ಉತ್ತರ ಪ್ರದೇಶದಲ್ಲಿ ಸಿಎಂ ಆಗಿ ಯೋಗಿ ಮುರಿದ 7 ದಾಖಲೆಗಳು

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರು ಮತ್ತೊಂದು ಬಾರಿಗೆ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ. ಈ ಮೂಲಕ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು ಮೊದಲ ಹಂತದಲ್ಲಿ ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಸ್ಥಾನಗಳಿಗೆ ಮತದಾನ ನಡೆಯಿತು. ಎರಡನೇ ಹಂತದಲ್ಲಿ ಫೆಬ್ರವರಿ 14ರಂದು ರಾಜ್ಯದ 55 ಸ್ಥಾನಗಳಿಗೆ ಮತದಾನ ನಡೆಯಿತು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 20ರಂದು ಮೂರನೇ ಹಂತದಲ್ಲಿ 59 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು.

ಫೆಬ್ರವರಿ 23ರಂದು ನಾಲ್ಕನೇ ಹಂತದಲ್ಲಿ 60 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ತದನಂತರ ಫೆಬ್ರವರಿ 27ರಂದು ಐದನೇ ಹಂತದಲ್ಲಿ 60 ಸ್ಥಾನಗಳಿಗೆ ಚುನಾವಣೆ ನಡೆಯಿತು. ಮಾರ್ಚ್ 3ರಂದು ಆರನೇ ಹಂತದಲ್ಲಿ 57 ಸ್ಥಾನಗಳಿಗೆ ಮತ್ತು ಮಾರ್ಚ್ 7ರಂದು ಅಂತಿಮವಾಗಿ ಏಳನೇ ಹಂತದಲ್ಲಿ 54 ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು.

2017ರ ಫಲಿತಾಂಶ

2017ರ ಫಲಿತಾಂಶ

2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಉತ್ತರಪ್ರದೇಶದಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 202. ಸದ್ಯದ ಟ್ರೆಂಡ್ ನಂತೆ ಸಂಜೆ 18.15ರಂತೆ 403 ಸ್ಥಾನಗಳ ಪೈಕಿ 84 ಸ್ಥಾನಗಳ ಫಲಿತಾಂಶ ಬಂದಿದ್ದು, ಬಿಜೆಪಿ 64ರಲ್ಲಿ ಗೆಲುವು ಸಾಧಿಸಿದ್ದು, 187 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟಾರೆ 251 ಪ್ಲಸ್ ಸ್ಥಾನ ಗೆಲ್ಲುವ ಸಾಧ್ಯತೆಯಿದೆ.

ಮೊದಲ ದಾಖಲೆ

ಮೊದಲ ದಾಖಲೆ

ಯೋಗಿ ಆದಿತ್ಯನಾಥ್ ಅವರು ಅಧಿಕಾರಾವಧಿ(5 ವರ್ಷ)ಯನ್ನು ಪೂರ್ಣಗೊಳಿಸಿ ಎರಡನೇ ಅವಧಿಗೆ ಗೆದ್ದ ಯುಪಿಯ ಮೊದಲ ಸಿಎಂ ಆಗಲಿದ್ದಾರೆ. ಯುಪಿಯ ಕಳೆದ 70 ವರ್ಷಗಳ ಚುನಾವಣಾ ಇತಿಹಾಸದಲ್ಲಿ, ಮುಖ್ಯಮಂತ್ರಿಯೊಬ್ಬರು ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದು ಮತ್ತು ಸತತವಾಗಿ ಎರಡನೇ ಅವಧಿಗೆ ಆಯ್ಕೆಯಾಗುತ್ತಿರುವುದು ಇದೇ ಮೊದಲು.

ಎರಡನೇ ದಾಖಲೆ

ಎರಡನೇ ದಾಖಲೆ

ಯುಪಿಯಲ್ಲಿ ಸತತವಾಗಿ ಗೆದ್ದ ಐದನೇ ಮುಖ್ಯಮಂತ್ರಿ ಯೋಗಿ. 1975 ರಲ್ಲಿ ಸಂಪೂರ್ಣಾನಂದ, 1962 ರಲ್ಲಿ ಚಂದ್ರಬಾನು ಗುಪ್ತಾ, 1974 ರಲ್ಲಿ ಹೇಮಾವತಿ ನಂದನ್ ಬಹಗುಣ ಮತ್ತು 1985 ರಲ್ಲಿ ನಾರಾಯಣ್ ದತ್ ತಿವಾರಿ ಈ ಮೊದಲು ಈ ಸಾಧನೆ ಮಾಡಿದವರು. 70 ವರ್ಷಗಳಲ್ಲಿ ಅಧಿಕಾರಾವಧಿಯಲ್ಲಿ ಯೋಗಿ ಅವರು ಪೂರ್ಣಗೊಳಿಸಿ ಸತತ ಎರಡನೇ ಬಾರಿಗೆ ಗೆದ್ದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.

