ವಾಷಿಂಗ್ಟನ್, ಜನವರಿ 20: ಅಮೆರಿಕ ಇಂದು ಹೊಸ ಬದಲಾವಣೆಗೆ ಕಾಲಿಡುತ್ತಿದೆ. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷರಾಗಿ ನಾಲ್ಕು ವರ್ಷ ಆಡಳಿತ ನಡೆಸಿದ್ದ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಇಂದಿಗೆ ಅಧಿಕೃತವಾಗಿ ಅಂತ್ಯಗೊಳ್ಳುತ್ತಿದೆ. ಜೋ ಬೈಡನ್ ನೇತೃತ್ವದಲ್ಲಿ ಡೆಮಾಕ್ರಟಿಕ್ ಪಕ್ಷ ಪುನಃ ಆಡಳಿತದ ಚುಕ್ಕಾಣಿ ಹಿಡಿಯುತ್ತಿದೆ.
ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಭಾರತ ಮೂಲದ ಅಮೆರಿಕನ್ ಕಮಲಾ ಹ್ಯಾರಿಸ್ ಅವರು 49ನೇ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಏರುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕಮಲಾ ಅವರದ್ದಾಗುತ್ತಿದೆ.
ಅಮೆರಿಕ ಅಧ್ಯಕ್ಷೀಯ ಇತಿಹಾಸದಲ್ಲಿಯೇ ಈ ರೀತಿಯ ಅಧಿಕಾರ ಬದಲಾವಣೆ ನಡೆದಿರಲಿಲ್ಲ. ತನ್ನ ಸೋಲನ್ನು ಒಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್, ಕಾನೂನು ಹೋರಾಟ, ಆರೋಪ, ಬೆದರಿಕೆಯ ತಂತ್ರಗಳನ್ನು ನಡೆಸಿಯೂ ಅದರಲ್ಲಿ ವಿಫಲರಾಗಿದ್ದರು. ಕೊನೆಯ ಪ್ರಯತ್ನವೆಂಬಂತೆ ಬೆಂಬಲಿಗರು ಸಂಸತ್ ಕಟ್ಟಡದ ಮೇಲೆ ದಾಳಿ ನಡೆಸಿ ಹಿಂಸಾಚಾರ ನಡೆಸಲು ಸಹ ಅವಕಾಶ ನೀಡಿದ್ದರು. ಇದೆಲ್ಲವೂ ವ್ಯರ್ಥವಾಗಿದ್ದು, ಕೊನೆಗೂ ಅನಿವಾರ್ಯವಾಗಿ ಅಧಿಕಾರ ಹಸ್ತಾಂತರ ನಡೆಸಲು ಮುಂದಾಗಿದ್ದಾರೆ.
ಆದರೆ, ಕೊನೆಯ ಹಂತದಲ್ಲಿ ಯಾವುದೇ ಘಟನೆಗಳು ನಡೆಯಬಹುದು ಎಂದು ಉದ್ಘಾಟನಾ ದಿನವಾದ ಬುಧವಾರ ಸಂಸತ್ತು, ಕಾರ್ಯಕ್ರಮದ ಸ್ಥಳ, ಸಂಸದರ ನಿವಾಸಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಇಡೀ ಜಗತ್ತಿನ ಗಮನ ಸೆಳೆದಿರುವ ಜೋ ಬೈಡನ್-ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹೇಗಿರಲಿದೆ? ಅದು ಹೇಗೆ ಜರುಗಲಿದೆ ಎಂಬ ನೇರ ಪ್ರಸಾರದ ಮಾಹಿತಿ ಇಲ್ಲಿ ಲಭ್ಯ.
Newest FirstOldest First
12:50 AM, 21 Jan
ಸೇವೆ ಸಲ್ಲಿಸಲು ಸಿದ್ಧ ಎಂದು ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಮಲಾ ಹ್ಯಾರಿಸ್ ಮೊದಲ ಟ್ವೀಟ್ ಮಾಡಿದ್ದಾರೆ.
12:12 AM, 21 Jan
ಅಮೆರಿಕದ ನೂತನ ಅಧ್ಯಕ್ಷ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ. ಪ್ರಜಾಪ್ರಭುತ್ವದ ಹೊಸ ಅಧ್ಯಾಯಕ್ಕಾಗಿ ಅಮೆರಿಕಕ್ಕೆ ಅಭಿನಂದನೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
11:44 PM, 20 Jan
Tamil Nadu: Locals light diyas in Thulasendrapuram, the native village of the mother of US Vice President-elect Kamala Harris ahead of her swearing-in. pic.twitter.com/b89WEstmb1
ಕಮಲಾ ಹ್ಯಾರಿಸ್ ಅವರ ತಾಯಿಯ ಮೂಲ ಊರಾದ ತಮಿಳುನಾಡಿನ ತುಳಸೇಂದ್ರಪುರಂ ಗ್ರಾಮದಲ್ಲಿ ಕಮಲಾ ಹ್ಯಾರಿಸ್ ಪದಗ್ರಹಣಕ್ಕೂ ಮುನ್ನ ದೀಪಗಳನ್ನು ಹಚ್ಚಿ ಸಂಭ್ರಮಿಸಲಾಯಿತು.
