ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bihar Exit Poll Times Now-C Voter: ಬಿಹಾರದಲ್ಲಿ ಅತಂತ್ರ ಫಲಿತಾಂಶ?

|
Google Oneindia Kannada News

ಬಿಹಾರ ವಿಧಾನಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಕೊರೊನಾ ವೈರಸ್ ಸೋಂಕು ದೇಶದಲ್ಲಿ ಹರಡಿದ ಬಳಿಕ ನಡೆದ ಮೊದಲ ವಿಧಾನಸಭೆ ಚುನಾವಣೆ ಎನ್ನುವುದರ ಜತೆಗೆ, ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರವು ಕೋವಿಡ್ ಸನ್ನಿವೇಶವನ್ನು ಎದುರಿಸಿದ ಬಗೆ ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಬಿಹಾರದ ಜನತೆಯ ಪ್ರತಿಕ್ರಿಯೆ ಹೇಗಿದೆ ಎನ್ನುವುದನ್ನು ಈ ಚುನಾವಣೆ ನಿರ್ಧರಿಸುವ ಸಾಧ್ಯತೆ ಇದೆ.

ಬಿಹಾರದ ಮೂರನೇ ಹಾಗೂ ಕೊನೆಯ ಹಂತದ ಮತದಾನ ಶನಿವಾರ ಮುಕ್ತಾಯವಾಗಿದ್ದು, ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಸಮೀಕ್ಷೆಯನ್ನು ಟೈಮ್ಸ್ ನೌ ಮತ್ತು ಸಿ ವೋಟರ್ ಸಂಸ್ಥೆಗಳು ಜತೆಗೂಡಿ ನಡೆಸಿವೆ.

ಆಡಳಿತಾರೂಢ ಎನ್‌ಡಿಎ, ವಿರೋಧ ಪಕ್ಷಗಳ ಸಾಲಿನಲ್ಲಿರುವ ಮಹಾಘಟಬಂಧನಕ್ಕೆ ಅಗ್ನಿ ಪರೀಕ್ಷೆಯೆನಿಸಿರುವ ಈ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ? ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳು ಹಾಗೂ ಶೇಕಡಾವಾರು ಮತಗಳು ಬರಲಿವೆ? ಟೈಮ್ಸ್ ನೌ-ಸಿ ವೋಟರ್ ಎಕ್ಸಿಟ್ ಪೋಲ್ ಸಮೀಕ್ಷೆಯ ವಿವರ ಇಲ್ಲಿದೆ.

ಯಾರಿಗೆ ಎಷ್ಟು ಮತಗಳು?

ಯಾರಿಗೆ ಎಷ್ಟು ಮತಗಳು?

ಎನ್‌ಡಿಎ 116
ಯುಪಿಎ 120
ಎಲ್‌ಜೆಪಿ 1
ಇತರೆ 6

ಪಕ್ಷವಾರು ಮತಗಳು

ಪಕ್ಷವಾರು ಮತಗಳು

ಜೆಡಿಯು 42
ಬಿಜೆಪಿ 70
ಎಚ್‌ಎಎಂ 2
ವಿಐಪಿ 2

ಆರ್‌ಜೆಡಿ 85
ಕಾಂಗ್ರೆಸ್ 25
ಎಡಪಕ್ಷಗಳು 10

ಶೇಕಡಾವಾರು ಮತಗಳು

ಶೇಕಡಾವಾರು ಮತಗಳು

ಎನ್‌ಡಿಎ 37.70%
ಯುಪಿಎ 36.30%
ಎಲ್‌ಜೆಪಿ 8.50%
ಇತರೆ 17.50%

ಮ್ಯಾಜಿಕ್ ಸಂಖ್ಯೆ ಎಷ್ಟು

ಮ್ಯಾಜಿಕ್ ಸಂಖ್ಯೆ ಎಷ್ಟು

243 ಸೀಟುಗಳಿರುವ ಬಿಹಾರ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಏರಲು 122 ಸೀಟುಗಳ ಅಗತ್ಯವಿದೆ. ಯುಪಿಎ ಮೈತ್ರಿಕೂಟ 120 ಸೀಟುಗಳನ್ನು ಪಡೆದುಕೊಳ್ಳುವುದರಿಂದ ಇತರೆ ಪಕ್ಷಗಳ ಸಹಾಯದಿಂದ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.

2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 53, ಜೆಡಿಯು 71, ಆರ್‌ಜೆಡಿ 80, ಕಾಂಗ್ರೆಸ್ 27, ಎಲ್‌ಜೆಪಿ 2, ಸಿಪಿಐಎಂ 4 ಸ್ಥಾನಗಳಲ್ಲಿ ಜಯಗಳಿಸಿದ್ದವು. ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಕಳೆದ ಬಾರಿ ಗಳಿಸಿದ್ದಕ್ಕಿಂತ ಎಂಟು ಸೀಟುಗಳನ್ನು ಎನ್‌ಡಿಎ ಕಳೆದುಕೊಳ್ಳಲಿದೆ.

English summary
Bihar Election Exit Poll Results 2020 in Kannada: Times Now and C-Voter predicts a hung house in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X