BPL card: ಬಿಪಿಎಲ್ ಕಾರ್ಡ್ ಇದೆಯೇ?, ಅಂಚೆ ಕಛೇರಿಯಲ್ಲಿ ಈ ಖಾತೆ ತೆರೆಯಿರಿ
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ಅನೇಕ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ. ಕಾರ್ಡ್‌ದಾರರು ಅಂಚೆ ಕಛೇರಿಯಲ್ಲಿ ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯುವ ಮೂಲಕ ಹಲವು ಪ್ರಯೋಜನಗಳನ್ನು ಸಹ ಪಡೆಯಬಹುದು. ಹೆಣ್ಣು ಮಗುವಿನ ಹೆಸರಿನಲ್ಲಿ ವಾರ್ಷಿಕ ರೂ. 3000ದಂತೆ 15 ವರ್ಷಗಳವರೆಗೆ ಒಟ್ಟು ರೂ. 45,000ಗಳನ್ನು ಅಂಚೆ ಕಛೇರಿಯಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಬಹುದು. ಮಗುವಿಗೆ 21 ವರ್ಷ ಪೂರ್ಣಗೊಂಡ ಬಳಿಕ ಈ ಹಣ ಬಡ್ಡಿ ಸಮೇತ ಕುಟುಂಬದ ಕೈ ಸೇರಲಿದೆ.
ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಬಿಪಿಎಲ್ ಕುಟುಂಬದ 2 ಹೆಣ್ಣು ಮಕ್ಕಳಿಗೆ, ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ ರೂ. 3000ದಂತೆ 15 ವರ್ಷಗಳವರೆಗೆ ಒಟ್ಟು ರೂ. 45,000ಗಳನ್ನು ಅಂಚೆ ಇಲಾಖೆಯಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಿಕೆ ಮಾಡಬಹುದು. ಮಗುವಿಗೆ 21 ವರ್ಷ ಪೂರ್ಣಗೊಂಡ ನಂತರ ಪರಿಪಕ್ವ ಮೊತ್ತ ಅಂದಾಜು ರೂ. 1.27 ಲಕ್ಷ ನೀಡಲಾಗುತ್ತದೆ.

ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಭಾಗ್ಯಲಕ್ಷ್ಮಿ ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು.
ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆ ಯೋಜನೆ 2006-07 ರಿಂದ 2019-20ನೇ ಸಾಲಿನವರೆಗೆ ಭಾರತೀಯ ಜೀವ ವಿಮಾ ನಿಗಮವು ಪಾಲುದಾರ ಹಣಕಾಸುಸಂಸ್ಥೆಯಾಗಿದ್ದು, 2020-21ನೇ ಸಾಲಿನಿಂದ ಆಡಳಿತಾತ್ಮಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಸರ್ಕಾರದ ಆದೇಶ ದಿನಾಂಕ 11-10-2020ರಂತೆ ಅಂಚೆ ಇಲಾಖೆಯ ಮೂಲಕ ಅನುಷ್ಠಾನಗೊಳಿಲಾಗುತ್ತಿದೆ.
ಸದರಿ ಯೋಜನೆಯಡಿ ಬಿಪಿಎಲ್ ಕುಟುಂಬದ 2 ಹೆಣ್ಣು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ ರೂ. 3000ದಂತೆ 15 ವರ್ಷಗಳವರೆಗೆ ಒಟ್ಟು ರೂ. 45,000ಗಳನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ. 10ನೇ ತರಗತಿ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಮೊತ್ತದ ಶೇ.50ರಷ್ಟು ಭಾಗವನ್ನು ಹಿಂಪಡೆಯಲು ಯೋಜನೆಯಡಿ ಅವಕಾಶವಿರುತ್ತದೆ.
ಅವಶ್ಯಕ ದಾಖಲೆಗಳು: ಅಂಚೆ ಕಛೇರಿಯಲ್ಲಿಈ ಖಾತೆಯನ್ನು ತೆರೆಯಲು ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಯೋಜನೆ ಅರ್ಜಿ ನಮೂನೆ, ಪೋಷಕರೊಂದಿಗೆ ಮಗುವಿನ ಭಾವಚಿತ್ರ, ಮಗುವಿನ ಮೂಲ ಜನನ ಪ್ರಮಾಣ ಪತ್ರ, ಆದ್ಯತಾ ಕುಟುಂಬ ಪಡಿತರ ಚೀಟಿಯ ಪ್ರತಿ (ಪಡಿತರ ಚೀಟಿಯಲ್ಲಿ ತಂದೆಯ ಹೆಸರು ಇರಬೇಕು) ದಾಖಲೆಗಳು ಅಗತ್ಯ.