11:34 PM, 20 Jan
ಅಮೆರಿಕದ ಮೊದಲ ರಾಷ್ಟ್ರೀಯ ಯುವ ಕವಿ ಅಮಂಡಾ ಗೋರ್ಮನ್ ಮಾತನಾಡಿ, ನಾವು ಭವಿಷ್ಯದ ಕಡೆಗೆ ನಮ್ಮ ಕಣ್ಣು ನೆಟ್ಟಿದ್ದರೆ, ಇತಿಹಾಸ ತನ್ನ ಕಣ್ಣನ್ನು ನಮ್ಮ ಕಡೆಗೆ ಇರಿಸಿರುತ್ತದೆ. ನಾವು ಸದುದ್ದೇಶದಿಂದ ಒಕ್ಕೂಟವನ್ನು ರಚಿಸಲು ಒಂದಾಗಿದ್ದೇವೆ ಎಂದರು.
11:12 PM, 20 Jan
ರಾಜಕೀಯ ತೀವ್ರಗಾಮಿತನ ಮತ್ತು ಆಂತರಿಕ ಉಗ್ರವಾದವನ್ನು ಸೋಲಿಸುವುದಾಗಿ ಬೈಡನ್ ಪ್ರತಿಜ್ಞೆ ಮಾಡಿದರು. ಅಮೆರಿಕದ ಜನತೆ ರಾಜಕೀಯ ತೀವ್ರಗಾಮಿತನ, ಬಿಳಿವರ್ಣದ ಶ್ರೇಷ್ಠತೆಯ ವ್ಯಸನ, ಆಂತರಿಕ ಭಯೋತ್ಪಾದನೆಗಳ ಹೆಚ್ಚಳವನ್ನು ಎದುರಿಸುತ್ತಿದ್ದಾರೆ. ಅದನ್ನು ನಾವು ಎದುರಿಸಬೇಕು. ನಾವು ಸೋಲಿಸುತ್ತೇವೆ ಎಂದರು.
11:10 PM, 20 Jan
ನಮ್ಮನ್ನು ವಿಭಜಿಸುವ ಶಕ್ತಿಗಳು ಪ್ರಬಲವಾಗಿವೆ ಮತ್ತು ಅವು ನಿಜ ಎನ್ನುವುದು ನನಗೆ ಗೊತ್ತು. ಆದರೆ ಅವು ಹೊಸದಲ್ಲ ಎಂದೂ ನನಗೆ ತಿಳಿದಿದೆ. ಜನಾಂಗೀಯ ನಿಂದನೆ, ಸ್ಥಳೀಯತೆ, ಭಯ, ಅಪನಗದೀಕರಣದಂತಹ ಸಮಾನ ಮತ್ತು ಕೆಟ್ಟ ವಾಸ್ತವಗಳು ನಮ್ಮನ್ನು ಹರಿದು ಹಂಚಿಹಾಕಿದೆ. ಇದರ ನಡುವೆ ಅಮೆರಿಕದ ಇತಿಹಾಸ ಸತತವಾಗಿ ಹೆಣಗಾಡಿದೆ ಎಂದರು.
11:04 PM, 20 Jan
ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದ ಕಮಲಾ ಹ್ಯಾರಿಸ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ತಿಳಿಸಿದ್ದಾರೆ. ಭಾರತ-ಅಮೆರಿಕ ಸಂಬಂಧವನ್ನು ವೃದ್ಧಿಸುವ ಸಲುವಾಗಿ ಅವರೊಂದಿಗೆ ಮಾತುಕತೆ ನಡೆಸಲು ಕಾದಿರುವುದಾಗಿ ಮತ್ತು ಭಾರತ-ಅಮೆರಿಕ ಸಹಭಾಗಿತ್ವವು ನಮ್ಮ ಗ್ರಹಕ್ಕೆ ಪ್ರಯೋಜನಾಕಾರಿ ಎಂದು ತಿಳಿಸಿದ್ದಾರೆ.
10:59 PM, 20 Jan
'ನಾನು ನನ್ನ ಮಾತು ನೀಡುತ್ತೇನೆ. ನಾನು ಎಂದಿಗೂ ನಿಮ್ಮೊಂದಿಗೆ ಇರುತ್ತೇನೆ. ಅಧಿಕಾರದಿಂದ ಯೋಚಿಸುವುದಿಲ್ಲ. ಆದರೆ ಸಾಧ್ಯತೆಗಳ ಬಗ್ಗೆ ಆಲೋಚಿಸುತ್ತೇನೆ. ನಮ್ಮ ಪಡೆಗಳನ್ನು ದೇವರು ಕಾಪಾಡಲಿ' ಎಂದು ಬೈಡನ್ ಹೇಳಿದ್ದಾರೆ.
