ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಕ್ರೀದ್ 2022: ದಿನಾಂಕ, ಇತಿಹಾಸ, ಹಬ್ಬದ ಮಹತ್ವ ತಿಳಿಯಿರಿ

|
Google Oneindia Kannada News

ಬಕ್ರೀದ್ ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಚಂದ್ರವರ್ಷದ ಕೊನೆಯ ತಿಂಗಳಾಗಿರುವ ದಹು ಅಲ್ ಹಿಜ್ಜಾಹದ ಹತ್ತನೇ ದಿನದಂದು ಬಕ್ರೀದ್ ಆಚರಣೆ ಮಾಡಲಾಗುತ್ತದೆ. ಇದೇ ಹಜ್‌ಗೆ ಮುಸ್ಲಿಮರು ಯಾತ್ರೆ ಕೂಡ ಕೈಗೊಳ್ಳುವರು. ಪವಿತ್ರ ಹಜ್‌ಗೆ ಜೀವಮಾನದಲ್ಲಿ ಒಂದು ಸಲವಾದರೂ ಭೇಟಿ ನೀಡಬೇಕು ಎನ್ನುವ ನಂಬಿಕೆಯು ಮುಸ್ಲಿಮರಲ್ಲಿದೆ.

ಮುಸ್ಲಿಂ ಧರ್ಮಗ್ರಂಥಗಳ ಪ್ರಕಾರ, ಬಕ್ರೀದ್ ಹಬ್ಬವನ್ನು ಪ್ರತಿ ವರ್ಷ ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳ ಜು-ಅಲ್-ಹಿಜ್‌ನಲ್ಲಿ ಆಚರಿಸಲಾಗುತ್ತದೆ. ಇದನ್ನು ಈದ್-ಉಲ್-ಅಧಾ (ಈದ್-ಉಲ್-ಅಧಾ 2022) ಎಂದೂ ಕರೆಯಲಾಗುತ್ತದೆ. ಕೆಲವೊಮ್ಮೆ ಇದನ್ನು ಬಕ್ರ ಈದ್ ಎಂದೂ ಕರೆಯುತ್ತಾರೆ. ಈದ್-ಉಲ್-ಅಝಾ ಅಥವಾ ಬಕ್ರೀದ್ ಹಬ್ಬವು ತ್ಯಾಗದ ಸಂದೇಶವನ್ನು ನೀಡುತ್ತದೆ. ಅಂದರೆ ದೇವರು ತೋರಿಸಿದ ದಾರಿಯಲ್ಲಿ ನಡೆಯಬೇಕು.

ಬಕ್ರೀದ್ ದಿನಾಂಕವನ್ನು ಚಂದ್ರನ ದರ್ಶನದಿಂದ ನಿರ್ಧರಿಸಲಾಗುತ್ತದೆ. ಪವಿತ್ರ ರಂಜಾನ್ ತಿಂಗಳ ಸುಮಾರು 70 ದಿನಗಳ ನಂತರ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ.

