ಜೇನುನೊಣಗಳನ್ನು ಸಾಕಿದರೆ ಬಂಪರ್‌ ಆದಾಯ : ಸರ್ಕಾರ ನೀಡುತ್ತದೆ ಶೇಕಡಾ 85 ರಷ್ಟು ಸಹಾಯಧನ

ರೈತನೊಬ್ಬ ತನ್ನ ಹೊಲಗಳಲ್ಲಿ ಸಮೃದ್ಧ ಬೆಳೆಗಳ ನಡುವೆ, ಹೆಚ್ಚುವರಿ ಭೂಮಿಯನ್ನು ಖರೀದಿಸದೆ ಅಥವಾ ಹಣವನ್ನು ಹೂಡಿಕೆ ಮಾಡದೆಯೇ ಪ್ರತಿ ತಿಂಗಳು ಹೆಚ್ಚು ಆದಾಯವನ್ನು ಗಳಿಸಬಹುದು. ಸಾಮಾನ್ಯವಾಗಿ ರೈತರು ಆದಾಯವನ್ನು ಹೆಚ್ಚಿಸುವುದು ಎಂದ ಕೂಡಲೇ ಹೊಸ ಬೆಳೆಗಳನ್ನು ಬಿತ್ತುವುದು ಅಥವಾ ದುಬಾರಿ ರಸಗೊಬ್ಬರಗಳು ಮತ್ತು ಬೀಜಗಳನ್ನು ಬಳಸುವುದು ಎನ್ನುವ ಭಾವನೆಯಲ್ಲಿ ಇರುತ್ತಾರೆ. ಆದರೆ, ಹೊಲಗಳ ಗಡಿಗಳಲ್ಲಿ ಇರಿಸುವ ಸಣ್ಣ ಪೆಟ್ಟಿಗೆಗಳು ಬೆಳೆ ಇಳುವರಿಯನ್ನು ಹೆಚ್ಚಿಸುವುದರ ಜೊತೆಗೆ ಹೆಚ್ಚುವರಿ ಆದಾಯವನ್ನು ಗಳಿಸುವುದಕ್ಕೂ ಸಹಾಯ ಮಾಡುತ್ತವೆ. ಹೌದು, ನಾವಿಲ್ಲಿ ಜೇನುಸಾಕಣೆಯ ಬಗ್ಗೆ ಮಾತನಾಡುತ್ತಿದ್ದೇವೆ. ರೈತರು ಹೆಚ್ಚು ಬಂಡವಾಳ ಹಾಕದೆ ಪ್ರಾರಂಭಿಸಬಹುದಾದ ಬ್ಯುಸಿನೆಸ್‌ ಇದು.

ಹರಿಯಾಣದ ತೋಟಗಾರಿಕೆ ಇಲಾಖೆಯು ರೈತರನ್ನು ಸಾಂಪ್ರದಾಯಿಕ ಕೃಷಿಯ ಜೊತೆಗೆ ಸ್ವೀಟ್‌ ರೆವೆಲ್ಯೂಶನ್‌ನೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಜೇನು ಸಾಕಣೆಯನ್ನು ಉತ್ತೇಜಿಸಲು, ಹರಿಯಾಣ ಸರ್ಕಾರವು ತರಬೇತಿ ನೀಡುತ್ತಿದೆ.

beekeeping scheme beekeeping scheme for farmers upto 85 percent subsidy money making tips

ಜೇನು ಸಾಕಣೆ ವ್ಯವಹಾರ ಶುರು ಮಾಡುವವರಿಗೆ ಆರ್ಥಿಕ ಸಹಾಯವನ್ನೂ ನೀಡುತ್ತಿದೆ. 2030ರ ವೇಳೆಗೆ ರಾಜ್ಯದಲ್ಲಿ ಜೇನು ಸಾಕಣೆದಾರರ ಸಂಖ್ಯೆಯನ್ನು 7,750 ಕ್ಕೆ ಮತ್ತು ಒಟ್ಟು ಜೇನು ಉತ್ಪಾದನೆಯನ್ನು 15,500 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಇದರ ಅಡಿಯಲ್ಲಿ, ಜೇನು ಪೆಟ್ಟಿಗೆಗಳು, ಕಾಲೋನಿ ಮತ್ತು ಅಗತ್ಯ ಉಪಕರಣಗಳ ಖರೀದಿಗೆ 75% ರಿಂದ 85% ರಷ್ಟು ನೇರ ಸಬ್ಸಿಡಿಯನ್ನು ನೀಡಲಾಗುತ್ತಿದೆ.

