• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಸದರಿಗೆ 10 ರುಗೆ ಬೋಂಡಾ, 100 ರುಗೆ ಚಿಕನ್ ಬಿರಿಯಾನಿ

|

ನವದೆಹಲಿ, ಜನವರಿ 27: ಸಂಸತ್ತಿನಲ್ಲಿ ಸಬ್ಸಿಡಿ ದರದಲ್ಲಿ ಕ್ಯಾಂಟೀನ್ ಊಟ, ತಿಂಡಿ ಸಿಗುತ್ತಿದ್ದ ಅವಧಿ ಮುಕ್ತಾಯವಾಗಿದೆ. ಸಬ್ಸಿಡಿ ದರದಲ್ಲಿ ಉಪಹಾರ ಪಡೆಯದಿರಲು 2019ರಲ್ಲಿ ಸಂಸದರೆಲ್ಲರೂ ಪಕ್ಷಬೇಧ ಮರೆತು ತೆಗೆದುಕೊಂಡ ನಿರ್ಣಯ ಇದೀಗ ಸಂಪೂರ್ಣವಾಗಿ ಜಾರಿಗೆ ಬರುತ್ತಿದೆ.

ಬಜೆಟ್ 2021 ಅಧಿವೇಶನದಲ್ಲಿ ಯಾವುದೇ ಲಾಭ ಯಾವುದೇ ನಷ್ಟ ಇಲ್ಲದ ಮಾದರಿಯಲ್ಲಿ ಸಬ್ಸಿಡಿ ರಹಿತವಾಗಿ ಊಟ ತಿಂಡಿ ಲಭಿಸಲಿದೆ. ಸಂಸತ್ ಕ್ಯಾಂಟೀನ್ ಕಡಿಮೆ ದರ ಊಟ -ತಿಂಡಿ ಪ್ರತಿ ವರ್ಷದ ಚರ್ಚೆಯ ವಿಷಯವಾಗಿತ್ತು. ತೆರಿಗೆದಾರರ ಹಣ ಈ ರೀತಿ ಏಕೆ ಪೋಲು ಮಾಡುತ್ತೀರಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನೆಗಳು ಎದ್ದಿದ್ದವು. ಸಂಸದರಲ್ಲದೆ, ಸಂಸತ್ ಭವನ ಸಿಬ್ಬಂದಿ, ಅಂಗರಕ್ಷಕರು, ಭದ್ರತಾ ಸಿಬ್ಬಂದಿ, ಕಾರು ಚಾಲಕರು ಕ್ಯಾಂಟೀನ್ ಊಟ ಮಾಡುತ್ತಾರೆ.

ಕ್ಯಾಂಟೀನ್ ಸಬ್ಸಿಡಿ ಊಟದ ಖರ್ಚು ಸುಮಾರು 15 ರಿಂದ 18 ಕೋಟಿ ರು ಎಂದು ಲೋಕಸಭೆ ಸಚಿವಾಲಯ ಮಾಹಿತಿ ನೀಡಿತ್ತು. ಉತ್ತರ ರೈಲ್ವೆ ನಿರ್ವಹಣೆಯಲ್ಲಿದ್ದ ಕ್ಯಾಂಟೀನ್ ಈಗ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ನಿಭಾಯಿಸುತ್ತಿದೆ.

ಜನವರಿ 27ರಿಂದ ಹೊಸ ವ್ಯವಸ್ಥೆ

ಜನವರಿ 27ರಿಂದ ಹೊಸ ವ್ಯವಸ್ಥೆ

2019ರಲ್ಲಿ ಸ್ಪೀಕರ್ ಓಂ ಬಿರ್ಲಾ ಮನವಿಯಂತೆ ಜನಪ್ರತಿನಿಧಿಗಳು ಸಬ್ಸಿಡಿ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದರು. ಅದರಂತೆ, ಈಗ ವೆಜ್-ನಾನ್ ವೆಜ್ ಸೇರಿ 58 ಆಹಾರ ಪದಾರ್ಥಗಳು ಮೆನುವಿನಲ್ಲಿವೆ. ಬಫೆ 70 ರು ತಗುಲಿದೆ. ಆಲೂಗೆಡ್ಡೆ ಬೋಂಡಾ ಬೆಲೆ 10 ರು ಎಂದು ಆಂತರಿಕ ಪ್ರಕಟಣೆ ಹೊರಡಿಸಲಾಗಿದೆ.

