ಇಂಡಿಯಾ ಟುಡೇ EXIT poll:ಬಿಹಾರ ಅಭಿವೃದ್ಧಿ, ಉದ್ಯೋಗವೇ ಮುಖ್ಯ

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 7 ರಂದು ಮೂರನೇ ಹಾಗೂ ಅಂತಿಮ ಹಂತದ ಮತದಾನ ಮುಕ್ತಾಯವಾಗಿದೆ. ಚುನಾವಣಾ ಆಯೋಗದ ನಿಯಮದಂತೆ ಸಂಜೆ 6 ಗಂಟೆ ನಂತರ ಚುನಾವಣೋತ್ತರ ಸಮೀಕ್ಷೆಗಳು ಬರಲಾರಂಭಿಸಿವೆ ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಇಲ್ಲಿದೆ...

ಅಕ್ಟೋಬರ್ 28 ರ ಬುಧವಾರ ಸಂಜೆ 6.30 ರಿಂದ ನವೆಂಬರ್ 7ರ ತನಕ ಬಿಹಾರದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ ವೆಬ್ ತಾಣ, ಎಲೆಕ್ಟ್ರಾನಿಕ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿಯಂತೆ ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿಯಾದವ್ ಪರ ಜನಾಭಿಪ್ರಾಯ ಸಿಕ್ಕಿದೆ. ಎನ್ಡಿಎ ಅಭ್ಯರ್ಥಿ ಹಾಲಿ ಸಿಎಂ ನಿತೀಶ್ ಕುಮಾರ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಚುನಾವಣೆಯಲ್ಲಿ ಮುಖ್ಯ ವಿಷಯದ ಬಗ್ಗೆ ವರದಿ ಮುಂದಿದೆ..

ಚುನಾವಣೆ ಸಂದರ್ಭದಲ್ಲಿ ಯಾವ ವಿಷ್ಯ

ಚುನಾವಣೆ ಸಂದರ್ಭದಲ್ಲಿ ಯಾವ ವಿಷ್ಯ

ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಪ್ರಕಾರ ಚುನಾವಣೆ ಸಂದರ್ಭದಲ್ಲಿ ಯಾವ ವಿಷ್ಯ ಮುಖ್ಯವಾಗಿತ್ತು ಎಂಬುದರ ಬಗ್ಗೆ ಅಭಿಪ್ರಾಯ ಇಲ್ಲಿದೆ;

ಬಿಹಾರ ಅಭಿವೃದ್ಧಿ: 42%
ನಿರುದ್ಯೋಗ: 30%
ಹಣ ದುಬ್ಬರ: 11%
ಮೋದಿ, ಪಕ್ಷ ಯಾವುದು: 3%
ಲಡಾಕ್ ಸಂಘರ್ಷ, ಜಾತಿ: 1%

ನವೆಂಬರ್ 10ರಂದು ಅಂತಿಮ ಫಲಿತಾಂಶ

ನವೆಂಬರ್ 10ರಂದು ಅಂತಿಮ ಫಲಿತಾಂಶ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ, ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ, ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 1 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಸಲಾಯಿತು. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

ಮತದಾನ್ದಕ್ಕೂ ಮುನ್ನ ಚುನಾವಣೆ ಮುಖ್ಯ ವಿಷಯ?

ಮತದಾನ್ದಕ್ಕೂ ಮುನ್ನ ಚುನಾವಣೆ ಮುಖ್ಯ ವಿಷಯ?

ಲೋಕನೀತಿ ಸಿಎಸ್ ಡಿಎಸ್ ಜೊತೆ ಮತದಾನ ಪೂರ್ವ ಸಮೀಕ್ಷೆಯಂತೆ ಚುನಾವಣೆ ಮುಖ್ಯ ವಿಷಯ ಯಾವುದು ಎಂದು ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರ ಹೀಗಿದೆ: ಅಭಿವೃದ್ಧಿ 29%, ನಿರುದ್ಯೋಗ 20%, ಹಣದುಬ್ಬರ 11%, ಬಡತನ 6%, ಶಿಕ್ಷಣ 7%,. 2015ರಲ್ಲಿ ನಿತೀಶ್ ಸರ್ಕಾರದ ಬಗ್ಗೆ ಶೇ 80ರಷ್ಟು ಜನ ಸಮಾಧಾನ ವ್ಯಕ್ತಪಡಿಸಿದ್ದಾರೆ. ನಿತೀಶ್ ಕುಮಾರ್ ಅವರು 2020ರಲ್ಲಿ ಶೇ 52 ರಷ್ಟು ಮಂದಿ ಮಾತ್ರ ಸರ್ಕಾರದ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ್ದಾರೆ.

Recommended Video

    Bihar ಚುನಾವಣೆಯಲ್ಲಿ ಮದ್ಯಾಹ್ನ 1 ಗಂಟೆಗೆ 35%ರಷ್ಟು ಮತದಾನ | Oneindia kannada
    2015ರಲ್ಲಿ ಬಂದಿದ್ದ ಫಲಿತಾಂಶ

    2015ರಲ್ಲಿ ಬಂದಿದ್ದ ಫಲಿತಾಂಶ

    2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+