10:58 PM, 20 Jan
ಅಧ್ಯಕ್ಷನಾಗಿ ನನ್ನ ಮೊದಲ ನಡೆಯೇನೆಂದರೆ ಈ ಪಿಡುಗಿನ ಕಾರಣದಿಂದ ಜೀವ ಕಳೆದುಕೊಂಡ ಜನರಿಗಾಗಿ ಒಂದು ಕ್ಷಣ ಮೌನಾಚರಣೆಯ ಗೌರವ ಸಲ್ಲಿಸುವಲ್ಲಿ ನನ್ನೊಂದಿಗೆ ಸೇರಿಕೊಳ್ಳುವಂತೆ ಕೋರುವುದಾಗಿದೆ- ಬೈಡನ್
10:51 PM, 20 Jan
ಅಮೆರಿಕ ಪರೀಕ್ಷೆಗೆ ಒಳಪಟ್ಟಿದೆ ಮತ್ತು ನಾವು ದೃಢವಾಗಿ ಬಂದಿದ್ದೇವೆ. ನಮ್ಮ ಮೈತ್ರಿಕೂಟಗಳನ್ನು ದುರಸ್ತಿಪಡಿಸುತ್ತೇವೆ. ನಮ್ಮ ಉದಾಹರಣೆಗಳ ಶಕ್ತಿಯಿಂದ ಮುನ್ನಡೆಯಲಿದ್ದೇವೆ ಎಂದು ತಮ್ಮ ವಿದೇಶಿ ಮಿತ್ರರಿಗೆ ಬೈಡನ್ ಸಂದೇಶ ರವಾನಿಸಿದ್ದಾರೆ.
10:44 PM, 20 Jan
ನಮಗೆ ಬೆಂಬಲ ನೀಡದ ಎಲ್ಲರಿಗೂ ಇದು, ಕೇಳಿಸಿಕೊಳ್ಳಿ. ನೀವು ಈಗಲೂ ಒಪ್ಪದೆ ಹೋದರೂ ಪರವಾಗಿಲ್ಲ. ಇದೇ ಪ್ರಜಾಪ್ರಭುತ್ವ. ಆದರೆ ಅಸಮ್ಮತಿ ಎನ್ನುವುದು ಬೇರ್ಪಡುವಿಕೆಗೆ ಕಾರಣವಾಗಬಾರದು ಎಂದು ಬೈಡನ್ ಹೇಳಿದ್ದಾರೆ.
10:37 PM, 20 Jan
ಏಕತೆಯ ಸಂದೇಶವನ್ನು ಪುನರುಚ್ಚರಿಸಿದ ಬೈಡನ್, ಈ ಚಳಿಗಾಲದ ಗಂಡಾಂತರವನ್ನು ಎದುರಿಸಲು ತಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಬೇಕಿದೆ. ಅಮೆರಿಕವನ್ನು ಸೇರಿಸುವುದು ಮತ್ತು ದೇಶವನ್ನಾಗಿ ಒಂದುಗೂಡಿಸುವುದು ತಮ್ಮ ಮೂಲ ಬಯಕೆಯಾಗಿದೆ. ಈ ಕಾರಣಕ್ಕಾಗಿ ನನ್ನ ಜತೆಗೂಡುವಂತೆ ಪ್ರತಿ ಅಮೆರಿಕನ್ನರಿಗೂ ಕೋರುತ್ತೇನೆ ಎಂದರು.
10:29 PM, 20 Jan
ಇದು ಅಮೆರಿಕನ್ನರ ದಿನ. ಇದು ಪ್ರಜಾಪ್ರಭುತ್ವದ ದಿನ. ಇಂದು ಈ ದಿಗ್ವಿಜಯವನ್ನು ಅಭ್ಯರ್ಥಿಯಾಗಿ ಅಲ್ಲ, ಆದರೆ ಪ್ರಜಾಪ್ರಭುತ್ವವಾಗಿ ಸಂಭ್ರಮಿಸುತ್ತಿದ್ದೇವೆ. ಈ ಸಮಯದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ- ಬೈಡನ್
10:28 PM, 20 Jan
ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಜೋ ಬೈಡನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ಭಾರತ ಮತ್ತು ಅಮೆರಿಕ ಕಾರ್ಯತಂತ್ರ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರೊಂದಿಗೆ ಕೆಲಸ ಮಾಡಲು ಬಯಸಿರುವುದಾಗಿ ಅವರು ಹೇಳಿದ್ದಾರೆ.
10:21 PM, 20 Jan
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಜೋ ಬೈಡನ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಇದರೊಂದಿಗೆ ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಅಧಿಕಾರ ಸ್ವೀಕರಿಸಿದ್ದಾರೆ.
10:20 PM, 20 Jan
ಜೋ ಬೈಡನ್ ಪ್ರಮಾಣವಚನ ಸ್ವೀಕಾರ ಸಮಯ ಆರಂಭ.
10:18 PM, 20 Jan
ಖ್ಯಾತ ಗಾಯಕಿ ಜೆನಿಫರ್ ಲೋಪೆಜ್ 'ದಿಸ್ ಲ್ಯಾಂಡ್ ಈಸ್ ಯುವರ್ ಲ್ಯಾಂಡ್' ಎಂಬ ಜನಪ್ರಿಯ ಗೀತೆ ಹಾಡಿದರು.