ಮೂರನೇ ದಾಖಲೆ

ಮೂರನೇ ದಾಖಲೆ

ಕಾಂಗ್ರೆಸ್‌ನ ಎನ್ ಡಿ ತಿವಾರಿ ಅವರು 1985ರಲ್ಲಿ ಅವಿಭಜಿತ ಯುಪಿಯ ಸಿಎಂ ಆಗಿದ್ದರು. ಅವರು ಸತತ ಎರಡನೇ ಅವಧಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಂದಿನಿಂದ ಯೋಗಿ ಆದಿತ್ಯನಾಥ್ ಹೊರತುಪಡಿಸಿ ಯಾರೂ ಈ ಸಾಧನೆ ಮಾಡಿಲ್ಲ.

ನಾಲ್ಕನೇ ದಾಖಲೆ:

ನಾಲ್ಕನೇ ದಾಖಲೆ:

ಯೋಗಿ ಆದಿತ್ಯನಾಥ್ 15 ವರ್ಷಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಶಾಸಕ ಸಿಎಂ ಆಗಲಿದ್ದಾರೆ. ಅವರಿಗಿಂತ ಮೊದಲು ಮಾಯಾವತಿ ಎಂಎಲ್‌ಸಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಅವರ ನಂತರ ಅಖಿಲೇಶ್ ಯಾದವ್ ಅವರು ಎಂಎಲ್‌ಸಿಯಾಗಿದ್ದಾಗ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. 2017 ರಲ್ಲಿ ಯೋಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರು ಸಂಸದರಾಗಿದ್ದರು. ಆದರೂ ಅವರು ಎಂಎಲ್‌ಸಿಯಾಗಿ ಅಧಿಕಾರಾವಧಿ ಮುಗಿಯುವವರೆಗೂ ಮುಂದುವರಿದರು.

ಐದನೇ ದಾಖಲೆ

ಐದನೇ ದಾಖಲೆ

ಯೋಗಿ ಅಧಿಕಾರಕ್ಕೆ ಮರಳಿದ ಮೊದಲ ಬಿಜೆಪಿ ಸಿಎಂ ಆಗಲಿದ್ದಾರೆ. ಅವರಿಗಿಂತ ಮೊದಲು ರಾಮ್ ಪ್ರಕಾಶ್ ಗುಪ್ತಾ, ರಾಜನಾಥ್ ಸಿಂಗ್, ಕಲ್ಯಾಣ್ ಸಿಂಗ್ ಮತ್ತು ರಾಮ್ ಪ್ರಕಾಶ್ ಗುಪ್ತಾ ಬಿಜೆಪಿ ಸಿಎಂ ಆಗಿದ್ದರು. ಅವರಲ್ಲಿ ಯಾರೂ ಎರಡನೇ ಅವಧಿಗೆ ತಮ್ಮ ಕಚೇರಿಯನ್ನು ಉಳಿಸಿಕೊಂಡಿಲ್ಲ.

ಆರನೇ ದಾಖಲೆ

ಆರನೇ ದಾಖಲೆ

ಯೋಗಿ ನೋಯ್ಡಾ ಭೇಟಿ ಅಪವಾದವನ್ನು ಮುರಿದ ಮೊದಲ ಸಿಎಂ ಆದರು. ಯಾವುದೇ ಸಿಎಂ ತಮ್ಮ ಅಧಿಕಾರಾವಧಿಯಲ್ಲಿ ನೋಯ್ಡಾಗೆ ಭೇಟಿ ನೀಡಿದರೆ ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ ಅಥವಾ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದಿಲ್ಲ ಎಂಬ ನಂಬಿಕೆಯಿದೆ. ಡಿಸೆಂಬರ್ 25, 2018 ರಂದು, ಯೋಗಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೆಹಲಿ ಮೆಟ್ರೋದ ಮೆಜೆಂಟಾ ಲೈನ್ ಅನ್ನು ಉದ್ಘಾಟಿಸಲು ನೋಯ್ಡಾಗೆ ಭೇಟಿ ನೀಡಿದ್ದರು.

Recommended Video

    ಸೈಲೆಂಟಾಗಿರು ನಿನಿಗೆ ಒಳ್ಳೆ ಹುದ್ದೆ ಕೊಡ್ತೀವಿ! | Oneindia Kannada
    ಏಳನೇ ದಾಖಲೆ

    ಏಳನೇ ದಾಖಲೆ

    70 ವರ್ಷಗಳಲ್ಲಿ 21 ಸಿಎಂಗಳ ಪೈಕಿ ಮೂವರು ಮಾತ್ರ ಅಧಿಕಾರಾವಧಿ ಪೂರ್ಣಗೊಳಿಸಿದ್ದಾರೆ. ಅವರೆಂದರೆ ಮಾಯಾವತಿ, ಯೋಗಿ ಆದಿತ್ಯನಾಥ್ ಮತ್ತು ಅಖಿಲೇಶ್ ಯಾದವ್.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+