Get Updates
Get notified of breaking news, exclusive insights, and must-see stories!

ಮನೆ ಅಂಗಳದಲ್ಲಿ ವಿಮಾನ ನೋಡಿ ಟಾಟಾ ಮಾಡಿದ ಹುಡುಗಿ ಗಗನಸಖಿ ಆಗಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ಹೆಣ್ಣು ಸಂಸಾರದ ಕಣ್ಣು, ಮನೆಯ ದೀಪ ಅಷ್ಟೇ ಅಲ್ಲದೇ ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸಿಕೊಂಡು ಹೋಗುವುದರಲ್ಲಿ ನಿಸ್ಸಿಮಳು. ಕೆಲವೊಮ್ಮೆ ಆಕೆಯ ಕೆಲಸವನ್ನು ಪ್ರಶಂಸ್ಸಿಸುವುದನ್ನು ಮರೆತು ಬಿಡುತ್ತೇವೆ. ಒಂದು ಹೆಣ್ಣು ಮನೆಯ ನಿರ್ವಹಣೆಯ ಜೊತೆಗೆ ಯಾವುದೇ ಜವಾಬ್ದಾರಿ ನೀಡಿದ್ರು, ಸುಲಭವಾಗಿ ನಿರ್ವಹಿಸುತ್ತಾಳೆ. ಒಮ್ಮೆ ಮನೆ ಅಂಗಳಲ್ಲಿ ಆಕಾಶದಲ್ಲಿ ವಿಮಾನ ನೋಡಿ ಟಾಟಾ ಮಾಡಿದ ಹುಡುಗಿ ಗಗನಸಖಿ ಆಗಿದ್ದು ಹೇಗೆ? ಗಗನಸಖಿ ಆಗಿ ಆಕಾಶದಲ್ಲಿ ಹಾರಾಡಿದ ಮಹಿಳೆಯ ಜೀವನದ ಯಶಸ್ಸಿನ ಕುರಿತು ಒನ್‌ ಇಂಡಿಯಾ ಕನ್ನಡಕ್ಕೆ ಸಂದರ್ಶನವನ್ನ ನೀಡಿದ್ದಾರೆ. ಬನ್ನಿ ವಿಮಾನ ನೋಡಿ ಟಾಟಾ ಮಾಡಿದ ಹುಡುಗಿ ಗಗನಸಖಿ ಆಗಿದ್ದೇಗೆ? ಎಂಬ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

21 ವರ್ಷದಲ್ಲಿ 63 ದೇಶವನ್ನ ಸುತ್ತಿರುವ ಕರ್ನಾಟಕದ ಗಗನಸಖಿ ಅನಿತಾ ರಾವ್.‌ ನನಗೆ ಗಗನಸಖಿ ಆಗ್ಬೇಕು ಎನ್ನುವ ಕನಸು ನನಗೆ ಇರಲಿಲ್ಲ. ಎಲ್ಲರ ಮನೆ ಮುಂದೆ ಅಂಗಳದಲ್ಲಿ ಆಟ ಆಡುವಾಗ ಆಕಾಶದಲ್ಲಿ ಹಾರಾಡು ವಿಮಾನವನ್ನ ನೋಡಿ ಟಾಟಾ ಮಾಡಿದ್ದೇವೆ. ಆಗ ಅಕ್ಕ ಪಕ್ಕದ ಮನೆಯವರ ಜೊತೆಯಲ್ಲಿ ಮಾತನಾಡುವಾಗ. ನೀನು ಚನ್ನಾಗ್‌ ಇದಿಯಾ ನೀನು ಗಗನಸಖಿ ಆಗು ಅಂತ ಚಿಕ್ಕ ವಯಸ್ಸಿನಲ್ಲಿ ಹೇಳಿದರು. ಗಗನಸಖಿ ಆಗ್ಬೇಕು ಅಂದ್ರೆ ಹೇಗೆ ಹೋಗ್ಬೇಕು. ಏನು ಅಂತ ನನಗೆ ಗೊತ್ತಿರಲಿಲ್ಲ. ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ. ಸರ್ಕಾರಿ ಶಾಲೆಯಲ್ಲಿ ಓದಿದವರೆ ಇಂಗ್ಲಿಷ್‌ ಅಂದ್ರೆ ಕಬ್ಬಿಣದ ಕಡಲೆಯಂತೆ. 10 ನೇ ತರಗತಿಯಲ್ಲಿ ನಮ್ಮ ತಂದೆಯನ್ನ ನಾವು ಕಳೆದು ಕೊಂಡ್ವಿ. ಆಗ ನನಗೆ ಡಾಕ್ಟರ್‌ ಆಗ್ಬೇಕು ಎನ್ನುವ ಆಸೆ ಇತ್ತು.

