Apple iPhone 17e: ಆಪಲ್ ಐಫೋನ್ 17ಇ ಲಾಂಚ್ ಯಾವಾಗ? ನಾಲ್ಕು ಪ್ರಮುಖ ಅಪ್‌ಗ್ರೇಡ್‌ಗಳು ರಿವೀಲ್
ಆಪಲ್ ತನ್ನ ಹೊಸ ಐಫೋನ್ 17e (iPhone 17e) ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗುತ್ತಿದೆ ಎಂಬ ಚರ್ಚೆ ಟೆಕ್ ವಲಯದಲ್ಲಿ ಜೋರಾಗಿದೆ. ಲೀಕ್ಸ್ ಮತ್ತು ಕೈಗಾರಿಕಾ ಮೂಲಗಳ ಪ್ರಕಾರ ಐಫೋನ್ 17e ಅನ್ನು ಇದೇ ಫೆಬ್ರವರಿ 19ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಆಪಲ್ ಅಧಿಕೃತ ಘೋಷಣೆ ಮಾಡಿಲ್ಲ. ಈ ದಿನಾಂಕವು ಗೂಗಲ್‌ನ Pixel 10a ಬಿಡುಗಡೆಗೆ ಸಮೀಪವಾಗಿರುವುದರಿಂದ, ಎರಡೂ ಕಂಪನಿಗಳ ನಡುವೆ ಮಧ್ಯಮ-ಪ್ರೀಮಿಯಂ ವಿಭಾಗದಲ್ಲಿ ತೀವ್ರ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
ಭಾರತಕ್ಕೆ ವಿಶೇಷ ಗಮನ, ಮಧ್ಯಮ-ಪ್ರೀಮಿಯಂ ಬೆಲೆ
ಐಫೋನ್ 17e ಅನ್ನು ಆಪಲ್, ಐಫೋನ್ 16eಗೆ ಉತ್ತರಾಧಿಕಾರಿಯಾಗಿ ಪರಿಚಯಿಸುವ ಸಾಧ್ಯತೆ ಇದೆ. ಈ ಫೋನ್ ಅನ್ನು ಸಾಮಾನ್ಯ ಐಫೋನ್ 17ಕ್ಕಿಂತ ಕಡಿಮೆ ಬೆಲೆಯ ಆಯ್ಕೆಯಾಗಿ ಹೊರತರುವ ಸಾಧ್ಯತೆ ಇದೆ. ಅಂದಾಜಿನ ಪ್ರಕಾರ ಭಾರತದಲ್ಲಿ ಇದರ ಬೆಲೆ ₹60,000ರಿಂದ ₹65,000ರ ನಡುವೆ ಇರಬಹುದು. ಇದು 18ರಿಂದ 30 ವರ್ಷ ವಯಸ್ಸಿನ ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವ ನಿಗದಿ ಮಾಡಿರುವ ಬೆಲೆ ಎಂದು ಹೇಳಲಾಗುತ್ತಿದೆ.

ಐಫೋನ್ 17e ನಲ್ಲಿ 6.1 ಇಂಚಿನ OLED ಡಿಸ್ಪ್ಲೇ ಇರಲಿದೆ ಎನ್ನಲಾಗಿದ್ದು, ಇದು ಹಿಂದಿನ E ಸಿರೀಸ್ ಮಾದರಿಯ ಗಾತ್ರವನ್ನೇ ಉಳಿಸಿಕೊಳ್ಳಲಿದೆ. ಈ ಪರದೆಯು 60Hz ರಿಫ್ರೆಶ್ ರೇಟ್ ಹೊಂದಿರಬಹುದು. ಆದರೆ ದೊಡ್ಡ ಬದಲಾವಣೆಯಾಗಿ, ಮೇಲ್ಭಾಗದಲ್ಲಿ ಡೈನಮಿಕ್ ಐಲ್ಯಾಂಡ್ ಫೀಚರ್ ನೀಡುವ ಸಾಧ್ಯತೆ ಇದೆ. ಇದು ನೋಟಿಫಿಕೇಶನ್‌ಗಳು ಮತ್ತು ಲೈವ್ ಆ್ಯಕ್ಟಿವಿಟಿಗಳಿಗೆ ಉಪಯುಕ್ತವಾಗಲಿದೆ.
ಮೆಮೊರಿ ಮತ್ತು ಸ್ಟೋರೇಜ್‌ನಲ್ಲಿ ದೊಡ್ಡ ಬದಲಾವಣೆ
ಲೀಕ್ಸ್ ಪ್ರಕಾರ, ಐಫೋನ್ 17e ನಲ್ಲಿ 8ಜಿಬಿ ಆರ್‌ಎಎಂ ನೀಡುವ ಸಾಧ್ಯತೆ ಇದೆ. ಜೊತೆಗೆ, ಮೂಲ ಸ್ಟೋರೇಜ್ ಆಯ್ಕೆಯು 128GB ರಿಂದ 256GB ಗೆ ಹೆಚ್ಚಾಗಬಹುದು. ಇದರಿಂದ ಬಳಕೆದಾರರಿಗೆ ಹೆಚ್ಚು ಆ್ಯಪ್‌ಗಳು, ಗೇಮ್‌ಗಳು, ಫೋಟೋಗಳು ಮತ್ತು ಆಫ್‌ಲೈನ್ ಕಂಟೆಂಟ್ ಸಂಗ್ರಹಿಸಲು ಅನುಕೂಲವಾಗಲಿದೆ. ಇನ್ನು ಪರ್ಫಾರ್ಮೆನ್ಸ್ ವಿಷಯದಲ್ಲಿ ಐಫೋನ್ 17e ದೊಡ್ಡ ಅಪ್‌ಗ್ರೇಡ್ ಪಡೆಯಲಿದೆ. ಇದರಲ್ಲಿ A19 ಚಿಪ್‌ಸೆಟ್ ಬಳಸಲಾಗುತ್ತದೆ ಎನ್ನಲಾಗಿದ್ದು, ಇದು ಸಾಮಾನ್ಯ ಐಫೋನ್ 17 ಮಾದರಿಯಲ್ಲೂ ಇರುವುದಾಗಿ ವರದಿಯಾಗಿದೆ. ಇದರಿಂದ ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ಎಐ ಆಧಾರಿತ ಫೀಚರ್‌ಗಳಲ್ಲಿ ಉತ್ತಮ ಅನುಭವ ಸಿಗಲಿದೆ.
