BSNL BiTV: ಮೊಬೈಲ್ ಬಳಕೆದಾರರಿಗೆ ಇಲ್ಲಿದೆ ಭರ್ಜರಿ ನ್ಯೂಸ್, BSNL ಹೊಸ ಸೇವೆ ಆರಂಭ

ನವದೆಹಲಿ, ಫೆಬ್ರವರಿ 06: ಭಾರತದ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ IFTV ಸೇವೆಯನ್ನು ಜಾರಿಗೆ ತಂದಿತ್ತು. ಅದರ ಬೆನ್ನಲ್ಲೆ ಈಗ ತನ್ನ ಮೊಬೈಲ್ ಬಳಕೆದಾರರಿಗಾಗಿ BiTV ಸೇವೆಯನ್ನು ಆರಂಭಿಸಿದೆ. ಮೊಬೈಲ್‌ನಲ್ಲೇ ಉಚಿತ ಮನರಂಜನೆ ಕೊಡುವ ಉದ್ದೇಶದಿಂದ ಬಿಎಸ್‌ಎನ್‌ಎಲ್ ದೇಶಾದ್ಯಂತ ಹೊಸ ಸೇವೆ ಆರಂಭಿಸಿದೆ.

BSNL ಸಿಮ್ ಬಳಸುವ ಯಾರೆಲ್ಲ ಗ್ರಾಹಕರಿದ್ದಾರೋ ಅವರಿಗೆಲ್ಲ ಸುಮಾರು 450 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸುವ ಅವಕಾಶ ನೀಡುವ ಬಿಐ ಟಿವಿ ಸೇವೆ ಆರಂಭೀಸಿದೆ.ಈ ಸಲುವಾಗಿ OTTplay ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವ ಬಿಎಸ್‌ಎನ್ಎಲ್ ಉಚಿತ ಲೈವ್ ಟಿವಿ ಚಾನಲ್ ಜೊತೆಗೆ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಉಚಿತ ಸಿನಿಮಾ ವೀಕ್ಷಣೆಗೆ ಅವಕಾಶ ನೀಡುವ ಹೊಸ ಸೇವೆ ಇದಾಗಿದೆ.

BSNL Started BiTV Service Across India Mobile Users Can Free Watch OTT films 450 Live TV Channels

ಇನ್ನೂ ಮುಂದೆ ರಿಚಾರ್ಜ್ ಪ್ಲಾನ್ ಬೇರೆ, ಒಟಿಟಿಗೆ ಬೇರೆ ಪ್ಲಾನ್ ಇಲ್ಲ. ಒಂದೇ ರಿಚಾರ್ಜ್‌ನಡಿ ಹಲವು ಪ್ರಯೋಜನ ಪಡೆಯಬಹುದು. ಈಗಾಗಲೇ ಈ ಹೊಸ ಸೇವೆ ಪಾಂಡಿಚೇರಿಯಲ್ಲಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಟ್ಟಿದೆ. ಸದ್ಯ ಸೇವೆಯು ಭಾರತಾದ್ಯಂತ ಬಳಕೆದಾರರ ಬಳಕೆಗೆ ನೀಡಲಾಗಿದೆ.

ಎಂದಿನಂತೆ BSNL ಬಳಕೆದಾರರು ಮೊಬೈಲ್ ರಿಚಾರ್ಜ್ ಮಾಡಿಕೊಂಡರೆ ಮುಗಿತು. ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ ಲೈವ್ ಟಿವಿ ಚಾನಲ್, ವೆಬ್ ಸರಣಿಗಳು, ಸಿನಿಮಾಗಳನ್ನು ಉಚಿತವಾಗಿ ಮೊಬೈಲ್‌ನಲ್ಲಿಯೇ ವೀಕ್ಷಣೆ ಮಾಡಬಹುದು. ಇದೊಂದು ಟಿಲಿಕಾಂ ವಲಯದಲ್ಲಿ ಮಹತ್ವ ಕ್ರಾಂತಿ ಎನ್ನಬಹುದು.

