌ನಲ್ಲಿ ಗುಲಾಬಿ ಹೂವನ್ನು ಇಟ್ಟುಕೊಂಡಿದ್ದರು.

ವಿಶೇಷ ವರದಿ: ಆಗಸ್ಟ್.15ರಂದೇ ಸ್ವಾತಂತ್ರ್ಯ ದಿನ ಆಚರಿಸಲು ಕಾರಣವೇನು?ವಿಶೇಷ ವರದಿ: ಆಗಸ್ಟ್.15ರಂದೇ ಸ್ವಾತಂತ್ರ್ಯ ದಿನ ಆಚರಿಸಲು ಕಾರಣವೇನು?

 ಕಾಶ್ಮೀರಿ ಪಂಡಿತ ಕುಟುಂಬವಾದ್ದರಿಂದ ಪಂಡಿತ್ ಹೆಸರು ತಳುಕು

ಕಾಶ್ಮೀರಿ ಪಂಡಿತ ಕುಟುಂಬವಾದ್ದರಿಂದ ಪಂಡಿತ್ ಹೆಸರು ತಳುಕು

5. ನೆಹರು 1950 ರಿಂದ 1955 ರವರೆಗೆ ಹಲವಾರು ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಒಟ್ಟು 11 ಬಾರಿ ನಾಮನಿರ್ದೇಶನಗೊಂಡರು. 6. ಅವರು ಅಸಾಮಾನ್ಯ ವಿದ್ವಾಂಸರಾಗಿದ್ದರು. ಆದರೆ, ಪಂಡಿತ್‌ ಎಂಬುದು ಅವರ ಹೆಸರಿಗೆ ಅಂಟಿಕೊಂಡಿರುವುದು ಅವರು ವಿದ್ವಾಂಸರಾಗಿದ್ದರಿಂದಲ್ಲ, ಅವರು ಕಾಶ್ಮೀರಿ ಪಂಡಿತ ಕುಟುಂಬವಾಗಿರುವುದರಿಂದ ಆಗಿದೆ.

 ಇಂದಿರಾಗೆ ಬರೆದ ಪತ್ರಗಳ ಸಂಗ್ರಹ

ಇಂದಿರಾಗೆ ಬರೆದ ಪತ್ರಗಳ ಸಂಗ್ರಹ

7. ಅವರು ಇಂಡಿಯಾ ಮತ್ತು ವರ್ಲ್ಡ್ ಡಿಸ್ಕವರಿ ಆಫ್ ಇಂಡಿಯಾ ಮತ್ತು ಗ್ಲಿಂಪ್ಸಸ್ ಆಫ್ ದಿ ವರ್ಲ್ಡ್ ಕುರಿತು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಎರಡೂ ಪುಸ್ತಕಗಳು ಭಾರತ ಮತ್ತು ಪ್ರಪಂಚದ ಬಗ್ಗೆ ಅವರ ಅಪಾರ ಜ್ಞಾನವನ್ನು ಬಹಿರಂಗಪಡಿಸುತ್ತವೆ. ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ ವಾಸ್ತವವಾಗಿ ಅವರು ತಮ್ಮ ಏಕೈಕ ಪುತ್ರಿ ಇಂದಿರಾ ಗಾಂಧಿಗೆ ಬರೆದ 146 ಪತ್ರಗಳ ಸಂಗ್ರಹವಾಗಿದೆ.

 1916 ರಂದು ಕಮಲಾ ಕೌಲ್ ವಿವಾಹ

1916 ರಂದು ಕಮಲಾ ಕೌಲ್ ವಿವಾಹ

8. 26ನೇ ವಯಸ್ಸಿನಲ್ಲಿ ನೆಹರು ಅವರು ಫೆಬ್ರವರಿ 7, 1916 ರಂದು 16 ವರ್ಷದ ಕಾಶ್ಮೀರದ ಹುಡುಗಿ ಕಮಲಾ ಕೌಲ್ ಅವರನ್ನು ವಿವಾಹವಾದರು. ಅವರ ತಂದೆ ಹಳೆ ದೆಹಲಿಯಲ್ಲಿ ಹೆಸರಾಂತ ವ್ಯಾಪಾರಿಯಾಗಿದ್ದರು. ಕಮಲಾ ಕೌಲ್ ಅವರು ಕ್ಷಯರೋಗದಿಂದ ಫೆಬ್ರವರಿ 28, 1936 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ನಿಧನರಾದರು.

 ನಾಲ್ಕನೇ ಬಾರಿ 1961ರಲ್ಲಿ ಮುಂಬೈನಲ್ಲಿ ಹತ್ಯೆ ಯತ್ನ

ನಾಲ್ಕನೇ ಬಾರಿ 1961ರಲ್ಲಿ ಮುಂಬೈನಲ್ಲಿ ಹತ್ಯೆ ಯತ್ನ

9. ಪಂಡಿತ್ ನೆಹರೂ ಅವರನ್ನು ನಾಲ್ಕು ಬಾರಿ ಹತ್ಯೆ ಮಾಡುವ ಪ್ರಯತ್ನಗಳು ನಡೆದವು. ವಿಭಜನೆಯ ಸಮಯದಲ್ಲಿ 1947 ರಲ್ಲಿ ಮೊದಲ ಬಾರಿಗೆ, 1955 ರಲ್ಲಿ ಎರಡನೇ ಬಾರಿಗೆ ರಿಕ್ಷಾ ಚಾಲಕರಿಂದ, ಮೂರನೇ ಬಾರಿಗೆ 1956 ರಲ್ಲಿ ಮತ್ತು ನಾಲ್ಕನೇ ಬಾರಿ 1961 ರಲ್ಲಿ ಮುಂಬೈನಲ್ಲಿ. ಅವರು ಮೇ 27, 1964 ರಂದು ಹೃದಯಾಘಾತದಿಂದ ನಿಧನರಾದರು.

10. ಟ್ರಾಫಿಕ್‌ನಲ್ಲಿ ಕಿರಿಕಿರಿ ಉಂಟು ಮಾಡಿದ ಕಾರಣ ನೆಹರು ಅವರು ಸೆಕ್ಯೂರಿಟಿ ಗಾರ್ಡ್‌ನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಇಷ್ಟಪಡುತ್ತಿರಲಿಲ್ಲ.

English summary
Children's Day is celebrated every year in India on November 14, the birthday of India's first Prime Minister Jawaharlal Nehru. The reason why it is celebrated as Children's Day is because Nehru was very fond of children. For this the children used to call him Chacha Nehru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X