ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ತಿಂಗಳ ಪ್ರಾಯದ ಹಕ್ಕಿಯಿಂದ ಮಹಾ ವಲಸೆ; 13 ಸಾವಿರ ಕಿ.ಮೀ ಪ್ರಯಾಣ

|
Google Oneindia Kannada News

ಪಕ್ಷಿಗಳ ಜೀವನವೇ ವಿಸ್ಮಯ, ಅದರಲ್ಲೂ ಹಕ್ಕಿಗಳ ವಲಸೆ ಕಥೆ ಎಂದೆಂದಿಗೂ ರೋಚಕ. ಎಲ್ಲೋ ದೂರದ ಸೈಬೀರಿಯಾದಿಂದ ಹಾರಿ ಭಾರತದ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಗೂಡು ಕಟ್ಟಿ ಒಂದು ಋತು ಕಳೆಯಲು ಬರುತ್ತೆ ಎಂದರೆ ಇದು ಮಹಾ ವಲಸೆಯ ಸಣ್ಣ ಝಲಕ್ ಎನ್ನಬಹುದು. ಎರಡು ವರ್ಷಗಳ ಹಿಂದೆ ಕೀನ್ಯಾದಿಂದ ಒಂದು ವಾರದಲ್ಲಿ 6300 ಕಿ.ಮೀ ಕ್ರಮಿಸಿ ಒನೊನ್ ಕೋಗಿಲೆ ಭಾರತಕ್ಕೆ ಬಂದಿತ್ತು. ಈಗ ಇಂಥದ್ದೇ ಸುದ್ದಿ ಆಸ್ಟ್ರೇಲಿಯಾದಿಂದ ಬಂದಿದೆ.

ಅಲಾಸ್ಕಾದಿಂದ ತಾಸ್ಮೇನಿಯಾಕ್ಕೆ ಪುಟ್ಟ ಹಕ್ಕಿಯೊಂದು ಮಹಾ ಪ್ರಯಾಣ ಸಾಧಿಸಿದೆ. ಕಳೆದ 11 ದಿನ ಹಾಗೂ ಒಂದು ಗಂಟೆ ಅವಧಿಯಲ್ಲಿ ನಿರಂತರವಾಗಿ ಪ್ರಯಾಣಿಸಿ ವಿಶ್ವ ದಾಖಲೆ ಬರೆದಿದೆ. ಸರಿ ಸುಮಾರು 13,560 ಕಿ. ಮೀ(8,435 ಮೈಲಿ) ಪ್ರಯಾಣ ಮಾಡಿದ್ದು Bar-tailed godwit ಎಂಬ ಪುಟ್ಟ ಹಕ್ಕಿ. ಈ ವಿಶ್ವದಾಖಲೆ ಪ್ರಯಾಣ ಮಾಡಿದ ಹಕ್ಕಿಗೆ ಇನ್ನೂ ಐದು ತಿಂಗಳ ಪ್ರಾಯ.

ಗಾಡ್ ವಿಟ್ Limosa lapponica (ಸ್ಯಾಟಲೈಟ್ ಟ್ಯಾಗ್ ಸಂಖ್ಯೆ 234684) (ಕರ್ನಾಟಕದಲ್ಲಿ ಪಟ್ಟೆಬಾಲದ ಹಿನ್ನೀರಗೊರವಹಕ್ಕಿ ಎಂದು ಕರೆಯಲಾಗುತ್ತದೆ) ಮ್ಯಾರಥಾನ್ ಪ್ರಯಾಣವನ್ನು ಅಕ್ಟೋಬರ್ 13ರಂದು ಅಲಾಸ್ಕಾದಿಂದ ಆರಂಭಿಸಿ, ಎಲ್ಲೂ ವಿಶ್ರಮಿಸದೆ ಅವಿರತವಾಗಿ 11 ದಿನಗಳು ಹಾಗೂ ಒಂದು ಗಂಟೆಗಳ ಪ್ರಯಾಣ ಸಾಧಿಸಿ, ಈಶಾನ್ಯ ತಾಸ್ಮೇನಿಯಾಕ್ಕೆ ಬಂದಿದೆ ಎಂದು ಉಪಗ್ರಹ ಅಂಕಿ ಅಂಶ ತಿಳಿಸಿದೆ.

ಇದಕ್ಕೂ ಮುನ್ನ ಈ ರೀತಿ ಮ್ಯಾರಥಾನ್ ಪ್ರಯಾಣವನ್ನು ಇದೇ ಜಾತಿಯ ಹಕ್ಕಿ ಸಾಧಿಸಿತ್ತು. 4BBRW ಸಂಖ್ಯೆಯಿಂದ ಗುರುತಿಸಲ್ಪಡುವ ಹಕ್ಕಿಯೊಂದು ಕಳೆದ ವರ್ಷ 13 ಸಾವಿರ ಕಿ.ಮೀ ಕ್ರಮಿಸಿತ್ತು.