Anitha Rao Inspiring Journey from Air Hostess to Menstrual Hygiene Activist Empowering Rural Women

ಪಿಯುಸಿ ನಂತರ ಒಂದು ಆಫೀಸ್‌ಗೆ ಒಂದು ಕೆಲಸಕ್ಕೆ ಸೇರಿಕೊಂಡೆ. ಗಗನಸಖಿ ಆಗ್ಬೇಕು ಅಂದ್ರೆ ಏನ್‌ ಮಾಡ್ಬೇಕು, ಎಲ್ಲಿಗೆ ಹೋಗ್ಬೇಕು ಅಂತ ನನಗೆ ಗೊತ್ತಿರಲಿಲ್ಲ. ಮದ್ರಾಸ್‌ ಹೋಗ್ಬೇಕು ಅಂತ ಟ್ರೈನ್‌ ಟಿಕೆಟ್‌ಗೆ 300 ಸಾಲ ಮಾಡಿ ಗಗನಸಖಿ ಆಗ್ಬೇಕು ಅಂತ ಸಂದರ್ಶನವನ್ನ ಕೊಟ್ಟು ಬಂದೆ. ಗಗನಸಖಿ ಆಗ್ಬೇಕು ಅಂತ ಸಂದರ್ಶನ ಕೊಡುವ ಸಂದರ್ಭದಲ್ಲಿ ಸ್ವಿಮೀಂಗ್‌ ಬರುಬೇಕು ಅಂತ ಒಂದು ತಿಂಗಳು ಗಡುವು ಕೊಟ್ರು. ಒಂದು ತಿಂಗಳಲ್ಲಿ ನಾನು ಸ್ವಿಮೀಂಗ್‌ ಕಲಿತು ಮೂರು ತಿಂಗಳ ಟ್ರೈನಿಂಗ್‌ ಬಳಿಕ ನಾನು ನನ್ನ ವೃತ್ತಿ ಜೀವನವನ್ನ ಆರಂಭಿಸಿದೆ.

21 ವರ್ಷದಲ್ಲಿ 63 ದೇಶವನ್ನ ನೋಡಿದೆ. ತಂದೆ ಇಲ್ಲ ಅಂದ್ರೆ ಕಷ್ಟ ಆಗುತ್ತೆ. ಕಷ್ಟದ ಜೊತೆಗೆ ನನ್ನ ತಾಯಿ ನನ್ನ ಅಣ್ಣ ನನಗೆ ಸಪೋರ್ಟ್‌ ಮಾಡಿದ್ರು. ನಮ್ಮ ಫ್ಯಾಮಿಲಿಯಲ್ಲಿ ಮೊದಲ ಗಗನ ಸಖಿ ಅಂದ್ರೆ ಅದು ನಾನೇ. ನನಗೆ ಒಳ್ಳೆಯ ಸಂಬಳ ಇತ್ತು. ಆದರೆ, ದೇಶ ಬಿಟ್ಟು ಹೋಗುವುದು ಮೊದಲು ತುಂಬಾ ಕಷ್ಟ ಆಯಿತು. ನನ್ನ ವೃತ್ತಿ ಬದುಕಿನಲ್ಲಿ ನಾನು ಕೆಲವೊಂದು ಚಾಲೆಂಜಿಂಗ್‌ ಆಗಿಯೇ ತೆಗೆದುಕೊಂಡೆ. 19 ವರ್ಷಕ್ಕೆ ನಾನು ಗಗನಸಖಿ ಆದೆ. 12 ಗಂಟೆ ನಾವು ಕೆಲಸ ಮಾಡುತ್ತಿದ್ವಿ. ಆಯಾ ದೇಶಗಳ ಕುರಿತು ನಮಗೆ 3 ತಿಂಗಳ ಟ್ರೈನಿಂಗ್‌ ಇತ್ತು.

