• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಗ ಸೇಲ್ಸ್‌ಗರ್ಲ್, ಈಗ ಹಣಕಾಸು ಸಚಿವೆ: ನಿರ್ಮಲಾ ಸೀತಾರಾಮನ್ ಸಾಧನೆ

|
   ಸೇಲ್ಸ್ ಗರ್ಲ್ ಹುದ್ದೆಯಿಂದ ಹಣಕಾಸು ಸಚಿವೆ ಹುದ್ದೆವರೆಗೆ ನಿರ್ಮಲ ಸೀತಾರಾಮನ್ ಜೀವನ ಯಾನ | Oneindia Kannada

   ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ರಕ್ಷಣಾ ಸಚಿವೆಯಾಗುವ ಮೂಲಕ ದೇಶದ ಮೊದಲ ಪೂರ್ಣಾವಧಿ ಹಾಗೂ ಎರಡನೆಯ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ನಿರ್ಮಲಾ ಸೀತಾರಾಮನ್, ಮತ್ತೊಂದು ಇತಿಹಾಸ ಬರೆದಿದ್ದಾರೆ. ಅವರು ದೇಶದ ರಾಜಕೀಯ ಚರಿತ್ರೆಯಲ್ಲಿ ಪ್ರಥಮ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವರಾಗಿ ನೇಮಕವಾಗಿದ್ದಾರೆ.

   ರಕ್ಷಣಾ ಸಚಿವಾಲಯವನ್ನು ದಿಟ್ಟತನದಿಂದ ಮುನ್ನಡೆಸಿದ್ದ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯೂ ಅದೇ ಖಾತೆಯನ್ನೇ ನಿಭಾಯಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರಿಗೆ ಮತ್ತೊಂದು ಪ್ರಮುಖ ಖಾತೆ ದೊರಕಿದೆ. ದೇಶದ ಆರ್ಥಿಕ ಪ್ರಗತಿಯನ್ನು ಅಡೆತಡೆಗಳನ್ನು ನಿವಾರಿಸಿ ಮುನ್ನಡೆಸುವ, ಹಣದುಬ್ಬರದಂತಹ ಸಮಸ್ಯೆಗಳನ್ನು ನಿವಾಸಿರುವ ಅನೇಕ ಸವಾಲುಗಳು ಅವರ ಮುಂದಿದೆ.

   ಅನಂತ್ ಕುಮಾರ್ ಬಿಟ್ಟುಹೋದ ಎರಡೂ ಖಾತೆಗಳು ಕನ್ನಡಿಗರಿಗೆ

   ಕಳೆದ ಅವಧಿಯಲ್ಲಿ ಮನೋಹರ್ ಪರಿಕ್ಕರ್ ಅವರಿಂದ ತೆರವಾಗಿದ್ದ ರಕ್ಷಣಾ ಸಚಿವ ಸ್ಥಾನವನ್ನು ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಿದ್ದಾಗ ಬಹುತೇಕರು ಹುಬ್ಬೇರಿಸಿದ್ದರು. ರಕ್ಷಣಾ ಇಲಾಖೆಯನ್ನು ಸುಧಾರಣೆ ಮಾಡಲು ಅನೇಕ ಮಹತ್ತರ ನಿರ್ಧಾರಗಳನ್ನು ಕೈಗೊಂಡಿದ್ದರು. ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಾಗ ಸಂಸತ್‌ನಲ್ಲಿ ವಿರೋಧಪಕ್ಷಗಳ ವಾಗ್ದಾಳಿಯನ್ನು ಎದುರಿಸಿ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದರು. ಈಗ ಅವರ ಮೇಲೆ ಅದಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ಇದೆ.

   ಕಾಂಗ್ರೆಸ್ ಪರವಾದ ಕುಟುಂಬದವರಿದ್ದರೂ ಬಲ ಸಿದ್ಧಾಂತದ ಬಿಜೆಪಿಯೆಡೆಗೆ ಅವರ ಒಲವು ಉಂಟಾಗಿದ್ದು ವಿಶೇಷ.