2022ರ ಬಕ್ರೀದ್ ಇತಿಹಾಸ

2022ರ ಬಕ್ರೀದ್ ಇತಿಹಾಸ

ಈ ವರ್ಷ ಬಕ್ರೀದ್ ಹಬ್ಬವನ್ನು ಜುಲೈ 10 ರಂದು ಭಾರತದಲ್ಲಿ ಮುಸ್ಲಿಮರು ಆಚರಿಸುತ್ತಾರೆ. ಪ್ರವಾದಿ ಇಬ್ರಾಹಿಂ ಅಥವಾ ಅಬ್ರಾಹಂ ನೀಡಿರುವಂತಹ ಬಲಿದಾನದ ಸಂಕೇತವನ್ನು ನೆನಪಿಸಿಕೊಳ್ಳುವ ಹಬ್ಬವನ್ನು ಬಕ್ರೀದ್ ಎಂದು ಆಚರಿಸಲಾಗುತ್ತದೆ. ಪ್ರವಾದಿ ಅವರಿಗೆ ಅಲ್ಲಾ ತನ್ನ ಮೇಲಿನ ನಂಬಿಕೆಯನ್ನು ಸಾಬೀತು ಮಾಡಲು ಹೇಳುವರು ಮತ್ತು ಇದನ್ನು ಸಾಬೀತು ಮಾಡಲು ಪ್ರವಾದಿ ಅವರು ತನಗೆ ತುಂಬಾ ಇಷ್ಟವಿರುವಂತಹವರ ಬಲಿದಾನ ಮಾಡುವರು. ಪ್ರವಾದಿ ಅವರು ದೇವರ ಮೇಲಿನ ನಂಬಿಕೆಯಿಂದಾಗಿ ತನ್ನ 13ರ ಹರೆಯದ ಮಗ ಇಸ್ಮಾಯಿಲ್ ನನ್ನು ಬಲಿದಾನ ಮಾಡುವರು. ಪ್ರವಾದಿ ಅವರು ತನ್ನ ಮೇಲೆ ಇಟ್ಟಿರುವಂತಹ ನಂಬಿಕೆಯನ್ನು ನೋಡಿದ ದೇವರು ಪ್ರವಾದಿಯನ್ನು ಮೆಚ್ಚುತ್ತಾರೆ. ಇಲ್ಲಿ ಇಸ್ಮಾಯಿಲ್‌ನ ಬದಲಿಗೆ ಆಡನ್ನು ಇಡುವಂತೆ ದೇವತೆ ಜಿಬ್ರಾಲ್ ಅಥವಾ ಗ್ಯಾಬ್ರಿಯಲ್‌ನನ್ನು ಕಳುಹಿಸಿಕೊಡುವರು. ಈ ದಿನದಿಂದ ಮುಸ್ಲಿಮರು ಬಕ್ರೀದ್ ಹಬ್ಬದಂದು ಗಂಡು ಆಡಿನ ಬಲಿ ಕೊಡುವರು. ಬಲಿಕೊಟ್ಟ ಆಡಿನ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡಲಾಗುತ್ತದೆ. ಇದರಲ್ಲಿ ಒಂದು ಭಾಗವು ಬಡವರು ಮತ್ತು ಅಗತ್ಯವಿರುವಂತವರಿಗೆ, ಇನ್ನೊಂದು ಭಾಗ ಸ್ನೇಹಿತರಿಗೆ ಮತ್ತು ಉಳಿದ ಮೂರನೇ ಭಾಗವು ಕುಟುಂಬ ಸದಸ್ಯರಿಗೆ ಆಹಾರ ತಯಾರಿಸಿಕೊಳ್ಳಲು ಬಳಸಲಾಗುತ್ತದೆ.

ಅರಾಫತ್ ಪರ್ವತದಲ್ಲಿ ಪ್ರಾರ್ಥನೆ

ಅರಾಫತ್ ಪರ್ವತದಲ್ಲಿ ಪ್ರಾರ್ಥನೆ

ಸೌದಿ ಅರೇಬಿಯಾದ ಮೆಕ್ಕಾದಲ್ಲಿರುವ ಗ್ರ್ಯಾಂಡ್ ಮಸೀದಿಯಲ್ಲಿ ಮುಸ್ಲಿಮರು ಮಾಡುವ ಹಜ್ ಅಂತ್ಯವನ್ನು ಗುರುತಿಸಲು ಈದ್-ಉಲ್-ಅಧಾ ಎಂದು ಕರೆಯಲಾಗುತ್ತದೆ. ಹಜ್ ಯಾತ್ರೆಯನ್ನು ಪ್ರವಾದಿ ಮುಹಮ್ಮದ್ ನೀಡಿದ ಸೂಚನೆಗಳ ಪ್ರಕಾರ ನಡೆಸಲಾಗುತ್ತದೆ. ಈ ಸೂಚನೆಗಳು ಪ್ರವಾದಿ ಅಬ್ರಹಾಮನ ತ್ಯಾಗ ಮತ್ತು ದೇವರಿಗೆ ವಿಧೇಯತೆಯಕಗಳಾಗಿವೆ.