ಕನೆಕ್ಟಿವಿಟಿ ಮತ್ತು ಚಾರ್ಜಿಂಗ್‌ನಲ್ಲಿ ಹೊಸತನ
ಐಫೋನ್ 17e ಯಲ್ಲಿ ಮೊದಲ ಬಾರಿಗೆ ಮ್ಯಾಗ್‌ಸೇಫ್ (MagSafe) ವೈರ್‌ಲೆಸ್ ಚಾರ್ಜಿಂಗ್ ನೀಡುವ ಸಾಧ್ಯತೆ ಇದೆ. ಇದು ಇ ಸಿರೀಸ್‌ಗೆ ದೊಡ್ಡ ಸೇರ್ಪಡೆ. ಜೊತೆಗೆ, ಹೊಸ C1X 5G ಮೊಡೆಮ್ ಮತ್ತು ಬ್ಲೂಟೂತ್ N1 ಚಿಪ್ ಬಳಕೆಯಾಗುವ ಸಾಧ್ಯತೆ ಇದೆ. ಇದರಿಂದ ನೆಟ್‌ವರ್ಕ್ ಸ್ಥಿರತೆ ಮತ್ತು ಬ್ಯಾಟರಿ ಕಾರ್ಯಕ್ಷಮತೆ ಹೆಚ್ಚಾಗಲಿದೆ. ಲೀಕ್ಸ್‌ಗಳ ಪ್ರಕಾರ, ಈ ಫೋನ್‌ನಲ್ಲಿ ಸುಮಾರು 4000 ಎಂಎಎಚ್ ಬ್ಯಾಟರಿ ಇರಬಹುದು. ವೇಗದ ವೈರ್ಡ್ ಚಾರ್ಜಿಂಗ್ ಜೊತೆಗೆ MagSafe ಮೂಲಕ 25W ವೈರ್‌ಲೆಸ್ ಚಾರ್ಜಿಂಗ್ ಸಹ ಬೆಂಬಲಿಸುವ ಸಾಧ್ಯತೆ ಇದೆ.
iPhone 17e ನಿರೀಕ್ಷಿತ ಫೀಚರ್‌ಗಳ ವಿವರಗಳು
* ಡಿಸ್ಪ್ಲೇ: 6.1 ಇಂಚಿನ OLED, 60Hz ರಿಫ್ರೆಶ್ ರೇಟ್, ಡೈನಾಮಿಕ್ ಐಲ್ಯಾಂಡ್
* ಪ್ರೊಸೆಸರ್: A19 ಚಿಪ್
* RAM: 8GB
* ಮೂಲ ಸ್ಟೋರೇಜ್: 256GB
* ಬ್ಯಾಟರಿ: 4000mAh (ನಿರೀಕ್ಷಿತ)
* ಚಾರ್ಜಿಂಗ್: ಫಾಸ್ಟ್ ವೈರ್ಡ್ ಚಾರ್ಜಿಂಗ್, 25W MagSafe ವೈರ್‌ಲೆಸ್ ಚಾರ್ಜಿಂಗ್
* ಕನೆಕ್ಟಿವಿಟಿ: 5G ಮೊಡೆಮ್, C1X ಚಿಪ್, ಬ್ಲೂಟೂತ್ N1
* ಬೆಲೆ ಶ್ರೇಣಿ (ಭಾರತ): ₹60,000-₹65,000
ಇದೆಲ್ಲವೂ ನಿಜವಾದರೆ, ಐಫೋನ್ 17e ಆಪಲ್‌ನ ಬಜೆಟ್-ಫ್ರೆಂಡ್ಲಿ ಫೋನ್ ಲೈನ್‌ಅಪ್‌ನಲ್ಲಿ ದೊಡ್ಡ ಬದಲಾವಣೆ ತರಲಿದೆ. A19 ಪ್ರೊಸೆಸರ್, MagSafe, ಉತ್ತಮ ಬ್ಯಾಟರಿ ಮತ್ತು ಹೆಚ್ಚಿದ ಸ್ಟೋರೇಜ್ ಮೂಲಕ, ಇದು ಗೂಗಲ್ ಪಿಕ್ಸೆಲ್ 10a ಗೆ ನೇರ ಸ್ಪರ್ಧಿಯಾಗಿ ನಿಲ್ಲಲಿದೆ. ಫೆಬ್ರವರಿಯಲ್ಲಿ ಬಿಡುಗಡೆ ನಿರೀಕ್ಷೆಯೊಂದಿಗೆ, ಐಫೋನ್ 17e ಈಗಾಗಲೇ ಟೆಕ್ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.












Click it and Unblock the Notifications