ಬಿಎಸ್‌ಎನ್ಎಲ್ ಇತ್ತೀಚೆಗೆ ಘೋಷಿಸಿದ ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ (90 ರೂ. ಪ್ಲಾನ್) ಹಾಕಿಸಿಕೊಂಡರೆ ಮುಗಿತು. 17 ದಿನ ವ್ಯಾಲಿಡಿಟಿ ಇರುತ್ತದೆ. ಧ್ವನಿ ಕರೆಗಳು ಉಚಿತವಾಗಿರುತ್ತವೆ. ಇದರಡಿಯೇ ನೀವು ಬಿಐ ಟಿವಿಯನ್ನು ಆನಂದಿಸಬಹುದು. ಇಷ್ಟು ಕಡಿಮೆ ಬೆಲೆಗೆ ಒಟಿಟಿ ಚೆಂದಾದಾರಿಕೆ, ಲೈವ್ ಟಿವಿ ವೀಕ್ಷಣೆಗೆ ಅವಕಾಶ ಸಿಗುವುದು ಬೇರೆ ಯಾವ ಖಾಸಗಿ ಟೆಲಿಕಾಂ ಕಂಪನಿಗಳಲ್ಲಿ ಸಿಗುವುದಿಲ್ಲ. ಬದಲಾಗಿ ಬಿಎಸ್‌ಎನ್‌ಎಲ್‌ನಲ್ಲಿ ಮಾತ್ರವೇ ಎಂದು ರಾಬರ್ಟ್ ಜೆ.ರವಿ ಅವರು ಮುಂಬೈನಲ್ಲಿ ಪ್ರತಿಕ್ರಿಯಿಸಿದ್ದಾರೆ.

BSNL Started BiTV Service Across India Mobile Users Can Free Watch OTT films 450 Live TV Channels

ಬಜೆಟ್ ಸ್ನೇಹಿ ಪ್ಲಾನ್

90 ರೂಪಾಯಿ ರಿಚಾರ್ಜ್ ಪ್ಲಾನ್ ನಿಂದ ನೀವು 17ದಿನ ವ್ಯಾಲಿಡಿಟಿ ಜೊತೆಗೆ ಅನ್‌ಲಿಮಿಟೆಡ್ ಕರೆಗಳು ಇರುತ್ತವೆ. ಇದರಡಿ ನೀವು ಬಿಐಟಿವಿ ಸೇವೆ ಪಡೆಯಬಹುದು. ಇಲ್ಲವೇ 439 ರೂಪಾಯಿ ರಿಚಾರ್ಜ್ ಪ್ಲಾನ್ ಪಡೆದು ಈ ಲೈವ್ ಟಿವಿ, ಮನರಂಜನೆ ಆನಂದಿಸಬಹುದು. ಈ ಪ್ಲಾನ್ 90 ದಿನ ದೀರ್ಘಾವಧಿವರೆಗೆ ವ್ಯಾಲಿಡಿಟಿ ಹೊಂದಿರುತ್ತದೆ. ಅನ್‌ಲಿಮಿಟೆಡ್ ಧ್ವನಿ ಕರೆ, ಒಟ್ಟು 300 ಎಸ್‌ಎಂಎಸ್ ಗಳು ಲಭ್ಯ ಇರುತ್ತವೆ. ಇದು ಡೇಟಾ ಪ್ಯಾಕ್ ಯೋಜನೆ ಅಲ್ಲ. ಡೇಟಾ ಪ್ಯಾಕ್ ಬೇಕೆಂದವರು ಅದಕ್ಕಾಗಿಯೇ ಇರುವ ಬೇರೆ ಬೇರೆ ರಿಚಾರ್ಜ್ ಪ್ಲಾನ್ ಪಡೆಯಬಹುದಾಗಿದೆ.

IFTV ಎಂದರೇನು?

ಇತ್ತೀಚೆಗೆ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ IFTV ಸೇವೆಯನ್ನು ಬಿಎಸ್‌ಎನ್‌ಎಲ್ ಹಂತ ಹಂತವಾಗಿ ಆರಂಭಿಸಿದೆ. IFTV ಎಂದರೆ ಇಂಟರ್‌ನೆಟ್ ಫೈಬರ್ ಟಿವಿ. ಇದಕ್ಕೆ ಸೆಟ್‌ ಆಫ್ ಬಾಕ್ಸ್ ಬೇಕಿಲ್ಲ. ಅದಿಲ್ಲದೇ ನೀವು 500 ಚಾನೆಲ್‌ಗಳನ್ನು ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ನೋಡಬಹುದಾದ ಸೇವೆ. ಇದರ ಆರಂಭ ಬೆನ್ನಲ್ಲೆ ಬಿಎಸ್‌ಎನ್‌ಎಲ್ ಬಿಐಟಿವಿಯನ್ನು ಸೇವೆ ಆರಂಭಿಸಿದೆ. ಇದು ಭಾರತಾದ್ಯಂತ ಲಭ್ಯವಿದೆ ಎಂದು ಕಂಪನಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+