Anitha Rao Inspiring Journey from Air Hostess to Menstrual Hygiene Activist Empowering Rural Women

ಅರಬ್ಬ್‌ ರಾಷ್ಟ್ರಗಳಲ್ಲಿ ನಮ್ಮನ್ನ ರಾಣಿಯರ ತರ ನೋಡಿಕೊಳ್ಳುತ್ತಾರೆ. 20 ವರ್ಷದ ಹಿಂದೆಯೇ ನನಗೆ 80 ಸಾವಿರ ಸಂಬಳ ಬರುತ್ತಿತ್ತು. ನಾನು ದೇಶನೂ ಸುತ್ತಿದ್ದೇನೆ. ಕೋಶವನ್ನು ಓದಿದ್ದೇನೆ. ನಮ್ಮ ದೇಶದ ಜನರು ತುಂಬಾ ಕಷ್ಟ ಪಟ್ಟು ಕೆಲಸ ಮಾಡುತ್ತೇವೆ. ಬೇರೆ ರಾಷ್ಟ್ರಗಳಿಗೆ ಹೊಲಿಕೆ ಮಾಡಿದರೇ ನಮ್ಮ ದೇಶದಲ್ಲಿ ತುಂಬಾ ಕಷ್ಟ ಪಟ್ಟು ಕೆಲಸ ಮಾಡುತ್ತೇವೆ. ನಮ್ಮ ದೇಶ, ನಮ್ಮ ಜನರೆ ಜಗತ್ತಿನಲ್ಲಿ ಬೆಸ್ಟ್‌ ಎಂದು ಅನಿತಾ ರಾವ್ ‌ಹೇಳಿದರು.

ನಮ್ಮ ಕರ್ನಾಟಕದಲ್ಲಿ, ನಮ್ಮ ದೇಶದ ಜನರಿಗೆ ಸಂವಿಧಾನದ ಬಗ್ಗೆ ಇನ್ನೂ ಸರಿಯಾಗಿ ಗೊತ್ತಿಲ್ಲ .ಇದಕ್ಕೆ ಕಾರಣ ಶಿಕ್ಷಣದ ಬಗ್ಗೆ ಜನರಿಗೆ ಅರಿವನ್ನ ಮುಡಿಸಬೇಕು. ಬೇರೆ ದೇಶಗಳನ್ನ ನೋಡೊಕೆ ಚಂದ. ನನ್ನ ಜೀವನದಲ್ಲಿ ನನಗೆ ನನ್ನ ತಾಯಿ ಮುಖ್ಯ ಆಗಿದ್ರು. ಹೀಗಾಗಿ ನಾನು ನಮ್ಮ ಕರ್ನಾಟಕಕ್ಕೆ ಬಂದೆ ಎಂದು ಹೇಳಿದರು. ಹಸಿವಿದ್ದವರಿಗೆ ತಾಳ್ಮೆ ಬೇಕು. ನನಗೆ ಹಸಿವಿತ್ತು. ಹೀಗಾಗಿ ನನ್ನ ವೃತ್ತಿಯಲ್ಲಿ ಎಷ್ಟೇ ಕಷ್ಟಗಳು ಬಂದ್ರು ನಾನು ತಾಳ್ಮೆಯಿಂದ ಸ್ವೀಕರಿಸಿದೆ ಎಂದು ಅನಿತಾ ರಾವ್‌ ತಿಳಿಸಿದರು.