   ಜೆಎನ್‌ಯುದಲ್ಲಿ ಪದವಿ

   ಜೆಎನ್‌ಯುದಲ್ಲಿ ಪದವಿ

   ನಿರ್ಮಲಾ ಸೀತಾರಾಮನ್ ಅವರು 1959ರ ಆಗಸ್ಟ್ 18ರಂದು ತಮಿಳುನಾಡಿನ ಮದುರೆಯಲ್ಲಿ ಜನಿಸಿದರು. ತಮ್ಮ ಬದುಕಿನ ಬಾಲ್ಯದ ದಿನಗಳನ್ನು ಅವರು ಕಳೆದದ್ದು ಚೆನ್ನೈನಲ್ಲಿ. ಅವರ ತಂದೆ ನಾರಾಯಣ್ ಸೀತಾರಾಮನ್ ಭಾರತೀಯ ರೈಲ್ವೆಯಲ್ಲಿ ನೌಕರರಾಗಿದ್ದರಿಂದ ಆಗಾಗ ವರ್ಗಾವಣೆಯಾಗುತ್ತಿತ್ತು. ಹೀಗಾಗಿ ನಿರ್ಮಲಾ ತಿರುಚಿರಾಪಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿದ್ದು ಬಿ.ಎ. ಪದವಿ ಶಿಕ್ಷಣ ಪೂರೈಸಿದರು. ಅವರ ತಾಯಿ ಸಾವಿತ್ರಿ ಪುಸ್ತಕ ಪ್ರೇಮಿ. ತಂದೆಯ ಶಿಸ್ತು, ತಾಯಿಯ ಹವ್ಯಾಸ ನಿರ್ಮಲಾ ಅವರ ಮೇಲೆ ಪ್ರಭಾವ ಬೀರಿತ್ತು. ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುವ ಕುಟುಂಬ ಅವರದು. 1980ರಲ್ಲಿ ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದರು. ಆ ವೇಳೆ ಅವರಿಗೆ ರಾಜಕೀಯದ ಪರಿಚಯವಾಯಿತು.

   ಕಾಂಗ್ರೆಸ್ ಕುಟುಂಬದ ನಂಟು

   ಕಾಂಗ್ರೆಸ್ ಕುಟುಂಬದ ನಂಟು

   ನಿರ್ಮಲಾ ಅವರ ರಾಜಕೀಯದ ಆಸಕ್ತಿ ಬೆಳೆದಿದ್ದು, ಕಾಂಗ್ರೆಸ್‌ನಿಂದ ಸಚಿವರಾಗಿದ್ದ ಪರ್ಕಳ ಶೇಷಾವತಾರಂ ಅವರ ಮಗ ಡಾ. ಪ್ರಭಾಕರ್ ಪರ್ಕಳ ಅವರ ಮೂಲಕ. ಜೆಎನ್‌ಯುದಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ ಓದುತ್ತಿದ್ದ ಪ್ರಭಾಕರ್ ಅವರು ಕಾಂಗ್ರೆಸ್ ಒಲವಿನವರಾದರೆ, ನಿರ್ಮಲಾ ಅವರು ಬಿಜೆಪಿ ಪರ ಆಸಕ್ತಿ ಹೊಂದಿದ್ದರು. 1986ರಲ್ಲಿ ಇಬ್ಬರೂ ಮದುವೆಯಾದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಿಎಚ್‌ಡಿಗಾಗಿ ಸ್ಕಾಲರ್‌ಶಿಪ್‌ ಪಡೆದ ಪ್ರಭಾಕರ್ ಲಂಡನ್‌ಗೆ ತೆರಳಿದರು.

   ಗುಡಿಸಲು ವಾಸಿ ಸಂಸದನಿಗೆ ಎರಡೆರಡು ಸಚಿವ ಖಾತೆ ಕೊಟ್ಟ ಮೋದಿ

   ಲಂಡನ್‌ನಲ್ಲಿ ಸೇಲ್ಸ್ ಗರ್ಲ್

   ಲಂಡನ್‌ನಲ್ಲಿ ಸೇಲ್ಸ್ ಗರ್ಲ್

   ನಿರ್ಮಲಾ ಅವರು ಲಂಡನ್‌ನ ರೆಜೆಂಟ್ ಸ್ಟ್ರೀಟ್‌ನಲ್ಲಿರುವ ಗೃಹಾಲಂಕಾರ ಅಂಗಡಿ 'ಹ್ಯಾಬಿಟ್ಯಾಟ್'ನಲ್ಲಿ ಸೇಲ್ಸ್‌ಗರ್ಲ್ ಕೆಲಸಕ್ಕೆ ಸೇರಿಕೊಂಡರು. ಬಳಿಕ ಅಗ್ರಿಕಲ್ಚರ್ ಎಂಜಿನಿಯರ್ಸ್ ಅಸೋಸಿಯೇಷನ್‌ನಲ್ಲಿ ಅರ್ಥಶಾಸ್ತ್ರಜ್ಞರೊಬ್ಬರ ಸಹಾಯಕರಾಗಿ ಕೆಲಸ ಮಾಡಿದ್ದರು. ನಂತರ ಪ್ರೈಸ್ ವಾಟರ್ ಹೌಸ್ ನಲ್ಲಿ ಹಿರಿಯ ಮ್ಯಾನೇಜರ್ ಆಗಿ ಮತ್ತು ಬಿಬಿಸಿ ವರ್ಲ್ಡ್ ಸರ್ವಿಸ್‌ನಲ್ಲಿ ಕೆಲಕಾಲ ಕೆಲಸ ಮಾಡಿದ್ದರು.