ಇಂದು ನಾನು ಇಲ್ಲಿ ಇರಲು, ನನಗಿಂತಲೂ ಮುಂಚೆ ಬಂದ ಮಹಿಳೆಯರು ಕಾರಣ ಎಂದು ತಮ್ಮನ್ನು ಬೆಳೆಸಿದ ತಾಯಿ, ಅಮೆರಿಕ ಇತಿಹಾಸದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಕಮಲಾ ಹ್ಯಾರಿಸ್ ನೆನಪಿಸಿಕೊಂಡಿದ್ದಾರೆ.
9:45 PM, 20 Jan
ಅಮೆರಿಕದಲ್ಲಿ ಹೊಸ ದಿನ ಎಂದು ಪ್ರಮಾಣವಚನಕ್ಕೂ ಮುನ್ನ ಜೋ ಬೈಡನ್ ಟ್ವೀಟ್ ಮಾಡಿದ್ದಾರೆ.
9:44 PM, 20 Jan
Ambassador @SandhuTaranjitS at the Capitol to attend 59th Presidential Inauguration - Oath of Office Ceremony of US President-elect Joseph Robinette Biden Jr. & Vice President-elect Kamala Harris pic.twitter.com/8eRZ4IB71q
'ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಲು ಸಂತಸವಾಗುತ್ತಿದೆ' ಎಂದು ಜೋ ಬೈಡನ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿರುವ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಹೇಳಿದ್ದಾರೆ.
9:29 PM, 20 Jan
I love you, Jilly, and I couldn’t be more grateful to have you with me on the journey ahead. pic.twitter.com/V4GUXAKSKg
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಜೋ ಬೈಡನ್ ಅವರು ಪತ್ನಿ ಜಿಲ್ ಬೈಡನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
9:03 PM, 20 Jan
ಎರಡು ಬೈಬಲ್‌ಗಳನ್ನು ಬಳಸಿ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಂದು ಬೈಬಲ್ ತಮ್ಮ ಹಾಗೂ ಸಹೋದರಿ ಮಾಯಾ ಅವರಿಗೆ ಎರಡನೆಯ ತಾಯಿಯಂತೆ ಇದ್ದ ರೆಜಿನಾ ಶೆಲ್ಟನ್ ಅವರಿಗೆ ಸೇರಿದ್ದಾಗಿದೆ.
8:18 PM, 20 Jan
ಬೈಡನ್ ಅವರ ಪ್ರಮಾಣವಚನ ಸ್ವೀಕಾರ ನಡೆಯುವ ಸಂದರ್ಭದಲ್ಲಿ ಟ್ರಂಪ್ ಅವರು ಫ್ಲೋರಿಡಾದ ತಮ್ಮ ಮಾರ್-ಎ-ಲಾಗೋ ರೆಸಾರ್ಟ್‌ನಲ್ಲಿ ಸಮಯ ಕಳೆಯಲಿದ್ದಾರೆ. ಅಮೆರಿಕದ ಸುಮಾರು 150 ವರ್ಷಗಳ ಅಧ್ಯಕ್ಷೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತಮ್ಮ ಉತ್ತರಾಧಿಕಾರಿಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಮೊದಲ ಅಧ್ಯಕ್ಷ ಎಂದೆನಿಸಿದ್ದಾರೆ.
7:58 PM, 20 Jan
ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಿಂದ ನಿರ್ಗಮಿಸುವ ಮುನ್ನ ಬೈಡನ್ ಅವರಿಗೆ ಪತ್ರವೊಂದನ್ನು ಉಳಿಸಿ ಹೋಗಿದ್ದಾರೆ. ಆದರೆ ಆ ಪತ್ರದಲ್ಲಿ ಏನಿದೆ ಎನ್ನುವುದು ಬಹಿರಂಗವಾಗಿಲ್ಲ.
7:41 PM, 20 Jan
ಅಮೆರಿಕದ ನಿರ್ಗಮಿತ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಬೈಡನ್ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪೆನ್ಸ್ ಅವರು ಡೊನಾಲ್ಡ್ ಟ್ರಂಪ್ ಬೀಳ್ಕೊಡುಗೆ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.
READ MORE
12:09 AM, 20 Jan
ನಿರೂಪಕ ಕೆಕೆ ಪಾಲ್ಮೆರ್ ಈ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಭಾರತೀಯರು ಜನವರಿ 20ರ ರಾತ್ರಿ 10 ಗಂಟೆಯಿಂದ (ಅಮೆರಿಕ ಕಾಲಮಾನ ಬೆಳಿಗ್ಗೆ 11.30) ಕಾರ್ಯಕ್ರಮ ವೀಕ್ಷಿಸಬಹುದು.