ಈ ಹಿಂದೆ ಪ್ರಯಾಣಿಕರು ತುಂಬಾ ಚನ್ನಾಗಿ ನಡೆದುಕೊಳ್ಳುತ್ತಿದ್ದರು, ನಾವು ಸಹ ಪ್ರಯಾಣಿಕರನ್ನ ದೇವರು ಅಂತ ನೋಡಿಕೊಳ್ಳುತ್ತಿದ್ವಿ. ನನ್ನ ವೃತ್ತಿ ಜೀವನದಲ್ಲಿ ಹೀಗೆ ಪ್ರಯಾಣ ಮಾಡುವಾಗ ಒಬ್ಬ ಪ್ರಯಾಣಿಕರಿಗೆ ಟೈಮ್‌ ಎಷ್ಟು ಅಂತ ಕೇಳಿದಕ್ಕೆ, ನನ್ನ ವಾಚ್‌ ಕಿತ್ತು ಹಾಕಿದ್ರು, ಅದು ನನ್ನ ತಂದೆ ನನಗೆ ಕೊಡಿಸಿದ ಕೊನೆಯ ವಾಚ್‌ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದಲ್ಲಿ ನಾನು ನನ್ನ ತಾಳ್ಮೆಯನ್ನ ಕಳೆದುಕೊಳ್ಳಲಿಲ್ಲ, ಆಗ ನಾನು ತಾಳ್ಮೆ ಕೆಳೆದುಕೊಂಡಿದ್ದರೇ ನಾನು ನನ್ನ ಕೆಲಸಕ್ಕೆ 100% ಕೊಡ್ತಿರಲಿಲ್ಲ. ಆ ಕೆಲಸದಲ್ಲಿ ತಾಳ್ಮೆ ಕಳೆದುಕೊಳ್ಳಲು ಸಾಧ್ಯವೆ ಇಲ್ಲ. ನನ್ನ ವೃತ್ತಿ ಜೀವನದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ನಾವು ಆಕಾಶದಲ್ಲಿ ಇರ್ತಿವಿ ಅಲ್ವಾ? ನಾವು ದೇವರಿಗೆ ಹತ್ತಿರ ಇರ್ತಿವಿ. ನಮ್ಮ ಕೆಲಸದ ಬಗ್ಗೆ ನಮಗೆ ಹೆಮ್ಮೆ ಇತ್ತು ಎಂದು ತಿಳಿಸಿದರು.

ಮುಟ್ಟಿನ ಕುರಿತು ಜಾಗೃತಿ

ಗಗನಸಖಿಯಾಗಿ ಕಾರ್ಯ ನಿರ್ವಹಿಸಿರುವ ಅನಿತಾ ರಾವ್‌ ಅವರು ವೃತ್ತಿ ಜೀವನದ ಬಳಿಕ ತಮ್ಮನ್ನ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಟ್ಟಿನ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿರುವ ಅನಿತಾ ರಾವ್‌ ಅವರು, ಒನ್‌ ಇಂಡಿಯಾ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಅನಿತಾ ರಾವ್‌ ಅವರು ಮಾತನಾಡಿ, ನಮ್ಮಲ್ಲಿ ಸ್ವಚ್ಚತೆ ಇಲ್ಲ. ಸರ್ಕಾರಿ ಶಾಲೆಗಳು ಹಾಗೂ ಸ್ಲಂಗಳಲ್ಲಿ ಮುಟ್ಟಿನ ಕುರಿತು ಹಾಗೂ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಿದ್ದೇನೆ. ಸಮಾಜ ನಮಗೆ ಎಷ್ಟೊಂದ್‌ ಕೊಟ್ಟಿದೆ. ನಾನು ಸಮಾಜಕ್ಕೆ ಏನಾದ್ರೂ ಮಾಡ್ಬೇಕು ಎಂದು ಈ ಕೆಲಸವನ್ನ ಮಾಡುತ್ತಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಇದು ಮೊದಲು ಬದಲಾವಣೆ ಆಗ್ಬೇಕು. ಮುಟ್ಟು ಯಾವತ್ತಿಗೂ ಗುಟ್ಟಾಗ್ಬಾರ್ದು. ಇದರ ಬಗ್ಗೆ ಗಂಡು ಮಕ್ಕಳಿಗೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಕೊರೋನಾ ಸಂದರ್ಭದಲ್ಲಿ ಮುಟ್ಟಿನ ಸ್ವಚ್ಪತೆ ಬಗ್ಗೆ ಹರಿವು ಮೂಡಿಸಿದ್ದೇನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+