BSNL: ಒಂದು ಬಾರಿ ರಿಚಾರ್ಜ್ ಮಾಡಿಸಿದರೆ ವರ್ಷ ಪೂರ್ತಿ ಕಿರಿಕಿರಿ ಇಲ್ಲ: ಈ ಪ್ಲ್ಯಾನ್ ಬೆಲೆ ಎಷ್ಟು?
ಇಂದಿನಿಂದ ದೇಶದ ಹಲವು ಟೆಲಿಕಾಮ್ ಕಂಪನಿಗಳ ರಿಚಾರ್ಜ್ ಇಂದಿನಿಂದ ದುಬಾರಿ ಆಗಲಿದೆ. ಏರಟೆಲ್, ಜಿಯೋ ಕಂಪನಿಗಳು ತಮ್ಮ ರಿಚಾರ್ಜ್ ಪ್ಲ್ಯಾನ್‌ನ್ನು ಹೆಚ್ಚಿಸಿವೆ. ಇದೇ ವೇಳೆ ವೋಡಾಫೋನ್ ಐಡಿಯಾ ಕಂಪನಿ ಜುಲೈ 4ರಿಂದ ಸೇವಾದರಗಳನ್ನು ಹೆಚ್ಚಿಸಲಿದೆ. ಈ ಮಧ್ಯ ಸರ್ಕಾರಿ ಟೆಲಿಕಾಂ ಕಂಪನಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುವ ಮೂಲಕ ಬೇರೆ ನೆಟ್‌ವರ್ಕ್‌ಗಳಿಗೆ ಶಿಫ್ಟ್ ಆಗದಂತೆ ತಡೆಯಲು ಪ್ಲ್ಯಾನ್ ಹಾಕಿಕೊಂಡಿದೆ.
ಕಾಲಕ್ಕೆ ತಕ್ಕಂತೆ ಬಿಎಸ್‌ಎನ್‌ಎಲ್ ಬದಲಾಗುತ್ತಿದೆ. ಈ ನೆಟ್‌ವರ್ಕ್‌ನಲ್ಲಿ ಇನ್ನು 4ಜಿ ಸೇವೆಗಳನ್ನು ಈಗ ಆರಂಭಿಸಿದೆ. ಆದರೂ ಸಹ ಗ್ರಾಹಕರಿಗೆ ಬೇಕಾಗಿರುವ ಎಲ್ಲ ಆಯ್ಕೆಗಳನ್ನು ಈ ಕಂಪನಿ ಸಹ ನೀಡಲು ಹಿಂದೆ ಬಿದ್ದಿಲ್ಲ. ಬಳಕೆದಾರನ ಅವಶ್ಯಕತೆಗೆ ಅನುಗುಣವಾಗಿ ಬೇರೆ ಕಂಪನಿಗಳು ನೀಡುವಂತೆ ರಿಚಾರ್ಜ್ ಆಫರ್ ಬಿಎಸ್‌ಎನ್‌ಎಲ್ ಸಹ ನೀಡುತ್ತಿದೆ. ಅದು ಕಡಿಮೆ ಬೆಲೆಯಲ್ಲಿ.

BSNL ಹೆಚ್ಚು ದಿನಗಳ ವ್ಯಾಲಿಡಿಟಿ ಯೋಜನೆಯನ್ನು ಹೊಂದಿದೆ, ಇದರಲ್ಲಿ ಬಳಕೆದಾರರಿಗೆ ಅನಿಯಮಿತ ಕರೆ ಜೊತೆಗೆ 600GB ಹೈ ಸ್ಪೀಡ್ ಡೇಟಾವನ್ನು ಬಳಸಬಹುದಾಗಿದೆ. ಇದರ ಜೊತೆಗೆ ಕಂಪನಿ 45 ದಿನಗಳ ಕಡಿಮೆ ವ್ಯಾಲಿಡಿಟಿ ಇರುವ ಸೇವೆಗಳನ್ನು ನೀಡುತ್ತಿದೆ. ಈ ಕೆಳಗೆ ಬಿಎಸ್‌ಎನ್‌ಎಲ್ ರಿಚಾರ್ಜ್ ಪ್ಲ್ಯಾನ್ ಪಟ್ಟಿ ಇದೆ.