ಉಳಿದಂತೆ ಪೋಷಕರ ಆಧಾರ್ ಕಾರ್ಡ್, ಮಗುವಿನ ಆಧಾರ್ ಕಾರ್ಡ್ ಪ್ರತಿ, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಪೋಷಕರ ಸ್ವಯಂ ಘೋಷಣಾ ವಿವಾಹ ದೃಢೀಕರಣ ಪತ್ರ (ನಮೂನೆ-6ರಲ್ಲಿ), ಭರ್ತಿ ಮಾಡಿದ ಅರ್ಜಿಯನ್ನು ಮಗು ಹುಟ್ಟಿದ ದಿನಾಂಕದಿಂದ 2 ವರ್ಷ ಪೂರ್ಣಗೊಳ್ಳುವ ಮೊದಲು ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಪಡೆದು ಅಂಗನವಾಡಿ ಕಾರ್ಯಕರ್ತೆಗೆ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಭಾಗ್ಯಲಕ್ಷ್ಮೀ ಯೋಜನೆಯ ಅಡಿಯಲ್ಲಿ ತೆರೆಯಲಾಗುವ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯುವ ಅರ್ಜಿಯನ್ನು ಭರ್ತಿ ಮಾಡುವ ವಿಧಾನ ಹಾಗೂ ಪಾಸ್ ಪುಸ್ತಕಗಳನ್ನು ಫಲಾನುಭವಿಗಳಿಗೆ ವಿತರಿಸುವುದರ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಖಾತೆಯ ಪಾಸ್ ಪುಸ್ತಕ ಬಟವಾಡೆ ಮಾಡುವ ಮೊದಲು ಕೈಗೊಳ್ಳಬೇಕಾದ ಕ್ರಮಗಳನ್ನು ವಿರಿಸಲಾಗಿದೆ.
* ಪಾಸ್ ಪುಸ್ತಕದಲ್ಲಿ ನಮುದಾಗಿರುವ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಯ ಹೆಸರು ಮತ್ತು ಇತರೆ ವಿವರಗಳು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ದಾಖಲೆಗಳ ಪ್ರಕಾರ ಇದೆ ಅನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ.
* ಪಾಸ್ ಪುಸ್ತಕಕ್ಕೆ ಸಂಬಂಧಿಸಿದ ಸುಕನ್ಯಾ ಸಮೃದ್ಧಿ ಖಾತೆಯ ಭರ್ತಿ ಮಾಡಿದ ಅರ್ಜಿ ಸಹ ಬಂದಿರುತ್ತದೆಯೋ ಎಂದು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಿ.
* ಫಲಾನುಭವಿಯ ಪೋಷಕರನ್ನು ಸಂಪರ್ಕಿಸಿ ಹಾಗೂ ಮಗುವಿನ ಹೆಸರಲ್ಲಿ ಈಗಾಗಲೇ ಇನ್ನೊಂದು ವೈಯಕ್ತಿಕವಾಗಿ ದೇಶದ ಯಾವುದೇ ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸುಕನ್ಯ ಸಮೃದ್ಧಿ ಖಾತೆ ತೆರೆದಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಈಗಾಗಲೇ ಫಲಾನುಭವಿ ಮಗುವಿನ ಹೆಸರಿನಲ್ಲಿ ವೈಯಕ್ತಿಕವಾಗಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆದಿದ್ದಾರೆ ಎಂದಾದಲ್ಲಿ ಅದರ ಪಾಸ್ ಪುಸ್ತಕವನ್ನು ತರಲು ಹೇಳಿ?
* ಸುಕನ್ಯಾ ಸಮೃದ್ಧಿ ಖಾತೆಯ ಅರ್ಜಿ ಭರ್ತಿ ಮಾಡುವ ಮೊದಲು ಸಂಬಂಧಿಸಿದ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿ ಇದೆಯಾ ಎಂದು ಖಚಿತ ಪಡಿಸಿಕೊಳ್ಳಿ.
ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಹತ್ತಿರದ ಅಂಗನವಾಡಿ ಕೇಂದ್ರ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.












Click it and Unblock the Notifications