12:09 AM, 20 Jan
ಅಮೆರಿಕ ರಾಷ್ಟ್ರಗೀತೆಯೊಂದಿಗೆ ಸಮಾರಂಭ ಶುರುವಾಗಲಿದೆ. ಉದ್ಘಾಟನಾ ಕಾರ್ಯಕ್ರಮದ ಮೊದಲ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಅಮೆರಿಕದ ಪ್ರಥಮ ಮಹಿಳೆ ಡಾ. ಜಿಲ್ ಬೈಡನ್ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
12:09 AM, 20 Jan
ಮಧ್ಯಾಹ್ನಕ್ಕೂ ಮುನ್ನ ಕಮಲಾ ಹ್ಯಾರಿಸ್ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೊಟೊಮೇಯರ್ ಪ್ರಮಾಣವಚನ ಬೋಧಿಸುವ ನಿರೀಕ್ಷೆಯಿದೆ. ಅವರ ನಂತರ ಜೋ ಬೈಡನ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
9:42 AM, 20 Jan
ಅಮೆರಿಕಾ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರು ವಾಷಿಂಗ್ಟನ್ನ ಲಿಂಕನ್ ಸ್ಮಾರಕದ ಮುಂದೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡ ಸಾವಿರಾರು ಜನರಿಗೆ ಗೌರವ ಸಲ್ಲಿಸಿದರು.
9:51 AM, 20 Jan
"ಗುಣಮುಖರಾಗಲು ನಾವಿದನ್ನು ನೆನಪಿಟ್ಟುಕೊಳ್ಲಬೇಕು. ಕೆಲವೊಮ್ಮೆ ಇಂತಹ ಸಂದರ್ಭವನ್ನು ನೆನಪಿಸುವುದು ಕಷ್ಟಕರ. ಆದರೂ ನಾವಿದರಿಂದ ಗುಣಮುಖರಾಗಲಿದ್ದೇವೆ'' ಎಂದು ಲಿಂಕನ್ ಸ್ಮಾರಕದ ಮುಂದೆ ಕೋವಿಡ್-19ನಿಂದಾಗಿ ಮಡಿದವರಿಗೆ ಮೌನ ಪ್ರಾರ್ಥನೆ ಸಲ್ಲಿಸಿದ ಬಳಿಕ ಜೋ ಬೈಡೆನ್ ಹೇಳಿದರು.
9:53 AM, 20 Jan
ನಾವೊಂದು ರಾಷ್ಟ್ರವಾಗಿ ಇದನ್ನು ಮಾಡುವುದು ಮುಖ್ಯವೆನಿಸಿದೆ. ಅದಕ್ಕಾಗಿಯೇ ನಾವು ಇಂದು ಇಲ್ಲಿದ್ದೇವೆ. ಸೂರ್ಯೋದಯ ಮತ್ತು ಮುಸ್ಸಂಜೆಯ ನಡುವೆ ಕತ್ತಲೆಯನ್ನು ಹೋಗಲಾಡಿಲಸು ದೀಪವನ್ನು ಬೆಳಗಿಸೋಣ ಮತ್ತು ಈ ಕ್ಷಣದಲ್ಲಿ ಬಲಿಯಾದವರನ್ನು ನೆನಪಿಸೋಣ ಎಂದು ಬೈಡೆನ್ ತಿಳಿಸಿದರು.
9:55 AM, 20 Jan
ಅಮೆರಿಕಾದ 46 ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಜೋ ಬಿಡೆನ್ ತಮ್ಮ ಮೊದಲ ಭಾಷಣದಲ್ಲಿ, ಏಕತೆಯ ವಿಷಯದ ಸುತ್ತ ಭಾಷಣ ಮಾಡಲಿದ್ದಾರೆ ಎಂದು ಅಧ್ಯಕ್ಷರಿಗೆ ಹತ್ತಿರವಾದ ಸಲಹೆಗಾರರು ಹೇಳಿದ್ದಾರೆ.
9:57 AM, 20 Jan
ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ರ ಭಾಷಣವು 20 ರಿಂದ 30 ನಿಮಿಷಗಳವರೆಗೆ ಇರುವ ಸಾಧ್ಯತೆಯಿದೆ
9:58 AM, 20 Jan
ಕೊರೊನಾವೈರಸ್ ಸಾಂಕ್ರಾಮಿಕ ಮತ್ತು ಭದ್ರತಾ ಬೆದರಿಕೆ ಕಾರಣಗಳಿಂದಾಗಿ ಕಾರ್ಯಕ್ರಮವನ್ನು ಆದಷ್ಟು ಸಾಮಾನ್ಯವಾಗಿ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
10:03 AM, 20 Jan
ಲೇಡಿ ಗಾಗಾ ಅವರು ಕ್ಯಾಪಿಟಲ್ನ ವೆಸ್ಟ್ ಫ್ರಂಟ್ನಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದಾರೆ ಮತ್ತು ಜೆನ್ನಿಫರ್ ಲೋಪೆಜ್, ಗಾರ್ತ್ ಬ್ರೂಕ್ಸ್ ಸಂಗೀತ ಪ್ರದರ್ಶನ ನೀಡುತ್ತಿದ್ದಾರೆ.