ಒಮ್ಮೆ ರಿಚಾರ್ಜ್ ಮಾಡಿದರೆ ಸಾಕು
ಒಮ್ಮೆ ರಿಚಾರ್ಜ್ ಮಾಡಿ ವರ್ಷ ಪೂರ್ತಿ ಕಿರಿಕಿರಿ ಇಂದ ತಪ್ಪಿಸಿಕೊಳ್ಳಬಹುದು ಎಂಬ ಆಲೋಚನೆಯಲ್ಲಿರುವ ಗ್ರಾಹಕರಿಗೆ ಬಿಎಸ್‌ಎನ್‌ಎಲ್ ಭರ್ಜರಿ ರಿಚಾರ್ಜ್ ಆಫರ್ ನೀಡಿದೆ. 1999 ರೂಪಾಯಿಗಳ ರಿಚಾರ್ಜ್ ಮಾಡಿಸಿಕೊಂಡಲ್ಲಿ ನೀವು 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದನ್ನು ಗ್ರಾಹಕ ತಮ್ಮ ಮೊಬೈಲ್ ನಂಬರ್‌ಗೆ ಅಳವಡಿಸಿಕೊಂಡಿದ್ದೇ ಆದಲ್ಲಿ 600 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದು. ಬಳಕೆದಾರ ದಿನದ ಯಾವುದೇ ಮಿತಿಯಿಲ್ಲದೇ ಈ ಡೇಟಾ ಯೂಸ್ ಮಾಡಬಹುದು. ಇದರಲ್ಲಿ ಉಚಿತ ಕರೆಗಳು ಹಾಗೂ ದಿನವೂ 100 ಎಸ್‌ಎಂಎಸ್ ಉಚಿತವಾಗಿ ಸಿಗುತ್ತವೆ.
BSNL ನ ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಉಚಿತ ರಾಷ್ಟ್ರೀಯ ರೋಮಿಂಗ್‌ನ ಪ್ರಯೋಜನವನ್ನು ಸಹ ಪಡೆಯಬಹುದಾಗಿದೆ. ಇದಲ್ಲದೆ, ಸರ್ಕಾರಿ ಟೆಲಿಕಾಂ ಕಂಪನಿ ಬಳಕೆದಾರರು ಜಿಂಗ್ ಮ್ಯೂಸಿಕ್, ಬಿಎಸ್ಎನ್ಎಲ್ ಟ್ಯೂನ್ಸ್, ಗೇಮಿಯಂ, ಹಾರ್ಡಿ ಗೇಮ್ಸ್ ಇತ್ಯಾದಿ ಸೇವೆಗಳನ್ನು ಸಹ ಎಂಜಾಯ್ ಮಾಡಬಹುದು.
45 ದಿನಗಳ ವ್ಯಾಲಿಡಿಟಿಗೆ ಎಷ್ಟು ರಿಚಾರ್ಜ್ ಮಾಡಿಸಬೇಕು?
ಇನ್ನು ಕಡಿಮೆ ವ್ಯಾಲಿಡಿಟಿ ಹಾಗೂ ಕಡಿಮೆ ಹಣದ ರಿಚಾರ್ಜ್ ಪ್ಲ್ಯಾನ್ ಸಹ ಬಿಎಸ್‌ಎನ್‌ಎಲ್ ಬಿಡುಗಡೆ ಮಾಡಿದೆ. ಬಳಕೆದಾರ 249 ರಿಚಾರ್ಜ್ ಮಾಡಿಸಿಕೊಂಡಲ್ಲಿ 45 ದಿನಗಳ ದೀರ್ಘಾವಧಿಯ ಮಾನ್ಯತೆಯನ್ನು ಪಡೆಯುತ್ತಾರೆ ಎಂದು ಹೇಳಿದೆ. ಈ 4G ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರು ದೈನಂದಿನ 2GB ಡೇಟಾ ಮತ್ತು 100 ಉಚಿತ SMS ನ ಪ್ರಯೋಜನ ಪಡೆಯಬಹುದು. ಈ ರಿಚಾರ್ಜ್ ಮಾಡಿಕೊಂಡಲ್ಲಿ ಬಳಕೆದಾರ ದೇಶದ ಯಾವುದೆ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆಗಳನ್ನು ಮಾಡುವ ಅವಕಾಶವನ್ನು ಹೊಂದಿರುತ್ತಾರೆ.












Click it and Unblock the Notifications