Budget 2022: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಯಾವುದು ಏರಿಕೆ? ಯಾವುದು ಇಳಿಕೆ?
ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆಯ 4ನೇ ಬಜೆಟ್ ಇಂದು ಮಂಡನೆಯಾಗಿದೆ. ನಿರೀಕ್ಷಿತ ರೀತಿಯಲ್ಲಿ ತೆರಿಗೆ ಇಳಿಕೆ ಹಾಗೂ ಹೆಚ್ಚುವರಿ ಸುಂಕ ಕಡಿತ ಮಾಡಿ ಬಂಪರ್ ಕೊಡುಗೆ ನೀಡದೆ ಸಿಹಿ-ಕಹಿ ಬೆರೆತ ಸಪ್ಪೆ ಬಜೆಟ್ ಮಂಡಿಸಿದ್ದಾರೆ.
ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುವ ಮೂಲಕ ಸಂಸತ್ತಿನಲ್ಲಿ ಬಜೆಟ್ ಅಧಿವೇಶನವನ್ನು ಪ್ರಾರಂಭಿಸಿದರು. ಇದಾದ ಬಳಿಕ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದರು.
ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯುತ್ತದೆ, ದ್ವಿತೀಯಾರ್ಧವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ರಾಜ್ಯಸಭೆಯಲ್ಲಿ ಬಜೆಟ್ ಮಂಡಿಸುವ ಮೊದಲು ಸಂಸತ್ತಿನ ಕೆಳಮನೆ ಎನಿಸಿರುವ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಈ ಸಲದ ಕೇಂದ್ರ ಬಜೆಟ್ 2022ರ ಮೇಲೆ ಉದ್ಯೋಗಿಗಳು, ಉದ್ಯಮಿಗಳು, ಕೃಷಿಕರು ಹಾಗೂ ಸಾಮಾನ್ಯ ಜನರು ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಆದಾಯ ತೆರಿಗೆ ಮಿತಿ, ಇಂಧನ ವಲಯ, ಪ್ರವಾಸೋದ್ಯಮಕ್ಕೆ ಸಿಗಬೇಕಿದ್ದ ಆದ್ಯತೆ ಸಿಕ್ಕಿಲ್ಲ ಎಂಬ ಕೂಗೆದ್ದಿದೆ. ಈ ನಡುವೆ ಮೊಬೈಲ್ ಫೋನ್ ಬೆಲೆ ಇಳಿಕೆ ಮಾಡಿ ದೇಶಿ ಉತ್ಪನ್ನಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಇಳಿಕೆ
- ಮೆಥಾನಲ್ ಸೇರಿದಂತೆ ಕೆಲವು ರಾಸಾಯನಿಕ ಮೇಲೆ ಸುಂಕ ಇಳಿಕೆ
- ಪೆಟ್ರೋಲಿಯಂ ಉತ್ಪನ್ನ ರಾಸಾಯನಿಕ ಮೇಲಿನ ಅಬಕಾರಿ ಸುಂಕ ಇಳಿಕೆ
- ಉಕ್ಕಿನ ಸ್ಕ್ರಾಪ್ ಮೇಲಿನ ಸುಂಕ ಇಳಿಕೆ ಇನ್ನೊಂದು ವರ್ಷಕ್ಕೆ ವಿಸ್ತರಣೆ
- ಮೊಬೈಲ್ ಫೋನ್ ಚಾರ್ಜರ್
- ಮೊಬೈಲ್ ಫೋನ್
- ಆಭರಣ, ಕತ್ತರಿಸಿದ ಮತ್ತು ಪಾಲಿಶ್ ಮಾಡಿದೆ ವಜ್ರ
- ಬಟ್ಟೆ
- ಚಪ್ಪಲಿ
- ಕೃಷಿ ಉತ್ಪನ್ನ
- ಸಿರಿ ಧಾನ್ಯ ಉತ್ಪನ್ನ
ಕತ್ತರಿಸಿದ ಮತ್ತು ಪಾಲಿಶ್ ಮಾಡಿದೆ ವಜ್ರಗಳು ಮತ್ತು ರತ್ನದ ಮೇಲಿನ ಆಮದು ಸುಂಕವನ್ನು ಶೇಕಡಾ 5 ಕ್ಕೆ ಇಳಿಸಲಾಗುವುದು ಮತ್ತು ವಲಯವನ್ನು ಉತ್ತೇಜಿಸುವ ಸಲುವಾಗಿ ವಜ್ರದ ಮೇಲಿನ ಆಮದು ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ಪ್ರಸ್ತುತ, ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಕಲ್ಲುಗಳ ಮೇಲಿನ ಆಮದು ಸುಂಕವು ಶೇಕಡಾ 7.5 ರಷ್ಟಿದೆ.
Recommended Video
ಏರಿಕೆ
- ಛತ್ರಿ ಮೇಲಿನ ಸುಂಕ ಏರಿಕೆ
- ಆಮದು ವಸ್ತುಗಳ ಮೇಲೆ ಸುಂಕ
- ಅನ್ ಬ್ಲೆಂಡೆಡ್ ಇಂಧನ
ಗಮನಿಸಿ: ಬಜೆಟ್ ಭಾಷಣದಲ್ಲಿ ಪ್ರಸ್ತಾವಿತ ತೆರಿಗೆ ಕಡಿತ, ಬೆಲೆ ಇಳಿಕೆ ಎಲ್ಲವೂ ಏಪ್ರಿಲ್ 1, 2022ರ ವಿತ್ತೀಯ ವರ್ಷ ಆರಂಭದೊಂದಿಗೆ ಜಾರಿಗೆ ಬರಲಿದೆ.












Click it and Unblock the Notifications