   ಸುಷ್ಮಾ ಸ್ವರಾಜ್ ಭೇಟಿ

   ಸುಷ್ಮಾ ಸ್ವರಾಜ್ ಭೇಟಿ

   1991ರಲ್ಲಿ ಇಬ್ಬರೂ ಭಾರತಕ್ಕೆ ಮರಳಿದರು. ನಿರ್ಮಲಾ ಅವರು ಹೈದರಾಬಾದ್‌ನಲ್ಲಿ ಶಾಲೆಯೊಂದನ್ನು ತೆರೆದರು. ಈ ಸಂದರ್ಭದಲ್ಲಿ ಅವರು ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದರು. ಅದು ಅವರ ರಾಜಕೀಯ ಜೀವನದ ಪ್ರಮುಖ ತಿರುವು. ಮುಂದೆ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (2003-05) ನೇಮಿಸಲಾಯಿತು. ಪ್ರಭಾಕರ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಸಂವಹನ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದರು.

   ಚಾಣಕ್ಯ ಅಮಿತ್ ಶಾಗೆ ಕೇಂದ್ರ ಗೃಹಖಾತೆ ಜವಾಬ್ದಾರಿ

   ಬಿಜೆಪಿ ಸೇರಿಕೊಂಡ ನಿರ್ಮಲಾ

   ಬಿಜೆಪಿ ಸೇರಿಕೊಂಡ ನಿರ್ಮಲಾ

   ಮೂರು ವರ್ಷದ ಅನುಭವದ ಬಳಿಕ ಅವರು 2006ರಲ್ಲಿ ಬಿಜೆಪಿ ಸೇರ್ಪಡೆಯಾದರು. ಅವರ ಪತಿ ಪ್ರಭಾಕರ್ 2007ರಲ್ಲಿ ಚಿರಂಜೀವಿ ಸ್ಥಾಪಿಸಿದ ಪ್ರಜಾರಾಜ್ಯಂ ಪಕ್ಷ ಸೇರಿಕೊಂಡರು. ಬಿಜೆಪಿಯಲ್ಲಿ ಮಹಿಳೆಯರಿಗೆ ಶೇ 33ರ ಮೀಸಲಾತಿಯನ್ನು ಅಳವಡಿಸಿಕೊಂಡಾಗ ನಿರ್ಮಲಾ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಸೇರಿಕೊಳ್ಳಲು ಆಹ್ವಾನ ನೀಡಲಾಯಿತು. 2010ರಲ್ಲಿ ಅವರು ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿ ನೇಮಕವಾಗಿ, ಹೈದರಾಬಾದ್‌ನಿಂದ ದೆಹಲಿಗೆ ವಾಸ್ತವ್ಯ ಬದಲಿಸಿದರು.

   ಇಂದಿರಾ ಗಾಂಧಿ ಬಳಿಕ ರಕ್ಷಣಾ ಸಚಿವೆ

   ಇಂದಿರಾ ಗಾಂಧಿ ಬಳಿಕ ರಕ್ಷಣಾ ಸಚಿವೆ

   ಆಂಧ್ರಪ್ರದೇಶದಿಂದ ರಾಜ್ಯಸಭೆ ಸದಸ್ಯೆಯಾಗಿ ಆಯ್ಕೆಯಾದ ಅವರು 2014ರಲ್ಲಿ ಕಿರಿಯ ಸಚಿವೆಯಾಗಿ ನರೇಂದ್ರ ಮೋದಿ ಸಂಪುಟವನ್ನು ಸೇರಿಕೊಂಡಿದ್ದರು. ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯಖಾತೆ ಸಚಿವೆಯಾಗಿ, ವಾಣಿಜ್ಯ ಹಾಗೂ ಕೈಗಾರಿಕೆಗಳ ಸ್ವತಂತ್ರ ಸಚಿವೆಯಾಗಿ ಅನುಭವ ಪಡೆದುಕೊಂಡರು. 2016ರ ಮೇನಲ್ಲಿ ಅವರು ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾದರು. 2017ರ ಸೆಪ್ಟೆಂಬರ್‌ನಲ್ಲಿ ರಕ್ಷಣಾ ಸಚಿವೆಯಾಗಿ ಬಡ್ತಿ ಪಡೆದರು. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರ ಬಳಿಕ ರಕ್ಷಣಾ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

   English summary
   Cabinet ministers of India 2019: Salesgirl to Finance Minister- profile of BJP leader, Rajya Sabha MP Nirmala Sitharaman, the then Defence Minister.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X