BSNL 4G ನೆಟ್‌ವರ್ಕ್‌ಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು.?-ಇಲ್ಲಿದೆ ಮಾಹಿತಿ
BSNL 4G: ದೇಶದಲ್ಲಿ ಜಿಯೋ, ಏರ್‌ಟೆಲ್ ರಿಚಾರ್ಜ್ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಇದರಿಂದ ಗ್ರಾಹಕರು ಬೇಸತ್ತು ಹೋಗಿದ್ದಾರೆ. ಇನ್ನು ಇವೆರಡು ನೆಟ್‌ವರ್ಕ್‌ಗಳಿಗೆ ಸೆಡ್ಡು ಹೊಡೆಯಲು ಮುಂದಾದ ಬಿಎಸ್‌ಎನ್‌ಲ್ 4ಜಿ ಸೌಲಭ್ಯಕ್ಕಾಗಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಹಾಗಾದರೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂದು ಇಲ್ಲಿ ತಿಳಿಯಿರಿ.
BSNL 4G ನೆಟ್‌ವರ್ಕ್ ಸೌಲಭ್ಯಕ್ಕಾಗಿ 6,000 ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಘೋಷಣೆ ಕೇಂದ್ರ ಸರ್ಕಾರ ಮಾಡಲಿದೆ. 4G ನೆಟ್‌ವರ್ಕ್ ಅಳವಡಿಕೆ ಬೇಕಾಗುವ ಅತ್ಯಾಧುನಿಕ ಸಾಮಾಗ್ರಿಗಳ ಖರೀದಿಗಾಗಿ ಕೇಂದ್ರವೇ ಆಂತರಿಕ ಬಂಡವಾಳ ಹೂಡಿಕೆ ಮಾಡಿದ್ದು, ಇದರಿಂದ ಗ್ರಾಹಕರನ್ನು ಸೆಳೆಯಲು ಬಿಎಸ್‌ಎನ್‌ಎಲ್‌ಗೆ ಅನೂಕೂಲಕರವಾಗಿರಲಿದೆ.

4G ನೆಟ್‌ವರ್ಕ್ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದರೆ ಬಿಎಸ್‌ಎನ್‌ಎಲ್ ಹೆಚ್ಚೆಚ್ಚು ಗ್ರಾಹರತನ್ನು ಗ್ರಾಹಕರನ್ನು ತನ್ನತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾರುಕಟ್ಟೆ ತಜ್ಞರು ಹೇಳುವ ಮಾತಾಗಿದೆ.
ದೂರಸಂಚಾರ ವಿಭಾಗ ಶೀಘ್ರದಲ್ಲಿಯೇ ಈ ಆಂತರಿಕ ಹೂಡಿಕೆಗೆ ಬಗ್ಗೆ ಸಂಪುಟದಿಂದ ಒಪ್ಪಿಗೆ ಪಡೆಯಲಿದೆ ಎಂದು ತಿಳಿದುಬಂದಿದೆ. 2023ರಲ್ಲಿ ಬಿಎಸ್‌ಎನ್‌ಎಲ್ 1,00,000 4ಜಿ ಸೈಟ್‌ಗಳಿಗಾಗಿ 19,000 ಕೋಟಿ ರೂಪಾಯಿ ಮುಂಗಡ ಖರೀದಿ ಆದೇಶ ನೀಡಿತ್ತು. ಇದೀಗ ಖರೀದಿಯ ಆದೇಶ ನೀಡಿದ್ದು, ಇದು 13,000 ಕೋಟಿ ರೂಪಾಯಿ ನೀಡಲಾಗಿದೆ. ಇದೀಗ ಸರ್ಕಾರ 6,000 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರ 2019ರಿಂದ ಬಿಎಸ್‌ಎನ್‌ಎಲ್ ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ ಅನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿದೆ. ಮೂರು ಪುನರುಜ್ಜೀವನ ಪ್ಯಾಕೇಜ್‌ಗಳ ಅಡಿಯಲ್ಲಿ ಸರ್ಕಾರ ₹3.22 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಈ ಪ್ಯಾಕೇಜ್‌ಗಳಿಂದಾಗಿ BSNL ಮತ್ತು MTNL ಆರ್ಥಿಕ ವರ್ಷ 2021ರಿಂದ ಕಾರ್ಯಾಚರಣೆಯ ಲಾಭವನ್ನು ಗಳಿಸಲು ಆರಂಭಿಸಿವೆ.