10:39 AM, 20 Jan
ಜೋ ಬೈಡೆನ್ ಇಂದು ಪ್ರಮಾಣವಚನ ಸ್ವೀಕಾರದ ಬಳಿಕ ಟ್ವಿಟರ್ @POTUS ಮತ್ತು ವೈಟ್ಹೌಸ್ ಖಾತೆಗಳಿಂದ ಎಲ್ಲಾ ಫಾಲೋವರ್ಸ್ಗಳನ್ನು ತೆಗೆದುಹಾಕಲು ಯೋಜಿಸಿದೆ.
10:59 AM, 20 Jan
ಮಂಗಳವಾರ ಶ್ವೇತಭವನವು ಬಿಡುಗಡೆ ಮಾಡಿದ ಪೂರ್ವ ರೆಕಾರ್ಡ್ ಮಾಡಿರುವ ವೀಡಿಯೊ ಸಂದೇಶದಲ್ಲಿ ಡೊನಾಲ್ಡ್ ಟ್ರಂಪ್ , ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದು ವಿವರಣೆಗೆ ಮೀರಿದ ಗೌರವವಾಗಿದೆ ಎಂದು ಹೇಳಿದರು.
11:12 AM, 20 Jan
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧಿಕಾರವಧಿಯ ಕೊನೆಯ ನಿಮಿಷಗಳಲ್ಲಿ ತಮ್ಮ ಮಾಜಿ ಮುಖ್ಯ ತಂತ್ರಜ್ಞ ಸ್ಟೀವ್ ಬ್ಯಾನನ್ ಅವರನ್ನು ಕ್ಷಮಿಸುವ ನಿರೀಕ್ಷೆಯಿದೆ ಎಂದು ಟ್ರಂಪ್ ಪರಿಚಿತ ಮೂಲಗಳು ತಿಳಿಸಿವೆ.
11:15 AM, 20 Jan
ಇತ್ತೀಚೆಗೆ ಕ್ಯಾಪಿಟಲ್ನಲ್ಲಿ ನಡೆದ ಹಿಂಸಾಚಾರದ ನಂತರ, ಪ್ರಮಾಣವಚನ ಸಮಾರಂಭದಲ್ಲಿ ಭದ್ರತೆಗಾಗಿ 25,000 ರಾಷ್ಟ್ರೀಯ ಭದ್ರತಾ ಸಿಬ್ಬಂದಿಯನ್ನು ವಾಷಿಂಗ್ಟನ್ಗೆ ನಿಯೋಜಿಸಲಾಗಿದೆ.
11:49 AM, 20 Jan
Tamil Nadu: People in Thulasendrapuram village put up hoardings & posters of US Vice President-elect Kamala Harris at their shops & homes
"We're all very excited that Kamala Harris will take oath as Vice-President of US, she inspires all the women in the village, said a local. pic.twitter.com/sw2DXTKnxD
ಅಮೆರಿಕಾ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಲಿರುವ ಕಮಲಾ ಹ್ಯಾರಿಸ್ ಅವರ ಪೋಸ್ಟರ್ಗಳನ್ನು ತಮಿಳುನಾಡಿನ ತುಳಸೇಂದ್ರಪುರಂ ಗ್ರಾಮದ ಜನರು ತಮ್ಮ ಮನೆ ಮತ್ತು ಅಂಗಡಿಗಳಲ್ಲಿ ಹಾಕಿದ್ದಾರೆ.
12:07 PM, 20 Jan
ಅಮೆರಿಕಾ ನೂತನ ಅಧ್ಯಕ್ಷ ಜೋ ಬಿಡೆನ್ಗೆ ಶುಭಾಶಯ ಕೋರಿರುವ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಾವನ್ನು ಸುರಕ್ಷಿತ ಹಾಗೂ ಸಮೃದ್ಧವಾಗಿರಿಸಲು ಅವರ ಯಶಸ್ಸಿಗಾಗಿ ಪ್ರಾರ್ಥಿಸುವುದಾಗಿ ತಮ್ಮ ವಿದಾಯದ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಇನ್ನೂ ಒಂದೇ ದಿನ ಬಾಕಿ ಅಷ್ಟೇ, ಬಹುತೇಕ ಭಾರತೀಯರ ಕನಸು ನೆರವೇರಲಿದೆ. ಒಂದು ಕಾಲದಲ್ಲಿ ನಮ್ಮ ನೆಲವನ್ನು ಆಳಿದ್ದವರ ದೇಶದಲ್ಲಿ ಭಾರತೀಯರೇ ಉಪಾಧ್ಯಕ್ಷರಾಗುತ್ತಿದ್ದಾರೆ. ಹೌದು, ಜನವರಿ 20ರಂದು ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ 2ನೇ ಬಾರಿಗೆ ವಾಗ್ದಂಡನೆ ಪ್ರಕ್ರಿಯೆಗೆ ಅಮೆರಿಕ ಸಂಸತ್ತಿನಲ್ಲಿ ಚಾಲನೆ ಸಿಕ್ಕಿದೆ. ಅಮೆರಿಕದ 45ನೇ ಅಧ್ಯಕ್ಷರಾಗಿರುವ ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಕ್ರಿಯೆ ಪಕ್ಷಾತೀತವಾಗಿ ನಿರ್ಧಾರವಾಗಲಿದೆ ಎಂದು ಸೆನೆಟ್ ಹೇಳಿದೆ. ಒಂದು ವೇಳೆ ಮಹಾಭಿಯೋಗ ಸಫಲವಾಗಿ ಟ್ರಂಪ್ ಕೆಳಗಿಳಿದರೆ ಮುಂದಿನ ಪ್ರಕ್ರಿಯೆ, ನಡೆ ಏನು. ಟ್ರಂಪ್ ಭವಿಷ್ಯವೇನು? ಇಲ್ಲಿದೆ ವಿವರಣೆ...