ಜೇನುತುಪ್ಪದ ಖಚಿತ ಬೆಲೆ

ಸಾಮಾನ್ಯವಾಗಿ ಮಾರುಕಟ್ಟೆ ಬೆಲೆಗಳು ಕುಸಿಯುವ ಹೆದರಿಕೆ ಯಾವಾಗಲೂ ರೈತರಿಗೆ ಇರುತ್ತದೆ. ಜೇನು ಸಾಕಾಣೆ ಮಾಡುವ ಬಗ್ಗೆಯೂ ರೈತರಲ್ಲಿ ಈ ಆತಂಕ ಇದ್ದೇ ಇದೆ. ಆದರೆ, ಹರಿಯಾಣ ಸರ್ಕಾರ ಇದಕ್ಕೆ ನಿರ್ಣಾಯಕ ಪರಿಹಾರವನ್ನು ಒದಗಿಸಿದೆ. ಸರ್ಕಾರವು ಬೆಲೆ ವ್ಯತ್ಯಾಸ ಪರಿಹಾರ ಯೋಜನೆಯಲ್ಲಿ ಜೇನುಸಾಕಣೆಯನ್ನು ಸೇರಿಸಿದೆ. ಈ ಯೋಜನೆಯಡಿಯಲ್ಲಿ, ಜೇನುತುಪ್ಪದ ಬೆಲೆಯನ್ನು ಪ್ರತಿ ಕಿಲೋಗ್ರಾಂಗೆ 120 ರೂ. ಎಂದು ನಿಗದಿ ಮಾಡಿದೆ. ಅಂದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೆ ಸರ್ಕಾರ ವ್ಯತ್ಯಾಸವನ್ನು ಸರಿದೂಗಿಸುತ್ತದೆ. ಉದಾಹರಣೆಗೆ, ಬೆಲೆ 100 ರೂ.ಗೆ ಇಳಿದರೆ, ಉಳಿದ 20 ರೂಪಾಯಿಯನ್ನು ಸರ್ಕಾರವೇ ಹಾಕುತ್ತದೆ. ಇದರ ಪ್ರಕಾರ ಮಾರುಕಟ್ಟೆ ಬೆಲೆ ಎಷ್ಟೇ ಇರಲಿ, ರೈತರಿಗೆ 120 ರೂ. ಸಿಕ್ಕೇ ಸಿಗುತ್ತದೆ. ಈ ವ್ಯವಹಾರವನ್ನು ಪ್ರಾರಂಭಿಸುವ ವೆಚ್ಚವನ್ನು ಸರ್ಕಾರ ಬಹಳ ಕಡಿಮೆ ಮಾಡಿದೆ

ಜೇನು ಪೆಟ್ಟಿಗೆಗಳು : ಸರ್ಕಾರವು ಒಂದು ಪೆಟ್ಟಿಗೆಯ ಬೆಲೆಯನ್ನು 2,250 ರೂ.ಗೆ ನಿಗದಿಪಡಿಸಿದೆ. ಸರ್ಕಾರವು ಸುಮಾರು 1,700 ರೂ. ಸಬ್ಸಿಡಿ ನೀಡುತ್ತದೆ. ಒಬ್ಬ ರೈತ ಸಬ್ಸಿಡಿಯಲ್ಲಿ ಗರಿಷ್ಠ 50 ಬಾಕ್ಸ್‌ಗಳನ್ನು ಖರೀದಿಸಬಹುದು.

ಜೇನುನೊಣ ಕಾಲೋನಿ: 8 ಚೌಕಟ್ಟುಗಳ ಕಾಲೋನಿಯ ಬೆಲೆ 2,000 ರೂ. ಇದಕ್ಕೆ 1,700 ರೂ. ಸರ್ಕಾರಿ ಸಬ್ಸಿಡಿ ಸಿಗುತ್ತದೆ. ಒಬ್ಬ ವ್ಯಕ್ತಿಯು 50 ಕಾಲೋನಿಗಳಿಗೆ ಸಬ್ಸಿಡಿ ಪಡೆಯಬಹುದು.

ಜೇನು ಸಾಕಣೆ ಸಲಕರಣೆಗಳು: ಜೇನು ತೆಗೆಯುವ ಯಂತ್ರ, ಸೇಫ್ಟಿ ಕಿಟ್ ಮತ್ತು ಬ್ರೆಶ್‌ನಂಥಹ ಉಪಕರಣಗಳ ಖರೀದಿಯ ಮೇಲೂ ಸಹಾಯಧನ ಲಭ್ಯವಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈ ಸರ್ಕಾರಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ರೈತರು ತಮ್ಮ ಜಿಲ್ಲೆಯ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಇಲಾಖಾ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಅರ್ಜಿಗಳಿಗೆ ಕುಟುಂಬ ಗುರುತಿನ ಚೀಟಿ, ಭೂಮಿಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಪಾಸ್‌ಬುಕ್ ಮತ್ತು ಫೋಟೋ ಅಗತ್ಯವಿದೆ. ಅರ್ಜಿ ಮತ್ತು ಭೌತಿಕ ಪರಿಶೀಲನೆಯ ನಂತರ, ಅನುಮೋದಿತ ಸಬ್ಸಿಡಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+