ಬಿರಿಯಾನಿ ಬೆಲೆ ಎಷ್ಟು

ಬಿರಿಯಾನಿ ಬೆಲೆ ಎಷ್ಟು

ಸಂಸದರು ಸಬ್ಸಿಡಿ ಆಹಾರ ಬಿಟ್ಟಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಕೋಟ್ಯಂತರ ಹೊರೆ ಕಡಿಮೆಯಾಗಲಿದೆ. ಹಾಲಿ ಹೊಸ ಮೆನುವಿನಂತೆ ದರ ಪಟ್ಟಿ ಹೀಗಿದೆ: ವೆಜಿಟೇಬಲ್ ಬಾತ್/ಬಿರಿಯಾನಿ ಬೆಲೆ 50 ರು ಇದ್ದರೆ ಚಿಕನ್ ಬಿರಿಯಾನಿ 100 ರು ಆಗಿದೆ. ಈ ಮುಂಚೆ 65 ರು ಗೆ ಸಿಗುತಿತ್ತು. ಮಟನ್ ಬಿರಿಯಾನಿ ಬೆಲೆ 150 ರು ಆಗಿದೆ. ವೆಜ್ ಊಟ(ಥಾಲಿ) 100 ರು, ಫಿಶ್ ಹಾಗೂ ಚಿಪ್ಸ್ ಬೆಲೆ 110 ರು, ಹಸಿರು ಸಲಾಡ್ 25 ರು.

1968ರಿಂದ ಉತ್ತರ ರೈಲ್ವೆ ನಿರ್ವಹಣೆ

1968ರಿಂದ ಉತ್ತರ ರೈಲ್ವೆ ನಿರ್ವಹಣೆ

1968ರಿಂದ ಉತ್ತರ ರೈಲ್ವೆ ನಿರ್ವಹಣೆಯಲಿದ್ದ ಸಂಸತ್ ಕ್ಯಾಂಟೀನ್ ಈಗ ಐಟಿಡಿಸಿ ತೆಕ್ಕೆಗೆ ಬಿದ್ದಿದೆ. ಸಾಧಾರಣ ಸಂಸತ್ ಅಧಿವೇಶನದ ವೇಳೆ ಸರಾಸರಿ 4,500 ಮಂದಿ ಪ್ರತಿ ದಿನ ಊಟ -ತಿಂಡಿಗೆ ಬರುತ್ತಾರೆ, 2019-20 ರ ಅವಧಿಯಲ್ಲಿ ವಾರ್ಷಿಕ 17 ಕೋಟಿ ರು ಸಬ್ಸಿಡಿ ಹಾಗೂ ಸಂಸದರಿಗಾಗಿ 24 ಲಕ್ಷ ರು ವೆಚ್ಚ ಮಾಡಲಾಗಿತ್ತು.

ಕ್ಯಾಂಟೀನ್ ಮೆನು ಹಳೆ ದರ ಎಷ್ಟಿತ್ತು?

ಕ್ಯಾಂಟೀನ್ ಮೆನು ಹಳೆ ದರ ಎಷ್ಟಿತ್ತು?

2019ರಲ್ಲಿ ಸಬ್ಸಿಡಿ ಸಿಗುತ್ತಿದ್ದ ವೇಳೆ ಸಂಸತ್ ಕ್ಯಾಂಟೀನ್ ನಲ್ಲಿ ಇದ್ದ ದರ ಹೀಗಿದೆ: ಬ್ರೆಡ್ ಮತ್ತು ಬೆಣ್ಣೆ 6 ರೂ., ಚಪಾತಿ 2 ರೂ., ಚಿಕನ್ ಕರಿ 50 ರೂ., ಚಿಕನ್ ಕಟ್‌ಲೆಟ್ 41 ರೂ., ತಂದೂರಿ ಚಿಕನ್ 60 ರೂ., ಕಾಫಿ 5 ರೂ. ದರವಿದೆ.

ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಪ್ಲೇನ್ ದೋಸೆ 12 ರೂ., ಫಿಶ್ ಕರಿ 40 ರೂ., ಹೈದರಾಬಾದಿ ಚಿಕನ್ ಬಿರಿಯಾನಿ 65 ರೂ., ಮಟನ್ ಕರಿ 45 ರೂ., ಅನ್ನ 7 ರೂ., ಸೂಪ್ 14 ರೂ. ದರವಿತ್ತು.

English summary
The ITDC run Parliament canteen will offer as many as 58 food items, both vegetarian and non-vegetarian from January 27 onwards an internal circular said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X