ಚುನಾವಣೆಗೆ ಮೊದಲು ಭಾರತ ಮೂಲದವರಿಗೆ ಆದ್ಯತೆ ನೀಡುತ್ತೇನೆಂದು ಮಾತುಕೊಟ್ಟಿದ್ದ ಅಮೆರಿಕದ 46ನೇ ಅಧ್ಯಕ್ಷ ಬೈಡನ್ ಮಾತು ಉಳಿಸಿಕೊಂಡಿದ್ದಾರೆ. ಸಂಪುಟದಲ್ಲಿ 20 ಭಾರತೀಯರಿಗೆ ಅವಕಾಶ ನೀಡಿದ್ದಾರೆ. ಈ ಪೈಕಿ 17 ಖಾತೆಗಳು ಪ್ರಬಲ ಎಂದು ಕರೆಯಬಹುದಾಗಿದ್ದು ಜನವರಿ 20ರಂದು ಪ್ರಮಾಣವಚನ ನಡೆಯಲಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಭಾರತೀಯರನ್ನ ಸೆಳೆಯಲು ಟ್ರಂಪ್ ಹಾಗೂ ಬೈಡನ್ ಮಧ್ಯೆ ದೊಡ್ಡ ಸಮರ ನಡೆದಿತ್ತು.
1:00 PM, 20 Jan
ಅಮೆರಿಕಾ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 73 ಜನರಿಗೆ ಕ್ಷಮಾದಾನ ನೀಡಿದ್ದಾರೆ: ಶ್ವೇತಭವನ
ಜೋ ಬೈಡನ್ ಎಂದೇ ಕರೆಯಲ್ಪಡುವ ಜೋಸೆಫ್ ರಾಬಿನೆಟ್ ಬೈಡೆನ್ ಜ್ಯೂನಿಯರ್ ಅವರು ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೆಲುವಿನ ಕನಸು ಕಾಣುತ್ತಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಿರಾಶೆಯಾಗಿದೆ. ಭಾರಿ ಕುತೂಹಲ ಕೆರಳಿಸಿದ್ದ ಯುಎಸ್ ಅಧ್ಯಕ್ಷರ ಆಯ್ಕೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಪೆನ್ಸಿಲ್ವೇನಿಯಾವನ್ನು ಗೆಲ್ಲುವ ಮೂಲಕ ಭರ್ಜರಿ ಫಲಿತಾಂಶ ನೀಡಿದ್ದಾರೆ.
1:27 PM, 20 Jan
ಅಮೆರಿಕಾ ಕ್ಯಾಪಿಟಲ್ನಲ್ಲಿ ನಡೆದ ಮಾರಣಾಂತಿಕ ಗಲಭೆ ಬಳಿಕ ಜೋ ಬೈಡೆನ್ ಪದಗ್ರಹಣ ಸಮಾರಂಭದಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿದ್ದು, ಆಂತರಿಕ ಭದ್ರತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
1:30 PM, 20 Jan
ಜೋ ಬೈಡೆನ್ ಪದಗ್ರಹಣ ಸಮಾರಂಭ ಹಿನ್ನೆಲೆಯಲ್ಲಿ ರಾಜಧಾನಿ ವಾಷಿಂಗ್ಟನ್ ಮೂಲಭೂತವಾಗಿ ಲಾಕ್ಡೌನ್ನಲ್ಲಿದೆ. 25 ಸಾವಿರಕ್ಕೂ ಹೆಚ್ಚು ಸೈನಿಕರು ಮತ್ತು ಪೊಲೀಸರನ್ನು ಕರ್ತವ್ಯಕ್ಕೆ ಕರೆಸಿಕೊಳ್ಳಲಾಗಿದೆ. ಟ್ಯಾಂಕ್ಗಳು ಮತ್ತು ಕಾಂಕ್ರೀಟ್ ಅಡೆತಡೆಗಳಿಂದ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ನ್ಯಾಷನಲ್ ಮಾಲ್ ಮುಚ್ಚಲಾಗಿದ್ದು, ಚೆಕ್ಪೋಸ್ಟ್ಗಳನ್ನು ಹಾಕಲಾಗಿದೆ. ಈ ಕಾರ್ಯಕ್ರಮವನ್ನು ಅಮೆರಿಕಾ ಸೀಕ್ರೆಟ್ ಸರ್ವಿಸ್ ಸಿದ್ಧಪಡಿಸಿದೆ ಎಂದು ಹೇಳಿದೆ.
