ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ಅಬ್ದುಲ್ ಕಲಾಂ ಕನಸಿನ 2020 ಹೇಗಿತ್ತು?

|
Google Oneindia Kannada News

ಅಕ್ಟೋಬರ್ 15 ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನ. ದೇಶದ ಜನರ ಪ್ರೀತಿಯ ರಾಷ್ಟ್ರಪತಿ. ವಿಜ್ಞಾನದ ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ವಿಜ್ಞಾನಿ, ಪುಸ್ತಕ ಓದುವವರಿಗೆ ನೆಚ್ಚಿನ ಲೇಖಕ. ಹಲವಾರು ಕ್ಷೇತ್ರಗಳಲ್ಲಿ ಯುವಕರಿಗೆ, ವಿದ್ಯಾರ್ಥಿಗಳಿಗೆ ಕಲಾಂ ಮಾದರಿ.

2020ಕ್ಕೆ ಭಾರತ ಹೀಗಿರಬೇಕು ಎಂಬ ದೂರದೃಷ್ಠಿಯನ್ನು ಅಬ್ದುಲ್ ಕಲಾಂ ಹೊಂದಿದ್ದರು. ದೇಶದ ಮುಂದೆ ಎರಡು ಪ್ರಮುಖ ವಿಚಾರಗಳನ್ನು ಕಲಾಂ ಇಟ್ಟಿದ್ದರು. ಇಂದಿನ ದಿನಗಳಲ್ಲಿ ಅವರು ಹೇಳಿದ ಮಾತು ಪ್ರಸ್ತುತವೇ?.

ವಿದ್ಯಾರ್ಥಿಗಳಿಗೇಕೆ ಡಾ. ಅಬ್ದುಲ್ ಕಲಾಂ ಅಚ್ಚು ಮೆಚ್ಚು ವಿದ್ಯಾರ್ಥಿಗಳಿಗೇಕೆ ಡಾ. ಅಬ್ದುಲ್ ಕಲಾಂ ಅಚ್ಚು ಮೆಚ್ಚು

ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಅಬ್ದುಲ್ ಕಲಾಂ ಹೇಳಿದ್ದರು. ಶಿಕ್ಷಣದ ಮಹತ್ವವನ್ನು ಹಲವಾರು ಉಪನ್ಯಾಸಗಳಲ್ಲಿ ಕಲಾಂ ಬಿಚ್ಚಿಟ್ಟಿದ್ದರು.

APJ Abdul Kalam Vision 2020 Relevant For India Today

2020ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರಬೇಕು. ದೇಶದ ಪ್ರತಿ ಮಗುವಿಗೂ ಶಿಕ್ಷಣ ಸಿಗಬೇಕು ಮತ್ತು ಯುವ ಜನರಿಗೆ ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡುವಂತಹ ಉದ್ಯಮಗಳ ಕೌಶಲ್ಯಗಳು ಸಿಗಬೇಕು ಎಂದು ಕಲಾಂ ಹೇಳಿದ್ದರು.

ಭಾರತಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ 4 ವೈಜ್ಞಾನಿಕ ಕೊಡುಗೆಗಳು ಭಾರತಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ 4 ವೈಜ್ಞಾನಿಕ ಕೊಡುಗೆಗಳು

ಶಿಕ್ಷಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಮಾನವಾದ ಶಿಕ್ಷಣ ಸಿಗಬೇಕು. ಎನ್‌ಜಿಓಗಳು, ಮಾಧ್ಯಮ ಶಿಕ್ಷಣದ ಮಹತ್ವವನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಕಲಾಂ ಕರೆ ಕೊಟ್ಟಿದ್ದರು.

ಟಿಪ್ಪು ಜಯಂತಿ ಬದಲು ಕಲಾಂ ಜಯಂತಿ ಆಚರಿಸಿ: ಶ್ರೀರಾಮುಲುಟಿಪ್ಪು ಜಯಂತಿ ಬದಲು ಕಲಾಂ ಜಯಂತಿ ಆಚರಿಸಿ: ಶ್ರೀರಾಮುಲು

ಶಾಲೆಗಳಲ್ಲಿ ಗ್ರಂಥಾಲಯ; ಭಾರತದ ಪ್ರತಿಯೊಂದು ಶಾಲೆಯೂ ಉತ್ತಮ ಕಟ್ಟಡ, ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿರಬೇಕು. ಶಾಲೆಯಲ್ಲಿ ಕಡ್ಡಾಯವಾಗಿ ಗ್ರಂಥಾಲಯ ಇರಬೇಕು ಎಂಬುದು ಕಲಾಂ ಅವರ ಇಚ್ಛೆಯಾಗಿತ್ತು.

ಶಾಲೆಗಳಲ್ಲಿ ಪ್ರಯೋಗಾಲಯ ಇರಬೇಕು, ಮಕ್ಕಳಿಗೆ ಶುದ್ಧ ಕುಡಿಯುವ ನೀರು ಸಿಗಬೇಕು, ಆಟದ ಮೈದಾನವಿರಬೇಕು. 2020ರ ವೇಳೆಗೆ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುವಂತಾಗಬೇಕು.

ದೇಶದ ಯಾವುದೋ ಮೂಲೆಯಲ್ಲಿ ಕುಳಿತ ವ್ಯಕ್ತಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವಂತೆ ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆ ಬರಬೇಕು ಎಂದು ಕಲಾಂ ಹೇಳಿದ್ದರು. ಅದಕ್ಕಾಗಿ ಇಂಟರ್‌ನೆಟ್ ವ್ಯವಸ್ಥೆ ಹಳ್ಳಿ-ಹಳ್ಳಿಗೆ ತಲುಪಬೇಕು ಎಂಬ ಆಶಯ ಹೊಂದಿದ್ದರು.

ಕೋವಿಡ್ ಪರಿಸ್ಥಿತಿಯ ಹಿನ್ನಲೆಯಲ್ಲಿ ತಂತ್ರಜ್ಞಾನದ ಬಳಕೆ ದೇಶದಲ್ಲಿ ಹೆಚ್ಚಿದೆ. ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ. ಮಾಹಿತಿ ತಂತ್ರಜ್ಞಾನ ಮತ್ತು ಶಿಕ್ಷಣ ಕಲಾಂ ಅವರ ಆಶಯದಂತೆ 2020ರಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಯುವಕರು ವಿಶ್ವಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ವಿವಿಧ ದೇಶಗಳ ಪ್ರತಿಷ್ಠಿತ ಕಂಪನಿಗಳ ಉನ್ನತ ಹುದ್ದೆಯಲ್ಲಿ ಇಂದು ನಮ್ಮ ದೇಶದ ಜನರೇ ಇದ್ದಾರೆ.

English summary
Dr. APJ Abdul Kalam strongly advocated two main points for the India in 2020. Education and Information Technology is the most important element for growth of a nation he believed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X