ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಅತಿ ಚಿಕ್ಕ ಲೋಕಸಭಾ ಕ್ಷೇತ್ರ ಚೆನ್ನೈ ಸೆಂಟ್ರಲ್ ಪರಿಚಯ

|
Google Oneindia Kannada News

ಭಾರತದ ಅತಿ ಚಿಕ್ಕ ಲೋಕಸಭಾ ಕ್ಷೇತ್ರ ಚೆನ್ನೈ ಸೆಂಟ್ರಲ್. ಮದ್ರಾಸ್ ಸೆಂಟ್ರಲ್ ಎಂದೂ ಪ್ರಸಿದ್ಧಿ ಪಡೆದ ಕ್ಷೇತ್ರ ತಮಿಳುನಾಡು ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ ಒಂದಾಗಿದೆ.

ಕ್ಷೇತ್ರದ ಒಟ್ಟು ಜನಸಂಖ್ಯೆ 16,31,196. ಕ್ಷೇತ್ರ ನಗರದ ಪ್ರದೇಶದಲ್ಲಿದ್ದು ಗ್ರಾಮೀಣ ಪ್ರದೇಶದಲ್ಲಿ ಯಾರೂ ವಾಸ ಮಾಡುತ್ತಿಲ್ಲ. ಶೇ 17.84ರಷ್ಟು ಎಸ್‌ಸಿ, ಶೇ 0.29ರಷ್ಟು ಎಸ್‌ಸಿ ಸಮುದಾಯದ ಜನರಿದ್ದಾರೆ.

Chennai Central lok sabha constituency profile

ದೇಶದ ಚುನಾವಣಾ ಇತಿಹಾಸದ ಬಗ್ಗೆ ಮಾತನಾಡುವಾಗ ಚೆನ್ನೈ ಸೆಂಟ್ರಲ್ ಕ್ಷೇತ್ರವನ್ನು ಮರೆಯುವಂತಿಲ್ಲ. ಏಕೆಂದರೆ 2014ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ವೋಟರ್​ ವೆರಿಫೈಡ್​ ಪೇಪರ್​ ಆಡಿಟ್​ ಟ್ರೇಲ್ (ವಿವಿಪ್ಯಾಟ್) ಯಂತ್ರವನ್ನು ಬಳಕೆ ಮಾಡಲಾಗಿತ್ತು.​

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯ

ಚೆನ್ನೈ ಸೆಂಟ್ರಲ್ ಕ್ಷೇತ್ರ ಎಐಎಡಿಎಂಕೆ ಪಕ್ಷದ ವಶದಲ್ಲಿದೆ. ಹಾಲಿ ಸಂಸದರು ಎಸ್.ಆರ್.ವಿಜಯ ಕುಮಾರ್. 2014ರ ಚುನಾವಣೆಯಲ್ಲಿ ಅವರು 333296 ಮತಗಳನ್ನು ಪಡೆದು ಜಯಗಳಿಸಿದ್ದರು. ಅವರ ಪ್ರತಿಸ್ಪರ್ಧಿ ಡಿಎಂಕೆಯ ದಯಾನಿಧಿ ಮಾರನ್ ಅವರು 287455 ಮತಗಳನ್ನು ಪಡೆದಿದ್ದಾರೆ.

Chennai Central lok sabha constituency profile

ಕ್ಷೇತ್ರದ ಒಟ್ಟು ಮತದಾರರು 13,28,027. ಇವರಲ್ಲಿ 6,65,278 ಪುರುಷರು, 6,62,749 ಮಹಿಳೆಯರಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ 8,14,894 ಜನರು ಮತದಾನ ಮಾಡಿದ್ದರು. ಇವರಲ್ಲಿ 4,22,278 ಪುರುಷರು, 3,92,616 ಮಹಿಳೆಯರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಪರಿಚಯ : ಯಾರ ಬಾಯಿಗೆ ಕುಂದಾ ಕರದಂಟು? ಬೆಳಗಾವಿ ಲೋಕಸಭಾ ಕ್ಷೇತ್ರದ ಪರಿಚಯ : ಯಾರ ಬಾಯಿಗೆ ಕುಂದಾ ಕರದಂಟು?

1977ರಲ್ಲಿ ಎನ್‌ಸಿಓ ಪಕ್ಷದ ಪಿ.ರಾಮಚಂದ್ರನ್ ಅವರು ಕ್ಷೇತ್ರದಲ್ಲಿ ಜಯಗಳಿಸಿದ್ದರು. 1977ರ ಬಳಿಕ ಡಿಎಂಕೆ ಏಳು ಬಾರಿ ಕ್ಷೇತ್ರದಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಎರಡು ಬಾರಿ ಗೆದ್ದಿದ್ದು, ಎಐಎಡಿಎಂಕೆ 2014ರಲ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಜಯಗಳಿಸಿದೆ.

Chennai Central lok sabha constituency profile

ಒಟ್ಟು 7 ಬಾರಿ ಡಿಎಂಕೆ ಪಕ್ಷದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ 2 ಬಾರಿ ಮಾತ್ರ ಗೆಲುವು ಸಾಧಿಸಿದ್ದು, ಬಿಜೆಪಿ ಕ್ಷೇತ್ರದಲ್ಲಿ ಇನ್ನೂ ಗೆದ್ದಿಲ್ಲ. 1996 ರಿಂದ 2009ರ ತನಕ ಡಿಎಂಕೆ ಸತತವಾಗಿ ಜಯಗಳಿಸಿತ್ತು. 2014ರಲ್ಲಿ ಗೆಲುವಿನ ಓಟಕ್ಕೆ ಎಐಎಡಿಎಂಕೆ ತಡೆ ಹಾಕಿತು.

ರಾಯಚೂರು ಲೋಕಸಭಾ ಕ್ಷೇತ್ರದ ಪರಿಚಯರಾಯಚೂರು ಲೋಕಸಭಾ ಕ್ಷೇತ್ರದ ಪರಿಚಯ

6 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಚೆನ್ನೈ ಸೆಂಟ್ರಲ್ ಲೋಕಸಭಾ ಕ್ಷೇತ್ರವನ್ನು ರಚನೆ ಮಾಡಲಾಗಿದೆ. ಎಸ್‌ಸಿ ಮೀಸಲು ಕ್ಷೇತ್ರವಿದಾಗಿದೆ. 2019ರಲ್ಲಿ ವಿಜಯ್ ಕುಮಾರ್ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆಯೇ?, ಅಥವ ಡಿಎಂಕೆಗೆ ಬಿಟ್ಟುಕೊಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

Chennai Central lok sabha constituency profile

ವಿಜಯ್ ಕುಮಾರ್ ಅವರು ಸಂಸತ್‌ನಲ್ಲಿ ಶೇ 79ರಷ್ಟು ಹಾಜರಾತಿ ಹೊಂದಿದ್ದಾರೆ. 62 ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. 825 ಪ್ರಶ್ನೆಗಳನ್ನು ಕೇಳಿದ್ದಾರೆ.

English summary
Chennai Central lok sabha constituency known as Madras Central. The Lok Sabha constituency is one of three constituencies in Chennai, Tamil Nadu. It is also one of the smallest constituencies in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X