1:51 PM, 20 Jan
ಆಧುನಿಕ ಇತಿಹಾಸದಲ್ಲಿ ನೂತನ ಅಧ್ಯಕ್ಷ ಜೋ ಬೈಡೆನ್ ಪದಗ್ರಹಣ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಯನ್ನ ಡೊನಾಲ್ಡ್ ಟ್ರಂಪ್ ಪಡೆದಿದ್ದಾರೆ.
2:41 PM, 20 Jan
ಒಂದೆಡೆ ಅಮೆರಿಕಾ ನೂತನ ಅಧ್ಯಕ್ಷ ಜೋ ಬೈಡೆನ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಕೌಂಟ್ಡೌನ್ ಶುರುವಾಗಿದ್ದರೆ, ಮತ್ತೊಂದೆಡೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದಗ್ರಹಣ ಕಾರ್ಯಕ್ರಮವನ್ನು ಬಹಿಷ್ಕರಿಸಿ ಈಗಾಗಲೇ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್ನಲ್ಲಿರುವ ತನ್ನ ಖಾಸಗಿ ಮಾರ್-ಎ-ಲಾಗೊ ಕ್ಲಬ್ಗೆ ತಲುಪಿದ್ದಾರೆ.
3:10 PM, 20 Jan
ಅಮೆರಿಕಾ ನೂತನ ಅಧ್ಯಕ್ಷ ಜೋ ಬೈಡೆನ್ ಇಂದು ಪ್ರಮಾಣವಚನ ಸ್ವೀಕಾರದ ಬಳಿಕ ಅವರ ಆಡಳಿತದ ಕಾರ್ಯಸೂಚಿಯನ್ನು ರೂಪಿಸುವ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಈ ಭಾಷಣದ ಡ್ರಾಫ್ಟ್ ಅನ್ನು ಭಾರತೀಯ ಅಮೆರಿಕನ್ ವಿನಯ್ ರೆಡ್ಡಿ ಅವರ ನೇತೃತ್ವದಲ್ಲಿ ತಯಾರು ಮಾಡಲಾಗಿದೆ. ಇವರು ಈ ಹಿಂದೆ ಬರಾಕ್ ಒಬಾಮರ ಎರಡನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡೆನ್ಗೆ ಮುಖ್ಯ ಭಾಷಣಕಾರರಾಗಿ ಸೇವೆ ಸಲ್ಲಿಸಿದ್ದರು.
4:22 PM, 20 Jan
ಬೈಡೆನ್ ಅವರ ಪ್ರಮಾಣವಚನ ಸಮಾರಂಭಕ್ಕೆ ಸೆಲೆಬ್ರೇಟಿಂಗ್ ಎಂದು ಹೆಸರಿಸಲಾಗಿದೆ. ಇದನ್ನು ನಟ ಟಾಮ್ ಹ್ಯಾಂಕ್ಸ್ ನಿರ್ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಆಯ್ದ ಅತಿಥಿಗಳಲ್ಲಿ ಸಿಂಗರ್ ಲೇಡಿ ಗಾಗಾ ಕೂಡ ಇದ್ದಾರೆ.
4:23 PM, 20 Jan
ಅಮೆರಿಕಾ ಮಾಧ್ಯಮಗಳ ಪ್ರಕಾರ, ಬೈಡೆನ್ ಅಧಿಕಾರ ವಹಿಸಿಕೊಂಡ ನಂತರ ಮುಸ್ಲಿಂ ರಾಷ್ಟ್ರಗಳಿಗೆ ಅನ್ವಯಿಸುವ ಪ್ರಯಾಣ ನಿಷೇಧವನ್ನು ಕೊನೆಗೊಳಿಸಬಹುದು.
4:31 PM, 20 Jan
ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಧಿಕಾರವಧಿಯಲ್ಲಿ 143 ಜನರಿಗೆ ಕ್ಷಮೆಯನ್ನು ನೀಡಿದ್ದಾರೆ.
4:39 PM, 20 Jan
ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರದ ಬಳಿಕ ಮೊದಲ ಕೆಲ ಗಂಟೆಗಳಲ್ಲಿ ಜೋ ಬೈಡನ್ ಅವರು, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ಗುರಿಯಾಗಿಸಲಿದ್ದಾರೆ. ವಲಸೆ, ಹವಾಮಾನ ಬದಲಾವಣೆ ಮತ್ತು ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಕುರಿತು ಅವರ ಹಿಂದಿನ ಆದೇಶಗಳನ್ನು ಹಿಮ್ಮೆಟ್ಟಿಸುವ ಕಾರ್ಯಕಾರಿ ಕ್ರಮಗಳಿಗೆ ಸಹಿ ಹಾಕುತ್ತಾರೆ.