ಸದ್ಯ ಬಿಎಸ್‌ಎನ್‌ಎಲ್ 4ಜಿ ಸೇವೆಯನ್ನು ನಿಧಾನಗತಿಯಲ್ಲಿ ಕಾರ್ಯರೂಪಕ್ಕೆ ತರುತ್ತಿದೆ. ಜೂನ್ 2024ಕ್ಕೆ ಟಿಲಿಕಾಂ ಮಾರುಕಟ್ಟೆಯಲ್ಲಿ ಬಿಎಸ್‌ಎನ್‌ಎಲ್ ಪಾಲು ಶೇಕಡ 7.33ರಷ್ಟಿದೆ. ಡಿಸೆಂಬರ್ 2020ರಲ್ಲಿ ಬಿಎಸ್‌ಎನ್‌ಎಲ್ ಶೇಕಡ 10.72ರಷ್ಟು ಪಾಲುದಾರಿಕೆಯನ್ನು ಹೊಂದಿತ್ತು. ಖಾಸಗಿ ಕಂಪನಿ ಆಗಿರುವ ರಿಲಯನ್ಸ್ ಜಿಯೋ ಶೇಕಡ 40.71ರಷ್ಟು, ಏರ್‌ಟೆಲ್ ಶೇಕಡ 33.71ರಷ್ಟು ಬಳಕೆದಾರರನ್ನು ಹೊಂದಿದೆ.
ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ CDoT-TCS ಸ್ಟಾಕ್ ಆಧಾರದ ಮೇಲೆ 4G ನೆಟ್‌ವರ್ಕ್ ಅನ್ನು ರೋಲ್‌ಔಟ್ ಮಾಡಲು ಸರ್ಕಾರವು BSNLಗೆ ಸೂಚಿಸಿತ್ತು. ಆದರೆ ಈ ಸ್ಥಳೀಯ ಸ್ಟಾಕ್‌ನ ಪರೀಕ್ಷಾ ಪ್ರಕ್ರಿಯೆಯಿಂದಾಗಿ 4G ನೆಟ್‌ವರ್ಕ್ ಸೇವೆ ವಿಳಂಬ ಆಗುತ್ತಿದೆ. ಆದರೆ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
BSNL ರೀಚಾರ್ಜ್ ಪ್ಲಾನ್‌ಗಳ ವಿವರ ಹೀಗಿದೆ
* ₹399- 80 ದಿನ ವ್ಯಾಲಿಡಿಟಿ, ಪ್ರತಿದಿನ 1 GB ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಸ್ಥಳೀಯ/STD ಕರೆಗಳು.
* ₹499- 90 ದಿನ ವ್ಯಾಲಿಡಿಟಿ, ಪ್ರತಿದಿನ 1.5 GB ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಸ್ಥಳೀಯ/STD ಕರೆಗಳು, Zing ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ
* ₹997 ಪ್ಲಾನ್- 180 ದಿನ ವ್ಯಾಲಿಡಿಟಿ, ಪ್ರತಿದಿನ 3GB ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಸ್ಥಳೀಯ/STD ಕರೆಗಳು, PRBT (ವೈಯಕ್ತಿಕ ರಿಂಗ್ ಬ್ಯಾಕ್ ಟೋನ್)
* ₹1,999 ಪ್ಲಾನ್- 365 ದಿನ ವ್ಯಾಲಿಡಿಟಿ, ಪ್ರತಿದಿನ 2 GB ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಸ್ಥಳೀಯ/STD ಕರೆಗಳು, ಉಚಿತ ಸ್ಥಳೀಯ ಮತ್ತು ರಾಷ್ಟ್ರೀಯ ರೋಮಿಂಗ್ ಕರೆಗಳು
* ₹2,399 ಪ್ಲಾನ್- 365 ದಿನ ವ್ಯಾಲಿಡಿಟಿ, ಪ್ರತಿದಿನ 3 GB ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಸ್ಥಳೀಯ/STD ಕರೆಗಳು, ಉಚಿತ PRBT, BSNL ಟ್ಯೂನ್‌ಗಳಿಗೆ ಉಚಿತ ಚಂದಾದಾರಿಕೆ.
ಒಟ್ಟಿನಲ್ಲಿ ಇಷ್ಟೆಲ್ಲ ಆಫರ್‌ಗಳನ್ನು ಬಿಡುವ ಮೂಲಕ ಬಿಎಸ್‌ಎನ್‌ಎಲ್ ದೊಡ್ಡ ನೆಟ್‌ವರ್ಜ್‌ಗಳಾದ ಏರ್‌ಟೆಲ್ & ಜೊಯೋ ನೆಟ್‌ವರ್ಜ್‌ಗಳಿಗೆ ಪ್ರಬಲ ಸ್ಪರ್ಧಿಯಾಗಿದೆ ಎಂದರೆ ತಪ್ಪಾಗಲಾರದು.












Click it and Unblock the Notifications