7 ದಿನಗಳಲ್ಲಿ 6000 ಕಿ.ಮೀ ಕ್ರಮಿಸಿದ ಈತ ಅಸಾಮಾನ್ಯ!7 ದಿನಗಳಲ್ಲಿ 6000 ಕಿ.ಮೀ ಕ್ರಮಿಸಿದ ಈತ ಅಸಾಮಾನ್ಯ!

ಮಾರ್ಕ್ ಬಾರ್ಟರ್ ಹಾಗೂ ಇನ್ನಿತರ ಬಯೋಲಾಜಿಸ್ಟ್ ಪ್ರಕಾರ ಈ ಜಾತಿಯ ಹಕ್ಕಿಗಳು ಸರಿ ಸುಮಾರು 11 ರಿಂದ 13 ಸಾವಿರ ಕಿ.ಮೀ ಸುಲಭವಾಗಿ ಕ್ರಮಿಸಬಲ್ಲವು ಎಂದಿದ್ದಾರೆ. ಮಾರ್ಕ್ ಕಳೆದ ವರ್ಷ ನಿಧನರಾಗಿದ್ದು, 2022ರಲ್ಲಿ ಹಕ್ಕಿಯ ಸಾಧನೆ ನೋಡಲು ಇರಬೇಕಿತ್ತು ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ಸ್ಮರಿಸಲಾಗಿದೆ.

ವಿಜ್ಞಾನಿಗಳು 5ಜಿ ಉಪಗ್ರಹ ಟ್ಯಾಗ್ ಅನ್ನು ಹಕ್ಕಿಯ ಬೆನ್ನ ಹಿಂಬದಿಗೆ ಅಳವಡಿಸಿ, ಹಕ್ಕಿಯ ಪ್ರಯಾಣದ ಅಂಕಿ ಅಂಶ ಕಲೆ ಹಾಕುತ್ತಾರೆ. ಮಿರಾಂಡಾ ಟ್ರಸ್ಟ್, ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿ ಟ್ಯೂಟ್ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಲಸೆ ಹಕ್ಕಿಗಳ ಟ್ರ್ಯಾಕಿಂಗ್ ದತ್ತಾಂಶವನ್ನು ನೀಡಿದೆ.

ಬರ್ಡ್‌ಲೈಫ್ ಆಸ್ಟ್ರೇಲಿಯಾದ ಸೀನ್ ಡೂಲಿ ಪ್ರತಿಕ್ರಿಯಿಸಿ:''ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಎಳೆಯ ಹಕ್ಕಿಗಳು ವಯಸ್ಕ ಹಕ್ಕಿಗಿಂತ ಪ್ರತ್ಯೇಕವಾಗಿ ವಲಸೆ ಪ್ರಯಾಣ ಆರಂಭಿಸುತ್ತವೆ. ವಯಸ್ಕರು ಆರ್ಕ್ಟಿಕ್‌ನಿಂದ ಕೆಲವೊಮ್ಮೆ ಆರು ವಾರಗಳ ಮುಂಚೆಯೇ ಹೊರಡುತ್ತವೆ,ಪಕ್ಷಿಗಳು ತಮ್ಮ ಆಂತರಿಕ ಅಂಗಗಳನ್ನು ಕುಗ್ಗಿಸಿಕೊಂಡು ದೇಹದ ಕೊಬ್ಬಿನ ಶೇಖರಣೆಗಾಗಿ ಹೆಚ್ಚಿನ ಸ್ಥಳ ಹೊಂದಿಸಿಕೊಳ್ಳಲು ಸಮರ್ಥವಾಗಿವೆ, ಈ ಮೂಲಕ ಸುದೀರ್ಘ ಪ್ರಯಾಣ ಸಾಧ್ಯವಾಗಿದೆ'' ಎಂದಿದ್ದಾರೆ.

ಒಟ್ಟಾರೆಯಾಗಿ, ಆಹಾರ, ನೆಲೆ, ಸಂತಾನಾಭಿವೃದ್ಧಿ, ನೈಸರ್ಗಿಕ ವಿಕೋಪ, ಪ್ರಾಕೃತಿಕ ಬದಲಾವಣೆ ಕಾರಣ ಹತ್ತಾರು ಇರಬಹುದು, ಪ್ರತಿ ವಲಸೆ ಹಿಂದೆ ಒಂದು ಕಥೆ ಇರುತ್ತದೆ, ಮತ್ತು ಆ ಕಥೆ ಎಷ್ಟು ವಿಸ್ಮಯವೋ ಅಷ್ಟೇ ಎಚ್ಚರಿಕೆ ಪಾಠವನ್ನು ಕಲಿಸುತ್ತದೆ.

English summary
A five-month-old migratory bird Bar-tailed godwit sets world record with 13,560km continuous flight from Alaska to Ansons Bay in northeast Tasmania in southern Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X