ವಾರ್ಷಿಕ ಹಜ್ ಯಾತ್ರೆಯ ಕೊನೆಯಲ್ಲಿ ಮುಸ್ಲಿಮರು ಅರಾಫತ್ ಪರ್ವತದಲ್ಲಿ ಕುರಾನ್‌ನಿಂದ ದಿನವಿಡೀ ಪ್ರಾರ್ಥನೆ ಸಲ್ಲಿಸಲು ಸೇರುತ್ತಾರೆ. ಇಸ್ಲಾಂ ಧರ್ಮದಲ್ಲಿ ಅರಾಫತ್ ಪರ್ವತವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಇದು ಪ್ರವಾದಿ ಮುಹಮ್ಮದ್ ತನ್ನ ಕೊನೆಯ ಧರ್ಮೋಪದೇಶವನ್ನು ನೀಡಿದ ಸ್ಥಳವೆಂದು ನಂಬಲಾಗಿದೆ.

ಸ್ವೀಟ್ ಈದ್ ಮತ್ತು ಬಕ್ರಾ ಈದ್

ಸ್ವೀಟ್ ಈದ್ ಮತ್ತು ಬಕ್ರಾ ಈದ್

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಈದ್ ಅನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ, ಒಂದು ಈದ್-ಉಲ್-ಜುಹಾ ಮತ್ತು ಇನ್ನೊಂದು ಈದ್-ಉಲ್-ಫಿತರ್. ಈದ್-ಉಲ್-ಫಿತರ್ ಅನ್ನು ಸ್ವೀಟ್ ಈದ್ ಎಂದೂ ಕರೆಯುತ್ತಾರೆ. ಇದನ್ನು ರಂಜಾನ್ ಕೊನೆಯಲ್ಲಿ ಆಚರಿಸಲಾಗುತ್ತದೆ. ಬಕ್ರ ಈದ್ ಅಂದರೆ ಬಕ್ರೀದ್ ಅನ್ನು ಮಿಥಿ ಈದ್ ನಂತರ ಸುಮಾರು 70 ದಿನಗಳ ನಂತರ ಆಚರಿಸಲಾಗುತ್ತದೆ.

ಮಟನ್ ಬಿರಿಯಾನಿ ವಿಶೇಷ

ಮಟನ್ ಬಿರಿಯಾನಿ ವಿಶೇಷ

ಈದ್ ಆಲ್ ಅದಾ ಹಬ್ಬದ ಆಹಾರ ಬಕ್ರೀದ್ ಹಬ್ಬಕ್ಕಾಗಿ ಮಟನ್ ಬಿರಿಯಾನಿ, ಮಟನ್ ಕೂರ್ಮಾ, ಮಟನ್ ಕೀಮಾ ಮತ್ತು ಭುನಿ ಕಲೆಜಿ ತಯಾರಿಸಲಾಗುತ್ತದೆ. ಇದರೊಂದಿಗೆ ಸಿಹಿ ತಿಂಡಿಗಳಾಗಿರುವಂತಹ ಶೀರ ಕುರ್ಮಾ ಮತ್ತು ಪಾಯಸ ಮಾಡಲಾಗುತ್ತದೆ.

Recommended Video

Chandrashekar Guruji ಓದಿದ್ದು ಸಿವಿಲ್ ಇಂಜಿನಿಯರಿಂಗ್ ಆಗಿದ್ದು ವಾಸ್ತು ತಜ್ಞ | OneIndia Kannada

English summary
Bakrid is one of the most important festivals for Muslims around the world. Know the date, history and significance of Bakrid festival 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X