ಮದುವೆ ಮನೆಗೆ ನುಗ್ಗಿ ಬಂದ ಗೂಳಿ: ಎದ್ನೋಬಿದ್ನೋ ಅಂತ ಓಡಿದ ಜನ-ವಿಡಿಯೋ
ಮದುವೆ ಮನೆಗೆ ಕರೆಯದ ಅತಿಥಿಯೊಬ್ಬರು ಎಂಟ್ರಿ ಕೊಟ್ಟಿದ್ದು ಭರ್ಜರಿ ಭೋಜನ ಸವಿತ್ತಿದ್ದ ಜನ ಎದ್ನೋಬಿದ್ನೋ ಅಂತ ಓಡಿ ಹೋಗಿದ್ದಾರೆ.
ಭಾರತೀಯ ವಿವಾಹಗಳು ಯಾವಾಗಲೂ ದುಂದುವೆಚ್ಚದ ವ್ಯವಹಾರಗಳಾಗಿವೆ. ಕೊನೆಗೊಳ್ಳದ ಅತಿಥಿ ಪಟ್ಟಿಯು ಕೊನೆಯ ನಿಮಿಷದವರೆಗೂ ಮುಂದುವರಿಯುತ್ತದೆ. ಈಗಂತೂ ಮದುವೆಗೆ ಹಾಲು ಮಾರುವವರಿಂದ ಹಿಡಿದು ದೂರದ ಸಂಬಂಧಿಯವರೆಗೆ ಎಲ್ಲರಿಗೂ ಆಹ್ವಾನವಿರುತ್ತದೆ. ರುಚಿಕರ ಆಹಾರ, ವ್ಯವಸ್ಥೆಯಿಂದ ಮಾತ್ರ ಮದುವೆಗೆ ಬಂದವರು ತೃಪ್ತರಾಗುತ್ತಾರೆ.
ಇಂತಹ ಅದ್ದೂರಿ ಮದುವೆಗೆ ಗೂಳಿ ಕೂಡ ಎಂಟ್ರಿ ಕೊಟ್ಟಿದೆ. ಇತ್ತೀಚಿನ ಇಂಟರ್ನೆಟ್ ವಿಡಿಯೊವೊಂದರಲ್ಲಿ ಮದುವೆಗೆ ಆಹ್ವಾನಿಸದ ಅತಿಥಿಯೊಂದು ಎಂಟ್ರಿ ಕೊಟ್ಟಿದೆ. ಅದನ್ನು ಕಂಡು ಜನ ಎದ್ನೋಬಿದ್ನೋ ಅಂತ ಓಡಿ ಹೋಗಿದ್ದಾರೆ. ಮದುವೆಯ ಸ್ಥಳಕ್ಕೆ ಗೂಳಿಯೊಂದು ನುಗ್ಗಿ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಹಾರ ಮತ್ತು ಪಾನೀಯ ಮಳಿಗೆಗಳಿಂದ ತುಂಬಿದ ಮದುವೆಯ ಪ್ಯಾಂಡಲ್ ಗೆ ಕಪ್ಪು ಗೂಳಿಯೊಂದು ಓಡಿ ಬಂದಿದೆ. ಮದುವೆ ಮನೆಯಲ್ಲಿ ಕುಳಿತು ಭರ್ಜರಿ ಬೋಜನ ಸೇವಿಸುತ್ತಿದ್ದ ಜನ ಇದನ್ನು ಕಂಡು ಗಾಬರಿಗೊಂಡಿದ್ದಾರೆ. ಇದೇ ಸ್ಥಳದಲ್ಲಿ ಗೂಳಿ ಕೆಲವರ ಬೆನ್ನು ಹತ್ತಿ ಓಡುತ್ತದೆ. ಕೆಲವರ ಮೇಲೆ ದಾಳಿಗೆ ಮುಂದಾಗುತ್ತದೆ. ಒಬ್ಬ ವ್ಯಕ್ತಿಯು ಗೂಳಿಯನ್ನು ಪ್ಯಾಂಡಲ್ ನಿಂದ ಓಡಿಸಲು ಯತ್ನಿಸುತ್ತಾನೆ. ಆದರೆ ಗೂಳಿ ಪಲಾಯನ ಮಾಡುವ ಬದಲು ವ್ಯಕ್ತಿಯ ಮೇಲೆ ದಾಳಿ ಮಾಡಲು ಯತ್ನಿಸುತ್ತದೆ. ಕೊನೆಗೆ ಗೂಳಿಯನ್ನು ಪ್ಯಾಂಡಲ್‌ನಿಂದ ಹೊರಕ್ಕೆ ಓಡಿಸಲಾಗುತ್ತದೆ. ಗೂಳಿ ಹೊರ ಓಡಿ ಹೋಗುತ್ತಿದ್ದಂತೆ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ವಿಡಿಯೊವನ್ನು ಡಿಸೆಂಬರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈವರೆಗೆ 52,000 ಲೈಕ್‌ಗಳನ್ನು ಸ್ವೀಕರಿಸಲಾಗಿದೆ. ವಿಡಿಯೊವನ್ನು ವೀಕ್ಷಿಸಿದ ನಂತರ, ನೆಟಿಜನ್‌ಗಳು ದಿಗ್ಭ್ರಮೆಗೊಂಡರು. ಜೊತೆಗೆ ಹಲವಾಋಉ ಕಾಮೆಂಟ್‌ಗಳನ್ನು ಕೂಡ ಮಾಡಿದ್ದಾರೆ.












Click it and Unblock the Notifications